logo
ಕನ್ನಡ ಸುದ್ದಿ  /  ಕ್ರಿಕೆಟ್  /  Explainer: ಈ ಸಲ ಕಪ್ ನಮ್ದೆ ಎನ್ನುತ್ತಲೇ ಹೊಸ ತಂಡ ಕಟ್ಟಿದ ಆರ್​​ಸಿಬಿ; 2025ರ ಐಪಿಎಲ್ ಟೂರ್ನಿಗೆ ನಿರ್ಣಾಯಕ ಈ ಆಟಗಾರರು

Explainer: ಈ ಸಲ ಕಪ್ ನಮ್ದೆ ಎನ್ನುತ್ತಲೇ ಹೊಸ ತಂಡ ಕಟ್ಟಿದ ಆರ್​​ಸಿಬಿ; 2025ರ ಐಪಿಎಲ್ ಟೂರ್ನಿಗೆ ನಿರ್ಣಾಯಕ ಈ ಆಟಗಾರರು

Raghavendra M Y HT Kannada

Nov 26, 2024 12:38 PM IST

google News

ರಾಯಲ್ ಚಾಲೆಂಜರ್ಸ್ ಬೆಂಗಳೂರ ಫ್ರಾಂಚೈಸಿ 2025ರ ಐಪಿಎಲ್ ಟೂರ್ನಿಗಾಗಿ ಬಲಿಷ್ಠ ತಂಡವನ್ನು ಕಟ್ಟಿದೆ.

    • ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ 2025ರ ಐಪಿಎಲ್ ಟೂರ್ನಿಗೆ ಬಲಿಷ್ಠ ತಂಡವನ್ನೇ ಕಟ್ಟಿದೆ. ಆದರೆ ಈ ಸಲವಾದರೂ ಕಪ್ ಗೆಲ್ಲೋದಿಕ್ಕೆ ಈ ಆಟಗಾರರು ನಿರ್ಣಾಯಕವಾಗುತ್ತಾರೆ. ತಂಡದಲ್ಲಿ ಯಾರೆಲ್ಲಾ ಇದ್ದಾರೆ, ಹೇಗಿದೆ ಜೋಶ್ ಎಂಬುದನ್ನು ಇಲ್ಲಿ ತಿಳಿಯೋಣ.
ರಾಯಲ್ ಚಾಲೆಂಜರ್ಸ್ ಬೆಂಗಳೂರ ಫ್ರಾಂಚೈಸಿ 2025ರ ಐಪಿಎಲ್ ಟೂರ್ನಿಗಾಗಿ ಬಲಿಷ್ಠ ತಂಡವನ್ನು ಕಟ್ಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರ ಫ್ರಾಂಚೈಸಿ 2025ರ ಐಪಿಎಲ್ ಟೂರ್ನಿಗಾಗಿ ಬಲಿಷ್ಠ ತಂಡವನ್ನು ಕಟ್ಟಿದೆ.

ಬಹು ನಿರೀಕ್ಷಿತ 2025ರ ಐಪಿಎಲ್ ಟೂರ್ನಿಯಲ್ಲಾದರೂ ಕಪ್ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಚಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸದಾಗಿ ಬಲಿಷ್ಠ ತಂಡವನ್ನು ಕಟ್ಟಿದೆ. ಸೌದಿ ಅರೇಬಿಯಾದ ಜೆದ್ದಾದಲ್ಲಿ ಎರಡು ದಿನಗಳ ಕಾಲ (ನವೆಂಬರ್ 25ರ ಭಾನುವಾರ, ನವೆಂಬರ್ 26ರ ಸೋಮವಾರ) ನಡೆದ ಹರಾಜಿನಲ್ಲಿ ಫ್ರಾಂಚೈಸಿ, ಒಟ್ಟು 16 ಆಟಗಾರರನ್ನು ಖರೀದಿ ಮಾಡಿದೆ.ಇದರಲ್ಲಿ ಇಬ್ಬರು ವಿದೇಶಿ ಆಟಗಾರರಿಗೆ ವೈಯಕ್ತಿವಾಗಿ ಗರಿಷ್ಠ ಮೊತ್ತ ನೀಡಿರುವುದು ವಿಶೇಷ. ಆಸ್ಟ್ರೇಲಿಯಾದ ವೇಗಿ ಹೇಜಲ್ ವುಡ್ ಗೆ 12.5 ಕೋಟಿ ರೂಪಾಯಿ ನೀಡಿದರೆ, ವಿಕೆಟ್ ಕಂ ಬ್ಯಾಟರ್ ಫಿಲ್ ಸಾಲ್ಟ್ ಗೆ 11.50 ಕೋಟಿ ಕೊಟ್ಟು ಖರೀದಿ ಮಾಡಿದೆ.

ಕಳೆದ ಹಲವು ಐಪಿಎಲ್ ಟೂರ್ನಿಗಳನ್ನು ಗಮನಿಸಿದಾಗ ಆರ್ ಸಿಬಿಯಲ್ಲಿ ಬ್ಯಾಟರ್ ಗಳಿಗೆ ಯಾವತ್ತೂ ಕೊರತೆಯಾಗಿಲ್ಲ. ರನ್ ಗಳ ಮಳೆಯನ್ನು ಸುರಿಸುವಂತಹ ಬ್ಯಾಟರ್ ಗಳು ಬಂದು ಹೋಗಿದ್ದಾರೆ. ಈಗಲೂ ಬಲಿಷ್ಠ ಬ್ಯಾಟರ್ ಗಳು ಇದ್ದಾರೆ. ಆದರೆ ಪದೇ ಪದೆ ಕೈ ಕೊಡುತ್ತಿರುವುದು ಮಾತ್ರ ಬೌಲಿಂಗ್ ವಿಭಾಗ. ಎಷ್ಟೋ ಬಾರಿ 200 ರನ್ ಗಳ ಬೃಹತ್ ಮೊತ್ತ ಪೇರಿಸಿದರೂ ಈ ಗುರಿಯನ್ನು ಡಿಫೆಂಡ್ ಮಾಡಿಕೊಳ್ಳಲು ಬೌಲರ್ ಗಳಿಗೆ ಸಾಧ್ಯವಾಗುತ್ತಿರಲಿಲ್ಲ. ಬಾರಿ ಬೌಲರ್ ಗಳ ವಿಫಲದಿಂದಾಗಿ ಆರ್ ಸಿಬಿ ಕೆಲವೊಂದು ಮಹತ್ವದ ಪಂದ್ಯಗಳಲ್ಲಿ ಸೋಲುಗಳನ್ನು ಕಂಡಿದೆ. ಹೀಗಾಗಿ ತಂಡದಲ್ಲಿ ಬೌಲರ್ ಗಳ ಪಾತ್ರ ಮಹತ್ವದ್ದಾಗಿದೆ. ಈ ಕಾರಣದಿಂದಾಗಿ ಈ ಬಾರಿ ಬೌಲರ್ ಗಳು ಹಾಗೂ ಆಲ್ ರೌಂಡರ್ ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದಂತೆ ಕಾಣುತ್ತಿದೆ.

ಆಸ್ಟ್ರೇಲಿಯಾದ ವೇಗಿ ಹೇಜಲ್ ವುಡ್ ಗೆ 12.50 ಕೋಟಿ ರೂ., ಭುವನೇಶ್ವರ್ ಕುಮಾರ್ ಗೆ 10.75 ಕೋಟಿ ರೂ., ಯುವ ಪ್ರತಿಭೆ ರಷೀದ್ ದಾರ್ ಸಲಾಂಗೆ 6 ಕೋಟಿ ರೂ., ನುವಾನ್ ತುಷಾರ 1.60 ಕೋಟಿ ರೂಪಾಯಿ, ಲುಂಗಿನ ಎನ್ಗಿಡಿಗೆ 1 ಕೋಟಿ ಕೊಟ್ಟು ಹೆಚ್ಚು ಬೌಲರ್ ಗಳನ್ನು ಖರೀದಿ ಮಾಡಿದೆ. ಹೇಜಲ್ ವುಡ್ ಆರ್ ಸಿಬಿಗೆ ಹೊಸಬರಲ್ಲ ಈ ಹಿಂದೆಯೂ ಅವರ ಇಲ್ಲಿ ಆಡಿದ್ದಾರೆ. ಈ ಆಸ್ಟ್ರೇಲಿಯಾದ ಹೇಜಲ್ ವುಡ್ 2022-23ನೇ ಸಾಲಿನ ಐಪಿಎಲ್ಲಿ ಆರ್ ಸಿಬಿಯ ಭಾಗವಾಗಿದ್ದರು.

15 ಪಂದ್ಯಗಳಿಂದ 23 ವಿಕೆಟ್ ಗಳನ್ನು ಗಳಿಸಿದ್ದರು. ಇದಕ್ಕೂ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಅಲ್ಲಿ 12 ಪಂದ್ಯಗಳಿಂದ 12 ವಿಕೆಟ್ ಗಳಿಸಲಷ್ಟೇ ಶಕ್ತರಾದರು. ಆಸ್ಟ್ರೇಲಿಯಾ ಪರ 52 ಟಿ20 ಪಂದ್ಯಗಳಿಂದ 67 ವಿಕೆಟ್ ಹಾಗೂ ಒಟ್ಟಾರೆ 107 ಟಿ20 ಪಂದ್ಯಗಳಿಂದ 136 ವಿಕೆಟ್ ಗಳನ್ನು ಪಡೆದಿದ್ದಾರೆ. ಭುವನೇಶ್ವರ್ ಕುಮಾರ್ ಟೀಂ ಇಂಡಿಯಾದ ಆರಂಭಿಕರಾಗಿ ಬೌಲಿಂಗ್ ಮಾಡಿದರು. ಐಪಿಎಲ್ ನಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಈ ಬಾರಿ ಆರ್ ಸಿಬಿಗೆ ಬಂದಿದ್ದಾರೆ.

ಆಸಿಬಿ ರಿಟೈನ್ ಮಾಡಿಕೊಂಡಿರುವ ಆಟಗಾರರು

  1. ವಿರಾಟ್ ಕೊಹ್ಲಿ (ಬ್ಯಾಟರ್) - 20 ಕೋಟಿ ರೂಪಾಯಿ
  2. ರಜತ್ ಪಾಟೀದಾರ್ (ಬ್ಯಾಟರ್) - 11 ಕೋಟಿ ರೂಪಾಯಿ
  3. ಯಶ್ ದಯಾಳ್ (ಬೌಲರ್) - 5 ಕೋಟಿ ರೂಪಾಯಿ

ಹರಾಜಿನಲ್ಲಿ ಖರೀದಿಸಿದ ಆಟಗಾರರು

ಸ್ವಸ್ತಿಕ್ ಚಕ್ರ (ಬ್ಯಾಟರ್ ) - 30 ಲಕ್ಷ ರೂಪಾಯಿ

ದೇವದತ್ ಪಡಿಕ್ಕಲ್ (ಬ್ಯಾಟರ್) - 2 ಕೋಟಿ ರೂಪಾಯಿ

ಜಿತೇಶ್ ಶರ್ಮಾ (ವಿಕೆಟ್ ಕೀಪರ್) - 11 ಕೋಟಿ ರೂಪಾಯಿ

ಫಿಲ್ ಸಾಲ್ಟ್ (ವಿಕೆಟ್ ಕೀಪರ್) - 11.50 ಕೋಟಿ ರೂಪಾಯಿ

ಸ್ವಪ್ನಿಲ್ ಸಿಂಗ್ (ಆಲ್ ರೌಂಡರ್) - 50 ಲಕ್ಷ ರೂಪಾಯಿ

ಜಾಕೋಬ್ ಬೆಥೆಲ್ (ಆಲ್ ರೌಂಡರ್) - 2.60 ಕೋಟಿ ರೂಪಾಯಿ

ರೊಮಾರಿಯೊ ಶೆಫರ್ಡ್ (ಆಲ್ ರೌಂಡರ್) - 1.5 ಕೋಟಿ ರೂಪಾಯಿ

ಲಿಯಾಮ್ ಲಿವಿಂಗ್ ಸ್ಟೋನ್ (ಆಲ್ ರೌಂಡರ್) - 8.75 ಕೋಟಿ ರೂಪಾಯಿ

ಕೃನಾಲ್ ಪಾಂಡ್ಯ (ಆಲ್ ರೌಂಡರ್) - 5.75 ಕೋಟಿ ರೂಪಾಯಿ

ಟೀಮ್ ಡೇವಿಡ್ (ಆಲ್ ರೌಂಡರ್) - 3 ಕೋಟಿ ರೂಪಾಯಿ

ಮನೋಜ್ ಬಂದಗೆ ( ಆಲ್ ರೌಂಡರ್ ) 30 ಲಕ್ಷ ರೂಪಾಯಿ

ಹರಾಜಿನಲ್ಲಿ ಖರೀದಿಸಿರುವ ವೇಗದ ಬೌಲರ್ ಗಳು

ಲುಂಗಿ ಎನ್ಗಿಡಿ - 1 ಕೋಟಿ ರೂಪಾಯಿ

ರಷೀದ್ ದಾರ್ ಸಲಾಂ - 6 ಕೋಟಿ ರೂಪಾಯಿ

ಸುಯಶ್ ಶರ್ಮಾ - 2.60 ಕೋಟಿ ರೂಪಾಯಿ

ನುವಾನ್ ತುಷಾರ - 1.60 ಕೋಟಿ ರೂಪಾಯಿ

ಮೋಹಿತ್ ರಾಥಿ - 30 ಲಕ್ಷ ರೂಪಾಯಿ

ಜೋಷ್ ಹೇಜಲ್ ವುಡ್ - 12.50 ಕೋಟಿ ರೂಪಾಯಿ

ಭುವನೇಶ್ವರ್ ಕುಮಾರ್ - 10.75 ಕೋಟಿ ರೂಪಾಯಿ

ಅಭಿನಂದನ್ ಸಿಂಗ್ - 30 ಲಕ್ಷ ರೂಪಾಯಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಬ್ಯಾಟರ್ ಪ್ರದರ್ಶನಕ್ಕೆ ಕೊರತೆ ಇಲ್ಲ, ಆದರೆ ಬೌಲರ್ ಗಳು ಮಿಂಚಬೇಕು. ಬೌಲರ್ ಗಳು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಿದರೆ 2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂಬುದನ್ನು ಆರ್ ಸಿಬಿ ಅಭಿಮಾನಿಗಳ ಮಾನದಾಳದ ಮಾತುಗಳು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ