ಕನ್ನಡ ಸುದ್ದಿ  /  ಕ್ರಿಕೆಟ್  /  ವಯಸ್ಸಾದಂತೆ ನಿಮ್ಮ ಫಾರ್ಮ್​ ಮರೆತುಬಿಡ್ತಾರೆ; ಕೊಹ್ಲಿ-ರೋಹಿತ್ ನಿವೃತ್ತಿ ಕುರಿತು ಯುವರಾಜ್ ಸಿಂಗ್ ಮಹತ್ವದ ಹೇಳಿಕೆ

ವಯಸ್ಸಾದಂತೆ ನಿಮ್ಮ ಫಾರ್ಮ್​ ಮರೆತುಬಿಡ್ತಾರೆ; ಕೊಹ್ಲಿ-ರೋಹಿತ್ ನಿವೃತ್ತಿ ಕುರಿತು ಯುವರಾಜ್ ಸಿಂಗ್ ಮಹತ್ವದ ಹೇಳಿಕೆ

Yuvraj Singh on Rohit Sharma and Virat Kohli: ಟಿ20 ವಿಶ್ವಕಪ್ ನಂತರ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಭವಿಷ್ಯದ ಬಗ್ಗೆ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿವರವಾಗಿ ಮಾತನಾಡಿದ್ದಾರೆ.

ವಯಸ್ಸಾದಂತೆ ನಿಮ್ಮ ಫಾರ್ಮ್​ ಮರೆತುಬಿಡ್ತಾರೆ; ಟಿ20 ವಿಶ್ವಕಪ್ ನಂತರ ಕೊಹ್ಲಿ-ರೋಹಿತ್ ಬಗ್ಗೆ ಯುವರಾಜ್ ಸಿಂಗ್ ಭವಿಷ್ಯ
ವಯಸ್ಸಾದಂತೆ ನಿಮ್ಮ ಫಾರ್ಮ್​ ಮರೆತುಬಿಡ್ತಾರೆ; ಟಿ20 ವಿಶ್ವಕಪ್ ನಂತರ ಕೊಹ್ಲಿ-ರೋಹಿತ್ ಬಗ್ಗೆ ಯುವರಾಜ್ ಸಿಂಗ್ ಭವಿಷ್ಯ

2024ರ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ಭಾರತದ 15 ಸದಸ್ಯರ ತಂಡದಲ್ಲಿ ಹಿರಿಯರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಇಬ್ಬರೂ ಅವಕಾಶ ಪಡೆಯುವುದು ಖಚಿತ. ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಏಪ್ರಿಲ್ 26ರ ಗುರುವಾರ ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಸಿಡಿಸಿದರೂ ಅವರ ಪ್ರದರ್ಶನ ಸಾಕಷ್ಟು  ಟೀಕೆ ವ್ಯಕ್ತವಾಗಿದೆ. ಈ ಟೀಕೆಗೆ ಕಾರಣ ಅವರ ಸ್ಟ್ರೈಕ್​​ರೇಟ್. ವಿರಾಟ್ ಕೇವಲ 118ರ ಬ್ಯಾಟಿಂಗ್ ಸ್ಟ್ರೈಕ್​ರೇಟ್​ನಲ್ಲಿ 43 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 51 ರನ್ ಬಾರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಇಬ್ಬರೂ ಆಟಗಾರರು ಪರಿಣಾಮಕಾರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ 35 ವರ್ಷದ ಆರ್​ಸಿಬಿ ಸ್ಟಾರ್ ಈ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಅನ್ನು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ ನಂತರ ರೋಹಿತ್ ಮತ್ತು ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​​ನ ಕಿರು ಸ್ವರೂಪದಿಂದ ದೂರವಿದ್ದರು. 2023ರಲ್ಲಿ ಒಂದೇ ಒಂದು ಟಿ20 ಪಂದ್ಯವನ್ನಾಡದ ಹಿರಿಯ ಕ್ರಿಕೆಟರ್ಸ್, ಈ ವರ್ಷ ಅಫ್ಘಾನಿಸ್ತಾನ ವಿರುದ್ಧದ ತಂಡದ ಟಿ20ಐ ಸರಣಿಗೆ ಮರಳಿದ್ದರು. 

ಸರಣಿಯಲ್ಲಿ ಸತತ ಎರಡು ಡಕ್​​ಗಳ ನಂತರ ರೋಹಿತ್ ಅದ್ಭುತ ಶತಕ ಸಿಡಿಸಿ ಟಿ20 ವಿಶ್ವಕಪ್​ಗೆ ನಾನು ರೆಡಿ ಎಂಬ ಸಂದೇಶವನ್ನು ರವಾನಿಸಿದ್ದರು. ಮುಂಬರುವ ಟಿ20 ವಿಶ್ವಕಪ್ ಯುಎಸ್​​ಎ ಮತ್ತು ವೆಸ್ಟ್ ಇಂಡೀಸ್​ನಲ್ಲಿ ನಡೆಯಲಿದ್ದು, ಇಲ್ಲಿ ಪಿಚ್​​ಗಳು ನಿಧಾನವಾಗಿರಲಿವೆ. ಹಾಗಾಗಿ ಭಾರತದ ವಿಶ್ವಕಪ್ ತಂಡಕ್ಕೆ ಈ ಇಬ್ಬರ ಅಗತ್ಯ ಇದೆ ಎಂದು ಅನೇಕರು ಹೇಳಿದ್ದಾರೆ. ಭಾರತದ ಮಾಜಿ ಆಲ್​ರೌಂಡರ್ ಯುವರಾಜ್ ಸಿಂಗ್ ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೊಹ್ಲಿ-ರೋಹಿತ್ ಬಗ್ಗೆ ಯುವರಾಜ್ ಸಿಂಗ್ ಭವಿಷ್ಯ

ಆದರೆ ಟಿ20 ವಿಶ್ವಕಪ್ ನಂತರದ ರೋಹಿತ್ ಮತ್ತು ಕೊಹ್ಲಿಯ ನಿವೃತ್ತಿ ಬಗ್ಗೆ ಯುವಿ ವಿವರವಾಗಿ ಮಾತನಾಡಿದ್ದಾರೆ. ವಯಸ್ಸಾದಂತೆ ಅವರ ಫಾರ್ಮ್ ಅನ್ನು ಲೆಕ್ಕಿಸದೆ ಅವರ ವಯಸ್ಸಿನ ಬಗ್ಗೆಯೇ ಹೆಚ್ಚು ಗಮನ ಹರಿಸಲಾಗುತ್ತದೆ ಎಂದು ಯುವರಾಜ್ ಬ್ಯಾಟಿಂಗ್ ಜೋಡಿಗೆ ಎಚ್ಚರಿಕೆ ನೀಡಿದ್ದಾರೆ. ಭಾರತವು ಭವಿಷ್ಯದ ತಂಡವನ್ನು ರೂಪಿಸುವತ್ತ ಗಮನ ಹರಿಸಬೇಕು ಎಂದಿರುವ ಯುವಿ, ವಿಶ್ವಕಪ್ ಮುಗಿದ ನಂತರ ಕೊಹ್ಲಿ ಮತ್ತು ರೋಹಿತ್ ಟಿ20ಐ ಕ್ರಿಕೆಟ್​ನಿಂದ ತೆಗೆದುಹಾಕಬೇಕು ಎಂಬ ಸುಳಿವು ನೀಡಿದ್ದಾರೆ.

ವಯಸ್ಸಾದಂತೆ ಜನರು ನಿಮ್ಮ ವಯಸ್ಸಿನ ಬಗ್ಗೆ ಮಾತನಾಡಲು ಪ್ರಾರಂಭಿಸುತ್ತಾರೆ. ನಿಮ್ಮ ಫಾರ್ಮ್ ಬಗ್ಗೆ ಮರೆತುಬಿಡುತ್ತಾರೆ ಎಂದು ಯುವರಾಜ್ ಐಸಿಸಿಗೆ ತಿಳಿಸಿದ್ದಾರೆ. ಈ ಆಟಗಾರರು ಭಾರತ ತಂಡಕ್ಕಾಗಿ ಉತ್ತಮ ಆಟಗಾರರಾಗಿದ್ದಾರೆ. ಅವರು ಬಯಸಿದಾಗ ನಿವೃತ್ತರಾಗಲುಅರ್ಹರು. ನಾನು ಟಿ20 ಸ್ವರೂಪದಲ್ಲಿ ಹೆಚ್ಚಿನ ಯುವ ಆಟಗಾರರನ್ನು ನೋಡಲು ಬಯಸುತ್ತೇನೆ. ಏಕೆಂದರೆ ಇದು 50 ಓವರ್​​​ಗಳ (ಏಕದಿನ) ಮತ್ತು ಟೆಸ್ಟ್ ಪಂದ್ಯಗಳನ್ನು ಆಡುವ ಅನುಭವಿ ಆಟಗಾರರಿಂದ ಹೊರೆಯನ್ನು ಪಡೆಯುತ್ತದೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಯುವಕರ ತಂಡವನ್ನು ನೋಡಲು ಬಯಸುತ್ತೇನೆ ಎಂದ ಯುವಿ

ಈ ಟಿ20 ವಿಶ್ವಕಪ್ ನಂತರ ಬಹಳಷ್ಟು ಯುವ ಆಟಗಾರರು ತಂಡಕ್ಕೆ ಬರುವುದನ್ನು ಮತ್ತು ಮುಂದಿನ ವಿಶ್ವಕಪ್​ಗಾಗಿ ಯುವಕರ ಟಿ20 ತಂಡವನ್ನು ರಚಿಸುವುದನ್ನು ನೋಡಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ. ಟಿ20 ವಿಶ್ವಕಪ್ (2007) ಮತ್ತು ಏಕದಿನ ವಿಶ್ವಕಪ್ (2011) ಎರಡರಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರಮುಖ ತಾರೆಗಳಲ್ಲಿ ಒಬ್ಬರಾಗಿದ್ದರು. 2012ರ ಅಂತ್ಯದವರೆಗೆ ತಂಡದ ನಿಯಮಿತ ಸದಸ್ಯರಾಗಿದ್ದರು.

ಅದರ ನಂತರ ಅವರು ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡರು. ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಏರಿದ ನಂತರ ಯುವಿ ವೈಟ್-ಬಾಲ್ ತಂಡಗಳಿಗೆ ಸಂಕ್ಷಿಪ್ತ ಪುನರಾಗಮನ ಮಾಡಿದರು. ಆದರೆ, ಅಂತಿಮವಾಗಿ 2017ರಲ್ಲಿ ಮತ್ತೆ ತಮ್ಮ ಸ್ಥಾನ ಕಳೆದುಕೊಂಡರು. ಮೇ 1 ರಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರನ್ನು ಭೇಟಿಯಾಗಿ ಟಿ20 ವಿಶ್ವಕಪ್​ಗೆ 15 ಸದಸ್ಯರ ಭಾರತ ತಂಡವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ.

IPL_Entry_Point