ಕೆಕೆಆರ್ vs ಪಿಬಿಕೆಎಸ್ ಪಂದ್ಯದಲ್ಲಿ ಬ್ಯಾಟರ್ಗಳ ಆರ್ಭಟ; ಹಲವು ವಿಶ್ವದಾಖಲೆಗಳು ದಾಖಲು, ಇಲ್ಲಿದೆ ನೋಡಿ ಪಟ್ಟಿ
Apr 27, 2024 06:27 AM IST
ಕೆಕೆಆರ್ vs ಪಿಬಿಕೆಎಸ್ ಪಂದ್ಯದಲ್ಲಿ ಬ್ಯಾಟರ್ಗಳ ಆರ್ಭಟ; ಹಲವು ವಿಶ್ವದಾಖಲೆಗಳು ದಾಖಲು, ಇಲ್ಲಿದೆ ನೋಡಿ ಪಟ್ಟಿ
- KKR vs PBKS World Records : ಐಪಿಎಲ್ನ 42ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯವು ಹಲವು ವಿಶ್ವದಾಖಲೆಗಳಿಗೆ ಸಾಕ್ಷಿಯಾಗಿದೆ. ಅವುಗಳ ಪಟ್ಟಿಯನ್ನು ಈ ಮುಂದೆ ನೋಡೋಣ.
ಸೀಸನ್-17ರ ಐಪಿಎಲ್ನ 42ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ದಾಖಲೆಯ 262 ರನ್ಗಳ ಗುರಿಯನ್ನು ಬೆನ್ನಟ್ಟಿ ಗೆಲ್ಲುವ ಮೂಲಕ ಐಪಿಎಲ್ ಮತ್ತು ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದೆ. ಕೋಲ್ಕತ್ತಾದ ನೈಟ್ ರೈಡರ್ಸ್ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 261 ರನ್ ಕಲೆ ಹಾಕಿತ್ತು. ಈ ಗುರಿ ಚೇಸ್ ಮಾಡಿದ ಪಂಜಾಬ್ 18.4 ಓವರ್ಗಳಲ್ಲಿ ಗೆದ್ದು ಇತಿಹಾಸ ನಿರ್ಮಿಸಿತು. ಆ ಮೂಲಕ ಹಲವು ವಿಶ್ವದಾಖಲೆಗಳು ನಿರ್ಮಾಣಗೊಂಡಿವೆ.
ಕೆಕೆಆರ್ ಪರ ಸುನಿಲ್ ನರೇನ್ 71 ಮತ್ತು ಫಿಲ್ ಸಾಲ್ಟ್ 75 ರನ್ ಬಾರಿಸಿದರೆ, ಪಂಜಾಬ್ ಪರ ಜಾನಿ ಬೈರ್ಸ್ಟೋ 108*, ಶಶಾಂಕ್ ಸಿಂಗ್ 68* ಮತ್ತು ಪ್ರಭುಸಿಮ್ರಾನ್ ಸಿಂಗ್ 54 ರನ್ ಗಳಿಸಿ ಎದುರಾಳಿ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದರು. ಎರಡೂ ತಂಡಗಳ ಪರ ಆರಂಭಿಕರಿಬ್ಬರು ಅರ್ಧಶತಕ ಸಿಡಿಸಿರುವ ಘಟನೆ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ. ಪಂದ್ಯದಲ್ಲಿ ದಾಖಲಾದ ವಿಶ್ವದಾಖಲೆಗಳ ಪಟ್ಟಿ ಇಲ್ಲಿದೆ.
ಟಿ20 ಇತಿಹಾಸದ ರನ್ ಚೇಸ್‌ನಲ್ಲಿ ದಾಖಲಾದ ಅತ್ಯಧಿಕ ಸ್ಕೋರ್
262/2 - ಪಿಬಿಕೆಎಸ್ vs ಕೆಕೆಆರ್, ಕೋಲ್ಕತ್ತಾ, ಐಪಿಎಲ್ 2024 (ಹೊಸ ಸೇರ್ಪಡೆ)
262/7 - ಆರ್ಸಿಬಿ vs ಎಸ್ಆರ್ಹೆಚ್, ಬೆಂಗಳೂರು, ಐಪಿಎಲ್ 2024
259/4 - ಸೌತ್ ಆಫ್ರಿಕಾ vs ವೆಸ್ಟ್ ಇಂಡೀಸ್, ಸೆಂಚೂರಿಯನ್, 2023
254/3 - ಮಿಡಲ್‌ಸೆಕ್ಸ್ vs ಸರ್ರೆ, ದಿ ಓವಲ್, ಟಿ20 ಬ್ಲಾಸ್ಟ್ 2023
253/8 - ಕ್ವೆಟ್ಟಾ ಗ್ಲಾಡಿಯೇಟರ್ಸ್ vs ಮುಲ್ತಾನ್ ಸುಲ್ತಾನ್, ರಾವಲ್ಪಿಂಡಿ, ಪಿಎಸ್ಎಲ್ 2023
ಐಪಿಎಲ್ ಇನ್ನಿಂಗ್ಸ್‌ನಲ್ಲಿ ದಾಖಲಾದ ಅತಿ ಹೆಚ್ಚು ಸಿಕ್ಸರ್‌ಗಳು
24 - ಪಿಬಿಕೆಎಸ್ vs ಕೆಕೆಆರ್, ಕೋಲ್ಕತ್ತಾ, 2024 (ಹೊಸ ಸೇರ್ಪಡೆ)
22 - ಎಸ್ಆರ್ಹೆಚ್ vs ಆರ್ಸಿಬಿ, ಬೆಂಗಳೂರು, 2024
22 - ಎಸ್ಆರ್ಹೆಚ್ vs ಡಿಸಿ, ದೆಹಲಿ, 2024
21 - ಆರ್ಸಿಬಿ vs ಪಿಡಬ್ಲ್ಯುಐ, ಬೆಂಗಳೂರು, 2013
ಏಷ್ಯನ್ ಗೇಮ್ಸ್ನಲ್ಲಿ ನೇಪಾಳ ತಂಡವು ಮಂಗೋಲಿಯಾ ವಿರುದ್ಧ 314 ರನ್ ಬಾರಿಸಿದ್ದ ಅವಧಿಯಲ್ಲಿ 26 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದೆ.
ಪುರುಷರ ಟಿ20 ಪಂದ್ಯವೊಂದರಲ್ಲಿ ಸಿಡಿಸಿದ ಅತ್ಯಧಿಕ ಸಿಕ್ಸರ್ಸ್
42 - ಕೆಕೆಆರ್ vs ಪಿಬಿಕೆಎಸ್, ಕೋಲ್ಕತ್ತಾ, ಐಪಿಎಲ್ 2024 (ಹೊಸ ಸೇರ್ಪಡೆ)
38 - ಎಸ್ಆರ್ಹೆಚ್ vs ಎಂಐ, ಹೈದರಾಬಾದ್, ಐಪಿಎಲ್ 2024
38 - ಆರ್ಸಿಬಿ vs ಎಸ್ಆರ್ಹೆಚ್ , ಬೆಂಗಳೂರು, ಐಪಿಎಲ್ 2024
37 - ಬಾಲ್ಖ್ ಲೆಜೆಂಡ್ಸ್ vs ಕಾಬೂಲ್ ಜ್ವಾನನ್, ಶಾರ್ಜಾ, ಎಪಿಎಲ್ 2018/19
37 - ಎಸ್ಕೆಎನ್ಪಿ vs ಜೆಟಿ, ಬಾಸ್ಸೆಟೆರೆ, ಸಿಪಿಎಲ್ 2019
ಐಪಿಎಲ್ ಪಂದ್ಯವೊಂದರಲ್ಲಿ ದಾಖಲಾದ ಅತ್ಯಧಿಕ ಮೊತ್ತ
549 - ಆರ್ಸಿಬಿ vs ಎಸ್ಆರ್ಹೆಚ್, ಬೆಂಗಳೂರು, 2024
523 - ಎಸ್ಆರ್ಹೆಚ್ vs ಎಂಐ, ಹೈದರಾಬಾದ್, 2024
523 - ಕೆಕೆಆರ್ vs ಪಿಬಿಕೆಎಸ್, ಕೋಲ್ಕತ್ತಾ, 2024 (ಹೊಸ ಸೇರ್ಪಡೆ)
469 - ಸಿಎಸ್ಕೆ vs ಆರ್ಆರ್, ಚೆನ್ನೈ, 2010
465 - ಡಿಸಿ vs ಎಸ್ಆರ್ಹೆಚ್, ದೆಹಲಿ, 2024
ಐಪಿಎಲ್‌ನಲ್ಲಿ ದಾಖಲಾದ ಯಶಸ್ವಿ ಗರಿಷ್ಠ ಚೇಸಿಂಗ್
262 - ಪಿಬಿಕೆಎಸ್ vs ಕೆಕೆಆರ್, ಕೋಲ್ಕತ್ತಾ, 2024 (ಹೊಸ ಸೇರ್ಪಡೆ)
224 - ಆರ್ಆರ್ vs ಪಿಬಿಕೆಎಸ್, ಶಾರ್ಜಾ, 2020
224 - ಆರ್ಆರ್ vs ಕೆಕೆಆರ್, ಕೋಲ್ಕತ್ತಾ, 2024
219 - ಎಂಐ vs ಸಿಎಸ್ಕೆ, ದೆಹಲಿ, 2021
ಪುರುಷರ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಗರಿಷ್ಠ ಚೇಸಿಂಗ್
262 - ಪಂಜಾಬ್ ಕಿಂಗ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್, ಕೋಲ್ಕತ್ತಾ, ಐಪಿಎಲ್ 2024 (ಹೊಸ ಸೇರ್ಪಡೆ)
259 - ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ ಇಂಡೀಸ್, ಸೆಂಚುರಿಯನ್, 2023
253 - ಮಿಡಲ್‌ಸೆಕ್ಸ್ ವಿರುದ್ಧ ಸರ್ರೆ, ದಿ ಓವಲ್, T20 ಬ್ಲಾಸ್ಟ್
ಆಸ್ಟ್ರೇಲಿಯಾ ವಿರುದ್ಧ 24423 , ಆಕ್ಲೆಂಡ್, 2018
243 - ಬಲ್ಗೇರಿಯಾ vs ಸೆರ್ಬಿಯಾ, ಸೋಫಿಯಾ, 2022
243 - ಮುಲ್ತಾನ್ ಸುಲ್ತಾನ್ಸ್ ವಿರುದ್ಧ ಪೇಶಾವರ್ ಝಲ್ಮಿ, ರಾವಲ್ಪಿಂಡಿ, PSL 2023
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ