logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬೆಂಗಳೂರಲ್ಲಿ ಕೂಡಲೀ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ, ಡಿ 20 ರಿಂದ 31 ರ ತನಕ ವಿವಿಧ ಕಾರ್ಯಕ್ರಮ, ಇಲ್ಲಿದೆ ವಿವರ

ಬೆಂಗಳೂರಲ್ಲಿ ಕೂಡಲೀ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ, ಡಿ 20 ರಿಂದ 31 ರ ತನಕ ವಿವಿಧ ಕಾರ್ಯಕ್ರಮ, ಇಲ್ಲಿದೆ ವಿವರ

HT Kannada Desk HT Kannada

Dec 18, 2023 09:59 PM IST

google News

ಕೂಡಲೀ ಶೃಂಗೇರಿ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ

  • ಕೂಡಲೀ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಇದೇ ಮೊದಲ ಬಾರಿಗೆ ಬೆಂಗಳೂರು ಪ್ರವಾಸ ಕೈಗೊಂಡಿದ್ದು, ಇಂದು (ಡಿ.19) ಬೆಂಗಳೂರಲ್ಲ ಪುರಪ್ರವೇಶ ಮಾಡಲಿದ್ದಾರೆ. ಡಿ.31ರ ತನಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅವುಗಳ ವಿವರ ಇಲ್ಲಿದೆ.

ಕೂಡಲೀ ಶೃಂಗೇರಿ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ
ಕೂಡಲೀ ಶೃಂಗೇರಿ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ (@KudaliSringeri)

ಬೆಂಗಳೂರು: ಕೂಡಲೀ ಶೃಂಗೇರಿ ಮಹಾ ಸಂಸ್ಥಾನದ ಪೀಠಾಧಿಪತಿ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿಯವರು ಡಿ.19ಕ್ಕೆ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಗಿಗುಡ್ಡದ ಹನುಮಜ್ಜಯಂತಿ ಉತ್ಸವ ಸೇರಿ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಕೂಡಲೀ ಶೃಂಗೇರಿ ಮಹಾ ಸಂಸ್ಥಾನದ 72ನೇ ಪೀಠಾಧಿಪತಿಯಾಗಿರುವ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಡಿ.20 ರಿಂದ 31ರ ತನಕ ಬೆಂಗಳೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಹಾಗೂ ಕೂಡಲಿ ಮಠದ ಅನುಯಾಯಿಗಳ ಮನೆಗಳಿಗೆ ಭೇಟಿ ಕೊಡಲಿದ್ದಾರೆ ಎಂದು ಶ್ರೀಮಠ ತಿಳಿಸಿದೆ.

ಸ್ವಾಮೀಜಿಯವರ ಈ ಪ್ರವಾಸಕ್ಕೆ ಐತಿಹಾಸಿಕ ಮಹತ್ವ ಇದ್ದು, ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಹಾಗೂ ಹಾಗೂ ತೆಲಂಗಾಣದಿಂದ ಬೆಂಗಳೂರಿಗೆ ವಲಸೆ ಬಂದು ನೆಲೆಸಿರುವ ಕೂಡಲಿ ಮಠದ ಅನುಯಾಯಿ ಕುಟುಂಬಗಳ ದಶಕಗಳ ಪ್ರತೀಕ್ಷೆ ಮತ್ತು ನಿರೀಕ್ಷೆ ಕೈಗೂಡಲಿದೆ.

ಸ್ವಾಮೀಜಿಯವರು ಡಿ.19ರಂದು ಸಂಜೆ ರಾಗಿಗುಡ್ಡ ಆಂಜನೇಯ ದೇವಸ್ಥಾನದ ಬಳಿ ಪುರಪ್ರವೇಶ ಮಾಡಲಿದ್ದಾರೆ. ಅಲ್ಲಿ ಅವರಿಗೆ ಪೂರ್ಣಕುಂಭ ಸ್ವಾಗತ, ಧೂಳಿಪಾದ ಪೂಜೆ ನೆರವೇರಲಿದೆ.

ಇದಾಗಿ, ಡಿ.20ರಂದು ರಾಗಿಗುಡ್ಡದ ಹನುಮಜ್ಜಯಂತಿ ಉತ್ಸವ ಹಾಗೂ ಸಹಸ್ರ ಕುಂಭಾಭಿಷೇಕ ಕಾರ್ಯಕ್ರಮವನ್ನು ಸ್ವಾಮಿಗಳು ಉದ್ಘಾಟಿಸಿ, ಅನೇಕ ವಿದ್ವಾಂಸರನ್ನು ಸನ್ಮಾನಿಸಲಿದ್ದಾರೆ.

ವಿಶ್ವ ಹಿಂದೂ ಪರಿಷತ್‌ ಸಹಯೋಗದಲ್ಲಿ ಡಿ.22ರಂದು ಗೀತಾ ಜಯಂತಿ ಪ್ರಯುಕ್ತ ಎನ್‌ ಆರ್‌ ಕಾಲೋನಿ ರಾಮಮಂದಿರದಲ್ಲಿ ಸಾಮೂಹಿಕ ಭಗವದ್ಗೀತಾ ಪಾರಾಯಣ ಯಜ್ಞವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಕೂಡ ಸ್ವಾಮೀಜಿಯವರು ಸಾನ್ನಿಧ್ಯವಹಿಸಲಿದ್ದಾರೆ.

ಮಿಥಿಕ್ ಸೊಸೈಟಿಯಲ್ಲಿ ಡಿ.24ರಂದು ಬೆಳಗ್ಗೆ ಸ್ವಾಮೀಜಿಯವರ ವಿಶೇಷ ಉಪನ್ಯಾಸ ಆಯೋಜನೆಯಾಗಿದೆ.

ಬೆಂಗಳೂರಿನ ಎಜಿಎಸ್ ಲೇಔಟ್‌ನ ಸಿದ್ಧೇಶ್ವರಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಡಿ.25ರ ಮುಂಜಾನೆ ಸಂಸ್ಥಾನದ ಪೂಜೆ ನೆರವೇರಲಿದೆ.

ಕಳೆದ ಮೇ ತಿಂಗಳಲ್ಲಿ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಕೂಡಲೀ ಶೃಂಗೇರಿ ಮಹಾ ಸಂಸ್ಥಾನದ 72ನೇ ಪೀಠಾಧಿಪತಿಯಾಗಿ ಹೊಣೆಗಾರಿಕೆ ವಹಿಸಿದ್ದು, ಆರೇಳು ತಿಂಗಳ ಅವಧಿಯಲ್ಲಿ ಶ್ರೀಮಠದ ವತಿಯಿಂದ ಹೊಸ ಗುರುಕುಲದ ಸ್ಥಾಪನೆ, ಅದ್ದೂರಿ ದಸರಾ ಆಚರಣೆ ಮೊದಲಾದ ಚಟುವಟಿಕೆಗಳನ್ನು ಆಯೋಜಿಸಿ ಗಮನಸೆಳೆದಿದ್ದಾರೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ