ದಕ್ಷಿಣ ದಿಕ್ಕಿಗೆ ಸಂಬಂಧಿಸಿದಂತೆ ವಾಸ್ತು ಟಿಪ್ಸ್; ಸಮಸ್ಯೆಗಳನ್ನು ತಪ್ಪಿಸಲು ಅನುಸರಿಸಬೇಕಾದ ನಿಯಮಗಳೇನು?
Jul 26, 2024 12:56 PM IST
ದಕ್ಷಿಣ ದಿಕ್ಕಿಗೆ ಸಂಬಂಧಿಸಿದಂತೆ ವಾಸ್ತು ಟಿಪ್ಸ್; ಸಮಸ್ಯೆಗಳನ್ನು ತಪ್ಪಿಸಲು ಅನುಸರಿಸಬೇಕಾದ ನಿಯಮಗಳೇನು?
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ದಕ್ಷಿಣ ದಿಕ್ಕನ್ನು ಯಮ ಮತ್ತು ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಈ ದಿಕ್ಕಿಗೆ ಸಂಬಂಧಿಸಿದಂತೆ ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸಬಹುದು.
ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೂ ವಿಶೇಷ ಪ್ರಾಮುಖ್ಯತೆ ಇದೆ. ಪ್ರತಿ ದಿಕ್ಕಿಗೂ ಸಂಬಂಧಿಸಿದಂತೆ ಎಲ್ಲರೂ ವಾಸ್ತು ನಿಯಮಗಳನ್ನು ತಿಳಿದುಕೊಂಡು ಅವುಗಳನ್ನು ಪಾಲಿಸಬೇಕು. ಹೀಗೆ ಅನುಸರಿಸಿದರೆ ಮಾತ್ರ ಜೀವನದಲ್ಲಿ ಉಂಟಾಗಬಹುದಾದ ಅಡೆತಡೆಗಳನ್ನು ನಿವಾರಿಸಲು ಸಾಧ್ಯ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಜೀವನದಲ್ಲಿ ತೊಂದರೆಗಳು ಹೆಚ್ಚು.
ತಾಜಾ ಫೋಟೊಗಳು
ದಕ್ಷಿಣ ದಿಕ್ಕಿಗೆ ಸಂಬಂಧಿಸಿದ ವಾಸ್ತು
ಅದರಲ್ಲೂ ದಕ್ಷಿಣ ದಿಕ್ಕಿಗೆ ಸಂಬಂಧಿಸಿದಂತೆ ವಾಸ್ತುಶಾಸ್ತ್ರದಲ್ಲಿ ಕೆಲವೊಂದು ನೀತಿ ನಿಬಂಧನೆಗಳಿವೆ. ಏಕೆಂದರೆ ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಕರೆಯುತ್ತಾರೆ. ಇದನ್ನು ಪೂರ್ವಜರ ದಿಕ್ಕೂ ಎಂದು ನಂಬಲಾಗಿದೆ. ಆದ್ದರಿಂದಲೇ ಈ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ಹಿರಿಯರು ಹೇಳುತ್ತಾರೆ. ದಕ್ಷಿಣ ದಿಕ್ಕಿಗೆ ಸಂಬಂಧಿಸಿದಂತೆ ಇನ್ನೂ ಕೆಲವೊಂದು ವಿಚಾರಗಳನ್ನು ನೋಡೋಣ.
ಇದನ್ನೂ ಓದಿ: ಆಗಸ್ಟ್ನಲ್ಲಿ ಜನಿಸಿದವರ ಗುಣ ಸ್ವಭಾವ ಹೇಗಿರುತ್ತದೆ?
- ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಇರಬಾರದು. ಇದು ನಿದ್ರೆಗೆ ಅಡ್ಡಿ ಉಂಟುಮಾಡುತ್ತದೆ. ಅಲ್ಲದೆ, ದಕ್ಷಿಣ ದಿಕ್ಕಿನಲ್ಲಿ ಹಾಸಿಗೆಯನ್ನು ಹೊಂದಿರುವುದು ಪಿತೃ ದೋಷವನ್ನು ಉಂಟುಮಾಡಬಹುದು. ಇದರೊಂದಿಗೆ, ದಕ್ಷಿಣದ ಕಡೆಗೆ ಪಾದಗಳನ್ನು ಇಟ್ಟು ಮಲಗಬಾರದು, ಹಾಗೆ ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ನಿಮಗೆ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು.
- ಮನೆಯ ದಕ್ಷಿಣ ದಿಕ್ಕಿನಲ್ಲಿ ತುಳಸಿ ಗಿಡ, ದೇವಸ್ಥಾನ, ಎಲೆಕ್ಟ್ರಾನಿಕ್ ವಸ್ತುಗಳು ಅಥವಾ ಶೂ ಅಥವಾ ಚಪ್ಪಲಿ ಇರಬಾರದು. ಇದನ್ನು ಮಾಡುವುದರಿಂದ ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ನಕಾರಾತ್ಮಕ ಫಲಿತಾಂಶಗಳನ್ನು ನೋಡಬಹುದು. ಇದಲ್ಲದೆ, ಈ ವಸ್ತುಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು ಉಂಟಾಗಬಹುದು.
ಇದನ್ನೂ ಓದಿ: ಸಿಂಹರಾಶಿಗೆ ಸೂರ್ಯನ ಸಂಕ್ರಮಣ, ಆಗಸ್ಟ್ 16ರಿಂದ ಮೇಷ ಸೇರಿ ಈ ರಾಶಿಯವರಿಗೆ ಸುವರ್ಣ ಅವಧಿ
ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸಬಾರದು
- ದಕ್ಷಿಣ ದಿಕ್ಕಿಗೆ ಮುಖ ಮಾಡಿ ಆಹಾರವನ್ನು ಸೇವಿಸಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದನ್ನು ತಪ್ಪಿದವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
- ದೇವರ ಫೋಟೋ, ನಿಮ್ಮ ಕುಟುಂಬದ ಫೋಟೋಗಳನ್ನು ಕೂಡಾ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಬಾರದು, ಇದರಿಂದ ಅಶುಭ ಫಲಿತಾಂಶ ದೊರೆಯಬಹುದು. ಅಲ್ಲದೆ ಮನೆಯ ಸದಸ್ಯರಿಗೆ ಸಮಸ್ಯೆ ಉಂಟಾಗಬಹುದು.
ಎಲ್ಲಾ ಸಮಸ್ಯೆಗೆ ಒಂದಲ್ಲಾ ಒಂದು ಪರಿಹಾರ ಇದ್ದೇ ಇರುತ್ತದೆ. ಹಾಗೇ ದಕ್ಷಿಣ ದಿಕ್ಕಿಗೆ ಸಂಬಂಧಿಸಿದಂತೆ ನೀವು ಕಟ್ಟುನಿಟ್ಟಿನ ವಾಸ್ತುವನ್ನು ಪಾಲಿಸಿದರೆ ನಿಮ್ಮ ಜೀವನ ಸುಂದರವಾಗಿರುತ್ತದೆ. ಸೂಕ್ತ ಜ್ಯೋತಿಷಿಗಳ ಸಲಹೆ ಪಡೆದು ದಕ್ಷಿಣ ದಿಕ್ಕಿಗೆ ಯಂತ್ರವನ್ನು ಸ್ಥಾಪಿಸಿದರೆ ಬಹುತೇಕ ಸಮಸ್ಯೆಗಳನ್ನು ತಪ್ಪಿಸಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.