logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಷಭ ಭವಿಷ್ಯ 2025: ತಪ್ಪು ನಿರ್ಧಾರ ತೆಗೆದುಕೊಂಡರೆ ಸಾಲದ ಹೊರೆ ಹೆಚ್ಚುತ್ತೆ, ಕುಟುಂಬದಲ್ಲಿ ವಿವಾಹಿತರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ

ವೃಷಭ ಭವಿಷ್ಯ 2025: ತಪ್ಪು ನಿರ್ಧಾರ ತೆಗೆದುಕೊಂಡರೆ ಸಾಲದ ಹೊರೆ ಹೆಚ್ಚುತ್ತೆ, ಕುಟುಂಬದಲ್ಲಿ ವಿವಾಹಿತರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆ

Raghavendra M Y HT Kannada

Dec 02, 2024 11:37 AM IST

google News

ವೃಷಭ ರಾಶಿಯವರ 2025ರ ಭವಿಷ್ಯ

    • ಗ್ರಹಗಳ ಸಂಚಾರವು ಪ್ರತಿಯೊಂದು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಹೊಸ ವರ್ಷ ಬರುತ್ತಿದ್ದಂತೆ ಕೆಲವರಿಗೆ ತಮ್ಮ ಮುಂದಿನ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಇರುತ್ತದೆ. 2025 ರಲ್ಲಿ ವೃಷಭ ರಾಶಿಯವರಿಗೆ ಆರ್ಥಿಕ, ಆರೋಗ್ಯ, ವೃತ್ತಿ ಹಾಗೂ  ಪ್ರೀತಿಯ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.
ವೃಷಭ ರಾಶಿಯವರ 2025ರ ಭವಿಷ್ಯ
ವೃಷಭ ರಾಶಿಯವರ 2025ರ ಭವಿಷ್ಯ

ವೃಷಭ ರಾಶಿ ಭವಿಷ್ಯ ಭವಿಷ್ಯ 2025: 'ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. 2024ರ ಹಳೆಯ ವರ್ಷ ಮುಗೀದು ಹೊಸ ವರ್ಷಕ್ಕೆ ಪ್ರವೇಶಿಸುವ ಮುನ್ನ 2025ರ ಭವಿಷ್ಯ ಹೇಗಿರಲಿದೆ ಎಂಬುದನ್ನು ತಿಳಿದುಕೊಳ್ಳುವ ಕಾತುರ ಕೆಲವರಲ್ಲಿ ಇರುತ್ತದೆ. ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು '2025ರ ಭವಿಷ್ಯ' ಹೇಗಿದೆ ಎಂದು ನೋಡುತ್ತಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. ವೃಷಭ ರಾಶಿಯವರಿಗೆ 2025 ವರ್ಷ ಹೇಗಿರಲಿದೆ ಎಂಬುದನ್ನು ತಿಳಿಯೋಣ.

ತಾಜಾ ಫೋಟೊಗಳು

ಗಜಲಕ್ಷ್ಮಿ ರಾಜಯೋಗ; 2025 ರಲ್ಲಿ ಈ ರಾಶಿಯವರಿಗೆ ಸಾಲದ ಹೊರೆ ಕಡಿಮೆಯಾಗುತ್ತೆ, ಹಣದ ಕೊರತೆಯೇ ಇರಲ್ಲ

Dec 02, 2024 12:37 PM

Jupiter Transit: ಮಿಥುನ ರಾಶಿಗೆ ಗುರು ಪ್ರವೇಶದ ಅದೃಷ್ಟ: ಈ ರಾಶಿಯವರು ಆರ್ಥಿಕ ಸವಾಲುಗಳನ್ನು ಗೆದ್ದು ಹಣಕಾಸಿನ ಲಾಭ ಪಡೆಯುತ್ತಾರೆ

Dec 01, 2024 05:50 PM

Love Marriage: ಲವ್ ಮ್ಯಾರೇಜ್ ಮಾಡಿಕೊಳ್ಳುವ ಪ್ಲಾನ್ ಇದಿಯಾ? ಈ ಗ್ರಹಗಳ ಆಶೀರ್ವಾದ ಇದ್ದರೆ ಜೀವನದಲ್ಲಿ ಖುಷಿಯಾಗಿ ಇರುತ್ತೀರಿ

Dec 01, 2024 05:05 PM

ನಾಳಿನ ದಿನ ಭವಿಷ್ಯ: ವೃತ್ತಿ ಜೀವನದಲ್ಲಿ ಸವಾಲುಗಳು ಹೆಚ್ಚಾಗುತ್ತವೆ, ಮನೆಯಲ್ಲಿ ಸಂತೋಷ, ಶಾಂತಿ ಕಾಪಾಡಿಕೊಳ್ಳಲು ವಿವಾದಗಳನ್ನು ತಪ್ಪಿಸಿ

Dec 01, 2024 04:26 PM

Venus Transit: ಡಿಸೆಂಬರ್ 2 ರಿಂದ ಈ 3 ರಾಶಿಯವರ ಶುಕ್ರದೆಸೆ ಶುರು ನೋಡಿ, ಉದ್ಯೋಗದಲ್ಲಿ ಉನ್ನತಿ, ಆದಾಯ ವೃದ್ಧಿ, ಒಟ್ಟಿನಲ್ಲಿ ಅದೃಷ್ಟವಂತರು

Nov 30, 2024 06:55 PM

ಧನು ರಾಶಿಯಲ್ಲಿ ಸೂರ್ಯ ಸಂಚಾರ; ಈ 4 ರಾಶಿಚಕ್ರದವರು ಭಾರಿ ಅದೃಷ್ಟವಂತರು, ಶೀಘ್ರದಲ್ಲೇ ಕೈ ಸೇರಲಿದೆ ಧನ ಸಂಪತ್ತು, ಸುಖ ಸಂತೋಷಕ್ಕೂ ಇಲ್ಲ ಕೊರತೆ

Nov 30, 2024 05:54 PM

ಸ್ಥಿರವಾದ ಮನಸ್ಸಿರುತ್ತದೆ. ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಯಾರಿಂದಲೂ ಬದಲಿಸಲು ಸಾಧ್ಯವಾಗುವುದಿಲ್ಲ. ನೋಡಲು ಶಾಂತರಂತೆ ಕಂಡರೂ ಕೋಪ ಬಂದರೆ ಉದ್ವೇಗದಿಂದ ವರ್ತಿಸುವಿರಿ. ಹೊಟ್ಟೆಗೆ ಸಂಬಂಧಪಟ್ಟ ದೋಷವು ನಿಮಗಿರುತ್ತದೆ .ಆರೋಗ್ಯದಲ್ಲಿ ಏರುಪೇರು ಇರುವ ಕಾರಣ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು. ಉತ್ತಮ ಆದಾಯವಿರುತ್ತದೆ. ಬುದ್ಧಿವಂತಿಕೆಯಿಂದ ಖರ್ಚು ವೆಚ್ಚಗಳನ್ನು ಕಡಿತಗೊಳಿಸುವಿರಿ. ನಂಬಲು ಅನರ್ಹವಾದ ಮೂಲಗಳಿಂದ ಹಣದ ಸಹಾಯ ದೊರೆಯುತ್ತದೆ. ನಿಮ್ಮ ಮನದ ಆಸೆಯಂತೆ ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಲಿವೆ. ಆದರೆ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕವು ಎದುರಾಗುತ್ತೆ. ಪ್ರೀತಿಯಿಂದ ಮತ್ತು ಏಕಾಗ್ರ ಚಿತ್ತತೆಯಿಂದ ಮುಂದುವರೆದರೆ ಯಾವುದೇ ತೊಂದರೆ ಎದುರಾಗುವುದಿಲ್ಲ. ತಪ್ಪು ನಿರ್ಧಾರಗಳನ್ನು ತೆಗೆದುಕೊಂಡರೆ ಸಾಲದ ಹೊರೆ ಹೆಚ್ಚಾಗುತ್ತದೆ.

ಸೋದರರ ಜೊತೆಯಲ್ಲಿ ಅನಾವಶ್ಯಕವಾದ ವಾದ ವಿವಾದಗಳು ಎದುರಾಗಲಿವೆ. ಕುಟುಂಬದ ಹಿರಿಯರ ಮಧ್ಯಸ್ಥಿಕೆಯಿಂದ ಪರಿಸ್ಥಿತಿಯು ತಿಳಿಗೊಳ್ಳುತ್ತದೆ. ಸರ್ಕಾರಕ್ಕೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳು ಆತ್ಮೀಯರ ನೆರವಿನಿಂದ ನಡೆಯಲಿವೆ. ಕುಟುಂಬದ ಹಿರಿಯರ ವಿಚಾರದಲ್ಲಿ ಒಮ್ಮತದ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ಮನೆತನದ ಆಸ್ತಿಯ ವಿಚಾರವು ಸಂಧಾನದಿಂದ ಪರಿಹಾರಗೊಳ್ಳಲಿದೆ. ಮೇ ತಿಂಗಳ ನಂತರ ಅನಿರೀಕ್ಷಿತ ಧನ ಲಾಭವಿರುತ್ತದೆ. ಬೆನ್ನಿನ ನೋವಿನಿಂದ ತೊಂದರೆ ಪಡುವಿರಿ. ವೈದ್ಯರನ್ನು ಬೇಟೆಯಾಗುವುದು ಕ್ಷೇಮಕರ. ವಿದ್ಯಾರ್ಥಿಗಳು ಸ್ವತಂತ್ರವಾಗಿ ಗಣಿತ ವ್ಯವಹಾರದಲ್ಲಿ ಉತ್ತಮ ಜ್ಞಾನವನ್ನು ಸಂಪಾದಿಸುತ್ತಾರೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಲಭ್ಯವಾಗುತ್ತದೆ. ಮಕ್ಕಳ ಜೊತೆಯಲ್ಲಿ ಅನ್ಯೋನ್ಯತೆ ಇರುತ್ತದೆ. ಕುಟುಂಬದಲ್ಲಿ ವಿವಾಹಿತರ ಜವಾಬ್ದಾರಿಗಳು ಹೆಚ್ಚಾಗುತ್ತವೆ. ಒತ್ತಡ ಜೀವನವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ.

ದಂಪತಿ ನಡುವೆ ಎದುರಾಗುವ ಭಿನ್ನಾಭಿಪ್ರಾಯವು ದೂರವಾಗುತ್ತವೆ. ಉದ್ಯೋಗವನ್ನು ಬದಲಾಯಿಸುವ ಸಂಭವ ಕಂಡು ಬರುತ್ತದೆ. ಸ್ವಂತ ವ್ಯಾಪಾರ ವ್ಯವಹಾರ ಅಥವಾ ಸ್ವಂತ ಉದ್ಯೋಗದಲ್ಲಿ ಉತ್ತಮ ಹಣ ಗಳಿಕೆ ಇರುತ್ತದೆ. ಜನಸೇವೆಗೆ ಸಂಬಂಧಿಸಿದ ಉದ್ಯೋಗದಿಂದ ಹೆಚ್ಚಿನ ಲಾಭವಿದೆ. ರಾಜಕೀಯದಲ್ಲಿರುವವರಿಗೆ ಅನಿರೀಕ್ಷಿತವಾದಂತಹ ಬದಲಾವಣೆಗಳು ಕಂಡು ಬರಲಿದೆ. ಮಕ್ಕಳ ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡುಬರುವುದಿಲ್ಲ. ಹೊಗಳಿಕೆಯ ಮಾತುಗಳಿಗೆ ಮರುಳಾಗಿ ತೊಂದರೆಗೆ ಒಳಗಾಗುವ ಸಾಧ್ಯತೆ ಇರಲಿದೆ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಮುನ್ನ ಒಮ್ಮೆ ಯೋಚಿಸುವುದು ಒಳ್ಳೆಯದು. ಮನಸ್ಸಿನ ಬೇಸರದ ನಡುವೆಯೂ ಸಹೋದ್ಯೋಗಿಗಳೊಂದಿಗೆ ಸಮಾಧಾನದಿಂದ ವರ್ತಿಸುವಿರಿ. ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ಹಣವನ್ನು ಹೊಂದಿಸಬೇಕಾಗುತ್ತದೆ. ಅನಿವಾರ್ಯವಾಗಿ ಆತ್ಮೀಯರಿಂದ ಹಣವನ್ನು ಪಡೆಯುವಿರಿ. ತಮ್ಮ ಬಳಿ ಇರುವ ಹಣವನ್ನು ಭವಿಷ್ಯದ ಚಿಂತನೆಯಿಂದ ಉಳಿತಾಯ ಯೋಜನೆಗಳಲ್ಲಿ ತೊಡಗಿಸುವಿರಿ.

ಕುಟುಂಬದ ಹೆಣ್ಣು ಮಕ್ಕಳ ವಿವಾಹವನ್ನು ಮಾಡುವಿರಿ. ಆಧುನಿಕ ತಂತ್ರಜ್ಞಾನವನ್ನು ಬಲ್ಲವರಿಗೆ ವಿದೇಶದಲ್ಲಿ ನೆಲೆಸುವ ಅದೃಷ್ಟ ಒದಗಿ ಬರುತ್ತದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕೆಲಸದ ಒತ್ತಡವು ಹೆಚ್ಚಾಗುತ್ತದೆ. ಕುಲ ದೇವರಿಗೆ ಸಂಬಂಧಿಸಿದ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ಮನೆ ಕಟ್ಟಲು ಅವಶ್ಯಕತೆ ವಾಗುವಂತಹ ಸಾಮಗ್ರಿಗಳ ಸರಬರಾಜಿನಲ್ಲಿ ಉತ್ತಮ ಆದಾಯ ಗಳಿಸುವಿರಿ. ಕಮಿಷನ್ ಆಧಾರದಲ್ಲಿ ವ್ಯಾಪಾರ ನಡೆಸುವವರಿಗೆ ಹೆಚ್ಚಿನ ಲಾಭವಿರುತ್ತದೆ. ಸಹಾಯವನ್ನು ನಿರೀಕ್ಷಿಸುತ್ತಿರುವವರಿಗೆ ಹೆಚ್ಚಿನ ಅನುಕೂಲತೆ ದೊರೆಯುತ್ತದೆ. ಸ್ಟಾಕ್ ಮತ್ತು ಷೇರಿನ ವ್ಯವಹಾರವು ಅರ್ಧಕ್ಕೆ ನಿಲ್ಲುವ ಸಾಧ್ಯತೆಗಳಿವೆ.

ಸಾರ್ವಜನರಿಗೆ ಸಹಾಯವಾಗುವಂತಹ ಸಂಘ ಸಂಸ್ಥೆಗಳನ್ನು ಆರಂಭಿಸುವ ಅಥವಾ ನೇತೃತ್ವವನ್ನು ವಹಿಸುವ ಸಂಭವವಿದೆ. ಮಕ್ಕಳಲ್ಲಿ ನಾಯಕತ್ವದ ಗುಣವನ್ನು ಬೆಳೆಸಲು ಉತ್ತಮ ತೀರ್ಮಾನಗಳನ್ನು ತೆಗೆದುಕೊಳ್ಳುವಿರಿ. ಸಾಹಸದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಗಣ್ಯ ವ್ಯಕ್ತಿಗಳಿಂದ ನೆರವು ದೊರೆಯಲಿದೆ. ಆಧುನಿಕ ಜಗತ್ತಿಗೆ ಹೊಂದಿಕೊಂಡು ಬಾಳಲು ಪ್ರಯತ್ನಿಸುವಿರಿ. ಗೃಹಿಣಿಯರು ಕೇವಲ ಹವ್ಯಾಸಕ್ಕೆಂದು ಆರಂಭಿಸಿದ ವ್ಯಾಪಾರವೊಂದು ಕುಟುಂಬಕ್ಕೆ ಆಧಾರವಾಗಲಿದೆ. ನಿಮ್ಮ ವಾಸಸ್ಥಳದ ಸುತ್ತ ಮುತ್ತಲಿನ ಪರಿಸರವನ್ನು ಕಾಪಾಡುವುದರಿಂದ ಸಾಮಾಜಿಕ ಗೌರವಕ್ಕೆ ಪಾತ್ರರಾಗುವಿರಿ. ನನ್ನ ತೀರ್ಮಾನಗಳೇ ಸರಿ ಎಂಬ ಭಾವನೆಯಿಂದ ಹೊರ ಬರಲು ಪ್ರಯತ್ನಿಸಿ. ಚಿನ್ನದ ಆಭರಣಗಳ ಮೇಲೆ ಹೆಚ್ಚಿನ ಆಸೆ ಇರುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ