logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನವರಾತ್ರಿಯ 9ನೇ ದಿನ ಸಿದ್ಧಿಧಾತ್ರಿ ಆರಾಧನೆ; ದೇವಿ ಮಹತ್ವ, ಪೂಜಾ ವಿಧಾನ, ಪಠಿಸಬೇಕಾದ ಮಂತ್ರಗಳ ವಿವರ ಇಲ್ಲಿದೆ

ನವರಾತ್ರಿಯ 9ನೇ ದಿನ ಸಿದ್ಧಿಧಾತ್ರಿ ಆರಾಧನೆ; ದೇವಿ ಮಹತ್ವ, ಪೂಜಾ ವಿಧಾನ, ಪಠಿಸಬೇಕಾದ ಮಂತ್ರಗಳ ವಿವರ ಇಲ್ಲಿದೆ

Raghavendra M Y HT Kannada

Oct 11, 2024 06:00 AM IST

google News

ನವರಾತ್ರಿಯ 9ನೇ ದಿನ ಸಿದ್ಧಿಧಾತ್ರಿ ದೇವಿ ಪೂಜಾ ವಿಧಾನ, ಮಹತ್ವ, ಮಂತ್ರಗಳನ್ನು ತಿಳಿಯಿರಿ

    • ನವರಾತ್ರಿ ಹಬ್ಬವು ದುರ್ಗಾ ದೇವಿಯ ಒಂಬತ್ತನೇ ಅವತಾರವಾದ ಸಿದ್ಧಿಧಾತ್ರಿ ದೇವಿಯ ಆರಾಧನೆಯೊಂದಿಗೆ ಕೊನೆಗೊಳ್ಳುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಸಿದ್ಧಿಧಾತ್ರಿ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ, ಅಲ್ಲದೆ, ಖ್ಯಾತಿ, ಶಕ್ತಿ ಹಾಗೂ ಸಂಪತ್ತನ್ನು ನೀಡುವ ದೇವತೆಯಾಗಿದ್ದಾಳೆ. ನವರಾತ್ರಿಯ 9ನೇ ದಿನ ಸಿದ್ಧಿಧಾತ್ರಿ ದೇವಿಯ ಪೂಜಾ ವಿಧಾನ, ಮಹತ್ವವನ್ನು ತಿಳಿಯೋಣ.
ನವರಾತ್ರಿಯ 9ನೇ ದಿನ ಸಿದ್ಧಿಧಾತ್ರಿ ದೇವಿ ಪೂಜಾ ವಿಧಾನ, ಮಹತ್ವ, ಮಂತ್ರಗಳನ್ನು ತಿಳಿಯಿರಿ
ನವರಾತ್ರಿಯ 9ನೇ ದಿನ ಸಿದ್ಧಿಧಾತ್ರಿ ದೇವಿ ಪೂಜಾ ವಿಧಾನ, ಮಹತ್ವ, ಮಂತ್ರಗಳನ್ನು ತಿಳಿಯಿರಿ

ಇಂದು (ಅಕ್ಟೋಬರ್ 11, ಶುಕ್ರವಾರ) ನವರಾತ್ರಿಯ 9ನೇ ಹಾಗೂ ಕೊನೆಯ ದಿನ. ಈ ದಿನದಂದು ದುರ್ಗಾ ಮಾತೆಯ 9ನೇ ಅವತಾರವಾದ ಸಿದ್ಧಿಧಾತ್ರಿ ದೇವಿಯ ಪೂಜೆಯನ್ನು ಮಾಡಲಾಗುತ್ತದೆ. ಆ ಮೂಲಕ ನವರಾತ್ರಿ ಕೊನೆಗೊಳ್ಳುತ್ತದೆ. ನವದುರ್ಗೆಯರಲ್ಲಿ ತಾಯಿ ಸಿದ್ಧಿಧಾತ್ರಿ ಕೊನೆಯವಳು. ಧಾರ್ಮಿಕ ನಂಬಿಕೆಗಳ ಪ್ರಕಾರ, ಸಿದ್ಧಿಧಾತ್ರಿ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ. ಜೊತೆಗೆ ಖ್ಯಾತಿ, ಶಕ್ತಿ ಹಾಗೂ ಸಂಪತ್ತನ್ನು ಸಹ ನೀಡುತ್ತಾಳೆ. ಧರ್ಮಗ್ರಂಥಗಳಲ್ಲಿ, ಸಿದ್ಧಿಧಾತ್ರಿಯನ್ನು ಯಶಸ್ಸು ಮತ್ತು ಮೋಕ್ಷದ ದೇವತೆ ಎಂದು ಪರಿಗಣಿಸಲಾಗಿದೆ. ತಾಯಿ ಸಿದ್ಧಿಧಾತ್ರಿಯಲ್ಲಿ ಅನಿಮಾ, ಮಹಿಮಾ, ಸಾಧನೆ, ಪ್ರಾಕಾಮ್ಯ, ಗರಿಮಾ, ಲಘಿಮಾ, ಇಶಿತ್ವ ಮತ್ತು ವಶಿತ್ವ ಎಂಬ 8 ಸಿದ್ಧಿಗಳಿವೆ. ತಾಯಿ ಸಿದ್ಧಿಧಾತ್ರಿಯು ಮಹಾಲಕ್ಷ್ಮಿಯಂತೆ ಕಮಲದ ಮೇಲೆ ಕುಳಿತಿದ್ದಾಳೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ದೇವಿಯ ರೂಪವನ್ನು ವಿವರಿಸುವುದಾದರೆ ಸಿದ್ಧಿಧಾತ್ರಿಗೆ ನಾಲ್ಕು ಕೈಗಳಿವೆ. ತನ್ನ ಕೈಯಲ್ಲಿ ಶಂಖ, ಗದೆ, ಕಮಲದ ಹೂವು ಹಾಗೂ ಚಕ್ರವನ್ನು ಹಿಡಿದಿದ್ದಾಳೆ. ಸಿದ್ಧಿಧಾತ್ರಿಯನ್ನು ತಾಯಿ ಸರಸ್ವತಿಯ ರೂಪವೆಂದು ಪರಿಗಣಿಸಲಾಗುತ್ತದೆ. ತಾಯಿ ಸಿದ್ಧಿಧಾತ್ರಿ ಈ ಎಲ್ಲಾ ಸಿದ್ಧಿಗಳನ್ನು ಭಕ್ತರಿಗೆ ಮತ್ತು ಸಾಧಕರಿಗೆ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ದೇವಿ ಪುರಾಣದ ಪ್ರಕಾರ, ಭಗವಾನ್ ಶಂಕರನು ತನ್ನ ಕೃಪೆಯಿಂದ ಮಾತ್ರ ಈ ಸಿದ್ಧಿಗಳನ್ನು ಪಡೆದನು. ಆತನ ಅನುಗ್ರಹದಿಂದ, ಶಿವನ ದೇಹದ ಅರ್ಧದಷ್ಟು ದೇವಿಯದ್ದಾಗಿತ್ತು. ಈ ಕಾರಣಕ್ಕಾಗಿ, ಅವರು ಅರ್ಧನಾರೀಶ್ವರ ಎಂದು ಜಗತ್ತಿನಲ್ಲಿ ಪ್ರಸಿದ್ಧರಾದರು. ಸಿದ್ಧಿಧಾತ್ರಿ ಮಾತೆ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ ಇದೆ.

ಸಿದ್ಧಿಧಾತ್ರಿ ಪೂಜಾ ವಿಧಿ-ವಿಧಾನ

  • ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸಬೇಕು
  • ದೇವಿಯ ಪ್ರತಿಮೆಗೆ ಗಂಗಾ ನೀರು ಅಥವಾ ಶುದ್ಧ ನೀರಿನಿಂದ ಸ್ನಾನ ಮಾಡಿ
  • ಬಿಳಿ ಬಣ್ಣದ ಬಟ್ಟೆಗಳನ್ನು ಅರ್ಪಿಸಿ. ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಯಿ ಬಿಳಿ ಬಣ್ಣವನ್ನು ಇಷ್ಟಪಡುತ್ತಾಳೆ
  • ಸ್ನಾನದ ನಂತರ ತಾಯಿಗೆ ಬಿಳಿ ಹೂವುಗಳನ್ನು ಅರ್ಪಿಸಬೇಕು
  • ದೇವಿಗೆ ರೋಲಿ ಕುಂಕುಮವನ್ನು ಹಚ್ಚಿ
  • ಸಿದ್ಧಿಧಾತ್ರಿಗೆ ಸಿಹಿತಿಂಡಿಗಳು, ಐದು ಬಗೆ ಕಾಳುಗಳು ಹಾಗೂ ಹಣ್ಣುಗಳನ್ನ ಅರ್ಪಿಸಿ
  • ಸಿದ್ಧಿಧಾತ್ರಿಗೆ ಪ್ರಸಾದ, ನವರಾತ್ರಿಯ ಆಹಾರ, ಒಂಬತ್ತು ರೀತಿಯ ಹೂವುಗಳು ಹಾಗೂ ಒಂಬತ್ತು ರೀತಿಯ ಹಣ್ಣುಗಳನ್ನು ಅರ್ಪಿಸಬೇಕು
  • ಸಿದ್ಧಿಧಾತ್ರಿ ಋತುಮಾನದ ಹಣ್ಣುಗಳು, ಕಡಲೆ, ಪುರಿ, ಖೀರ್, ತೆಂಗಿನಕಾಯಿ ಹಾಗೂ ಹಲ್ವಾವನ್ನು ಇಷ್ಟಪಡುತ್ತಾಳೆ. ಇವುಗಳನ್ನು ಅರ್ಪಿಸುವುದರಿಂದ ದೇವಿ ತುಂಬಾ ಸಂತೋಷಪಡುತ್ತಾಳೆ ಎಂದು ಹೇಳಲಾಗುತ್ತದೆ.
  • ಪೂಜಾ ಪ್ರಕ್ರಿಯೆಯ ಭಾಗವಾಗಿ ಸಿದ್ಧಿಧಾತ್ರಿ ದೇವಿಯನ್ನು ಧ್ಯಾನಿಸಿ
  • ದೇವಿಗೆ ಆರತಿಯನ್ನು ಬೆಳಗಿ

ಸಿದ್ಧಿಧಾತ್ರಿ ದೇವಿ ಪೂಜೆ ವೇಳೆ ಪಠಿಸಬೇಕಾದ ಮಂತ್ರಗಳು

ಸಿದ್ಧಗಾನ ಧರ್ವೈಕ್ಷದ್ಯಾಯಿರಾಸುರಮರಿಪಿ, ಸೇವ್ಯಮಾನಾ

ಸದಾ ಭೂಯಾತ್ ಸಿದ್ಧಿದಾಯಿನೀ

ಓಂ ದೇವಿ ಸಿದ್ಧಿಧಾತ್ರಿಯೈ ನಮಃ

ಸಿದ್ಧಿಧಾತ್ರಿ ಅನುಗ್ರಹದಿಂದ ಖ್ಯಾತಿ, ಶಕ್ತಿ ಹಾಗೂ ಸಂಪತ್ತನ್ನು ಪಡೆಯಬಹುದಾಗಿದೆ. ದೇವಿಯ ಪೂಜಾ ಸಮಯದಲ್ಲಿ ದುರ್ಗಾ ಚಾಲೀಸಾ, ದುರ್ಗಾ ಸಪ್ತಶತಿಯನ್ನು ಪಠಿಸಬೇಕು. ಮಹಾನವಮಿಯ ದಿನದಂದು ಕನ್ಯಾ ಪೂಜೆ ಮತ್ತು ಹವನ ಇರುತ್ತದೆ. ತಾಯಿ ಸಿದ್ಧಿಧಾತ್ರಿಯನ್ನು ಪೂಜಿಸಿದ ನಂತರ ಯುವತಿಯರನ್ನು ಮನೆಗೆ ಕರೆದು ಅವರ ಪಾದಗಳನ್ನು ತೊಳೆದು ಆಶೀರ್ವಾದ ಪಡೆಯಬೇಕು. ಹುಡುಗಿಯರಿಗೆ ಹಲ್ವಾ-ಪೂರಿ ಮತ್ತು ಕಡಲೆ ಆಹಾರವನ್ನು ಅರ್ಪಿಸಬೇಕು. ನಂತರ, ಅವರಿಗೆ ರೋಲಿ-ತಿಲಕ್ ಹಚ್ಚಿ ಸಾಮರ್ಥ್ಯಕ್ಕೆ ಅನುಗುಣವಾಗಿ ಉಡುಗೊರೆಗಳನ್ನು ನೀಡಬೇಕು. ಅವರ ಪಾದಗಳನ್ನು ಮುಟ್ಟಿ ಕಳುಹಿಸಿ. ಸಿದ್ಧಿಧಾತ್ರಿಯನ್ನು ತಾಯಿ ಸರಸ್ವತಿಯ ರೂಪವೆಂದು ಹೇಳಲಾಗುತ್ತದೆ ಅವಳು ಬಿಳಿ ಬಟ್ಟೆಗಳನ್ನು ಧರಿಸಿ ಭಕ್ತರಿಗೆ ಜ್ಞಾನವನ್ನು ಆಶೀರ್ವದಿಸುತ್ತಾಳೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ