logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇದೆಲ್ಲಾ ಆಗಿದ್ದು ನಿಮ್ಮಿಂದಲೇ, ನಮಗೆ ನಷ್ಟವಾಗಿದೆ ಪರಿಹಾರ ಕೊಡಿ; ಜಯ್​ ಶಾಗೆ ಇ-ಮೇಲ್​ ಮಾಡಿದ ಪಿಸಿಬಿ

ಇದೆಲ್ಲಾ ಆಗಿದ್ದು ನಿಮ್ಮಿಂದಲೇ, ನಮಗೆ ನಷ್ಟವಾಗಿದೆ ಪರಿಹಾರ ಕೊಡಿ; ಜಯ್​ ಶಾಗೆ ಇ-ಮೇಲ್​ ಮಾಡಿದ ಪಿಸಿಬಿ

Prasanna Kumar P N HT Kannada

Sep 07, 2023 06:28 PM IST

google News

ಜಯ್​ ಶಾ ಮತ್ತು ಝಾಕಾ ಅಶ್ರಫ್.

    • Asia Cup 2023, BCCI vs Pakistan: ಏಷ್ಯಾಕಪ್ ಟೂರ್ನಿಯಲ್ಲಿ ಸೂಪರ್-4 ಹಂತದ ಪಂದ್ಯಗಳನ್ನು ಸ್ಥಳಾಂತರಿಸಲು ಒಪ್ಪದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.
ಜಯ್​ ಶಾ ಮತ್ತು ಝಾಕಾ ಅಶ್ರಫ್.
ಜಯ್​ ಶಾ ಮತ್ತು ಝಾಕಾ ಅಶ್ರಫ್.

ಏಷ್ಯಾಕಪ್ ಟೂರ್ನಿ (Asia Cup 2023) ಆರಂಭಗೊಂಡು ಒಂದು ವಾರ ಕಳೆದಿದೆ. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (PCB vs ACC) ನಡುವೆ ಹಗ್ಗಜಗ್ಗಾಟ ಮತ್ತೆ ಮುಂದುವರೆದಿದೆ. ದಿನಕ್ಕೊಂದು ಕ್ಯಾತೆ ತೆಗೆಯುತ್ತಿರುವ ಪಿಸಿಬಿ, ಇದೀಗ ಮತ್ತೊಂದು ತಗಾದೆ ಎತ್ತಿದೆ. ನೂತನ ಬೇಡಿಕೆಯೊಂದನ್ನು ಮುಂದಿಟ್ಟಿರುವ ಪಾಕ್ ಕ್ರಿಕೆಟ್ ಬೋರ್ಡ್ (Pakistan Cricket Board), ನಮಗೆ ನಷ್ಟವಾಗಿದೆ. ಪರಿಹಾರ ನೀಡಿ ಎಂದು ಬಿಸಿಸಿಐ ಕಾರ್ಯದರ್ಶಿಯೂ ಆಗಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (Asia Cricket Council) ಅಧ್ಯಕ್ಷ ಜಯ್​ ಶಾಗೆ (Jay Shah) ಸೂಚಿಸಿದ್ದಾರೆ.

ಪ್ರಸಕ್ತ ಸಾಲಿನ ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿತ್ತು. ಆದರೆ, ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸದ ಹಿನ್ನೆಲೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಲು ಒಪ್ಪಿಗೆ ನೀಡಲಾಗಿತ್ತು. ಅದರಂತೆ ಶ್ರೀಲಂಕಾದಲ್ಲಿ 9 ಪಂದ್ಯ, ಪಾಕಿಸ್ತಾನದಲ್ಲಿ 4 ಪಂದ್ಯ ಆಯೋಜಿಸಲಾಗುತ್ತಿದೆ. ಆದರೆ ಶ್ರೀಲಂಕಾದಲ್ಲಿ ಮಳೆಯ ಕಾರಣ, ಮೈದಾನಗಳತ್ತ ಪ್ರೇಕ್ಷಕರು ಧಾವಿಸುತ್ತಿಲ್ಲ. ಹಾಗಾಗಿ, ಜನರು ಧಾವಿಸದ ಕಾರಣ ನಷ್ಟ ಉಂಟಾಗಿದೆ. ಇದೆಲ್ಲಾ ಆಗಿದ್ದು ನಿಮ್ಮಿಂದಲೇ. ಪರಿಹಾರ ನೀಡಬೇಕು ಎಂದು ಮನವಿ ಮಾಡಿದೆ.

ಪ್ರಸ್ತುತ ಶ್ರೀಲಂಕಾದಲ್ಲಿ ಮಳೆಗಾಲ. ನಿರೀಕ್ಷೆಯಂತೆ ಪ್ರೇಕ್ಷಕರು ಮೈದಾನಗಳತ್ತ ಆಗಮಿಸುವುದು ಕಡಿಮೆಯಾಗಿದೆ. ಕಡಿಮೆ ಟಿಕೆಟ್​ಗಳು ಮಾರಾಟಗೊಂಡಿವೆ. ಇದರಿಂದ ತುಂಬಾ ನಷ್ಟವಾಗಿದೆ. ಹಾಗಾಗಿ ಪಾಕ್ ಮಂಡಳಿಗೆ ಪರಿಹಾರ ನೀಡಬೇಕು ಎಂದು ಪಿಸಿಬಿ ಮುಖ್ಯಸ್ಥ ಝಕಾ ಅಶ್ರಫ್ ಒತ್ತಾಯಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಸಿಸಿ ಅಧ್ಯಕ್ಷ ಜಯ್ ಶಾಗೆ ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಮೇಲ್ ಕಳುಹಿಸಿದ್ದಾರೆ ಎಂದು ಇನ್​ಸೈಡ್​ ಸ್ಪೋರ್ಟ್ಸ್​ ವರದಿ ಮಾಡಿದೆ.

ಸೂಪರ್​​-4 ಪಂದ್ಯಗಳಿಗೆ ಮಳೆ ಕಾಟ

ಈಗಾಗಲೇ ಸೂಪರ್-4 ಹಂತದ ಪಂದ್ಯಗಳು ಆರಂಭಗೊಂಡಿವೆ. ಬಾಂಗ್ಲಾದೇಶದ ಎದುರು ಪಾಕಿಸ್ತಾನ ಜಯಿಸಿದೆ. ಸೆಪ್ಟೆಂಬರ್ 9ರಿಂದ ಉಳಿದ ಪಂದ್ಯಗಳು ಶ್ರೀಲಂಕಾದ ಕೊಲೊಂಬೋದಲ್ಲಿ ಆರಂಭಗೊಳ್ಳಲಿವೆ. ಆದರೆ ಈ ಮೈದಾನದಲ್ಲಿ ನಡೆಯುವ ಎಲ್ಲಾ ಪಂದ್ಯಗಳಿಗೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. ಹಾಗಾಗಿ ಈ ಪಂದ್ಯಗಳನ್ನು ಬೇರೆಡೆ ಸ್ಥಳಾಂತರ ಮಾಡಲು ಪಿಸಿಬಿ ಮನವಿ ಮಾಡಿತ್ತು. ಆದರೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇದಕ್ಕೆ ಒಪ್ಪಿಗೆ ಸೂಚಿಸಿಲ್ಲ ಎನ್ನಲಾಗಿದೆ.

ಎಸಿಸಿ ತೆಗೆದುಕೊಂಡ ಈ ನಿರ್ಧಾರದಿಂದ ಪಿಸಿಬಿ ಅಸಮಾಧಾನಗೊಂಡಿದೆ. ಪಂದ್ಯಗಳನ್ನು ಸ್ಥಳಾಂತರ ಮಾಡುವುದಿಲ್ಲ ಎಂಬ ನಿರ್ಧಾರವನ್ನು ಯಾರು ತೆಗೆದುಕೊಂಡರು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಪಂದ್ಯಗಳನ್ನು ಮುಂದೂಡುವ ಮತ್ತು ಅದನ್ನು ರದ್ದುಗೊಳಿಸುವ ವಿಚಾರಕ್ಕೆ ಸಂಬಂಧಿಸಿ ಪಿಸಿಬಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದಕ್ಕೆ ಸಂಬಂಧಿಸಿದಂತೆ ನಮಗೆ ನಿಖರವಾದ ಸ್ಪಷ್ಟನೆ ಬೇಕಿದೆ ಎಂದು ಪಿಸಿಬಿ ಒತ್ತಾಯಿಸಿದೆ.

ಪಾಕಿಸ್ತಾನಕ್ಕೆ ಜಯ

ಏಷ್ಯಾಕಪ್​ ಟೂರ್ನಿಯ ಸೂಪರ್​-4 ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕಿಸ್ತಾನ ಸುಲಭ ಗೆಲುವು ದಾಖಲಿಸಿದೆ. ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ 193 ರನ್​ಗಳಿಗೆ ಸರ್ವಪತನ ಕಂಡಿತು. ಈ ಗುರಿ ಬೆನ್ನಟ್ಟಿದ ಪಾಕ್, 7 ವಿಕೆಟ್​ಗಳ ಗೆಲುವು ದಾಖಲಿಸಿತು. ಸೂಪರ್​​-4 ಹಂತದಲ್ಲಿ ಮುಂದಿನ ಹಂತದಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆಯಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ