ಏಷ್ಯಾಕಪ್​ನಲ್ಲಿ ಮತ್ತೆ ಭಾರತ-ಪಾಕಿಸ್ತಾನ ಮುಖಾಮುಖಿ; ಸೂಪರ್-4 ಕದನಕ್ಕೆ ಈ ದಿನಾಂಕ ನಿಗದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಏಷ್ಯಾಕಪ್​ನಲ್ಲಿ ಮತ್ತೆ ಭಾರತ-ಪಾಕಿಸ್ತಾನ ಮುಖಾಮುಖಿ; ಸೂಪರ್-4 ಕದನಕ್ಕೆ ಈ ದಿನಾಂಕ ನಿಗದಿ

ಏಷ್ಯಾಕಪ್​ನಲ್ಲಿ ಮತ್ತೆ ಭಾರತ-ಪಾಕಿಸ್ತಾನ ಮುಖಾಮುಖಿ; ಸೂಪರ್-4 ಕದನಕ್ಕೆ ಈ ದಿನಾಂಕ ನಿಗದಿ

India vs Pakistan, Asia Cup 2023: ಏಷ್ಯಾಕಪ್​​ನಲ್ಲಿ ಮತ್ತೊಮ್ಮೆ ಭಾರತ-ಪಾಕಿಸ್ತಾನ ನಡುವಿನ ಸೆಣಸಾಟಕ್ಕೆ ವೇದಿಕೆ ಸಜ್ಜಾಗಿದೆ. ಲೀಗ್​​ ಹಂತದ ನಂತರ ಸೂಪರ್​-4 ಹಂತಕ್ಕೆ ಪ್ರವೇಶಿಸಿರುವ ಉಭಯ ತಂಡಗಳ ಮುಂದಿನ ಕಾದಾಟಕ್ಕೆ ದಿನಾಂಕ ಅಂತಿಮವಾಗಿದೆ.

ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ಮತ್ತೆ ಮುಖಾಮುಖಿ.
ಏಷ್ಯಾಕಪ್​ನಲ್ಲಿ ಭಾರತ-ಪಾಕಿಸ್ತಾನ ಮತ್ತೆ ಮುಖಾಮುಖಿ. (BCCI Twitter)

ಪ್ರಸಕ್ತ ಸಾಲಿನ ಏಕದಿನ ಏಷ್ಯಾಕಪ್​ ಟೂರ್ನಿಯ (Asia Cup 2023) 5ನೇ ಪಂದ್ಯದಲ್ಲಿ ನೇಪಾಳ ವಿರುದ್ಧ ಸುಲಭ ಜಯ ಸಾಧಿಸಿದ ಭಾರತ ತಂಡ (Team India) ಸೂಪರ್-4 ಹಂತಕ್ಕೆ ಪ್ರವೇಶಿಸಿದೆ. ಶ್ರೀಲಂಕಾದ ಪಲ್ಲೆಕಲೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ, 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು. ಸೋತ ನೇಪಾಳ ಟೂರ್ನಿಯಿಂದ ಹೊರ ಬಿದ್ದರೆ, ಭಾರತ, ಪಾಕ್ ನಂತರ ಗ್ರೂಪ್-ಎ ನಿಂದ ಸೂಪರ್-4ಗೇರಿದ 2ನೇ ತಂಡ ಎನಿಸಿದೆ.

ಅದರಂತೆ ಇದೀಗ ಮತ್ತೊಮ್ಮೆ ಭಾರತ-ಪಾಕಿಸ್ತಾನ (India vs Pakistan) ನಡುವಿನ ಸೆಣಸಾಟಕ್ಕೆ ವೇದಿಕೆ ಸಜ್ಜಾಗಿದೆ. ಲೀಗ್​​ ಹಂತದ ನಂತರ ಸೂಪರ್​-4 ಹಂತಕ್ಕೆ ಪ್ರವೇಶಿಸಿರುವ ಉಭಯ ತಂಡಗಳ ಮುಂದಿನ ಕಾದಾಟಕ್ಕೆ ದಿನಾಂಕ ಅಂತಿಮವಾಗಿದೆ. ಉಭಯ ತಂಡಗಳು ಮುಖಾಮುಖಿ ಆಗಿದ್ದ ಮೊದಲ ಪಂದ್ಯವು ಮಳೆಯಿಂದ ರದ್ದಾಯಿತು. ಭಾರತ ಬ್ಯಾಟಿಂಗ್ ನಡೆಸಿತು. ಆದರೆ, ಪಾಕ್​ ಒಂದು ಎಸೆತವನ್ನೂ ಎದುರಿಸಲಿಲ್ಲ.

ಸೆಪ್ಟೆಂಬರ್ 10ರಂದು ಮತ್ತೆ ಮುಖಾಮುಖಿ

ಸೆಪ್ಟೆಂಬರ್​​ 2ರಂದು ಮುಖಾಮುಖಿಯಾಗಿದ್ದ ಭಾರತ - ಪಾಕಿಸ್ತಾನ ತಂಡಗಳು, ಇದೀಗ ಸೆಪ್ಟೆಂಬರ್​​ 10ರಂದು ಮತ್ತೊಮ್ಮೆ ಮೈದಾನದಲ್ಲಿ ಕಾದಾಟ ನಡೆಸಲಿವೆ. ಕೊಲಂಬೊದ ಆರ್​. ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್​ ಕದನ ನಡೆಯಲಿದೆ. ಸೂಪರ್​-4 ಹಂತದಲ್ಲಿ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡಿದರೆ, ಮೂರನೇ ಬಾರಿಗೆ ಫೈನಲ್​​ನಲ್ಲೂ ಮುಖಾಮುಖಿಯಾಗಲಿವೆ.

ಸೂಪರ್​​-4ನಲ್ಲಿ ತಂಡಗಳ ನಡುವೆ ಕಾದಾಟ

ಗ್ರೂಪ್​​-ಎನಲ್ಲಿ ಈಗಾಗಲೇ ಎರಡು ತಂಡಗಳು ಸೂಪರ್​-4 ಪ್ರವೇಶ ನೀಡಿವೆ. ಇದೀಗ ಗ್ರೂಪ್​​-ಬಿನಲ್ಲಿ ಇನ್ನೂ ಅಂತಿಮಗೊಂಡಿಲ್ಲ. ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ ತಂಡಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದು, ಯಾರು ಮುಂದಿನ ಸುತ್ತಿಗೆ ಪ್ರವೇಶ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಬಿ ಗ್ರೂಪ್​​ನಿಂದ ಅರ್ಹತೆ ಪಡೆಯುವ ತಂಡಗಳೊಂದಿಗೆ ಭಾರತ, ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ. ಸೆಪ್ಟೆಂಬರ್ 6ರಿಂದ ಸೂಪರ್-4 ಆರಂಭ.

ಭಾರತ ಏಷ್ಯಾಕಪ್ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.

ಪಾಕಿಸ್ತಾನ ಏಷ್ಯಾಕಪ್ ತಂಡ

ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಖರ್ ಜಮಾನ್, ಇಮಾಮ್-ಉಲ್-ಹಕ್, ಇಫ್ತಿಕರ್ ಅಹ್ಮದ್, ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ಹ್ಯಾರಿಸ್ ರವೂಫ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ.

Whats_app_banner