logo
ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ವಿರುದ್ಧ ವಿರೋಚಿತ ಸೋಲಿನ ನಂತರ ಪ್ಲೇಆಫ್ ಪ್ರವೇಶಿಸಲು ಆರ್​ಸಿಬಿ ಏನು ಮಾಡಬೇಕು? ಹೀಗಿದೆ ಲೆಕ್ಕಾಚಾರ

ಡೆಲ್ಲಿ ವಿರುದ್ಧ ವಿರೋಚಿತ ಸೋಲಿನ ನಂತರ ಪ್ಲೇಆಫ್ ಪ್ರವೇಶಿಸಲು ಆರ್​ಸಿಬಿ ಏನು ಮಾಡಬೇಕು? ಹೀಗಿದೆ ಲೆಕ್ಕಾಚಾರ

Prasanna Kumar P N HT Kannada

Mar 11, 2024 06:30 AM IST

ಡೆಲ್ಲಿ ವಿರುದ್ಧ ವಿರೋಚಿತ ಸೋಲಿನ ನಂತರ ಪ್ಲೇಆಫ್ ಪ್ರವೇಶಿಸಲು ಆರ್​ಸಿಬಿ ಏನು ಮಾಡಬೇಕು

    • WPL 2024 Playoffs : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ರನ್ನಿಂದ ವಿರೋಚಿತ ಸೋಲು ಅನುಭವಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಲು ಏನು ಮಾಡಬೇಕು? ಹೀಗಿದೆ ಲೆಕ್ಕಾಚಾರ ನೋಡಿ.
ಡೆಲ್ಲಿ ವಿರುದ್ಧ ವಿರೋಚಿತ ಸೋಲಿನ ನಂತರ ಪ್ಲೇಆಫ್ ಪ್ರವೇಶಿಸಲು ಆರ್​ಸಿಬಿ ಏನು ಮಾಡಬೇಕು
ಡೆಲ್ಲಿ ವಿರುದ್ಧ ವಿರೋಚಿತ ಸೋಲಿನ ನಂತರ ಪ್ಲೇಆಫ್ ಪ್ರವೇಶಿಸಲು ಆರ್​ಸಿಬಿ ಏನು ಮಾಡಬೇಕು (PTI)

ವುಮೆನ್ಸ್ ಪ್ರೀಮಿಯರ್ ಲೀಗ್​ (WPL 2024) ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೊಂದು ವಾರದಲ್ಲಿ ಡಬ್ಲ್ಯುಪಿಎಲ್​ಗೆ ತೆರೆ ಬೀಳಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಈಗಾಗಲೇ ಪ್ಲೇಆಫ್​​ ಪ್ರವೇಶಿಸಿವೆ. ಈ ತಂಡಗಳ ನಡುವೆ ಅಗ್ರಸ್ಥಾನಕ್ಕೇರಲು ಪೈಪೋಟಿ ಏರ್ಪಟ್ಟಿದೆ. ಆದರೆ 3ನೇ ಸ್ಥಾನಕ್ಕೆ ಪಡೆಯಲು ಆರ್​ಸಿಬಿಗೆ ಹೆಚ್ಚಿನ ಅವಕಾಶ ಇದೆ. ಆದರೆ ಎಷ್ಟೆಲ್ಲಾ ಸಾಧ್ಯತೆಗಳಿವೆ? ಪ್ಲೇಆಫ್ ಪ್ರವೇಶಿಸಲು ಏನೆಲ್ಲಾ ಮಾಡಬೇಕು ಎಂಬುದನ್ನು ಈ ಮುಂದೆ ನೋಡೋಣ.

ಟ್ರೆಂಡಿಂಗ್​ ಸುದ್ದಿ

ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯಬೇಕಾದ ಆರಂಭಿಕರನ್ನು ಹೆಸರಿಸಿದ ಇರ್ಫಾನ್ ಪಠಾಣ್; ಯಶಸ್ವಿ ಜೈಸ್ವಾಲ್‌ ಬೇಡವಂತೆ!

ನಾನು ಒಮ್ಮೆ ಹೋದರೆ, ನೀವು ಮತ್ತೆ ನನ್ನ ನೋಡಲ್ಲ; ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಅಚ್ಚರಿ ಹೇಳಿಕೆ, ಫ್ಯಾನ್ಸ್​ಗೆ ಆತಂಕ

ಕ್ರಿಕೆಟ್​​​ನಲ್ಲಿ ಆಟಗಾರರು ಧರಿಸುವ ನೆಕ್ ಡಿವೈಸ್ ಅಥವಾ ಕ್ಯೂ-ಕಾಲರ್​ ಎಂದರೇನು; ಪ್ರಯೋಜನ ಮತ್ತು ಬೆಲೆ ಎಷ್ಟು?

ಜಿಟಿ ವಿರುದ್ಧ ಗೆದ್ದು ಪ್ಲೇಆಫ್​ಗೇರಲು ಎಸ್​ಆರ್​ಹೆಚ್ ಸಜ್ಜು; ಹವಾಮಾನ ವರದಿ, ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಇಲ್ಲಿದೆ

ಆರ್​​ಸಿಬಿ (Royal Challengers Bangalore) ತನ್ನ ಕೊನೆಯ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯ. ಜತೆಗೆ ಉತ್ತಮ ನೆಟ್​ ರನ್ ರೇಟ್ ಸಂಪಾದಿಸಬೇಕು. ಆಗ 8 ಅಂಕಗಳೊಂದಿಗೆ ಎಲಿಮಿನೇಟರ್ ಪಂದ್ಯ ಆಡುವುದು ಖಚಿತವಾಗಲಿದೆ. ಏಕೆಂದರೆ ಆರ್​ಸಿಬಿ ಪಂದ್ಯಕ್ಕೂ ಮುನ್ನ ನಡೆಯುವ ಇಂದು (ಮಾರ್ಚ್ 11) ಗುಜರಾತ್ ವಿರುದ್ಧದ ಪಂದ್ಯದಲ್ಲಿ ಯುಪಿ ಗೆದ್ದರೆ, 8 ಅಂಕ ಪಡೆಯಲಿದೆ. ಒಂದು ವೇಳೆ ಆರ್​​ಸಿಬಿ ಪ್ಲೇಆಫ್ ಕನಸು ಭಗ್ನಗೊಳ್ಳಲಿದೆ. ಹಾಗಾಗಿ ಯುಪಿ ಸೋಲಬೇಕೆಂದು ಬೆಂಗಳೂರು ಪ್ರಾರ್ಥಿಸಬೇಕಿದೆ.

ಆರ್​ಸಿಬಿ ತನ್ನ ಕೊನೆಯ ಪಂದ್ಯಕ್ಕೂ ಮುನ್ನ ಯುಪಿ vs ಗುಜರಾತ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಈ ಪಂದ್ಯದಲ್ಲಿ ಗುಜರಾತ್ ಗೆಲ್ಲಬೇಕಿದೆ. ಆಗ ಆರ್​ಸಿಬಿ ತನ್ನ ಕೊನೆಯ ಪಂದ್ಯದಲ್ಲಿ ಸೋತರೂ ಉತ್ತಮ ರನ್ ರೇಟ್ ಕಾಯ್ದುಕೊಂಡು ಪ್ಲೇಆಫ್​ ಪ್ರವೇಶಿಸುವ ಅವಕಾಶ ಪಡೆಯಲಿದೆ. ಅಲ್ಲದೆ, ಯುಪಿ ವಿರುದ್ಧ ಗುಜರಾತ್​ ಗೆದ್ದು, ತನ್ನ ಅಂತಿಮ ಪಂದ್ಯದಲ್ಲಿ ಸೋಲಬೇಕು. ಆಗ ಆರ್​​ಸಿಬಿ ಪ್ಲೇಆಫ್ ಹಾದಿ ಮತ್ತಷ್ಟು ಸುಗಮವಾಗಲಿದೆ.

ಗುಜರಾತ್ ಉಳಿದೆರಡು ಪಂದ್ಯಗಳಲ್ಲಿ ದೊಡ್ಡ ಅಂತರದ ಗೆಲುವು ಸಾಧಿಸಿದ್ದೇ ಆದರೆ ರನ್​ ರೇಟ್ ಹೆಚ್ಚಿಸಿಕೊಂಡು ಆಗ ಗುಜರಾತ್ ಮತ್ತು ಬೆಂಗಳೂರು ತಂಡಗಳನ್ನು ಹಿಂದಿಕ್ಕಿ ಅಚ್ಚರಿ ಎನ್ನುವಂತೆ ಪ್ಲೇಆಫ್​ಗೇರಿದರೂ ಅಚ್ಚರಿ ಇಲ್ಲ. ಇದು ಸಾಧ್ಯವಾಗಬೇಕೆಂದರೆ ಆರ್​ಸಿಬಿ ಮತ್ತು ಯುಪಿ ತಂಡಗಳು ತಮ್ಮ ಕೊನೆಯ ಪಂದ್ಯದಲ್ಲಿ ಸೋಲಬೇಕು. ಸದ್ಯ ಆರ್​​ಸಿಬಿ ಸೇಫ್​ಝೋನ್​ನಲ್ಲಿ ಇರಬೇಕೆಂದರೆ ಗುಜರಾತ್ ತಂಡ, ಯುಪಿ ತಂಡವನ್ನು ಮಣಿಸುವುದು ಅನಿವಾರ್ಯ. ಅಲ್ಲದೆ, ಬೆಂಗಳೂರು ಕೊನೆಯ ಪಂದ್ಯದಲ್ಲಿ ಗೆಲ್ಲಲೇಬೇಕು.

ನಾಕೌಟ್ ಪ್ರವೇಶಿಸಲು ಆರ್​ಸಿಬಿಗೆ ಇರುವಷ್ಟೇ ಯುಪಿ ವಾರಿಯರ್ಸ್ ತಂಡಕ್ಕೂ ಅವಕಾಶ ಇದೆ. ಆದರೆ ನೆಟ್ ರನ್ ರೇಟ್​ ಹಿನ್ನಡೆಯಲ್ಲಿದೆ. ಯುಪಿ ತನ್ನ ಕೊನೆಯ ಪಂದ್ಯದಲ್ಲಿ ಗೆದ್ದರೆ ಆಗ 8 ಅಂಕ ಪಡೆಯಲಿದೆ. ಅತ್ತ ಆರ್​​ಸಿಬಿ ಸಹ ಅಂತಿಮ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಲಿದೆ. ಗೆದ್ದು ಯುಪಿಗಿಂತ ಉತ್ತಮ ರನ್ ರೇಟ್ ಕಾಯ್ದಕೊಂಡರೆ ನೇರವಾಗಿ ಎಲಿಮಿನೇಟರ್​​ ಆಡಲು ಆರ್​ಸಿಬಿ ಅವಕಾಶ ಪಡೆಯುತ್ತದೆ.

ಅಗ್ರಸ್ಥಾನ ಪಡೆದ ತಂಡದ ನೇರವಾಗಿ ಫೈನಲ್​ಗೆ ಲಗ್ಗೆ

ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವು ನೇರವಾಗಿ ಫೈನಲ್​ಗೆ ಲಗ್ಗೆ ಇಡಲಿದೆ. ಮತ್ತೊಂದೆಡೆ 2 ಮತ್ತು 3ನೇ ಸ್ಥಾನದಲ್ಲಿರುವ ತಂಡಗಳು ಎಮಿನೇಟರ್​​ನಲ್ಲಿ ಸೆಣಸಾಟ ನಡೆಸಲಿವೆ. ಇಲ್ಲಿ ಗೆಲ್ಲುವ ತಂಡವು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಲಿದೆ. ಸದ್ಯ ಮುಂಬೈ ಮತ್ತು ಡೆಲ್ಲಿ ತಂಡಗಳು ಅಗ್ರಸ್ಥಾನಕ್ಕಾಗಿ ನೇರಾನೇರ ಪೈಪೋಟಿಗಿಳಿದಿವೆ. ಆದರೆ ಯಾರಿಗೆ ಅವಕಾಶ ಸಿಗುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ತಂಡಪಂದ್ಯಗೆಲುವುಸೋಲುಅಂಕರನ್​ರೇಟ್
ಡೆಲ್ಲಿ ಕ್ಯಾಪಿಟಲ್ಸ್ (Q)75210+0.918
ಮುಂಬೈ ಇಂಡಿಯನ್ಸ್ (Q)75210+0.343
ಆರ್​​ಸಿಬಿ7346+0.027
ಯುಪಿ ವಾರಿಯರ್ಜ್7346-0.365
ಗುಜರಾತ್ ಜೈಂಟ್ಸ್6152-1.111

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ