logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಶ್ರೀಕೃಷ್ಣನಲ್ಲಿ ಜೀವಿಸುವ ವ್ಯಕ್ತಿ ಸಂತೋಷ, ಶಾಂತಿಯಿಂದಿರುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಶ್ರೀಕೃಷ್ಣನಲ್ಲಿ ಜೀವಿಸುವ ವ್ಯಕ್ತಿ ಸಂತೋಷ, ಶಾಂತಿಯಿಂದಿರುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Raghavendra M Y HT Kannada

Feb 01, 2024 05:15 AM IST

google News

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

  • ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾನ್ತಿಮಾಪ್ನೋತಿ ನೈಷ್ಠಿಕೀಮ್ |

ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ ||12||

ಒಂದೇ ರೀತಿಯಾಗಿ ನಿಷ್ಠಿಯಿಂದಿರುವ ಆತ್ಮನು ಪರಿಶುದ್ಧ ಶಾಂತಿಯನ್ನು ಹೊಂದುತ್ತಾನೆ. ಏಕೆಂದರೆ ಅವನು ಎಲ್ಲ ಕರ್ಮಫಲಗಳನ್ನು ನನಗೆ ಒಪ್ಪಿಸುತ್ತಾನೆ. ದೈಯುಕ್ತನಲ್ಲದವನು ಕರ್ಮಫಲಕ್ಕಾಗಿ ಆಸೆಪಡುವುದರಿಂದ ತೊಡಕಿನಲ್ಲಿ ಸಿಕ್ಕಿಕೊಳ್ಳುತ್ತಾನೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೂ ದೇಹಪ್ರಜ್ಞೆಯಲ್ಲಿರುವ ಮನುಷ್ಯನಿಗೂ ವ್ಯತ್ಯಾಸವೆಂದರೆ ಮೊದಲನೆಯವನಿಗೆ ಕೃಷ್ಣನಲ್ಲಿ ಆಸಕ್ತಿ, ಎರಡನೆಯವನಿಗೆ ತನ್ನ ಕರ್ಮಗಳ ಫಲಗಳಲ್ಲಿ ಆಸಕ್ತಿ. ಕೃಷ್ಣನಲ್ಲಿ ಆಸಕ್ತಿಯಿದ್ದು ಅವನಿಗಾಗಿಯೇ ಕೆಲಸ ಮಾಡುವವನು ನಿಶ್ಚಯವಾಗಿಯೂ ಮುಕ್ತನಾದವನು. ಆತನಿಗೆ ತನ್ನ ಕರ್ಮಫಲದ ವಿಷಯದಲ್ಲಿ ಆತಂಕವಿಲ್ಲ. ದ್ವಂದ್ವದ ಕಲ್ಪನೆಯಲ್ಲಿ ಎಂದರೆ ಪರಮಸತ್ಯದ ಅರಿವಿಲ್ಲದೆ ಕೆಲಸ ಮಾಡುವುದೇ ಕರ್ಮಫಲದ ವಿಷಲದ ವಿಷಯದಲ್ಲಿ ಆತಂಕವಾಗುವುದಕ್ಕೆ ಕಾರಣ ಎಂದು ಭಾಗವತದಲ್ಲಿ ವಿವರಿಸಿದೆ.

ಕೃಷ್ಣನು ಪರಮ ಸತ್ಯ, ದೇವೋತ್ತಮ ಪುರುಷ. ಕೃಷ್ಣಪ್ರಜ್ಞೆಯಲ್ಲಿ ದ್ವಂದ್ವವಿಲ್ಲ, ಇರುವುದೆಲ್ಲವೂ ಕೃಷ್ಣನ ಶಕ್ತಿಯ ಉತ್ಪತ್ತಿಯೇ. ಕೃಷ್ಣನು ಸರ್ವಮಂಗಳನು. ಆದ್ದರಿಂದ ಕೃಷ್ಣಪ್ರಜ್ಞೆಯ ಕರ್ಮವೆಲ್ಲ ಪರಿಪೂರ್ಣ ಮಟ್ಟದ್ದು. ಈ ಕೆಲಸವೆಲ್ಲ ಆಧ್ಯಾತ್ಮಿಕವಾದದ್ದು. ಇದಕ್ಕೆ ಐಹಿಕ ಫಲವಿಲ್ಲ. ಆದ್ದರಿಂದ ಕೃಷ್ಣಪ್ರಜ್ಞೆಯು ಸಂಪೂರ್ಣ ಶಾಂತಿಯನ್ನು ತರುತ್ತದೆ. ಆದರೆ ಇಂದ್ರಿಯತೃಪ್ತಿಗಾಗಿಯೇ ಲಾಭದ ಲೆಕ್ಕಾಚಾರದಲ್ಲಿ ಸಿಕ್ಕಿಕೊಂಡಿರುವವನಿಗೆ ಈ ಶಾಂತಿ ದೊರಕುವುದಿಲ್ಲ. ಇದೇ ಕೃಷ್ಣಪ್ರಜ್ಞೆಯ ಗುಟ್ಟು-ಕೃಷ್ಣನನ್ನು ಬಿಟ್ಟು ಅಸ್ತಿತ್ವಿಲ್ಲ ಎನ್ನುವ ಅರಿವೇ ಶಾಂತಿ ಮತ್ತು ನಿರ್ಭಯಗಳ ನೆಲೆ.

ಸರ್ವಕರ್ಮಾಣಿ ಮನಸಾ ಸನ್ನ್ಯಸ್ಯಾಸ್ತೇ ಸುಖಂ ವಶೀ |

ನವದ್ವಾರೇ ಪುರೇ ದೇಹಿ ನೈವ ಕುರ್ವನ್ನ ಕಾರಯನ್ ||12||

ದೇಹಸ್ಥ ಜೀವಿಯು ಸ್ವಭಾವವನ್ನು ನಿಯಂತ್ರಿಸಿ ಮಾನಸಿಕವಾಗಿ ಎಲ್ಲ ಕರ್ಮಗಳನ್ನೂ ತ್ಯಜಿಸಿದಾಗ ಅವನು ನವದ್ವಾರಗಳ ನಗರದಲ್ಲಿ (ಐಹಿಕ ಶರೀರದಲ್ಲಿ) ಸುಖವಾಗಿ ವಾಸಿಸುತ್ತಾನೆ. ಅವನು ಕಾರ್ಯಮಾಡುವುದೂ ಇಲ್ಲ, ಕಾರ್ಯ ಮಾಡಿಸುವುದೂ ಇಲ್ಲ.

ದೇಹಸ್ಥ ಆತ್ಮನು ನವದ್ವಾರಗಳ ನಗರದಲ್ಲಿ ವಾಸಿಸುತ್ತಾನೆ. ದೇಹದ, ಅಥವಾ ಆಲಂಕಾರಿಕಾಗಿ ವರ್ಣಿಸಿದ ದೇಹ ನಗರದ, ಕಾರ್ಯಗಳನ್ನು ಅದರ ಪ್ರಕೃತಿ ಗುಣಗಳು ತಂತಾವೇ ನಿರ್ವಹಿಸಿಕೊಂಡು ಹೋಗುತ್ತವೆ. ಆತ್ಮನು ದೇಹದ ಸ್ಥಿತಿಗೆ ತನ್ನನ್ನು ಒಳಪಡಿಸಿಕೊಂಡಿದ್ದರೂ ಬಯಸಿದಾಗ ಆ ಸ್ಥಿತಿಯನ್ನು ಮೀರಬಲ್ಲನು. ತನ್ನ ಉತ್ತಮ ಸ್ವಭಾವವನ್ನು ಮರೆತ ಕಾರಣದಿಂದಲೇ ಆತನು ತನ್ನನ್ನು ಜಡದೇಹದೊಂದಿಗೆ ಗುರುತಿಸಿಕೊಳ್ಳುತ್ತಾನೆ. ಇದರಿಂದಾಗಿ ಕಷ್ಟಪಡುತ್ತಾನೆ. ಕೃಷ್ಣಪ್ರಜ್ಞೆಯಿಂದ ಆತನು ತನ್ನ ನಿಜವಾದ ಸ್ಥಿತಿಯನ್ನು ಮರಳಿ ಪಡೆಯಬಹಲ್ಲ ಮತ್ತು ಆ ಮೂಲಕ ದೇಹದ ಬಂಧನದಿಂದ ಹೊರಕ್ಕೆ ಬರಬಲ್ಲ. ಆದುದರಿಂದ ಕೃಷ್ಣಪ್ರಜ್ಞೆಯನ್ನು ಒಪ್ಪಿಕೊಂಡ ಮನುಷ್ಯನು ಕೂಡಲೇ ದೇಹದ ಕಾರ್ಯಗಳಿಂದ ದೂರನಾಗುತ್ತಾನೆ. ಇಂತಹ ನಿಯಂತ್ರಿತ ಬದುಕಿನಲ್ಲಿ ಅವನ ವಿಚಾರಗಳು ಬದಲಾಗುತ್ತವೆ. ಅವನು ನವದ್ವಾರಗಳ ನಗರದಲ್ಲಿ ಸುಖವಾಗಿರುತ್ತಾನೆ. ಒಂಬತ್ತು ದ್ವಾರಗಳನ್ನು ಹೀಗೆ ಹೆಸರಿಸಲಾಗಿದೆ -

ನವದ್ವಾರೇ ಪುರೇ ದೇಹೀ ಹಂಸೋ ಲೇಲಾಯತೇ ಬಹಿಃ |

ವಶೀ ವರ್ವಸ್ಯ ಲೋಕಸ್ಯ ಸ್ಥಾವರಸ್ಯ ಚರಸ್ಯ ಚ ||

ಜೀವಿಯ ದೇಹದಲ್ಲಿ ವಾಸಿಸುತ್ತಿರುವ ದೇವೋತ್ತಮ ಪರಮ ಪುರುಷನು ವಿಶ್ವದ ಎಲ್ಲ ಜೀವಿಗಳನ್ನೂ ನಿಯಂತ್ರಿಸುತ್ತಾನೆ. ದೇಹಕ್ಕೆ ನವದ್ವಾರಗಳುಂಟು (ಎರಡು ಕಣ್ಣುಗಳು, ಮೂಗಿನ ಎರಡು ಹೊಳ್ಳೆಗಳು, ಎರಡು ಕಿವಿಗಳು, ಒಂದು ಬಾಯಿ, ಗುದ, ಜನನೇಂದ್ರಿಯ) ತನ್ನ ಬದ್ಧ ನೆಲೆಯಲ್ಲಿ ಜೀವಿಯು ತನ್ನನ್ನು ದೇಹದೊಂದಿಗೆ ಗುರುತಿಸಿಕೊಳ್ಳುತ್ತಾನೆ. ಆದರೆ ಅವನು ತನ್ನನ್ನು ತನ್ನೊಳಗಿರುವ ಭಗವಂತನೊಡನೆ ಗುರುತಿಸಿಕೊಂಡಾಗ ದೇಹದಲ್ಲಿ ಇರುವಾಗಲೇ ಭಗವಂತನಷ್ಟೇ ಸ್ವತಂತ್ರನಾಗುತ್ತಾನೆ (ಶ್ವೇತಾಶ್ವತರ ಉಪನಿಷತ್ತು 3.18). ಆದ್ದರಿಂದ ಕೃಷ್ಣಪ್ರಜ್ಞೆಯುಳ್ಳ ಮನುಷ್ಯನು ಐಹಿಕ ದೇಹದ ಹೊರಗಿನ ಮತ್ತು ಒಳಗಿನ ಎರಡು ಕಾರ್ಯಗಳಿಂದಲೂ ಸ್ವತಂತ್ರನು.

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ