logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  2025ರಲ್ಲಿ ರಾಹು-ಕೇತು ಸಂಕ್ರಮಣ; ಒಂದೂವರೆ ವರ್ಷದ ನಂತರ ಈ 3 ರಾಶಿಯವರಿಗೆ ಭಾರಿ ಧನಲಾಭ, ಆರೋಗ್ಯ ಸಮಸ್ಯೆಗಳಿಗೆ ಸಿಗಲಿದೆ ಮುಕ್ತಿ

2025ರಲ್ಲಿ ರಾಹು-ಕೇತು ಸಂಕ್ರಮಣ; ಒಂದೂವರೆ ವರ್ಷದ ನಂತರ ಈ 3 ರಾಶಿಯವರಿಗೆ ಭಾರಿ ಧನಲಾಭ, ಆರೋಗ್ಯ ಸಮಸ್ಯೆಗಳಿಗೆ ಸಿಗಲಿದೆ ಮುಕ್ತಿ

Reshma HT Kannada

Nov 19, 2024 11:35 AM IST

google News

ರಾಹು ಕೇತು ಸಂಕ್ರಮಣ

    • 2025ರಲ್ಲಿ ರಾಹು ಮತ್ತು ಕೇತು ತಮ್ಮ ರಾಶಿಗಳನ್ನು ಬದಲಿಸಲಿದ್ದಾರೆ. ರಾಹು ಕೇತು ಸಂಕ್ರಮಣವು ಕೆಲವು ರಾಶಿಯವರಿಗೆ ಅದೃಷ್ಟವನ್ನು ತರಲಿದೆ. ಮುಂದಿನ ವರ್ಷವು ಈ ಮೂರು ರಾಶಿಯವರಿಗೆ ಸಾಕಷ್ಟು ಶುಭಫಲಗಳನ್ನು ನೀಡುತ್ತದೆ, ಧನಲಾಭವಾಗಲಿದೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ. ಹಾಗಾದರೆ ಆ 3 ರಾಶಿಯವರು ಯಾರು ನೋಡಿ.
ರಾಹು ಕೇತು ಸಂಕ್ರಮಣ
ರಾಹು ಕೇತು ಸಂಕ್ರಮಣ

2025ರ ಹೊಸ ವರ್ಷ ಆರಂಭವಾಗಲು ಇನ್ನೇನು ಒಂದು ತಿಂಗಳು, 10 ದಿನಗಳು ಬಾಕಿ ಉಳಿದಿವೆ. ಮುಂದಿನ ವರ್ಷ ಗ್ರಹ ಹಾಗೂ ನಕ್ಷತ್ರಗಳ ಸ್ಥಾನವು ಬಹಳ ವಿಶೇಷವಾಗಿರುತ್ತದೆ. 2025ರಲ್ಲಿ ಹಲವು ಗ್ರಹಗಳು ತಮ್ಮ ಸ್ಥಾನವನ್ನು ಬದಲಾಯಿಸಲಿವೆ. ಕ್ಷುದ್ರಗ್ರಹಗಳು ಎಂದೇ ಕರೆಸಿಕೊಳ್ಳುವ ರಾಹು–ಕೇತು ಕೂಡ ಸ್ಥಾನ ಬದಲಾವಣೆ ಮಾಡಲಿವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

ರಾಹು ಹಾಗೂ ಕೇತು 18 ತಿಂಗಳಿಗೊಮ್ಮೆ ತಮ್ಮ ರಾಶಿಯನ್ನು ಬದಲಿಸುತ್ತವೆ. 2023ರಲ್ಲಿ ಈ ಗ್ರಹಗಳು ತಮ್ಮ ರಾಶಿಯನ್ನು ಬದಲಿಸಿದ್ದವು. ಸದ್ಯ ರಾಹು ರಾಹು ಮೀನ ರಾಶಿಯಲ್ಲಿ ಹಾಗೂ ಕೇತು ಕನ್ಯಾರಾಶಿಯಲ್ಲಿದ್ದಾರೆ. 2024ರಲ್ಲಿ ರಾಹು–ಕೇತುವಿನ ಸ್ಥಾನ ಬದಲಾಗಿರಲಿಲ್ಲ. ಇದೀಗ 2025ರಲ್ಲಿ ರಾಹು ಹಿಮ್ಮುಖವಾಗಿ ಚಲಿಸಿ ಮೀನ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ ಪಡೆಯಲಿದ್ದಾನೆ. ಕೇತು ಕೂಡ ಹಿಮ್ಮುಖವಾಗಿ ಚಲಿಸಿ ಕನ್ಯಾ ರಾಶಿಯಿಂದ ಸಿಂಹ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ.

ನವಗ್ರಹಗಳಲ್ಲಿ ಈ ಎರಡು ಗ್ರಹಗಳು ಮಾತ್ರ ಹಿಮ್ಮುಖವಾಗಿ ಸಾಗುತ್ತವೆ. ಉಳಿದ ಗ್ರಹಗಳು ಸಮಯಕ್ಕೆ ಅನುಗುಣವಾಗಿ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ರಾಹು-ಕೇತು ರಾಶಿಗಳ ಬದಲಾವಣೆಯು ಮೇಷದಿಂದ ಮೀನ ರಾಶಿಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ರಾಹು-ಕೇತುಗಳ ಸಂಚಾರವು ಕೆಲವು ರಾಶಿಯವರಿಗೆ ತುಂಬಾ ಪ್ರಯೋಜನಕಾರಿ. ರಾಹು-ಕೇತು ಸಂಕ್ರಮಣದಿಂದ ಯಾವ ರಾಶಿಚಕ್ರದವರಿಗೆ ಲಾಭವಿದೆ ಎಂಬ ವಿವರ ಇಲ್ಲಿದೆ.

2025ರಲ್ಲಿ ರಾಹು-ಕೇತು ಸಂಚಾರ ಯಾವಾಗ?

ದೃಕ್ ಪಂಚಾಂಗದ ಪ್ರಕಾರ ರಾಹು-ಕೇತು ಸಂಕ್ರಮವು ಮೇ 18, 2025 ರಂದು ಸಂಜೆ 04:30 ಕ್ಕೆ ನಡೆಯಲಿದೆ. ರಾಹು-ಕೇತುಗಳು ಯಾವುದೇ ರಾಶಿಯಲ್ಲಿ ಸುಮಾರು 18 ತಿಂಗಳ ಕಾಲ ಇರುತ್ತಾರೆ. 2027ರಲ್ಲಿ ರಾಹು-ಕೇತು ಸ್ಥಾನ ಮತ್ತೆ ಬದಲಾಗಲಿದೆ. ಅಲ್ಲಿಯವರೆಗೆ ಅವರು ಅದೇ ಚಿಹ್ನೆಗಳಲ್ಲಿರುತ್ತಾರೆ. ರಾಹು ಮತ್ತು ಕೇತುಗಳ ಬದಲಾವಣೆಯು ಈ ರಾಶಿಯವರಿಗೆ ಒಳ್ಳೆಯದು ಮಾಡಲಿದೆ.

ಮಿಥುನ ರಾಶಿ

ರಾಹು-ಕೇತು ಸಂಚಾರವು ಮಿಥುನ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ಅದೃಷ್ಟ ನಿಮ್ಮ ಕಡೆ ಇರುತ್ತದೆ. ಉದ್ಯೋಗದಲ್ಲಿ ಬಡ್ತಿ ಮತ್ತು ಆದಾಯ ಹೆಚ್ಚಾಗುತ್ತದೆ. ಹೊಸ ಉದ್ಯೋಗ ಆಫರ್‌ಗಳೂ ಬರಬಹುದು. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುವ ಅವಕಾಶವನ್ನು ನೀವು ಪಡೆಯುತ್ತೀರಿ.

ಧನು ರಾಶಿ

ಧನು ರಾಶಿಯವರಿಗೆ ರಾಹು-ಕೇತು ಸಂಕ್ರಮಣ ಲಾಭದಾಯಕ. ನಿಮ್ಮ ಆದಾಯ ಹೆಚ್ಚಾಗುವ ಸೂಚನೆಗಳಿವೆ. ನೀವು ಕಚೇರಿಯಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ವೆಚ್ಚವನ್ನು ನಿಯಂತ್ರಣದಲ್ಲಿಡಿ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹಣವನ್ನು ಉಳಿಸುವಲ್ಲಿಯೂ ನೀವು ಯಶಸ್ವಿಯಾಗುತ್ತೀರಿ.

ಮಕರ ರಾಶಿ

ಮಕರ ರಾಶಿಯವರಿಗೆ ರಾಹು-ಕೇತು ಸಂಕ್ರಮಣ ಬಹಳ ಮಂಗಳಕರ. ಅನಿರೀಕ್ಷಿತ ಆರ್ಥಿಕ ಲಾಭವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯಬಹುದು. ಆದಾಯ ಹೆಚ್ಚಲಿದೆ. ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ಕುಟುಂಬದಿಂದ ಬೆಂಬಲ ಬರುತ್ತದೆ. ವ್ಯಾಪಾರದಲ್ಲಿ ಹೆಚ್ಚಳ ಕಂಡುಬರಲಿದೆ.

(ಗಮನಿಸಿ: ಈ ಲೇಖನವು ನಂಬಿಕೆ ಹಾಗೂ ಶಾಸ್ತ್ರಗಳನ್ನು ಆಧರಿಸಿದ ಬರಹವಾಗಿದೆ. ಅಂತರ್ಜಾಲದಲ್ಲಿ ದೊರೆತ ವಿವರಗಳನ್ನು ಆಧರಿಸಿದೆ. ಇದು ಮಾಹಿತಿಗಾಗಿ ಮಾತ್ರ. ಹಿಂದೂಸ್ತಾನ್‌ ಟೈಮ್ಸ್ ಕನ್ನಡ ಮೇಲಿನ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ನಿಮಗೆ ಯಾವುದೇ ಸಂದೇಹಗಳಿದ್ದರೆ ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ