logo
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ತಿರುಪತಿ ತಿಮ್ಮಪ್ಪನ ಭಕ್ತರೇ ಗಮನಿಸಿ: 2025ರ ಜನವರಿಯಲ್ಲಿ ನಡೆಯುವ 10 ದಿನಗಳ ವೈಕುಂಠ ಏಕಾದಶಿ ದರ್ಶನದ ಟಿಕೆಟ್‌ಗಳು ಬಿಡುಗಡೆ

ತಿರುಪತಿ ತಿಮ್ಮಪ್ಪನ ಭಕ್ತರೇ ಗಮನಿಸಿ: 2025ರ ಜನವರಿಯಲ್ಲಿ ನಡೆಯುವ 10 ದಿನಗಳ ವೈಕುಂಠ ಏಕಾದಶಿ ದರ್ಶನದ ಟಿಕೆಟ್‌ಗಳು ಬಿಡುಗಡೆ

Raghavendra M Y HT Kannada

Nov 02, 2024 04:47 PM IST

google News

ತಿರುಪತಿಯ ತಿರುಮಲದಲ್ಲಿ ವೈಕುಂಠ ಏಕಾದಶಿಯ ದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.

    • 2025ರ ಜನವರಿಯಲ್ಲಿ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಡೆಯಲಿರುವ ವೈಕುಂಠ ಏಕಾದಶಿ ದರ್ಶನದ ಟಿಕೆಟ್‌ಗಳನ್ನು ಯಾತಾರ್ಥಿಗಳಿಗೆ ಬಿಡುಗಡೆ ಮಾಡಲಾಗಿದೆ. ತಿರುಮಲದಲ್ಲಿನ ವೈಕುಂಠ ಏಕಾದಶಿಯ ಸಂಪೂರ್ಣ ವಿವರ ಮತ್ತು ಟಿಕೆಟ್‌ಗಳ ಕುರಿತ ಮಾಹಿತಿ ಇಲ್ಲಿದೆ.
ತಿರುಪತಿಯ ತಿರುಮಲದಲ್ಲಿ ವೈಕುಂಠ ಏಕಾದಶಿಯ ದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.
ತಿರುಪತಿಯ ತಿರುಮಲದಲ್ಲಿ ವೈಕುಂಠ ಏಕಾದಶಿಯ ದರ್ಶನದ ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗಿದೆ.

ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿ ತಿರುಮಲದ ವೆಂಕಟೇಶ್ವರನ ಸನ್ನಿಧಿಯಲ್ಲಿ 2025ರ ಜನವರಿಯಲ್ಲಿ ನಡೆಯಲಿರುವ ವೈಕುಂಠ ಏಕಾದಶಿ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ. ವೈಕುಂಠ ಏಕಾದಶಿ ಸಮಯದಲ್ಲಿ ತಿಮ್ಮಪ್ಪನ ದರ್ಶನ ಪಡೆಯಲು ಪ್ಲಾನ್ ಮಾಡಿಕೊಳ್ಳುವ ಭಕ್ತರ ಅನುಕೂಲಕ್ಕಾಗಿ ಎರಡು ತಿಂಗಳು ಮುಂಚೆಯೇ ಟಿಕೆಟ್‌ ವಿವರಗಳನ್ನು ನೀಡುತ್ತಿದೆ. ಸೇವೆಗಳು, ಟಿಕೆಟ್‌ಗಳ ಬಿಡುಗಡೆ ಹಾಗೂ ಆನ್‌ಲೈನ್ ಬುಕಿಂಗ್ ಪ್ರಕ್ರಿಯೆ ಕುರಿತ ವಿವರಗಳು ಇಲ್ಲಿವೆ.

ತಾಜಾ ಫೋಟೊಗಳು

ನಾಳಿನ ದಿನ ಭವಿಷ್ಯ: ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳಿವೆ, ಹಣದ ಪರಿಸ್ಥಿತಿ ಬಲವಾಗಿರುತ್ತೆ

Nov 28, 2024 04:11 PM

Pradosh Vrat: ಪ್ರದೋಷ ವ್ರತದ ದಿನ ಬಟ್ಟೆ ಸೇರಿ ಯಾವ ವಸ್ತುಗಳನ್ನು ದಾನ ಮಾಡಿದರೆ ಶುಭಫಲಗಳು ಸಿಗುತ್ತವೆ

Nov 27, 2024 04:51 PM

ನಾಳಿನ ದಿನ ಭವಿಷ್ಯ: ನಿಮ್ಮ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತೆ, ಅನಿರೀಕ್ಷಿತ ಸಮಸ್ಯೆಗಳು ಎದುರಾಗುತ್ತವೆ

Nov 27, 2024 03:42 PM

ಲಕ್ಷ್ಮಿ ನಾರಾಯಣ ಯೋಗದಿಂದ ಈ ರಾಶಿಯವರಿಗೆ 2025 ರಲ್ಲಿ ಭಾರಿ ಅದೃಷ್ಟ; ಉತ್ತಮ ಉದ್ಯೋಗಾವಕಾಶ, ಹಣದ ಹರಿವು ಹೆಚ್ಚಾಗುತ್ತೆ

Nov 27, 2024 02:08 PM

2025ರಲ್ಲಿ ಈ 5 ರಾಶಿಯವರು ಆರ್ಥಿಕ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು, ಈ ರಾಶಿಗಳಲ್ಲಿ ನೀವು ಇದ್ದೀರಾ ನೋಡಿ

Nov 27, 2024 01:20 PM

ನಾಳಿನ ದಿನ ಭವಿಷ್ಯ: ನೀವು ಈ ರಾಶಿಯವರಾಗಿದ್ದರೆ ವ್ಯವಹಾರದಲ್ಲಿ ಲಾಭದಿಂದ ನಿಮ್ಮ ಆದಾಯ ಹೆಚ್ಚಾಗುತ್ತೆ, ಅನಗತ್ಯ ಕೋಪ ಮತ್ತು ವಾದಗಳನ್ನ ತಪ್ಪಿಸಿ

Nov 26, 2024 03:49 PM

2025ರ ಜನವರಿಯ ಸೇವಾ ಟಿಕೆಟ್‌ಗಳು ಬಿಡುಗಡೆ

ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಅಕ್ಟೋಬರ್ 30ರ ಬುಧವಾರದಿಂದಲೇ ತಿರುಮಲದ ಶ್ರೀವಾರಿ ಸೇವಾ ಆನ್‌ಲೈನ್ ಕೋಟಾ ಟಿಕೆಟ್‌ಗಳು ಲಭ್ಯ ಇವೆ. ಈ ಬುಕಿಂಗ್ ಪ್ರಕ್ರಿಯೆಯು 2025ರ ಜನವರಿ ತಿಂಗಳ ಸಂಪೂರ್ಣ ಸೇವೆಗಳನ್ನು ಒಳಗೊಂಡಿರುತ್ತದೆ. ಎಲ್ಲಾ ರೀತಿಯ ಸೇವಾ ವಿಭಾಗಗಳು ಇದರಲ್ಲಿ ಲಭ್ಯ ಇರುವುದಾಗಿ ಟಿಟಿಡಿ ಮೂಲಗಳು ಮಾಹಿತಿ ನೀಡಿವೆ.

ಬೆಳಗ್ಗೆ 11 ಗಂಟೆಗೆ ಸಾಮಾನ್ಯ ಶ್ರೀವಾರಿ ಸೇವೆಯ ಟಿಕೆಟ್‌ಗಳು, ಮಧ್ಯಾಹ್ನ 12 ಗಂಟೆಗೆ ನವನೀತ ಸೇವೆಯ ಟಿಕೆಟ್‌ಗಳು ಹಾಗೂ ಮಧ್ಯಾಹ್ನ 1 ಗಂಟೆಗೆ ಪರಕಾಮಣಿ ಸೇವೆಯ ಟಿಕೆಟ್‌ಗಳನ್ನು ಬುಕಿಂಗ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಸೇವೆಗಳು ಭಕ್ತರಿಗೆ ತಿರುಮಲದಲ್ಲಿ ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ನೀಡುತ್ತವೆ. ವಿಶೇಷವಾಗಿ ವೈಕುಂಠ ಏಕಾದಶಿ ಅವಧಿಯಲ್ಲಿ ಈ ಸೇವೆಗಳು ಭಕ್ತರಿಗೆ ಲಭ್ಯ ಇರುತ್ತವೆ.

ತಿರುಮಲದಲ್ಲಿ ವೈಕುಂಠ ಏಕಾದಶಿ ಎಂದಿನಿಂದ ಆರಂಭವಾಗುತ್ತೆ

ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ 2025ರ ವೈಕುಂಠ ಏಕಾದಶಿ ಜನವರಿ 10 ರಿಂದ ಆರಂಭವಾಗಿ 19 ರವರಿಗೆ ನಡೆಯುತ್ತವೆ. ಸಾವಿರಾರು ಮಂದಿ ಭಕ್ತರು ಈ ವೈಕುಂಠ ಏಕಾದಶಿ ವಿಶೇಷ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಇದಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ನಿರ್ದಿಷ್ಟವಾದ ಸೇವಾ ಕೋಟಾಗಳನ್ನು ಜಾರಿಗೆ ತಂದಿದೆ. ಅಲ್ಲದೆ, ಮಂಡಳಿಯೂ ಸಕಲ ರೀತಿಯಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಭಕ್ತರ ಬೇಡಿಕೆಯನ್ನು ನೋಡಿಕೊಂಡು 2025ರ ಜನವರಿ 14 ರಿಂದ ಆರಂಭವಾಗುವ ವೈಕುಂಠ ಏಕಾದಶಿ ದರ್ಶನಕ್ಕಾಗಿ 2024ರ ಡಿಸೆಂಬರ್‌ನಲ್ಲಿ ಹೆಚ್ಚುವರಿ ಬ್ಯಾಚ್‌ಗಳಿಗೆ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುವುದಾಗಿ ಟಿಟಿಡಿ ಸ್ಪಷ್ಟಪಡಿಸಿದೆ.

2024ರ ಜನವರಿಯಲ್ಲಿನ ವೈಕುಂಭ ಏಕಾದಶಿ ವಿವರ

  • ಜನವರಿ 11ರ ಶನಿವಾರ ವೈಕುಂಠ ದ್ವಾದಶ ಚಕ್ರಸ್ನಾನ ನಡೆಯಲಿದೆ
  • ಜನವರಿ 14ರ ಮಂಗಳವಾರ ಧನುರ್ಮಾಸ ಮುಗಿಯುತ್ತದೆ
  • ಜನವರಿ 15ರ ಬುಧವಾರ ಗೋದಾ ಪರಿಣ್ಯಂ ಮತ್ತು ಪ್ರಣಯ ಕಲಹ ಮಹೋತ್ಸವ
  • ಜನವರಿ 19ರ ಭಾನುವಾರ ವೈಕುಂಠ ಮೂಲಕ ದರ್ಶನ ಸಮಾಪ್ತಿಯಾಗುತ್ತೆ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ