ವೃಷಭ ರಾಶಿ ಭವಿಷ್ಯ ಜುಲೈ 17; ಇಂದು ಮಾತಿನ ಮೇಲೆ ನಿಗಾ ಇರಲಿ, ವೇತನ ಹೆಚ್ಚಳ, ಧನಲಾಭದ ಸೂಚನೆ ಇದೆ- ದಿನ ಭವಿಷ್ಯ
Jul 17, 2024 06:32 AM IST
ವೃಷಭ ರಾಶಿ ಭವಿಷ್ಯ ಜುಲೈ 17; ಇಂದು ಮಾತಿನ ಮೇಲೆ ನಿಗಾ ಇರಲಿ, ವೇತನ ಹೆಚ್ಚಳ, ಧನಲಾಭದ ಸೂಚನೆ ಇದೆ. ದಿನ ಭವಿಷ್ಯದ ವಿವರ.
Taurus Daily Horoscope July 17, 2024: ರಾಶಿಚಕ್ರಗಳಪೈಕಿ ಎರಡನೇಯದು ವೃಷಭ ರಾಶಿಚಕ್ರದ ಚಿಹ್ನೆ. ಜನನದ ಸಮಯದಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಯೇ ವೃಷಭ ರಾಶಿ. ಜುಲೈ 17ರ ವೃಷಭ ರಾಶಿ ಭವಿಷ್ಯದ ಪ್ರಕಾರ, ಇಂದು ಮಾತಿನ ಮೇಲೆ ನಿಗಾ ಇರಲಿ, ವೇತನ ಹೆಚ್ಚಳ, ಧನಲಾಭದ ಸೂಚನೆ ಇದೆ. ವೃಷಭ ರಾಶಿ ದಿನ ಭವಿಷ್ಯ ಹೀಗಿದೆ.
ವೃಷಭ ರಾಶಿಯವರು ಇಂದು (ಜುಲೈ 17) ಹೆಚ್ಚಿನ ಉತ್ಸಾಹದಲ್ಲಿರುವಿರಿ. ಪ್ರೀತಿಯ ಜೀವನವನ್ನು ಸುರಕ್ಷಿತವಾಗಿ ಮತ್ತು ಅದರ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಸಂಗಾತಿಗಳ ಆಯ್ಕೆ ಕಡೆಗೆ ಗಮನಕೊಡಿ. ಇಂದು ಪ್ರೀತಿಯನ್ನು ಅನುಭವಿಸಿ ಮತ್ತು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನೀಡುತ್ತಿರುವುದನ್ನು ಖಚಿತಪಡಿಸಿಕೊಳ್ಳಿ. ಹಣಕಾಸು ಮತ್ತು ಆರೋಗ್ಯ ಎರಡೂ ಇಂದು ನಿಮ್ಮ ಪಾಲಿಗೆ ಬೆಸ್ಟ್. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ತಾಜಾ ಫೋಟೊಗಳು
ವೃಷಭ ರಾಶಿ ಪ್ರೇಮ ಜೀವನ (Taurus Love Horoscope): ರಿಲೇಶನ್‌ಶಿಪ್‌ನಲ್ಲಿರುವ ವೃಷಭ ರಾಶಿಯವರು ಈ ದಿನ ಮಾತಿನ ಮೇಲೆ ನಿಗಾ ಇರಿಸಬೇಕು. ಸ್ವಲ್ಪ ಎಚ್ಚರ ತಪ್ಪಿ ಮಾತನಾಡಿದರೂ ಅದರಿಂದ ನಿಮ್ಮ ಸಂಗಾತಿ ಅಥವಾ ಪ್ರೇಮಿಗೆ ನೋವು, ಕಿರಿಕಿರಿ ಉಂಟಾಗಬಹುದು. ನಿಮ್ಮ ನಡವಳಿಕೆಗಳು ನಿಮ್ಮ ಸಂಗಾತಿಯ ಪಾಲಕರಿಗೂ ಕಿರಿಕಿರಿ ಉಂಟುಮಾಡಬಹುದು. ಇದು ಪ್ರೇಮ ಜೀವನದಲ್ಲಿ ಜಗಳಕ್ಕೆ ಕಾರಣವಾಗಬಹುದು. ನೀವು ಪ್ರೇಮಿಯ ಉತ್ಸಾಹ, ಹುಮ್ಮಸ್ಸು ಉತ್ತಮ ಮಟ್ಟದಲ್ಲಿಡುವುದು ಮುಖ್ಯ. ಅವರು ಲವಲವಿಕೆಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಿ. ಇಂದು ನಿಮ್ಮ ಪ್ರೀತಿ ಬದುಕಿನಲ್ಲಿ ಮಾತುಕತೆಯೇ ಮುಖ್ಯ. ಹೀಗಾಗಿ, ಭಾವನೆಗಳನ್ನು ವ್ಯಕ್ತಪಡಿಸುವಾಗ, ಅವು ಸಂವೇದನಾಶೀಲವಾಗಿರಬೇಕು. ಪ್ರೇಮಿಗೆ ಪೂರಕವಾಗಿರಬೇಕು. ಇದರಿಂದ ಬಾಂಧವ್ಯ ಗಟ್ಟಿಯಾಗುತ್ತದೆ. ಕೆಲವು ವಿವಾಹಿತ ವೃಷಭ ರಾಶಿಯವರು ಇಂದು ಗರ್ಭಿಣಿಯಾಗಲು ಸುದಿನ.
ವೃಷಭ ರಾಶಿ ದಿನ ಭವಿಷ್ಯ ಜುಲೈ 17 ; ಉದ್ಯೋಗ, ಆದಾಯ, ಆರೋಗ್ಯ
ವೃಷಭ ರಾಶಿ ವೃತ್ತಿ ಭವಿಷ್ಯ (Taurus Professional Horoscope):
ಕಚೇರಿಯಲ್ಲಿ ಹೊಸ ಕಾರ್ಯಗಳ ಹೊಣೆಗಾರಿಕೆ ಬಂದಾಗ ಅವುಗಳನ್ನು ಪರಿಗಣಿಸಿ. ಹಿರಿಯರು ನಿಮ್ಮ ಸಾಮರ್ಥ್ಯವನ್ನು ನಂಬುತ್ತಾರೆ. ಕೆಲವು ಅಧಿಕೃತ ಕಾರ್ಯಯೋಜನೆಗಳ ಕಾರಣ ನೀವು ಪ್ರಯಾಣ ಬೆಳೆಸಬೇಕಾಗಬಹುದು. ನೀವು ಕ್ಲೈಂಟ್‌ನ ಕಚೇರಿಗೆ ಭೇಟಿ ನೀಡಬಹುದು ಅಥವಾ ಕೆಲಸಕ್ಕೆ ಸಂಬಂಧಿಸಿದ ಮೂರನೇ ವ್ಯಕ್ತಿಗಳಿಗೆ ಪ್ರಸ್ತುತಿಗಳನ್ನು ಸಹ ನೀಡಬಹುದು. ವಕೀಲರು ಮತ್ತು ಬ್ಯಾಂಕರ್‌ಗಳು ಬಿಡುವಿಲ್ಲದ ಕೆಲಸ ಕಾಣಬಹುದು. ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಸೂಚನೆ ಇದೆ. ಕಚೇರಿ ರಾಜಕೀಯವನ್ನು ತಪ್ಪಿಸಿ ಮತ್ತು ನೀವು ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದು ನಿಮ್ಮ ಉತ್ತಮ ಕಾರ್ಯನಿರ್ವಹಣೆಯ ದಾಖಲೆಯನ್ನು ಇನ್ನಷ್ಟು ಸುಧಾರಿಸಲಿದೆ. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಕಾರಾತ್ಮಕ ಫಲಿತಾಂಶಗಳನ್ನು ನೋಡಬಹುದು.
ವೃಷಭ ರಾಶಿ ಆರ್ಥಿಕ ಜೀವನ (Taurus Money Horoscope): ವಿವಿಧ ಮೂಲಗಳಿಂದ ಆದಾಯ, ಸಂಪತ್ತು ಕೈ ಸೇರಲಿವೆ. ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಗೃಹೋಪಯೋಗಿ ಉಪಕರಣಗಳ ಖರೀದಿಗೆ ಮನಸ್ಸು ಮಾಡಬಹುದು. ಆಭರಣ ಅಥವಾ ವಾಹನ ಖರೀದಿಗೆ ಕೂಡ ಇಂದು ಸುಸಮಯ. ನೀವು ದಾನ ಕೂಡ ಮಾಡಬಹುದು ಅಥವಾ ಅಗತ್ಯವಿರುವ ಸ್ನೇಹಿತರಿಗೆ ಆರ್ಥಿಕವಾಗಿ ಸಹಾಯ ಮಾಡಬಹುದು. ಕೆಲವು ವೃಷಭ ರಾಶಿಯವರು ತಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರಬಲ್ಲ ವೇತನ ಹೆಚ್ಚಳ ಕಾಣಬಹುದು.
ವೃಷಭ ರಾಶಿ ಆರೋಗ್ಯ ಭವಿಷ್ಯ (Taurus Health Horoscope): ಆರೋಗ್ಯದ ದೃಷ್ಟಿಯಿಂದ ಈ ದಿನ ಉತ್ತಮವಾಗಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಲಘು ವ್ಯಾಯಾಮದೊಂದಿಗೆ ದಿನವನ್ನು ಪ್ರಾರಂಭಿಸಿ. ಯೋಗ ಮತ್ತು ಧ್ಯಾನ ಮಾಡುವವರ ಪಾಲಿಗೆ ಇಂದು ಅತ್ಯುತ್ತಮ ದಿನ. ಆಹಾರದಲ್ಲಿ ರಾಜಿ ಮಾಡಿಕೊಳ್ಳಬೇಡಿ. ಹೆಚ್ಚು ಹಣ್ಣುಗಳು, ಸಲಾಡ್‌ಗಳು ಮತ್ತು ಬೀಜಗಳನ್ನು ಸೇವಿಸಿ. ದೀರ್ಘಾವಧಿಯಲ್ಲಿ ದೇಹಕ್ಕೆ ಹಾನಿ ಮಾಡುವ ಆಲ್ಕೋಹಾಲ್ ಸೇವಿಸುತ್ತಿದ್ದರೆ ಅದನ್ನು ತ್ಯಜಿಸಬೇಕು. ನೀವು ವಿಹಾರಕ್ಕೆ ಯೋಜಿಸುತ್ತಿದ್ದರೆ, ಅಗತ್ಯ ಔಷಧಿಗಳ ವೈದ್ಯಕೀಯ ಕಿಟ್ ಅನ್ನು ಪ್ಯಾಕ್ ಮಾಡಿ. ಇದು ವಿಶೇಷವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಕೆಲಸಕ್ಕೆ ಬರಬಹುದು.
ವೃಷಭ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ವೃಷಭ ರಾಶಿಗೆ ಅಧಿಪತಿ: ಶುಕ್ರ, ವೃಷಭ ರಾಶಿಯವರಿಗೆ ಶುಭ ದಿನಾಂಕಗಳು: 5, 6, 15, 18, 19, 20, 25, 29. ವೃಷಭ ರಾಶಿಯವರಿಗೆ ಶುಭ ದಿನಗಳು: ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ. ವೃಷಭ ರಾಶಿಯವರಿಗೆ ಶುಭ ಸಂಖ್ಯೆಗಳು: 5, 6, 8. ವೃಷಭ ರಾಶಿಯವರಿಗೆ ಶುಭ ವರ್ಣ: ಪಿಂಕ್, ಹಸಿರು ಮತ್ತು ಬಿಳಿ. ವೃಷಭ ರಾಶಿಯವರಿಗೆ ಅಶುಭ ವರ್ಣ: ಕೆಂಪು ಮತ್ತು ಹಳದಿ. ವೃಷಭ ರಾಶಿಯವರಿಗೆ ಶುಭ ದಿಕ್ಕು: ದಕ್ಷಿಣ ಮತ್ತು ನೈರುತ್ಯ. ವೃಷಭ ರಾಶಿಯವರಿಗೆ ಶುಭ ತಿಂಗಳು: ಜನವರಿ 15 ರಿಂದ ಏಪ್ರಿಲ್15. ವೃಷಭ ರಾಶಿಯವರಿಗೆ ಶುಭ ಹರಳು: ಹಸಿರು ಪಚ್ಚೆ ಮತ್ತು ನೀಲಮಣಿ. ವೃಷಭ ರಾಶಿಯವರಿಗೆ ಶುಭ ರಾಶಿ: ಮಿಥುನ, ಕನ್ಯಾ ಮತ್ತು ಮಕರ. ವೃಷಭ ರಾಶಿಯವರಿಗೆ ಅಶುಭ ರಾಶಿ: ಕಟಕ, ಧನುಸ್ಸು ಮತ್ತು ಮೇಷ.
ವೃಷಭ ರಾಶಿಯವರಿಗೆ ಶುಭಫಲಕ್ಕಾಗಿ ಸರಳ ಪರಿಹಾರಗಳು
1) ಇಂದ್ರಾಕ್ಷಿ ಸ್ತೋತ್ರ: ಪ್ರತಿದಿನ ಶ್ರೀ ಇಂದ್ರಾಕ್ಷಿ ಸ್ತೋತ್ರ ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2) ಈ ದಾನಗಳಿಂದ ಶುಭ ಫಲ: ಬಿಳಿಬಣ್ಣದ ಬಟ್ಟೆ ಮತ್ತು ಗೋಧಿ ಅಥವಾ ರವೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3) ದೇವಸ್ಥಾನ ಮತ್ತು ದೇವರ ಪೂಜೆ: ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಮನೆಯಲ್ಲಿಯೂ ಶ್ರೀ ಸತ್ಯನಾರಾಯಣ ಪೂಜೆ ಮಾಡಬಹುದು. ಹೂ ಬಿಡುವ ಗಿಡಗಳನ್ನು ಪೋಷಿಸಿದಲ್ಲಿ ಎಲ್ಲಾರೀತಿಯ ಸಮಸ್ಯೆಗಳು ದೂರವಾಗುತ್ತವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನೀಲಿ ಮತ್ತು ಹಸಿರು ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.