ಮತ್ತೊಬ್ಬ ಕನ್ನಡಿಗನನ್ನು ಖರೀದಿಸಿದ ಆರ್‌ಸಿಬಿ; ಅನ್ಸೋಲ್ಡ್ ಆಗಿದ್ದ ದೇವದತ್ ಪಡಿಕ್ಕಲ್ ಮೂಲಬೆಲೆಗೆ ಬೆಂಗಳೂರು ತೆಕ್ಕೆಗೆ!
- Devdutt Padikkal: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮನೋಜ್ ಭಾಂಡಗೆ ಬಳಿಕ ಮತ್ತೊಬ್ಬ ಕನ್ನಡಿಗನನ್ನು ಖರೀದಿಸಿದೆ. ಅನ್ಸೋಲ್ಡ್ ಆಗಿದ್ದ ದೇವದತ್ ಪಡಿಕ್ಕಲ್ ಅವರನ್ನು ಮೂಲಬೆಲೆಗೆ ಬೆಂಗಳೂರು ತೆಕ್ಕೆಗೆ ಹಾಕಿಕೊಂಡಿದೆ.
- Devdutt Padikkal: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮನೋಜ್ ಭಾಂಡಗೆ ಬಳಿಕ ಮತ್ತೊಬ್ಬ ಕನ್ನಡಿಗನನ್ನು ಖರೀದಿಸಿದೆ. ಅನ್ಸೋಲ್ಡ್ ಆಗಿದ್ದ ದೇವದತ್ ಪಡಿಕ್ಕಲ್ ಅವರನ್ನು ಮೂಲಬೆಲೆಗೆ ಬೆಂಗಳೂರು ತೆಕ್ಕೆಗೆ ಹಾಕಿಕೊಂಡಿದೆ.
(1 / 8)
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಳೆದು ತೂಗಿ ಆಟಗಾರರನ್ನು ಖರೀದಿಸಿದೆ. ಕೆಎಲ್ ರಾಹುಲ್ ಸೇರಿದಂತೆ ಪ್ರಮುಖರನ್ನು ಕೈಬಿಟ್ಟರೂ ಸಮತೋಲಿತ ತಂಡವನ್ನು ಕಟ್ಟುವಲ್ಲಿ ಯಶಸ್ವಿಯಾಗಿದೆ.
(2 / 8)
ಐಪಿಎಲ್ 2025 ಮೆಗಾ ಹರಾಜು ಎರಡನೇ ದಿನದ ಕೊನೆಯ ಘಟ್ಟದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅವರನ್ನು ಆರ್‌ಸಿಬಿ ಖರೀದಿಸಿದೆ. ಮೂಲ ಬೆಲೆ 2 ಕೋಟಿಗೆ ಅವರನ್ನು ಮತ್ತೊಮ್ಮೆ ಕರೆಸಿಕೊಂಡಿದೆ.
(3 / 8)
ಸ್ಥಳೀಯ ಆಟಗಾರರನ್ನು ಖರೀದಿಸಿಲ್ಲ ಎನ್ನುವ ಆರೋಪದ ಮಧ್ಯೆ ಮನೋಜ್ ಭಾಂಡಗೆ ಬಳಿಕ ಪಡಿಕ್ಕಲ್ಗೆ ಮಣೆ ಹಾಕಲಾಗಿದೆ. ಮನೋಜ್ 30 ಲಕ್ಷಕ್ಕೆ ಆರ್‌ಸಿಬಿ ಸೇರಿದ್ದಾರೆ.
(4 / 8)
ಈಗಾಗಲೇ ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದ ಎಡಗೈ ಬ್ಯಾಟರ್ ಪಡಿಕ್ಕಲ್, ಮೊದಲ ಬಾರಿಗೆ ಹರಾಜಿಗೆ ಬಂದಾಗ ಅನ್ ಸೋಲ್ಡ್ ಆಗಿದ್ದರು. 2ನೇ ಬಾರಿಗೆ ಹರಾಜಿಗೆ ಬಂದಾಗ ಆರ್‌ಸಿಬಿ ಖರೀದಿಸಿತು.
(5 / 8)
ಪಡಿಕ್ಕಲ್ ಆರ್‌ಸಿಬಿ ಪರವೇ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಐಪಿಎಲ್ನಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನೂ ಗೆದ್ದುಕೊಂಡಿದ್ದರು.
(6 / 8)
2022ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಪಡಿಕ್ಕಲ್ರನ್ನು ಬಿಡುಗಡೆ ಮಾಡಿತ್ತು. ಬಳಿಕ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೇರಿದ್ದರು. ನಂತರ ಟ್ರೇಡ್ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೇರಿದ್ದರು.
(7 / 8)
ಪಡಿಕ್ಕಲ್ 64 ಐಪಿಎಲ್ ಪಂದ್ಯಗಳಲ್ಲಿ 123 ಸ್ಟ್ರೈಕ್ ರೇಟ್‌ನಲ್ಲಿ 1559 ರನ್ ಸಿಡಿಸಿದ್ದಾರೆ. ಈ ಪೈಕಿ 1 ಶತಕ, 9 ಅರ್ಧಶತಕಗಳು ಸೇರಿವೆ.
ಇತರ ಗ್ಯಾಲರಿಗಳು