logo
ಕನ್ನಡ ಸುದ್ದಿ  /  ಕ್ರಿಕೆಟ್  /  ಲಿಫ್ಟ್​ನಲ್ಲೇ ಸಿಲುಕಿದ ಥರ್ಡ್ ಅಂಪೈರ್; ಕ್ರಿಕೆಟರ್ಸ್, ಮೈದಾನದ ಅಂಪೈರ್ಸ್, ಪ್ರೇಕ್ಷಕರಿಗೆ ನಗುವೋ ನಗು

ಲಿಫ್ಟ್​ನಲ್ಲೇ ಸಿಲುಕಿದ ಥರ್ಡ್ ಅಂಪೈರ್; ಕ್ರಿಕೆಟರ್ಸ್, ಮೈದಾನದ ಅಂಪೈರ್ಸ್, ಪ್ರೇಕ್ಷಕರಿಗೆ ನಗುವೋ ನಗು

Prasanna Kumar P N HT Kannada

Dec 28, 2023 03:05 PM IST

google News

ಲಿಫ್ಟ್​ನಲ್ಲೇ ಸಿಲುಕಿದ ಥರ್ಡ್ ಅಂಪೈರ್.

    • Third Umpire Richard Illingworth: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್​ನ 2ನೇ ಸೆಷನ್​ ಆರಂಭಕ್ಕೂ ಮುನ್ನ ಥರ್ಡ್ ಅಂಪೈರ್ ಲಿಫ್ಟ್​ನಲ್ಲಿ ಸಿಲುಕಿಕೊಂಡ ಸನ್ನಿವೇಶ ಜರುಗಿತು.
ಲಿಫ್ಟ್​ನಲ್ಲೇ ಸಿಲುಕಿದ ಥರ್ಡ್ ಅಂಪೈರ್.
ಲಿಫ್ಟ್​ನಲ್ಲೇ ಸಿಲುಕಿದ ಥರ್ಡ್ ಅಂಪೈರ್.

ಮೆಲ್ಬರ್ನ್​ ಕ್ರಿಕೆಟ್ ಮೈದಾನದಲ್ಲಿ (Melbourne Cricket Ground) ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ (Australia vs Pakistan, 2nd Test) ನಡುವಿನ ಬಾಕ್ಸಿಂಗ್ ಡೇ ಟೆಸ್ಟ್​ (Boxing Day Test) 3ನೇ ದಿನದಾಟದ ಎರಡನೇ ಸೆಷನ್​ಗೂ ಮುನ್ನ ತಾಂತ್ರಿಕ ದೋಷದಿಂದ ಮೂರನೇ ಅಂಪೈರ್ ಲಿಫ್ಟ್‌ನಲ್ಲಿ ಸಿಲುಕಿಕೊಂಡ ಫನ್ನಿ ಸನ್ನಿವೇಶ ನಡೆಯಿತು. ಅನಿರೀಕ್ಷಿತ ಟ್ವಿಸ್ಟ್​​ನಿಂದ ಪಂದ್ಯ ಕೆಲ ನಿಮಿಷಗಳ ಕಾಲ ತಡವಾಗಿ ಆರಂಭಗೊಂಡಿತು.

ಲಿಫ್ಟ್​ನಲ್ಲಿ ಸಿಲುಕಿಕೊಂಡ ಥರ್ಡ್ ಅಂಪೈರ್ಸ್

ಅಸಮರ್ಪಕವಾದ ಲಿಫ್ಟ್​​ನಿಂದ ಪಂದ್ಯದ ಮೂರನೇ ಅಂಪೈರ್ ರಿಚರ್ಡ್ ಇಲ್ಲಿಂಗ್ವರ್ತ್ (Richard Illingworth) ಲಿಫ್ಟ್​ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಪಂದ್ಯದ ಎರಡನೇ ಸೆಷನ್​​ಗೂ ಮುನ್ನ ಮೂರನೇ ಅಂಪೈರ್​ ಕಡೆಗೆ ಆನ್​ಫೀಲ್ಡ್​ ಅಂಪೈರ್​​ಗಳು ಕಣ್ಣಾಡಿಸಿ ನೋಡಿದಾಗ ಈ ದೃಶ್ಯ ಬೆಳಕಿಗೆ ಬಂತು. ಅವರು ಬರುವವರೆಗೂ ನಿಮಿಷಗಳ ಕಾಲ ವಿಳಂಬ ಮಾಡಲಾಯಿತು.

ಎರಡನೇ ಸೆಷನ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಬೌಲಿಂಗ್​ ಆರಂಭಿಸಲು ಆಟಗಾರರು ಮೈದಾನಕ್ಕೆ ಮರಳಿದ್ದರು. ಆದರೆ ಬೌಲರ್ ಇನ್ನೇನು ಬೌಲ್​ ಮಾಡಬೇಕು ಎನ್ನುವಷ್ಟರಲ್ಲಿ ಇಲಿಂಗ್ವರ್ತ್‌ ಕಾಣಲಿಲ್ಲ. ಹಾಗಾಗಿ ಹಠಾತ್ ವಿರಾಮ ಘೋಷಿಸಲಾಯಿತು. ಇದು ಗೊಂದಲ ಮತ್ತು ಫನ್ನಿ ಘಟನೆಗೆ ಕಾರಣವಾಯಿತು.

ನಗುವಿನ ಅಲೆಯಲ್ಲಿ ತೇಲಿದ ಮೈದಾನ

ಆದರೆ ಈ ದೃಶ್ಯ ಸಂಪೂರ್ಣ ಹಾಸ್ಯಮಯಕ್ಕೆ ತಿರುಗಿತ್ತು. ಮೈದಾನದಲ್ಲಿ ಜಮಾಯಿಸಿದ್ದ ಆಟಗಾರರು ಮತ್ತು ಆನ್​ಫೀಲ್ಡ್​ ಅಂಪೈರ್​​ಗಳೇ ನಕ್ಕು ನಕ್ಕು ಸಾಕಾದರು. ಅದರಲ್ಲೂ ಡೇವಿಡ್ ವಾರ್ನರ್ ಅಂತೂ ಬಿದ್ದೂ ಬಿದ್ದೂ ನಕ್ಕರು. ಪ್ರೇಕ್ಷಕರ ಸ್ಟ್ಯಾಂಡ್‌ಗಳಲ್ಲಿ ನಗುವಿನ ಅಲೆಗಳ ಸುರಿಮಳೆಯಾಯಿತು.

ಮೀಮ್ಸ್​ ಸೃಷ್ಟಿ

ಅಷ್ಟೇ ಅಲ್ಲದೆ, ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಮೀಮ್‌ಗಳ ಸೃಷ್ಟಿಗೂ ಕಾರಣವಾಯಿತು. ಬಗೆ ಬಗೆಯ ಮೀಮ್ಸ್​ಗಳು ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರನ್ನು ನಗಿಸುತ್ತಿವೆ. ಮೈದಾನದಲ್ಲಿ ನೆರೆದಿದ್ದ ಪ್ರತಿಯೊಬ್ಬರು ಸಹ ನಗುವಿನ ಅಲೆಯಲ್ಲಿ ತೇಲಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯ ಕೂಡ ಟ್ವಿಟ್ಟರ್‌ನಲ್ಲಿ ಕಿಚಾಯಿಸಿದೆ.

ಕೆಲ ಸಮಯದ ನಂತರ ಇಲ್ಲಿಂಗ್‌ವರ್ತ್ ಹೊರಬಂದರು. ಪ್ರೇಕ್ಷಕರು ಹರ್ಷೋದ್ಗಾರಗಳು ಮತ್ತು ಚಪ್ಪಾಳೆಗಳಿಂದ ಅವರನ್ನು ಸ್ವಾಗತಿಸಿದರು. ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ನಡೆಸುತ್ತಿತ್ತು. ಮಿಚೆಲ್ ಮಾರ್ಷ್​ ಉತ್ತಮವಾಗಿ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದರು.

ಮೂರನೇ ದಿನದಾಟ ಮುಕ್ತಾಯ

ಸದ್ಯ 3ನೇ ದಿನದಾಟ ಮುಕ್ತಾಯಗೊಂಡಿದೆ. ಮೆಲ್ಬರ್ನ್​ ಕ್ರಿಕೆಟ್ ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಪಾಕ್​, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಪರಿಣಾಮ ಮೊದಲ ಇನ್ನಿಂಗ್ಸ್​​ನಲ್ಲಿ ಆಸ್ಟ್ರೇಲಿಯಾ 314 ರನ್ ಗಳಿಗೆ ಆಲೌಟ್​ ಆಯಿತು.

ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ ಪಾಕ್​, ಮತ್ತೆ ಕಳಪೆ ನಿರಾಸೆ ಮೂಡಿಸಿತು. 264 ರನ್​​ಗೆ ಸರ್ವಪತನ ಕಂಡು 54 ರನ್​ಗಳ ಹಿನ್ನಡೆ ಅನುಭವಿಸಿತು. ಈಗ ಆಸೀಸ್​​ 2ನೇ ಇನ್ನಿಂಗ್ಸ್​​​ನಲ್ಲಿ 54 ರನ್​ಗಳ ಮುನ್ನಡೆಯಿಂದ 6 ವಿಕೆಟ್​ಗೆ 241 ರನ್ ಗಳಿಸಿದೆ. ನಾಲ್ಕನೇ ದಿನವೂ ಬ್ಯಾಟಿಂಗ್​ ಮುಂದುವರೆಸಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ