ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಮಗೆ ತಾವೇ ಬಾಸ್‌, ಯಾವುದೇ ಕೆಲಸ ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ; ರಾಡಿಕ್ಸ್‌ 1ಕ್ಕೆ ಸೇರಿದವರ ಸ್ವಭಾವ

ತಮಗೆ ತಾವೇ ಬಾಸ್‌, ಯಾವುದೇ ಕೆಲಸ ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ; ರಾಡಿಕ್ಸ್‌ 1ಕ್ಕೆ ಸೇರಿದವರ ಸ್ವಭಾವ

Numerology: ಯಾವುದೇ ತಿಂಗಳ 1, 10, 19, 28ರಲ್ಲಿ ಜನಿಸಿದವರು ರಾಡಿಕ್ಸ್‌ ನಂಬರ್‌ 1ಕ್ಕೆ ಸೇರುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ರಾಶಿಯ ಗ್ರಹಗಳ ರಾಜ ಸೂರ್ಯನು ರಾಡಿಕ್ಸ್‌ ನಂಬರ್‌ 1ನ್ನು ಆಳುತ್ತಾನೆ. ಈ ಸಂಖ್ಯೆಗೆ ಸೇರಿದವರ ಗುಣ ಸ್ವಭಾವ ಹೀಗಿದೆ.

ತಮಗೆ ತಾವೇ ಬಾಸ್‌, ಯಾವುದೇ ಕೆಲಸ ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ; ರಾಡಿಕ್ಸ್‌ 1ಕ್ಕೆ ಸೇರಿದವರ ಸ್ವಭಾವ
ತಮಗೆ ತಾವೇ ಬಾಸ್‌, ಯಾವುದೇ ಕೆಲಸ ಕೊಟ್ರೂ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ; ರಾಡಿಕ್ಸ್‌ 1ಕ್ಕೆ ಸೇರಿದವರ ಸ್ವಭಾವ

ಸಂಖ್ಯಾಶಾಸ್ತ್ರದಲ್ಲಿ, ಪ್ರತಿ ಸಂಖ್ಯೆಯು ತನ್ನದೇ ಆದ ಅರ್ಥ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಇದು 1 ರಿಂದ 9 ರವರೆಗಿನ ಸಂಖ್ಯೆಗಳ ಬಗ್ಗೆ ಹೇಳುತ್ತದೆ. ಈ ಸಂಖ್ಯೆಗಳಲ್ಲಿ ಸಾಕಷ್ಟು ಶಕ್ತಿ, ಶಕ್ತಿ ಮತ್ತು ಸಕಾರಾತ್ಮಕತೆ ಇರುತ್ತದೆ. ಹುಟ್ಟಿದ ದಿನಾಂಕದ ಆಧಾರದ ಮೇಲೆ ಯಾವುದೇ ವ್ಯಕ್ತಿಯ ಗುಣಗಳು, ಸ್ವಭಾವ, ವ್ಯಕ್ತಿತ್ವ, ಪ್ರೀತಿಯ ಜೀವನ, ವೃತ್ತಿ ಅಥವಾ ಭವಿಷ್ಯವನ್ನು ಸಂಖ್ಯಾಶಾಸ್ತ್ರ ತಜ್ಞರು ನಿರ್ಣಯಿಸುತ್ತಾರೆ.

ಇಲ್ಲಿ ರಾಡಿಕ್ಸ್ 1 ಬಗ್ಗೆ ಹೇಳುತ್ತಿದ್ದೇವೆ. ಯಾವ ದಿನಾಂಕಗಳಲ್ಲಿ ರಾಡಿಕ್ಸ್ ಸಂಖ್ಯೆ 1 ನ್ನು ಹೊಂದಿದ್ದಾರೆ ಎಂಬುದನ್ನು ತಿಳಿಯುವ ವಿಧಾನ ಬಹಳ ಸುಲಭ. ಜನವರಿ, ಫೆಬ್ರವರಿ, ಮಾರ್ಚ್‌, ಏಪ್ರಿಲ್‌ ಸೇರಿದಂತೆ ಯಾವುದೇ ತಿಂಗಳ 1 ಅಥವಾ 10 (1+0=1), 19ನೇ ತಾರೀಖು (1+9=1), 28 (2+8=1) ರಲ್ಲಿ ಜನಿಸಿದವರು ಸಂಖ್ಯೆ 1 ಕ್ಕೆ ಸೇರುತ್ತಾರೆ. ಇವರು ಜನಿಸಿದ ದಿನಾಂಕ ಎರಡನ್ನೂ ಕೂಡಿದರೆ ಯಾವ ಸಂಖ್ಯೆ ಬರುತ್ತದೋ ಆಯಾ ರಾಡಿಕ್ಸ್‌ ಸಂಖ್ಯೆಗೆ ಇವರು ಸೇರುತ್ತಾರೆ. ಸಂಖ್ಯೆ 1ನ್ನು ಗ್ರಹಗಳ ರಾಜನಾದ ಸೂರ್ಯನು ಆಳುತ್ತಾನೆ. ಹಾಗೇ ಸಿಂಹ ರಾಶಿಯ ಅಧಿಪತಿ ಕೂಡಾ ಸೂರ್ಯನೇ.

ರಾಡಿಕ್ಸ್ ಸಂಖ್ಯೆ 1ರ ವ್ಯಕ್ತಿಗಳ ಸ್ವಭಾವ

ರಾಡಿಕ್ಸ್ ಸಂಖ್ಯೆ 1ಕ್ಕೆ ಸೇರಿದ ಜನರು ಸಾಮಾನ್ಯವಾಗಿ ನಿರ್ಧರಿಸುವ ಮತ್ತು ಮತ್ತೊಬ್ಬರಿಗೆ ಆದೇಶ ಮಾಡುವ ಸ್ವಭಾವವನ್ನು ಹೊಂದಿರುತ್ತಾರೆ. ಅವರು ಉತ್ತಮ ನಿಯಂತ್ರಣ ಮತ್ತು ನಾಯಕತ್ವದ ಗುಣಮಟ್ಟವನ್ನು ಹೊಂದಿದ್ದಾರೆ. ಈ ವ್ಯಕ್ತಿಗಳಿಗೆ ಬಹಳ ಆತ್ಮ ವಿಶ್ವಾಸವಿರುತ್ತದೆ. ಸೂರ್ಯನ ಪ್ರಭಾವದಿಂದಾಗಿ ಈ ರಾಡಿಕ್ಸ್ ಸಂಖ್ಯೆಯ ಮೇಲೆ ಅಂದರೆ, ಈ ವ್ಯಕ್ತಿಗಳನ್ನು ಯಾರೂ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಯಾರೂ ಇವರನ್ನು ಆಳಲು ಪ್ರಯತ್ನಿಸುವುದಿಲ್ಲ.

ಈ ಸಂಖ್ಯೆಯಲ್ಲಿ ಹುಟ್ಟಿದ ಜನರು ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡಲು ಇಷ್ಟಪಡುವುದಿಲ್ಲ. ಏಕೆಂದರೆ ಇವರು ಸ್ವತಂತ್ರ್ಯವಾಗಿ ಕೆಲಸ ಮಾಡಲು ಹೆಚ್ಚು ಇಷ್ಟಪಡುತ್ತಾರೆ. ತಮಗೇ ತಾವೇ ಬಾಸ್‌ ಆಗಲು ಇಷ್ಟಪಡುತ್ತಾರೆ. ಇನ್ನೊಬ್ಬರ ಆದೇಶದಂತೆ ಕೆಲಸ ಮಾಡುವುದು ಇವರಿಗೆ ಇಷ್ಟವಾಗುವುದಿಲ್ಲ. ಇವರಿಗೆ ಯಾವುದೇ ಕೆಲಸ ಕೊಟ್ಟರೂ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ.

ಕಠಿಣ ಪರಿಶ್ರಮಿಗಳು

ಇವಿಷ್ಟೇ ಅಲ್ಲ, ರಾಡಿಕ್ಸ್‌ ನಂಬರ್‌ 1ರ ಜನರು ಬಹಳ ಸೃಜನಶೀಲರು, ವೃತ್ತಿ ವಿಚಾರದಲ್ಲಿ ಬಹಲ ನಿಷ್ಠಾವಂತರು, ಶಕ್ತಿಯುತ, ಸ್ವಾವಲಂಬಿಗಳು, ಕಠಿಣ ಪರಿಶ್ರಮ ಹೊಂದಿರುವವರು ಮತ್ತು ಯಾವಾಗಲೂ ಜೀವನದಲ್ಲಿ ಸ್ಪಷ್ಟತೆಯನ್ನು ಹೊಂದಿರುವ ಜನರು. ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಇವರು ಬಹಳ ಕಠಿಣ ಪರಿಶ್ರಮಿಗಳು, ತಮಗೆ ಒಲಿದ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ. ಉತ್ತಮ ರಾಜಕಾರಣಿಗಳಾಗಿ ಹೆಸರು ಮಾಡುತ್ತಾರೆ. ಸರ್ಕಾರಿ ಇಲಾಖೆ

ಅಧಿಕಾರಿಗಳಾಗಿ ಹೆಸರು ಮಾಡುತ್ತಾರೆ. ಅವರು ಉತ್ತಮ ಉದ್ಯಮಿಯಾಗಿ ಕೂಡಾ ಹೆಸರು ಮಾಡುವ ಸಾಧ್ಯತೆ ಇದೆ. ಇವರಿಗೆ ಹಳದಿ, ಕೆಂಪು, ಕಿತ್ತಳೆ ಮತ್ತು ಕಂದು ಅದೃಷ್ಟದ ಬಣ್ಣಗಳಾಗಿವೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.