logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಬರ್ ಅಜಮ್​ ನೇಪಾಳ ತಂಡದಲ್ಲೂ ಸ್ಥಾನ ಪಡೆಯಲು ಯೋಗ್ಯರಲ್ಲ; ಅವಮಾನಿಸಿದ ಪಾಕ್ ಹಿರಿಯ ಕ್ರಿಕೆಟಿಗ, ವಿಡಿಯೋ

ಬಾಬರ್ ಅಜಮ್​ ನೇಪಾಳ ತಂಡದಲ್ಲೂ ಸ್ಥಾನ ಪಡೆಯಲು ಯೋಗ್ಯರಲ್ಲ; ಅವಮಾನಿಸಿದ ಪಾಕ್ ಹಿರಿಯ ಕ್ರಿಕೆಟಿಗ, ವಿಡಿಯೋ

Prasanna Kumar P N HT Kannada

Jul 04, 2024 09:20 AM IST

google News

ಬಾಬರ್ ಅಜಮ್​ ನೇಪಾಳ ತಂಡದಲ್ಲೂ ಸ್ಥಾನ ಪಡೆಯಲು ಯೋಗ್ಯರಲ್ಲ; ಅವಮಾನಿಸಿದ ಪಾಕ್ ಹಿರಿಯ ಕ್ರಿಕೆಟಿಗ

    • Babar Azam : ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿದ ಬಾಬರ್ ಅಜಮ್ ವಿರುದ್ಧ ಶೋಯೆಬ್ ಮಲಿಕ್ ಕಿಡಿಕಾರಿದ್ದು, ನೇಪಾಳ ತಂಡದಲ್ಲೂ ಅವರಿಗೆ ಸ್ಥಾನ ಸಿಗಲ್ಲ ಎಂದು ಅವಮಾನಿಸಿದ್ದಾರೆ.
ಬಾಬರ್ ಅಜಮ್​ ನೇಪಾಳ ತಂಡದಲ್ಲೂ ಸ್ಥಾನ ಪಡೆಯಲು ಯೋಗ್ಯರಲ್ಲ; ಅವಮಾನಿಸಿದ ಪಾಕ್ ಹಿರಿಯ ಕ್ರಿಕೆಟಿಗ
ಬಾಬರ್ ಅಜಮ್​ ನೇಪಾಳ ತಂಡದಲ್ಲೂ ಸ್ಥಾನ ಪಡೆಯಲು ಯೋಗ್ಯರಲ್ಲ; ಅವಮಾನಿಸಿದ ಪಾಕ್ ಹಿರಿಯ ಕ್ರಿಕೆಟಿಗ

ಪಾಕಿಸ್ತಾನ ತಂಡದ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಅವರು ನಾಯಕ ಬಾಬರ್ ಅಜಮ್ (Babar Azam) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿ (T20 World Cup 2024) ಮುಗಿದರೂ ಕಳಪೆ ಪ್ರದರ್ಶನ ನೀಡಿದ ಪಾಕಿಸ್ತಾನ ತಂಡದ (Pakistan Cricket Team) ವಿರುದ್ಧ ಟೀಕೆಗಳು ಮಾತ್ರ ನಿಂತಿಲ್ಲ. ಅದರಲ್ಲೂ ನಾಯಕ ಬಾಬರ್ ವಿರುದ್ಧ ಮಾಜಿ ಕ್ರಿಕೆಟರ್​ಗಳು ಕಿಡಿಕಾರುತ್ತಿದ್ದಾರೆ. ಈ ಟೀಕೆಗಳ ನಡುವೆ ಮಲಿಕ್, ಬಾಬರ್ ಅವರನ್ನು ಅವಮಾನಿಸಿದ್ದಾರೆ.

ಟಿ20 ವಿಶ್ವಕಪ್​ನಲ್ಲಿ ಪಾಕ್ ಸಾಧಾರಣ ಪ್ರದರ್ಶನ ನೀಡಿದೆ. ಅಮೆರಿಕ ಮತ್ತು ಭಾರತ ವಿರುದ್ಧ ಸೋತು ಗ್ರೂಪ್ ಹಂತದಲ್ಲೇ ಹೊರಬಿದ್ದಿತ್ತು. ನಂತರ ಕೆನಡಾ ಮತ್ತು ಐರ್ಲೆಂಡ್ ಎದುರು ಗೆಲುವು ಸಾಧಿಸಿತ್ತು. ಆದರೆ ಸೂಪರ್​-8 ಪ್ರವೇಶಿಸಲು ವಿಫಲವಾಯಿತು. ಪಾಕ್ ಬದಲಿಗೆ ಯುಎಸ್​ಎ ಮುಂದಿನ ಹಂತಕ್ಕೆ ಅರ್ಹತೆ ಪಡೆದಿತ್ತು. ಇದರೊಂದಿಗೆ 2022ರಲ್ಲಿ ರನ್ನರ್​ಅಪ್​ ಆಗಿದ್ದ ಬಾಬರ್ ಪಡೆ, ಈ ಬಾರಿ ತೀವ್ರ ಮುಖಭಂಗಕ್ಕೆ ಒಳಗಾಯಿತು. ಟೀಕೆಗೂ ಗುರಿಯಾಯಿತು.

ಬಾಬರ್ ವಿರುದ್ಧ ಮಲಿಕ್ ವಾಗ್ದಾಳಿ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರ ವಿಡಿಯೋ ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶೋಯೆಬ್ ಮಲಿಕ್ ಟಿ20 ವಿಶ್ವಕಪ್ 2024 ಬಗ್ಗೆ ಮಾತನಾಡಿದ್ದಾರೆ. ಅವರ ಸಂಭಾಷಣೆಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಾಬರ್ ನೇಪಾಳ ತಂಡದಲ್ಲಿರಲೂ ಸಹ ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ.

ಶೋಯೆಬ್ ಮಾತನಾಡುತ್ತಾ, ನಮ್ಮ ಅತ್ಯುತ್ತಮ ಆಟಗಾರ ಯಾರು? ಎಲ್ಲರೂ ಹೇಳುವುದು ಬಾಬರ್ ಅಜಮ್ ಎಂದು. ಆದರೆ, ಅವರು ಟಾಪ್​ ತಂಡಗಳಲ್ಲಿ ಸ್ಥಾನ ಪಡೆಯಲು ಅರ್ಹರೇ? ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮುಂತಾದ ಯಾವುದೇ ಅಗ್ರ ಅಂತಾರಾಷ್ಟ್ರೀಯ ತಂಡದ ಪ್ಲೇಯಿಂಗ್​​ 11ನಲ್ಲಿ ಬಾಬರ್ ಸ್ಥಾನ ಪಡೆಯಲು ಅರ್ಹರಲ್ಲ. ನೇಪಾಳ ಕೂಡ ಬಾಬರ್ ಅವರನ್ನು ತಮ್ಮ ತಂಡದಲ್ಲಿ ಆಯ್ಕೆ ಮಾಡುವುದಿಲ್ಲ ಎಂದು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಬಾಬರ್ ಅಜಮ್ ಅವರು ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ಅತ್ಯಂತ ಕೆಟ್ಟ ಟಿ20 ವಿಶ್ವಕಪ್ ಹೊಂದಿದ್ದಾರೆ. ಬಾಬರ್ 4 ಪಂದ್ಯಗಳಲ್ಲಿ 101.66 ಸರಾಸರಿ ಸ್ಟ್ರೈಕ್ ರೇಟ್‌ನಲ್ಲಿ 122 ರನ್ ಗಳಿಸಿದರು. ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅರ್ಧಶತಕ ಗಳಿಸಲು ಸಾಧ್ಯವಾಗಲಿಲ್ಲ. ಬಾಬರ್ ಅಜಮ್ ಅವರ ಸ್ಟ್ರೈಕ್ ಸಾಕಷ್ಟು ಕಡಿಮೆಯಾಗಿದೆ. ಪಂದ್ಯಾವಳಿಯುದ್ದಕ್ಕೂ ಅವರ ಸ್ಟ್ರೈಕ್ ರೇಟ್ ಅನ್ನು ನಿರಂತರವಾಗಿ ಟೀಕಿಸಲಾಯಿತು.

ವಿಶ್ವದ ಅಗ್ರ ತಂಡಗಳಲ್ಲಿ ಒಂದಾದ ಪಾಕಿಸ್ತಾನ ತಂಡವು ಅನುಭವಿ ಆಟಗಾರರನ್ನು ಹೊಂದಿದೆ. ಅಂತಹ ತಂಡವು ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ ಸೋಲು ಅನುಭವಿಸಿತು. ಸೂಪರ್​​ ಓವರ್​​ನಲ್ಲಿ ಶರಣಾಗಿ ಅಚ್ಚರಿ ಮೂಡಿಸಿತ್ತು. ಆ ಬಳಿಕ ಪಾಕಿಸ್ತಾನ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ 120 ರನ್‌ಗಳ ಅಲ್ಪ ಗುರಿಯನ್ನು ಸಾಧಿಸಲು ವಿಫಲವಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ