ಸಂಖ್ಯಾಶಾಸ್ತ್ರ ಸಂಖ್ಯೆ 5: ಮಹಿಳೆಯರು ಮೆಚ್ಚಿದ ಆಭರಣ ಖರೀದಿಸುವಿರಿ, ರಿಯಲ್ ಎಸ್ಟೇಟ್ ವ್ಯವಹಾರದವರಿಗೆ ಜಾಗ್ರತೆ ಅಗತ್ಯ; 2025 ಭವಿಷ್ಯ
Nov 28, 2024 04:08 PM IST
ರಾಡಿಕ್ಸ್ ಸಂಖ್ಯೆ 5 ಸಂಖ್ಯಾಶಾಸ್ತ್ರ ಭವಿಷ್ಯ 2025
Numerology Horoscope 2025: ಜನ್ಮದಿನಾಂಕ ಆಧರಿಸಿ ಭವಿಷ್ಯ, ದೋಷ, ಪರಿಹಾರದ ಬಗ್ಗೆ ಹೇಳುವಂತೆ ಸಂಖ್ಯಾಶಾಸ್ತ್ರದಲ್ಲಿ ಕೂಡಾ ಜನ್ಮದಿನಾಂಕವನ್ನು ಆಧರಿಸಿ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. 1 ರಿಂದ 9 ವರೆಗೆ ವಿವಿಧ ರಾಡಿಕ್ಸ್‌ಗೆ ಸೇರಿದ ಜನರು 2025ರಲ್ಲಿ ಯಾವ ರೀತಿ ಫಲಗಳನ್ನು ಪಡೆಯುತ್ತಾರೆ? ರಾಡಿಕ್ಸ್ ನಂಬರ್ 5ರ ಮುಂದಿನ ವರ್ಷದ ಭವಿಷ್ಯ ಹೇಗಿದೆ ನೋಡೋಣ.
ಸಂಖ್ಯಾಶಾಸ್ತ್ರ ಸಂಖ್ಯೆ 5: ವರ್ಷ ಮುಗಿಯುತ್ತಾ ಬಂತು. ಮೊನ್ನೆ ಮೊನ್ನೆಯಷ್ಟೇ ಹೊಸ ವರ್ಷ ಆಚರಿಸಿದಂತೆ ಇದೆ. ಇನ್ನು 1 ತಿಂಗಳು ಕಳೆದರೆ ಮತ್ತೊಂದು ವರ್ಷಕ್ಕೆ ಕಾಲಿಡುತ್ತೇವೆ. ಹೊಸ ವರ್ಷ ಹತ್ತಿರ ಬರುತ್ತಿದ್ದಂತೆ ಮನಸ್ಸಿನಲ್ಲಿ ನಾನಾ ಪ್ರಶ್ನೆಗಳು ಕಾಡತೊಡಗುತ್ತವೆ. ಈ ವರ್ಷ ನಮಗೆ ಸುಖವೋ, ದುಃಖವೋ ಅಥವಾ ಸಾಮಾನ್ಯವಾಗಿರುವುದಾ? ಏನೆಲ್ಲಾ ಬದಲಾವಣೆಗಳು ನಮ್ಮ ಜೀವನದಲ್ಲಿ ಉಂಟಾಗುತ್ತದೆ? ಈಗ ಎದುರಿಸುತ್ತಿರುವ ಸಮಸ್ಯೆಗಳು ಪರಿಹಾರವಾಗುವುದೋ ಇಲ್ಲವೋ? ಉದ್ಯೋಗ, ವೃತ್ತಿ, ಹಣಕಾಸು, ಸಂಬಂಧ, ಆರೋಗ್ಯ ಹೇಗಿರುತ್ತದೆ? ಈ ಎಲ್ಲಾ ಗೊಂದಲಗಳಿಗೂ ಉತ್ತರ ಇಲ್ಲಿದೆ. 2025 ರಲ್ಲಿ ರಾಡಿಕ್ಸ್ ನಂಬರ್ 5 ಜನರ ಭವಿಷ್ಯ ಈ ರೀತಿ ಇದೆ.
ತಾಜಾ ಫೋಟೊಗಳು
ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಜನ್ಮ ದಿನಾಂಕವನ್ನು ಒಟ್ಟುಗೂಡಿಸಿದಾಗ ಬರುವ ಸಂಖ್ಯೆಯೇ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಇದನ್ನು ರಾಡಿಕ್ಸ್ ನಂಬರ್ ಎಂದು ಕರೆಯಲಾಗುತ್ತದೆ.
ಬುಧ ಗ್ರಹಕ್ಕೆ ಸಂಬಂಧಿಸಿದ ರಾಡಿಕ್ಸ್ ನಂಬರ್ 5 ಜನರು
ನೀವು ಯಾವುದೇ ತಿಂಗಳ 5, 14 ಅಥವಾ 23 ರಂದು ಜನಿಸಿದರೆ, ನಿಮ್ಮ ಮೂಲ ಸಂಖ್ಯೆ 5 ಆಗಿರುತ್ತದೆ. ಸಂಖ್ಯೆ 5ನ್ನು ಬುಧ ಗ್ರಹದ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ. ನೀವು ಸಾಕಷ್ಟು ಪ್ರಮಾಣದ ತಾರ್ಕಿಕತೆ, ಚರ್ಚೆ ಮತ್ತು ತ್ವರಿತ ಬುದ್ಧಿಯನ್ನು ಪ್ರದರ್ಶಿಸುತ್ತೀರಿ. ನಿಮ್ಮ ಯೋಜನೆಗಳ ಪ್ರಕಾರವೇ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಲು ಪ್ರಯತ್ನಿಸುವಿರಿ. ಯಾವುದೇ ಕೆಲಸಗಳಾದರೂ ಅದರಿಂದ ಉಂಟಾಗಬಹುದಾದ ಲಾಭ ಅಥವಾ ನಷ್ಟಗಳನ್ನು ಪರಿಗಣಿಸಿ ನೀವು ಕೆಲಸ ಮಾಡುವ ಸ್ವಭಾವದವರು.
ನೀವು ಫ್ಯಾಷನ್‌ಪ್ರಿಯರು. ನೀವು ಮಹಿಳೆಯಾಗಿದ್ದರೆ, ಸಂಖ್ಯಾಶಾಸ್ತ್ರದ ಜಾತಕ 2025ರ ಪ್ರಕಾರ ನೀವು ಸುಂದರವಾದ ಆಭರಣಗಳನ್ನು ಖರೀದಿಸಬಹುದು. ನಿಮ್ಮ ಮಾತನಾಡುವ ವಿಧಾನವು ತುಂಬಾ ಉತ್ತಮವಾಗಿರುತ್ತದೆ. ನಿಮ್ಮ ಸಂಭಾಷಣೆಯ ಶೈಲಿಯಿಂದ ಜನರು ಹೆಚ್ಚು ಪ್ರಭಾವಿತರಾಗುತ್ತಾರೆ. ಈ ಎಲ್ಲಾ ಗುಣಗಳು ನೀವು ಮಾಡುವ ಕೆಲಸದಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ. ನೀವು ತಾಳ್ಮೆಯಿಂದ ಕೆಲಸ ಮಾಡಿದರೆ ಮತ್ತು ಹಿರಿಯ ಅನುಭವಿ ವ್ಯಕ್ತಿಗಳ ಸಲಹೆ ಅನುಸರಿಸಿದರೆ ನೀವು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು. ಮುಂದಿನ ವರ್ಷ 5, 9, 1, 4 ಮತ್ತು 5 ಸಂಖ್ಯೆಗಳು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ಈ ವರ್ಷ ನೀವು ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸುವುದು ಖಚಿತ. ಈ ವರ್ಷ, ವಿಶೇಷವಾಗಿ ನೀವು ವ್ಯಾಪಾರದಲ್ಲಿದ್ದರೆ ಹೆಚ್ಚು ಲಾಭ ದೊರೆಯಲಿದೆ. ಈ ವರ್ಷ, ನೀವು ಕೆಲವು ಹೊಸ ಯೋಜನೆಗಳನ್ನು ಪ್ರಾರಂಭಿಸಲು ಅಥವಾ ನಿಮ್ಮ ಸಂಸ್ಥೆಯನ್ನು ಇನ್ನಷ್ಟು ಬೆಳೆಸಲು ಸಾಧ್ಯವಾಗುತ್ತದೆ.
ಉದ್ಯೋಗ ಬದಲಿಸುವವರಿಗೆ ಉತ್ತಮ ಅವಕಾಶ
ಉದ್ಯೋಗದಲ್ಲಿರುವವರು ಉದ್ಯೋಗ ಬದಲಾಯಿಸಲು ಬಯಸಿದರೆ, ಅವರು ಈ ವರ್ಷ ಉತ್ತಮ ಭವಿಷ್ಯವನ್ನು ಹೊಂದಿರುತ್ತಾರೆ. ಈ ವರ್ಷ ಉದ್ಯೋಗಕ್ಕೆ ಸಂಬಂಧಿಸಿದಂತೆ ನೀವು ದೂರದ ಊರುಗಳಿಗೆ ಪ್ರಯಾಣ ಮಾಡಬೇಕಾಗಬಹುದು. ಸರ್ಕಾರಿ ಆಡಳಿತ ಇತ್ಯಾದಿಗಳನ್ನು ಒಳಗೊಂಡಿರುವ ಕೆಲಸಗಳಿಗೆ ಈ ವರ್ಷ ಉತ್ತಮವಾಗಿದೆ. ಸಂಖ್ಯಾಶಾಸ್ತ್ರದ ಜಾತಕದ ಪ್ರಕಾರ, ಈ ವರ್ಷ ಸಾಮಾನ್ಯವಾಗಿ ಆಸ್ತಿ, ಕಟ್ಟಡ, ಕಾರುಗಳು ಇತ್ಯಾದಿಗಳನ್ನು ಖರೀದಿಸಲು ಲಾಭದಾಯಕವಾಗಿದ್ದರೂ, 9 ಸಂಖ್ಯೆ ನಿಮ್ಮ ಪರವಾಗಿ ಇಲ್ಲದ ಕಾರಣ ರಿಯಲ್ ಎಸ್ಟೇಟ್ ಸಂಬಂಧಿತ ಕೆಲಸ ಮಾಡುವ ಮುನ್ನ ಬಹಳ ಮುನ್ನೆಚರಿಕೆ ಅಗತ್ಯ. ವಿದೇಶದಲ್ಲಿ ವಾಸಿಸುವವರಿಗೆ ಅಥವಾ ವಿದೇಶ ಪ್ರವಾಸ ಮಾಡಲು ಬಯಸುವವರಿಗೆ ಈ ವರ್ಷವು ಅನುಕೂಲಕರವಾಗಿದೆ. ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳಿಗೆ ಕೂಡಾ ಇದು ಅತ್ಯುತ್ತಮ ವರ್ಷ. ಅನಗತ್ಯ ಕೋಪ ಮತ್ತು ಆತುರದಿಂದ ದೂರವಿದ್ದರೆ ಇನ್ನಷ್ಟು ಯಶಸ್ಸು ಸಾಧಿಸಲಿದ್ದೀರಿ. ನೀವು ತಾಳ್ಮೆಯಿಂದ ಮಾಡುವ ಕೆಲಸಗಳಿಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ಈ ವರ್ಷ ನೀವು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿ ಸಾಧಿಸಲಿದ್ದೀರಿ.
ಪರಿಹಾರ: ಪ್ರತಿದಿನ ಗಣಪತಿ ಅಥರ್ವಶೀರ್ಷ ಪಾರಾಯಣ ಮಾಡಿ. ಪ್ರತಿ ಮಂಗಳವಾರ ಸುಂದರಕಾಂಡವನ್ನು ಪಠಿಸಿ ಮತ್ತು ದೇವಾಲಯದಲ್ಲಿ ಕೆಂಪು ಸಿಹಿ ಮತ್ತು ಕೆಂಪು ಹಣ್ಣುಗಳನ್ನು ಅರ್ಪಿಸಿ. ಪ್ರತಿ ಶನಿವಾರ ಪೌರ ಕಾರ್ಮಿಕರಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನು ದಾನ ಮಾಡಿ.
ಇದನ್ನೂ ಓದಿ: ಈ ದಿನಾಂಕದಲ್ಲಿ ಜನಿಸಿದವರು ಬಹಳ ಧೈರ್ಯಶಾಲಿಗಳು