logo
ಕನ್ನಡ ಸುದ್ದಿ  /  ಕ್ರಿಕೆಟ್  /  2025ರ ಐಪಿಎಲ್​ಗೂ ಮುನ್ನ ಡೆಲ್ಲಿ​ಗೆ ದೊಡ್ಡ ಆಘಾತ; ಹೆಡ್​ಕೋಚ್​ ಹುದ್ದೆಯಿಂದ ರಿಕಿ ಪಾಂಟಿಂಗ್ ಔಟ್, ನೂತನ ಕೋಚ್ ಆಯ್ಕೆ

2025ರ ಐಪಿಎಲ್​ಗೂ ಮುನ್ನ ಡೆಲ್ಲಿ​ಗೆ ದೊಡ್ಡ ಆಘಾತ; ಹೆಡ್​ಕೋಚ್​ ಹುದ್ದೆಯಿಂದ ರಿಕಿ ಪಾಂಟಿಂಗ್ ಔಟ್, ನೂತನ ಕೋಚ್ ಆಯ್ಕೆ

Prasanna Kumar P N HT Kannada

Jul 14, 2024 06:00 AM IST

google News

2025ರ ಐಪಿಎಲ್​ಗೂ ಮುನ್ನ ಡೆಲ್ಲಿ​ಗೆ ದೊಡ್ಡ ಆಘಾತ; ಹೆಡ್​ಕೋಚ್​ ಹುದ್ದೆಯಿಂದ ರಿಕಿ ಪಾಂಟಿಂಗ್ ಔಟ್, ನೂತನ ಕೋಚ್ ಆಯ್ಕೆ

    • Ricky Ponting: ಡೆಲ್ಲಿ ಕ್ಯಾಪಿಟಲ್ಸ್ ಪರ 7 ಆವೃತ್ತಿಗಳ ಕಾಲ ಸೇವೆ ಸಲ್ಲಿಸಿದ್ದ ರಿಕಿ ಪಾಂಟಿಂಗ್​, ಈಗ ಫ್ರಾಂಚೈಸಿಯನ್ನು ತೊರೆದಿದ್ದಾರೆ. ಅವರ ಬದಲಿಗೆ ಮತ್ತೊಬ್ಬರನ್ನು ನೇಮಿಸಲಾಗಿದೆ.
2025ರ ಐಪಿಎಲ್​ಗೂ ಮುನ್ನ ಡೆಲ್ಲಿ​ಗೆ ದೊಡ್ಡ ಆಘಾತ; ಹೆಡ್​ಕೋಚ್​ ಹುದ್ದೆಯಿಂದ ರಿಕಿ ಪಾಂಟಿಂಗ್ ಔಟ್, ನೂತನ ಕೋಚ್ ಆಯ್ಕೆ
2025ರ ಐಪಿಎಲ್​ಗೂ ಮುನ್ನ ಡೆಲ್ಲಿ​ಗೆ ದೊಡ್ಡ ಆಘಾತ; ಹೆಡ್​ಕೋಚ್​ ಹುದ್ದೆಯಿಂದ ರಿಕಿ ಪಾಂಟಿಂಗ್ ಔಟ್, ನೂತನ ಕೋಚ್ ಆಯ್ಕೆ

ಆಸ್ಟ್ರೇಲಿಯಾ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಮುಖ್ಯಕೋಚ್ ಹುದ್ದೆಯಿಂದ ಕೆಳಗಿಳಿದಿದ್ದಾರೆ ಎಂದು ಫ್ರಾಂಚೈಸಿ ಶನಿವಾರ (ಜುಲೈ 13) ಎಕ್ಸ್‌ ಖಾತೆಯಲ್ಲಿ ಘೋಷಿಸಿದೆ. 2018 ರಿಂದ 7 ಸೀಸನ್‌ಗಳ ಕಾಲ ಫ್ರಾಂಚೈಸಿ ಪರ ಸೇವೆ ಸಲ್ಲಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕನನ್ನು ಕೆಳಗಿಳಿಸುವ ಮೂಲಕ ಡೆಲ್ಲಿ 2025ರ ಐಪಿಎಲ್​ಗೆ ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ.

2024ರ ಐಪಿಎಲ್​ ಹಾಗೂ ಕಳೆದ ಕೆಲ ಸೀಸನ್​ಗಳಿಂದ ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆ 2025ರ ಐಪಿಎಲ್​​​ಗೂ ಮುನ್ನವೇ ಪಾಂಟಿಂಗ್​ಗೆ ತಲೆದಂಡವಾಗಿದೆ. ಪಾಂಟಿಂಗ್ ನಿರ್ಗಮನದ ಕುರಿತು ಕ್ಯಾಪಿಟಲ್ಸ್ ಪೋಸ್ಟ್ ಮಾಡಿದ್ದು, ಫ್ರಾಂಚೈಸಿಗೆ ಅವರು ನೀಡಿದ ಸೇವೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದೆ. 2018ರಲ್ಲಿ ಡಿಸಿಗೆ ಸೇರಿದ್ದ ಪಾಂಟಿಂಗ್ ಮಾರ್ಗದರ್ಶನದಲ್ಲಿ 2020ರಲ್ಲಿ ಡೆಲ್ಲಿ ಮೊದಲ ಬಾರಿಗೆ ಐಪಿಎಲ್ ಫೈನಲ್​ ಪ್ರವೇಶಿಸಿತ್ತು. 7 ಆವೃತ್ತಿಗಳಲ್ಲಿ ಪಾಂಟಿಂಗ್ ಏರಿಳಿತಗಳ ಮಿಶ್ರಣವನ್ನು ಕಂಡಿದ್ದಾರೆ.

ಡೆಲ್ಲಿ ಫೈನಲ್​ಗೇರಿತ್ತು, ಆದರೆ ಕಪ್ ಗೆದ್ದಿಲ್ಲ!

ಪಾಂಟಿಂಗ್ ಅಧಿಕಾರಕ್ಕೇರಿದ ಚೊಚ್ಚಲ ಆವೃತ್ತಿಯಲ್ಲಿ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಕೊನೆಗೊಂಡಿತು. ಆದಾಗ್ಯೂ, ಅವರ ಮಾರ್ಗದರ್ಶನದಲ್ಲಿ ಡಿಸಿ 2019, 2020 ಮತ್ತು 2021 ರಲ್ಲಿ ಪ್ಲೇಆಫ್​ಗೆ ಅರ್ಹತೆ ಪಡೆದಿತ್ತು. 2020ರಲ್ಲಿ ಡೆಲ್ಲಿ ಫೈನಲ್ ಪ್ರವೇಶಿಸಿತ್ತಾದರೂ ಕಪ್ ಗೆಲ್ಲಲು ವಿಫಲವಾಗಿತ್ತು. ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರನ್ನರ್​ಅಪ್​ ಆಗಿತ್ತು.

ಈ ಯಶಸ್ಸಿನ ಹೊರತಾಗಿಯೂ ಇತ್ತೀಚಿನ ಸೀಸನ್​​ಗಳಲ್ಲಿ ತಂಡ ಹೆಣಗಾಡುತ್ತಿದೆ, ಕಳೆದ ಮೂರು ಋತುಗಳಲ್ಲಿ ಪ್ಲೇಆಫ್​ಗೆ ಅರ್ಹತೆ ಪಡೆಯಲು ವಿಫಲವಾಗಿದೆ. 2024ರ ಐಪಿಎಲ್ ಋತುವಿನಲ್ಲಿ ಡಿಸಿ 7 ಗೆಲುವು ಮತ್ತು 7 ಸೋಲುಗಳೊಂದಿಗೆ 6ನೇ ಸ್ಥಾನ ಪಡೆದಿತ್ತು. ತಂಡದ ಕಳಪೆ ಪ್ರದರ್ಶನ ಗಮನಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡೆಲ್ಲಿ ಕ್ರಿಕೆಟ್ ಕಾರ್ಯಾಚರಣೆಯ ನಿರ್ದೇಶಕ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ.

ಡಿಸಿ ಕ್ರಿಕೆಟ್ ಕಾರ್ಯಾಚರಣೆ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಗಂಗೂಲಿ ಅವರು ತಂಡದ ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳುವ ಜವಾಬ್ದಾರಿ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇಎಸ್​ಪಿಎನ್​ ಕ್ರಿಕ್ಇನ್ಫೋ ಪ್ರಕಾರ, ವೈಷಮ್ಯದಿಂದ ಫ್ರಾಂಚೈಸಿ ಪಾಂಟಿಂಗ್​​ ಬೇರ್ಪಟ್ಟಿದ್ದಾರೆ ಎಂದು ಹೇಳುತ್ತಿದೆ. ಇದೀಗ ಗಂಗೂಲಿ ಅವರೇ ಕೋಚ್​ ಆಗಿ ಸೇವೆ ಸಲ್ಲಿಸಲಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಸ್ತುತ ಕೋಚಿಂಗ್ ಸಿಬ್ಬಂದಿಯಲ್ಲಿ ಕ್ರಿಕೆಟ್ ನಿರ್ದೇಶಕ ಸೌರವ್ ಗಂಗೂಲಿ, ಸಹಾಯಕ ಕೋಚ್ ಪ್ರವೀಣ್ ಆಮ್ರೆ, ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್ ಮತ್ತು ಫೀಲ್ಡಿಂಗ್ ಕೋಚ್ ಬಿಜು ಜಾರ್ಜ್ ಇದ್ದಾರೆ.

ಇನ್ಮುಂದೆ ಗಂಗೂಲಿಯೇ ಕೋಚ್

ಆಸೀಸ್ ದಿಗ್ಗಜ ತೊರೆದಿರುವ ಸ್ಥಾನವನ್ನು ಸ್ವತಃ ಗಂಗೂಲಿ ಅವರೇ ತುಂಬಲಿದ್ದಾರೆ. 2025ರ ಐಪಿಎಲ್ ಆರಂಭಕ್ಕೆ ಇನ್ನೂ ಹಲವು ತಿಂಗಳಿವೆ. ಆದರೆ ಅದಕ್ಕೂ ಮುನ್ನವೇ ಚೊಚ್ಚಲ ಟ್ರೋಫಿ ಗೆಲ್ಲಲು ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ. ರಿಷಭ್ ಪಂತ್ ನಾಯಕನಾಗಿ ಮುಂದುವರೆಯಲಿದ್ದಾರೆ. ಪಾಂಟಿಂಗ್ ಅವರು ಬೇರೆ ಫ್ರಾಂಚೈಸಿಗೆ ಕೋಚ್​ ಆದರೂ ಅಚ್ಚರಿ ಇಲ್ಲ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ