logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಂದು ರಾಮನವಮಿ- ಅಯೋಧ್ಯೆ ಬಾಲರಾಮನ ಸ್ತುತಿಸಲು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ; ಮೊದಲ ಬಾರಿ ಹಾಡಿದ್ದು ಇವರೇ ನೋಡಿ- ವಿಡಿಯೋ

ಇಂದು ರಾಮನವಮಿ- ಅಯೋಧ್ಯೆ ಬಾಲರಾಮನ ಸ್ತುತಿಸಲು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ; ಮೊದಲ ಬಾರಿ ಹಾಡಿದ್ದು ಇವರೇ ನೋಡಿ- ವಿಡಿಯೋ

Umesh Kumar S HT Kannada

Apr 17, 2024 05:28 AM IST

ಇಂದು ರಾಮನವಮಿ- ಅಯೋಧ್ಯೆ ಬಾಲರಾಮನ ಸ್ತುತಿಸಲು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ

  • ಇಂದು ರಾಮನವಮಿ. ಅಯೋಧ್ಯೆಯಲ್ಲಿ ಬಾಲರಾಮ ವಿರಾಜಮಾನನಾದ ಬಳಿಕ ಮೊದಲ ರಾಮನವಮಿ ಉತ್ಸವ ನಡೆಯುತ್ತಿದೆ. ಬಾಲರಾಮನನ್ನು ಸ್ತುತಿಸುವ ಭಕ್ತಿಗೀತೆ, ಭಾವಗೀತೆಗಳ ನಡುವೆ ಗಮನಸೆಳೆಯುವಂಥ ಹಾಡು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ. ಈ ಹಾಡನ್ನು ರಚಿಸಿದವರು ಡಾ.ಗಜಾನನ ಶರ್ಮಾ. ಮೊದಲ ಬಾರಿ ಹಾಡಿದ್ದು ಇವರೇ ನೋಡಿ- ವಿಡಿಯೋ ಹಾಡನ್ನು ಆಲಿಸುತ್ತ, ನೋಡುತ್ತ ರಾಮನನ್ನು ಸ್ತುತಿಸೋಣ.

ಇಂದು ರಾಮನವಮಿ- ಅಯೋಧ್ಯೆ ಬಾಲರಾಮನ ಸ್ತುತಿಸಲು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ
ಇಂದು ರಾಮನವಮಿ- ಅಯೋಧ್ಯೆ ಬಾಲರಾಮನ ಸ್ತುತಿಸಲು ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ (@ShriRamTeerth)

ಭಾರತದ ಉದ್ದಗಲಕ್ಕೂ ಇಂದು ರಾಮನವಮಿಯ ಸಂಭ್ರಮ. ಅಯೋಧ್ಯೆಯಲ್ಲಿ ಈ ಬಾರಿ ವಿಶೇಷ. ರಾಮ ಮಂದಿರ ಲೋಕಾರ್ಪಣೆಯಾಗಿ ಬಾಲರಾಮ ವಿರಾಜಮಾನನಾಗಿ ಮೊದಲ ರಾಮನವಮಿ. ಈ ಸಂಭ್ರಮ ಆಚರಣೆ ದೇಶವ್ಯಾಪೀ ನೆಲೆಸಿದೆ. ಶ್ರೀರಾಮನನ್ನು ಸ್ತುತಿಸಲು ಅನೇಕ ಭಜನೆಗಳಿವೆ, ಸ್ತೋತ್ರಗಳಿವೆ. ಶ್ಲೋಕಗಳೂ ಇವೆ. ಆದರೆ ಅಚ್ಚಕನ್ನಡದಲ್ಲಿ ಮನಮುಟ್ಟುವ, ಭಾವತಲ್ಲೀನಗೊಳಿಸುವ ಹಾಡು ಬೆರಳೆಣಿಕೆಯಷ್ಟು.

ತಾಜಾ ಫೋಟೊಗಳು

ವೃಷಭ ರಾಶಿಯಲ್ಲಿ ಬೃಹಸ್ಪತಿ ಅಸ್ತಂಗತ್ವ ಹಂತ; ಈ 3 ರಾಶಿಯವರಿಗೆ ಕೆಲವು ದಿನಗಳವರೆಗೆ ಗುರುಬಲ ಸಾಧ್ಯವಿಲ್ಲ

May 16, 2024 02:27 PM

ಇಂದು ಗಂಗಾ ಸಪ್ತಮಿ, ಶಿವನ ಜಟೆಯಿಂದ ಭೂಮಿಗೆ ಗಂಗೆ ಇಳಿದು ಬಂದ ದಿನ; ಈ ವಸ್ತುಗಳನ್ನು ದಾನ ಮಾಡಿದರೆ ಪುಣ್ಯ ಪ್ರಾಪ್ತಿ

May 14, 2024 08:48 AM

12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಜನೆ; ಗಜಲಕ್ಷ್ಮಿ ಯೋಗದಿಂದ ಈ 3 ರಾಶಿಯವರಿಗೆ ಅದೃಷ್ಟದ ಮೇಲೆ ಅದೃಷ್ಟ

May 13, 2024 12:41 PM

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಅವುಗಳ ಪೈಕಿ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ ಹಾಡು ಮುಖ್ಯವಾದುದು. ಈ ಹಾಡನ್ನು 2012ರಲ್ಲಿ ಡಾ.ಗಜಾನನ ಶರ್ಮಾ ಅವರು ರಚಿಸಿದರು. ಶ್ರೀರಾಮಚಂದ್ರಾಪುರ ಮಠದ ಗೀತೆಯಾಗಿ ಇದು ದಾಖಲಾಗಿದೆ. ಶ್ರೀರಾಮಚಂದ್ರಾಪುರ ಮಠದ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಗೀತೆಯ ವಿಡಿಯೋ ಆವೃತ್ತಿ ಪ್ರಕಟವಾಗಿದೆ. ಅದುವೇ ಮೊದಲ ವಿಡಿಯೋ ಗೀತೆ. ಈ ಗೀತೆಯನ್ನು ಮೊದಲು ಹಾಡಿದ್ದು ಗೀತರಚನೆಕಾರ ಡಾ.ಗಜಾನನ ಶರ್ಮಾ ಅವರ ಪುತ್ರ ಸಾಕೇತ ಶರ್ಮಾ. ಸಂಗೀತ ರಚನೆ ಮತ್ತು ಗಾಯನ ಎರಡನ್ನೂ ಸಾಕೇತ ಶರ್ಮಾ ನಿರ್ವಹಿಸಿದ್ದರು.

"ಇನ್ನಷ್ಟು ಬೇಕೆನ್ನ ಹೃದಯಕ್ಕೆರಾಮ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮ"- ಹಾಡು ಹುಟ್ಟಿದ ಕ್ಷಣ

ಈ ಹಾಡು ಹುಟ್ಟಿದ ಕ್ಷಣದ ಬಗ್ಗೆ ಡಾ.ಗಜಾನನ ಶರ್ಮಾ ಅವರ ಮಾತುಗಳನ್ನು ಶ್ರೀರಾಮಚಂದ್ರಾಪುರ ಮಠದ ಯೂಟ್ಯೂಬ್‌ ಚಾನೆಲ್‌ನಲ್ಲಿ ಉಲ್ಲೇಖಿಸಲಾಗಿದೆ. ಅದು ಹೀಗಿದೆ-

"ಈ ಹಾಡು ರಚನೆಯಾದ ಸಂದರ್ಭ ಮಾತ್ರ ಬಲು ವಿಚಿತ್ರ. ಅದು "ನಂದನ" ಸಂವತ್ಸರದ (ಇಸವಿ 2012) ಚಾತುರ್ಮಾಸದ ಸಂದರ್ಭ. ನಮ್ಮ ಗುರುಗಳಾದ ಶ್ರೀ ರಾಘವೇಶ್ವರ ಭಾರತಿಯವರು ರಾಮನ ಮೇಲೆ ವಿಶೇಷವಾದ ಹಾಡೊಂದನ್ನು ಬರೆಯಲು ನನಗೆ ಸೂಚಿಸಿದ್ದರು. ಅವರು ಕೊಟ್ಟ ಅವಧಿ ಮೀರುತ್ತ ಬಂದಿದ್ದರೂ ನನಗೆ ಹಾಡು ಬರೆಯಲಾಗಿರಲಿಲ್ಲ. ಅವರು ಮತ್ತೆ ಒತ್ತಾಯಿಸಿ ಕೇಳಿದಾಗ, "ಸಧ್ಯದಲ್ಲೇ ಬರೆದು ಕೊಡುತ್ತೇನೆ" ಎಂದು ಮಾತನ್ನೇನೋ ಕೊಟ್ಟುಬಿಟ್ಟೆ.

ಆಗ ನಾನು ಇಂಧನ ಇಲಾಖೆ (ಕೆಪಿಟಿಸಿಎಲ್) ಯಲ್ಲಿ ನೌಕರಿಯಲ್ಲಿದ್ದ ಕಾಲ. ಇಲಾಖೆ ತನ್ನ ಅಧಿಕಾರಿಗಳಿಗಾಗಿ ಕೇರಳದ ರೆಸಾರ್ಟ್ ಒಂದರಲ್ಲಿ ಆಡಳಿತಾತ್ಮಕ ಶಿಬಿರವೊಂದನ್ನು ಏರ್ಪಡಿಸಿ ಅದಕ್ಕೆ ನನ್ನನ್ನೂ ನಿಯೋಜಿಸಿತ್ತು. ಶಿಬಿರದಲ್ಲಿ ಒಂದು ದಿನ ನಮ್ಮೆಲ್ಲರನ್ನೂ ಚಹಾ ತೋಟವೊಂದರ ವೀಕ್ಷಣೆಗೆ ಕರೆದೊಯ್ಯುತ್ತಿದ್ದಾಗ ನನ್ನ ಮನಸ್ಸಿನಲ್ಲಿ ಶ್ರೀಗಳಿಗೆ ಹಾಡು ಬರೆದುಕೊಟ್ಟಿಲ್ಲವೆಂಬ ಒತ್ತಡ ತುಂಬಿತ್ತು. ವಾಹನದಲ್ಲಿ ಹೋಗುತ್ತಿರುವಾಗ ಅಲ್ಲಿ ರಸ್ತೆ ಬದಿಗೆ ಜಾಹೀರಾತೊಂದು ಕಣ್ಣಿಗೆ ಬಿತ್ತು. ಅದು, "ಯೇ ದಿಲ್ ಮಾಂಗೇ ಮೋರ್ " ಎಂದು ಖ್ಯಾತ ಕ್ರಿಕೆಟ್ ಪಟು ಸಚಿನ್ ತೆಂಡುಲ್ಕರ್ ತಂಪು ಪಾನೀಯವೊಂದರ ಕುರಿತು ಜಾಹೀರಾತು ನಡೆಸುವ ಪಟ. ಅದನ್ನು ನೋಡುತ್ತಿದ್ದಂತೆ ನನಗೆ, "ಹೃದಯಕ್ಕೆ ಇನ್ನಷ್ಟು ತಂಪು ಪಾನೀಯ ಬೇಕು ಎನ್ನುವ ಬದಲಿಗೆ, "ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ" ಎಂಬ ಸಾಲು ಹೊಳೆಯಿತು. ಮುಂದೆ ಆ ಸಾಲುಗಳನ್ನೇ ತಿದ್ದಿ ತೀಡಿ ಮುಂದುವರೆಸಿದಾಗ ಈ ಗೀತೆ ಸಿದ್ದವಾಯಿತು. ಅದನ್ನು ಗುರುಗಳಿಗೆ ಕೊಟ್ಟಾಗ ಸಂತೋಷ ಪಟ್ಟರಲ್ಲದೇ ಇದು ನಮ್ಮ ಮಠದ ಗೀತೆಯೆಂದು ಉದ್ಘೋಷಿಸಿದರು. ಇಡೀ ಚಾತುರ್ಮಾಸ ಅದನ್ನು ಹಾಡಿಸಿ, ಕೇಳಿ ಆನಂದಪಟ್ಟರು. ಶ್ರೀಮಠದ ಗೀತೆಯೆಂದು ಅದನ್ನು ಪ್ರತಿವರ್ಷ ಧಾರ್ಮಿಕ ಪಂಚಾಂಗದಲ್ಲೂ ಮುದ್ರಿಸತೊಡಗಿದರು."

ಶ್ರೀರಾಮಚಂದ್ರಾಪುರಮಠದ ಗೀತೆ - ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ..

"ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ನಿನ್ನಷ್ಟು ನೆಮ್ಮದಿಯು ಎಲ್ಲಿಹುದು ರಾಮಾ..."- ಹಾಡು ಶ್ರೀ ಭಾರತೀ ಪ್ರಕಾಶನದ ಕೊಡುಗೆಯಾಗಿದ್ದು, ರಚನೆ ಡಾ.ಗಜಾನನ ಶರ್ಮಾ, ಸಂಗೀತ ರಚನೆ ಮತ್ತು ಗಾಯನ ಸಾಕೇತ ಶರ್ಮಾ, ತಬಲ: ಗಣೇಶ ಭಾಗವತ್ ಮತ್ತು ಗಜಾನನ ಶರ್ಮಾ, ಹಾರ್ಮೋನಿಯಂ ಮತ್ತು ತಾಳ : ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಸಹಗಾಯನ: ಕು. ಪೂಜಾ ಭಟ್, ಕು. ಪೃಥ್ವಿ ಭಟ್, ಕು. ಪ್ರಿಯಾಂಕಾ ಭಟ್ ಎಂಬ ಉಲ್ಲೇಖ ಅದರಲ್ಲಿದೆ.

ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ.. ವಿಡಿಯೋ ಇಲ್ಲಿದೆ ನೋಡಿ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ