logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಣಜಿ ಸೆಮೀಸ್​ನಲ್ಲಿ ಸೋತ ತಮಿಳುನಾಡು; ನಾಯಕನ ದೂಷಿಸಿದ ಕೋಚ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ದಿನೇಶ್ ಕಾರ್ತಿಕ್

ರಣಜಿ ಸೆಮೀಸ್​ನಲ್ಲಿ ಸೋತ ತಮಿಳುನಾಡು; ನಾಯಕನ ದೂಷಿಸಿದ ಕೋಚ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ದಿನೇಶ್ ಕಾರ್ತಿಕ್

Prasanna Kumar P N HT Kannada

Mar 05, 2024 04:29 PM IST

ನಾಯಕನ ದೂಷಿಸಿದ ಕೋಚ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ದಿನೇಶ್ ಕಾರ್ತಿಕ್

    • Dinesh Karthik : ರಣಜಿ ಟ್ರೋಫಿ ಸೆಮಿಫೈನಲ್​ನಲ್ಲಿ ತಮಿಳುನಾಡು ಸೋಲಿಗೆ ನಾಯಕ ಸಾಯಿ ಕಿಶೋರ್ ಎಂದು ಹೇಳಿದ್ದ ಕೋಚ್ ಸುಲಕ್ಷಣ್ ಕುಲಕರ್ಣಿ ಅವರನ್ನು ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ನಾಯಕನ ದೂಷಿಸಿದ ಕೋಚ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ದಿನೇಶ್ ಕಾರ್ತಿಕ್
ನಾಯಕನ ದೂಷಿಸಿದ ಕೋಚ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ದಿನೇಶ್ ಕಾರ್ತಿಕ್

ರಣಜಿ ಟ್ರೋಫಿ (Ranji Trophy) ಸೆಮಿಫೈನಲ್ ಪಂದ್ಯದಲ್ಲಿ ಮುಂಬೈ ತಂಡದ ವಿರುದ್ಧ ಸೋತ ತಮಿಳುನಾಡು ತಂಡದ ನಾಯಕ ಸಾಯಿ ಕಿಶೋರ್​ ಅವರನ್ನು (Sai Kishore) ದೂಷಿಸಿದ ಕೋಚ್ ಸುಲಕ್ಷಣ್ ಕುಲಕರ್ಣಿ (Sulakshan Kulkarni) ಅವರನ್ನು ಭಾರತದ ಹಿರಿಯ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಹಿಗ್ಗಾಮುಗ್ಗಾ ಜಾಡಿಸಿದ್ದಾರೆ. ಸೆಮೀಸ್​ನಲ್ಲಿ ತಂಡದ ಸೋಲಿಗೆ ನಾಯಕ ಸಾಯಿ ಕಿಶೋರ್​ ಅವರೇ ಕಾರಣ ಎಂದು ಕೋಚ್​ ನೇರವಾಗಿ ಆರೋಪಿಸಿದ್ದರು.

ಟ್ರೆಂಡಿಂಗ್​ ಸುದ್ದಿ

ಅಯ್ಯರ್ ಜೋಡಿ ಆರ್ಭಟ; ಸನ್‌ರೈಸರ್ಸ್ ಸದೆಬಡೆದು ನಾಲ್ಕನೇ ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ ಕೆಕೆಆರ್

ಬಟ್ಲರ್ ಅಲಭ್ಯ, ಶಿಮ್ರಾನ್ ಹೆಟ್ಮೆಯರ್ ಇನ್; ಆರ್‌ಸಿಬಿ ವಿರುದ್ಧದ ಎಲಿಮನೇಟರ್‌ ಕದನಕ್ಕೆ ರಾಜಸ್ಥಾನ್ ರಾಯಲ್ಸ್ ತಂಡ

ಈ ಮೂವರನ್ನು ಕಟ್ಟಿಹಾಕಿದ್ರೆ ಆರ್‌ಸಿಬಿ ಗೆಲುವು ಸಲೀಸು; ರಾಜಸ್ಥಾನ್ ರಾಯಲ್ಸ್ ಸಾಮರ್ಥ್ಯ-ದೌರ್ಬಲ್ಯ ಹಾಗೂ ಎಕ್ಸ್ ಫ್ಯಾಕ್ಟರ್

ಈ ಥರ ಆಡಿದ್ರೆ ಈ ಸಲ ಕಪ್ ನಮ್ದೇ; ಆರ್‌ಸಿಬಿ ತಂಡದ ಸಾಮರ್ಥ್ಯ, ದೌರ್ಬಲ್ಯ ಹಾಗೂ ಗೆಲುವಿನ ಎಕ್ಸ್-ಫ್ಯಾಕ್ಟರ್‌ಗಳಿವು

41 ಬಾರಿಯ ರಣಜಿ ಟ್ರೋಫಿ ಚಾಂಪಿಯನ್ ಮುಂಬೈ ಸೋಮವಾರ (ಮಾರ್ಚ್ 4) ಮುಂಬೈನಲ್ಲಿ ತಮಿಳುನಾಡು ತಂಡವನ್ನು ಇನಿಂಗ್ಸ್ ಮತ್ತು 70 ರನ್‌ಗಳಿಂದ ಸೋಲಿಸಿ 48ನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿತು. ಮೊದಲು ಬ್ಯಾಟಿಂಗ್ ನಡೆಸಿದ ತಮಿಳುನಾಡು 146ಕ್ಕೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಮುಂಬೈ 378 ರನ್ ಕಲೆ ಹಾಕಿ 232 ರನ್​​ಗಳ ಮುನ್ನಡೆ ಸಾಧಿಸಿತು. ಬಳಿಕ ತಮಿಳುನಾಡು ಎರಡನೇ ಇನ್ನಿಂಗ್ಸ್​​ನಲ್ಲಿ 162ಕ್ಕೆ ಆಲೌಟ್​ ಆಯಿತು.

ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಬಿಕೆಸಿಯಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ತಂಡದ ಹೀನಾಯ ಸೋಲಿನ ನಂತರ ಕುಲಕರ್ಣಿ ಸಾಯಿ ಕಿಶೋರ್ ಅವರ ನಿರ್ಧಾರವನ್ನು ಕೋಚ್​ ಸುಲಕ್ಷಣ್ ಟೀಕಿಸಿದ್ದರು. ಟಾಸ್ ಗೆದ್ದರೂ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರದ ವಿರುದ್ಧ ಕಿಡಿಕಾರಿದ್ದರು. ಟಾಸ್ ಸೋತ ಮೊದಲ ದಿನದ 9 ಗಂಟೆಯಲ್ಲೇ ತಮಿಳುನಾಡು ಸೆಮಿಫೈನಲ್ ಅನ್ನು ಕಳೆದುಕೊಂಡಿತ್ತು ಎಂದು ಹೇಳಿದ್ದರು.

ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿರುವ ದಿನೇಶ್ ಕಾರ್ತಿಕ್, ಸಾಯಿ ಕಿಶೋರ್ ಬೆಂಬಲಕ್ಕೆ ನಿಂತಿದ್ದಾರೆ. ಅವರು (ಕೋಚ್) ಹೇಳಿರುವ ಹೇಳಿಕೆ ನಿಜವಾಗಲೂ ತಪ್ಪಾಗಿದೆ. ಕೋಚ್​​ನಿಂದ ತುಂಬಾ ನಿರಾಸೆಯಾಗಿದೆ. 7 ವರ್ಷಗಳ ನಂತರ ತಂಡವನ್ನು ಸೆಮೀಸ್​ಗೆ ತಂದ ನಾಯಕನನ್ನು ಬೆಂಬಲಿಸುವ ಬದಲು ದೂಷಿಸುವುದು ಎಷ್ಟು ಸರಿ. ಉತ್ತಮವಾಗಿ ತಂಡವನ್ನು ಮುನ್ನಡೆಸಿದ್ದು, ಒಳ್ಳೆಯ ಸಂಗತಿಗಳು ಪ್ರಾರಂಭವಾಗಿದೆ ಎಂದು ಎಂದು ಭಾವಿಸುತ್ತೇನೆ. ಆದರೆ ಕೋಚ್​ ತಂಡ ಮತ್ತು ನಾಯಕನನ್ನು ಬಸ್​ ಕೆಳಗೆ ತಳ್ಳಿದ್ದಾರೆ ಎಂದು ಡಿಕೆ ಜಾಡಿಸಿದ್ದಾರೆ.

ಕೋಚ್​ ಸುಲಕ್ಷಣ್ ಕುಲಕರ್ಣಿ ಹೇಳಿದ್ದೇನು?

ತಮಿಳುನಾಡು ಸೋಲಿನ ಬಳಿಕ ಸುಲಕ್ಷಣ್ ಕುಲಕರ್ಣಿ ಮಾತನಾಡಿ ನಾಯಕನನ್ನು ದೂಷಿಸಿದ್ದಾರೆ. ನಾನು ಯಾವಾಗಲೂ ನೇರವಾಗಿ ಮಾತನಾಡುತ್ತೇನೆ; ನಾವು ಪಂದ್ಯದ ಮೊದಲ ದಿನದ 9 ಗಂಟೆಗೆ ಪಂದ್ಯವನ್ನು ಕಳೆದುಕೊಂಡೆವು. ಇದು ನನ್ನ ನೇರವಾದ ಉತ್ತರವಾಗಿದೆ. ನಾವು ಟಾಸ್ ಗೆದ್ದರೂ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡು ದೊಡ್ಡ ತಪ್ಪು ಮಾಡಿದೆವು. ನಾನು ಕೋಚ್ ಆಗಿ ಮತ್ತು ಮುಂಬೈಕರ್ ಆಗಿ, ನನಗೆ ಅಲ್ಲಿನ ಪರಿಸ್ಥಿತಿ ತಿಳಿದಿತ್ತು ಎಂದು ಅವರು ಹೇಳಿದ್ದರು.

ನಾವು ಮೊದಲು ಬೌಲಿಂಗ್ ಮಾಡಬೇಕಿತ್ತು. ಆದರೆ ಮತ್ತೊಮ್ಮೆ, ಕ್ಯಾಪ್ಟನ್ ತನ್ನದೇ ಆದ ಪ್ರವೃತ್ತಿ ತೋರಿಸಿದರು. ತಾನೇ ಬಾಸ್ ಎನ್ನುವಂತೆ ವರ್ತಿಸಿದರು ಎಂದು ಕೋಚ್​, ನಾಯಕ ಸಾಯಿ ಕಿಶೋರ್​ ಅವರನ್ನು ಟೀಕಿಸಿದ್ದರು. ಇದೀಗ ಕಿಶೋರ್​ಗೆ ಬೆಂಬಲವಾಗಿ ದಿನೇಶ್ ಕಾರ್ತಿಕ್ ಕೋಚ್​ ಸುಲಕ್ಷಣ್​ರನ್ನು ಉತ್ತರ ನೀಡಿದ್ದಾರೆ. ತಮಿಳುನಾಡು ವಿರುದ್ಧ ದೊಡ್ಡ ಗೆಲುವು ಸಾಧಿಸುವ ಮೂಲಕ ಮುಂಬೈ ದಾಖಲೆಯ 48 ನೇ ಬಾರಿಗೆ ರಣಜಿ ಟ್ರೋಫಿ ಫೈನಲ್ ಪ್ರವೇಶಿಸಿದೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ