Vastu Tips: ನಿಮ್ಮ ಹಳೆಯ ಬಟ್ಟೆಗಳನ್ನು ದಾನ ಮಾಡುತ್ತಿದ್ದೀರಾ? ವಾಸ್ತು ಶಾಸ್ತ್ರದ ಪ್ರಕಾರ ಈ ವಿಷಯಗಳು ತಿಳಿದಿರಲಿ
Nov 12, 2024 07:03 PM IST
ಹಳೆಯ ಬಟ್ಟೆಗಳನ್ನು ದಾನ ಮಾಡುವ ಮುನ್ನ ವಾಸ್ತುಶಾಸ್ತ್ರದ ಪ್ರಕಾರ ಏನು ಮಾಡಬೇಕು ಎಂಬುದನ್ನು ತಿಳಿಯಿರಿ
- ಅವಶ್ಯಕತೆ ಇರುವವರಿಗೆ, ಬಡವರಿಗೆ ಬಟ್ಟೆಗಳನ್ನು ದಾನ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ. ಇದು ಉತ್ತಮ ಅಭ್ಯಾಸ. ಹೇಗಾದರೂ ಹಳೆಯ ಬಟ್ಟೆಗಳನ್ನು ಯಾರಿಗಾದರೂ ನೀಡುವ ಮೊದಲು ವಾಸ್ತು ಪ್ರಕಾರ ಕೆಲವು ವಿಷಯಗಳನ್ನು ತಿಳಿದುಕೊಂಡಿರಬೇಕು. ಇವುಗಳನ್ನು ಅನುಸರಿಸಿ ಬಟ್ಟೆ ದಾನ ಮಾಡುವುದರಿಂದ ನೀವು ಹೆಚ್ಚಿನ ಶುಭ ಫಲಗಳನ್ನು ಪಡೆಯುತ್ತೀರಿ.
ಕೆಲವರಿಗೆ ಸಮಯ ಸಿಕ್ಕಾಗಲೆಲ್ಲಾ ಬಟ್ಟೆ ಶಾಂಪಿಂಗ್ ಮಾಡುವ ಕ್ರೇಜ್ ಇರುತ್ತದೆ. ಹೊಸದಾಗಿ ಖರೀದಿಸಿದ ಬಟ್ಟೆಗಳನ್ನು ಕೆಲವೇ ಕೆಲವು ದಿನ ಮಾತ್ರ ಬಳಸುತ್ತಾರೆ. ಅಳತೆ ಸೇರಿದಂತೆ ನಾನಾ ಕಾರಣಗಳಿಗಾಗಿ ಆ ಬಟ್ಟೆಗಳು ಕಪಾಟು ಸೇರುತ್ತದೆ. ಪ್ರತಿ ಮನೆಯಲ್ಲಿ ಇದು ನಡೆಯುತ್ತಲೇ ಇರುತ್ತದೆ. ಹಳೆಯ ಬಟ್ಟೆಗಳನ್ನು ಮನೆ ಸ್ವಚ್ಛಗೊಳಿಸಲು, ಕಿಚನ್ ಕ್ಲೀನ್ ಮಾಡಲು ಬಳಸುತ್ತಾರೆ. ಬಟ್ಟೆ ಸ್ವಲ್ಪ ದೊಡ್ಡದು ಅಥವಾ ಚಿಕ್ಕದಾಗಿದೆ ಎಂದು ಅನಿಸಿದರೂ ಇಲ್ಲದವರಿಗೆ ಇಂತಹ ಬಟ್ಟೆಗಳನ್ನು ನೀಡುವುದು ಬಹಳ ಶ್ರೇಷ್ಠವೆಂದು ಹೇಳಲಾಗುತ್ತದೆ. ಬಡವರು ನೀವು ನೀಡುವ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ತುಂಬಾ ಸಂತೋಷಪಡುತ್ತಾರೆ. ಅವರ ಆನಂದ ನೋಡಿದರೆ ಮನಸಿಗೆ ತುಂಬಾ ಖುಷಿ ಎನಿಸುತ್ತದೆ. ಹೇಗಾದರೂ ಹಳೆಯ ಬಟ್ಟೆ ಇತರರಿಗೆ ನೀಡುವ ಮೊದಲು ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು. ಯಾವ ರೀತಿಯ ಬಟ್ಟೆಗಳನ್ನು ದಾನ ಮಾಡಬೇಕು, ಯಾರಿಗೆ ಕೊಡಬಾರದು ಎಂಬುದು ತಿಳಿಯಬೇಕು.
ತಾಜಾ ಫೋಟೊಗಳು
ಅನೇಕ ಬಾರಿ ಜನರು ತಮ್ಮ ಹಳೆಯ ಬಟ್ಟೆಗಳನ್ನು ಪರಿಚಯಸ್ಥರಿಗೆ ನೀಡುತ್ತಾರೆ ಅಥವಾ ದಾನ ಮಾಡುತ್ತಾರೆ. ಹಳೆಯ ಬಟ್ಟೆ ಧರಿಸಿದವರ ಶಕ್ತಿಯನ್ನು ಗ್ರಹಿಸುತ್ತದೆ ಎಂದು ನಂಬುತ್ತಾರೆ. ವಾಸ್ತು ಪ್ರಕಾರ ಬಟ್ಟೆಗಳನ್ನು ದಾನ ಮಾಡಿದ ನಂತರ ಬಟ್ಟೆ ಕೊಟ್ಟವರ ಶಕ್ತಿ, ಭಾವನೆಗಳು ಅಥವಾ ಅನುಭವಗಳು ಹೊಸದಾಗಿ ಧರಿಸಿದ ವ್ಯಕ್ತಿಗೆ ವರ್ಗಾವಣೆಯಾಗುತ್ತೆ. ಇದು ದಾನ ಮಾಡುವ ವ್ಯಕ್ತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಪ್ರತಿಕೂಲತೆಯನ್ನು ತಡೆಯಲು ಹಳೆಯ ಬಟ್ಟೆ ದಾನ ಮಾಡುಲು ಮೊದಲು ವಾಸ್ತುವಿಗೆ ಸಂಬಂಧಿಸಿದಂತೆ ಪ್ರಮುಖವಾದ ನಿಯಮಗಳು ಬಹಳ ಮುಖ್ಯ. ಹಳೆಯ ಬಟ್ಟೆಗಳನ್ನು ದಾನ ಮಾಡಲು ಇರುವ ವಾಸ್ತು ನಿಯಮಗಳ ಬಗ್ಗೆ ಪಂಡಿತರು ತಿಳಿಸಿದ್ದಾರೆ.
ಯಾವ ದಿನ ಬಟ್ಟೆ ದಾನ ಮಾಡಬಾರದು?
ಹರಿದ ಬಟ್ಟೆ, ಹಾಕಿಕೊಳ್ಳಲು ಸಾಧ್ಯವಾಗದ ಅಥವಾ ಉಪಯೋಗಕ್ಕೆ ಬಾರದ ಬಟ್ಟೆಗಳನ್ನು ಕೊಡುವುದರಿಂದ ನಿಮಗೆ ತೊಂದರೆಗಳು ಎದುರಾಗುತ್ತವೆ. ಆದ್ದರಿಂದ ಸ್ವಲ್ಪ ಉತ್ತಮವಾದ ಬಟ್ಟೆಯನ್ನು ದಾನ ಮಾಡಬೇಕು. ಬಟ್ಟೆಗಳನ್ನು ದಾನ ಮಾಡಲು ಅಥವಾ ಯಾರಿಗಾದರೂ ಕೊಡುವ ಮೊದಲು ಆ ಬಟ್ಟೆಗಳು ಸರಿಯಾಗಿ ಇವೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. ಅವುಗಳನ್ನು ನೀಡುವ ಮೊದಲು ಕಡ್ಡಾಯವಾಗಿ ಉಪ್ಪು ನೀರಿನಲ್ಲಿ ಹಾಕಿ ಸ್ವಚ್ಛಗೊಳಿಸಿ ಕೊಡಬೇಕು. ನೀವು ಯಾರಿಗಾದರೂ ಹಳೆಯ ಬಟ್ಟೆಗಳನ್ನು ನೀಡಿದರೆ, ಅವರ ಬಳಿಯಿಂದ ಕನಿಷ್ಠ ಒಂದು ರೂಪಾಯಿಯಾದರೂ ಹಿಂತಿರುಗಿ ತೆಗೆದುಕೊಳ್ಳಿ. ವಾಸ್ತು ಶಾಸ್ತ್ರದ ಪ್ರಕಾರ ಗುರುವಾರ ಬಟ್ಟೆ ದಾನ ಮಾಡಬಾರದು.
ನಿಮಗೆ ಸಹಾಯ ಮಾಡಬೇಕೆಂದರೆ ಹಳೆಯ ಉಡುಪುಗಳ ಬದಲಿಗೆ ಉತ್ತಮ ಉಡುಪುಗಳನ್ನು ಕೊಡಿಸಬಹುದು. ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ಸ್ವೆಟರ್, ಬೆಡ್ ಶೀಟ್, ಉಲನ್ ಟೋಪಿ ಮುಂತಾದವುಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದು. ಬಟ್ಟೆ ದಾನದಿಂದ ಜಾತಕದಲ್ಲಿ ಅನೇಕ ದೋಷಗಳು ನಿವಾರಣೆಯಾಗುತ್ತವೆ. ಕುಜ ದೋಷದಿಂದ ತೊಂದರೆ ಎದುರಿಸಿದರೆ ಅವರಿಗೆ ಇದು ಒಂದು ಸರಿ ಪರಿಹಾರ. ದಾನ ಎಲ್ಲದಕ್ಕೂ ಪುಣ್ಯವನ್ನು ನೀಡುವಂತಿದೆ. ಲಕ್ಷ್ಮೀದೇವಿ ಅನುಗ್ರಹವೂ ಸಿಗುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.