ಕನ್ನಡ ಸುದ್ದಿ  /  ಕ್ರೀಡೆ  /  ಯಪ್ಪಾ! ಇದೇನು ಫುಟ್ಬಾಲ್ ಕ್ರೇಜ್; ಅಂತ್ಯಸಂಸ್ಕಾರ ನಿಲ್ಲಿಸಿ ಚೀಲಿ Vs ಪೆರು ಪಂದ್ಯ ವೀಕ್ಷಿಸಿದ ಕುಟುಂಬ ಸದಸ್ಯರು, ವಿಡಿಯೋ

ಯಪ್ಪಾ! ಇದೇನು ಫುಟ್ಬಾಲ್ ಕ್ರೇಜ್; ಅಂತ್ಯಸಂಸ್ಕಾರ ನಿಲ್ಲಿಸಿ ಚೀಲಿ vs ಪೆರು ಪಂದ್ಯ ವೀಕ್ಷಿಸಿದ ಕುಟುಂಬ ಸದಸ್ಯರು, ವಿಡಿಯೋ

Chile Vs Peru : ಮೃತ ವ್ಯಕ್ತಿಯ ಅಂತ್ಯಸಂಸ್ಕಾರ ಮಾಡದೆ ಆ ಕುಟುಂಬ ಸದಸ್ಯರು ಕೋಪಾ ಅಮೆರಿಕ ಟೂರ್ನಿಯ ಚೀಲಿ vs ಪೆರು ನಡುವಿನ ಪಂದ್ಯವನ್ನು ಕಣ್ತುಂಬಿಕೊಂಡ ಘಟನೆ ನಡೆದಿದೆ.

ಇದೇನು ಫುಟ್ಬಾಲ್ ಕ್ರೇಜ್; ಅಂತ್ಯಸಂಸ್ಕಾರ ನಿಲ್ಲಿಸಿ ಚೀಲಿ vs ಪೆರು ಪಂದ್ಯ ವೀಕ್ಷಿಸಿದ ಕುಟುಂಬ ಸದಸ್ಯರು, ವಿಡಿಯೋ
ಇದೇನು ಫುಟ್ಬಾಲ್ ಕ್ರೇಜ್; ಅಂತ್ಯಸಂಸ್ಕಾರ ನಿಲ್ಲಿಸಿ ಚೀಲಿ vs ಪೆರು ಪಂದ್ಯ ವೀಕ್ಷಿಸಿದ ಕುಟುಂಬ ಸದಸ್ಯರು, ವಿಡಿಯೋ

ಭಾರತದಲ್ಲಿ ಕ್ರಿಕೆಟ್​ಗೆ ಎಷ್ಟು ಪ್ರೀತಿ ಇದೆಯೋ, ಜಗತ್ತಿನ ಹಲವು ದೇಶಗಳಲ್ಲಿ ಫುಟ್ಬಾಲ್​ಗೂ ಅಷ್ಟೇ ಪ್ರೀತಿ ಇದೆ. ಏನೇ ಕೆಲಸವಿದ್ದರೂ ಅದೆಲ್ಲವನ್ನೂ ಬದಿಗಿಟ್ಟು ಫುಟ್ಬಾಲ್ ಪಂದ್ಯ ಕಣ್ತುಂಬಿಕೊಳ್ಳುತ್ತಾರೆ ಫುಟ್ಬಾಲ್ ಪ್ರೇಮಿಗಳು. ವಿಶ್ವ ಮಟ್ಟದಲ್ಲಿ ಫುಟ್ಬಾಲ್ ಕ್ರೇಜ್ ಹೇಗಿದೆ ಎಂಬುದಕ್ಕೆ ಇತ್ತೀಚೆಗೆ ಘಟನೆಯೊಂದು ನಡೆದಿದೆ. ಮನೆಯಲ್ಲಿ ದುಃಖದ ಛಾಯೆ ಆವರಿಸಿದ್ದರೂ ಪಂದ್ಯ ನೋಡುವುದನ್ನು ನಿಲ್ಲಿಸಿಲ್ಲ.

ಕುಟುಂಬವೊಂದರಲ್ಲಿ ಒಬ್ಬ ಪ್ರಮುಖ ವ್ಯಕ್ತಿ ನಿಧನರಾಗಿದ್ದ ಕಾರಣ ಅಂತ್ಯಕ್ರಿಯೆ ಕಾರ್ಯಕ್ರಮಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ಇದ್ದಕ್ಕಿದ್ದಂತೆ ಮನೆಯಲ್ಲಿ ಅಂತ್ಯಕ್ರಿಯೆ ಕೆಲಸವೇ ನಿಂತುಹೋಯಿತು. ಎಲ್ಲರೂ ಕುರ್ಚಿಗಳಲ್ಲಿ ಕೂತು ಎಂಜಾಯ್ ಮಾಡುತ್ತಿದ್ದರು. ಏಕೆಂದರೆ, ಫುಟ್ಬಾಲ್ ಪಂದ್ಯವನ್ನು ಪ್ರಸಾರ ಮಾಡಲಾಗುತ್ತಿತ್ತು. ಮೃತ ದೇಹಕ್ಕೆ ಮಾಡಬೇಕಾದ ಅಂತ್ಯಕ್ರಿಯೆಯ ವಿಧಿ ವಿಧಾನಗಳನ್ನು ಬಿಟ್ಟು ಇಡೀ ಕುಟುಂಬ ಫುಟ್ಬಾಲ್ ಪಂದ್ಯ ವೀಕ್ಷಣೆಯಲ್ಲಿ ಮಗ್ನವಾಗಿತ್ತು.

ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಣೆ

ದೊಡ್ಡ ಪರದೆಯಲ್ಲಿ ಪ್ರಸಾರ ಮಾಡಲಾದ ಪಂದ್ಯ ನೋಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಘಟನೆ ದಕ್ಷಿಣ ಅಮೆರಿಕಾದಲ್ಲಿ ನಡೆದಿದೆ. ಚಿಲಿ ಮತ್ತು ಪೆರು ನಡುವೆ ಕೋಪಾ ಅಮೆರಿಕಾ ಫುಟ್ಬಾಲ್ ಪಂದ್ಯ ನಡೆಯುತ್ತಿತ್ತು. ಮತ್ತೊಂದೆಡೆ ಕುಟುಂಬದಲ್ಲಿ ಶೋಕ ಆವರಿಸಿತ್ತು. ಶವವನ್ನು ಶವಪೆಟ್ಟಿಗೆಯಲ್ಲಿ ಇರಿಸಲಾಯಿತು. ಈ ವೇಳೆ ಟಿವಿಯಲ್ಲಿ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಶವಪೆಟ್ಟಿಗೆ ಇರಿಸಲಾಗಿದ್ದ ಕೊಠಡಿಯಲ್ಲಿ ಬೃಹತ್ ಪ್ರೊಜೆಕ್ಟರ್ ಪರದೆಯ ಮೇಲೆ ಪಂದ್ಯದ ಪ್ರಸಾರ ಮಾಡಲಾಗಿದೆ. ಇದರೊಂದಿಗೆ ಕುಟುಂಬ ಸದಸ್ಯರು ಹಾಗೂ ಅತಿಥಿಗಳೆಲ್ಲರೂ ಚಿಲಿಯ ಜರ್ಸಿ ಧರಿಸಿ ಪಂದ್ಯ ವೀಕ್ಷಿಸಿದರು. ಶವಪೆಟ್ಟಿಗೆಯ ಮೇಲೆ ಚಿಲಿ ಜರ್ಸಿಯ ಜೊತೆಗೆ ಹೂಗುಚ್ಛವನ್ನೂ ಇರಿಸಲಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೃತರು ಫುಟ್ಬಾಲ್ ಅಭಿಮಾನಿಯಾಗಿರಬಹುದು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

ಅಂತ್ಯಕ್ರಿಯೆಯ ಸಮಯದಲ್ಲಿ ಮರಣಿಸಿದ ವ್ಯಕ್ತಿಯ ಇಷ್ಟಾರ್ಥವನ್ನು ಕುಟುಂಬ ಸದಸ್ಯರು ಈಡೇರಿಸಿದ್ದಾರೆ ಎಂದು ಕಾಮೆಂಟ್ ಹಾಕಿದ್ದಾರೆ. ಮತ್ತೊಬ್ಬ ಅವರೊಂದಿಗೆ ಕಳೆದ ಮ್ಯಾಚ್ ನೋಡಿದ್ದೇನೆ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸ್ಕೋರ್ ನೋಡಿಯೂ ಆತ ಎದ್ದು ಕೂರದಿದ್ದರೆ ನಿಜವಾಗಿಯೂ ಸತ್ತಂತೆ ಎಂದು ತಮಾಷೆಯ ಕಮೆಂಟ್ ಕೂಡ ಹಾಕಿದ್ದಾರೆ. ಪಂದ್ಯ ಇಲ್ಲದ ದಿನದಂದು ಅಂತ್ಯಕ್ರಿಯೆಯನ್ನು ನಿಗದಿಪಡಿಸಬೇಕು ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ.

ಜೂನ್ 30ರಂದು ಕೋಪಾ ಅಮೆರಿಕಾ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಚೀಲಿ ಮತ್ತು ಪೆರು ತಂಡಗಳು ಸೆಣಸಾಟ ನಡೆಸಿದ್ದವು. ಆದರೆ ಉಭಯ ತಂಡಗಳು ಒಂದು ಗೋಲು ಗಳಿಸದ ಕಾರಣ ಡ್ರಾನಲ್ಲಿ ಕೊನೆಗೊಂಡಿತು. ಲೀಗ್​ನ ಎ ಗುಂಪಿನಲ್ಲಿ ಚೀಲಿ ಮತ್ತು ಪೆರು ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಚೀಲಿ ಆಡಿರುವ ಮೂರು ಪಂದ್ಯಗಳಲ್ಲಿ 2 ಡ್ರಾ ಮತ್ತು 1 ಸೋಲು ಕಂಡು 2 ಅಂಕ ಸಂಪಾದಿಸಿದೆ. ಪೆರು 1 ಡ್ರಾ ಮತ್ತು 2 ಸೋಲು ಕಂಡು 1 ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿ ಅರ್ಜೆಂಟೇನಾ ಸ್ಥಾನ ಪಡೆದಿದೆ.  ಆಡಿದ ಮೂರಕ್ಕೆ ಮೂರು ಗೆದ್ದು 6 ಅಂಕ ಪಡೆದಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.