logo
ಕನ್ನಡ ಸುದ್ದಿ  /  ಕ್ರಿಕೆಟ್  /  89 ರನ್ ಗಳಿಸಿ ಆಸ್ಟ್ರೇಲಿಯಾ ಡಿಕ್ಲೇರ್; ಗಬ್ಬಾ ಟೆಸ್ಟ್ ಗೆಲುವಿಗೆ ಭಾರತಕ್ಕೆ 275 ರನ್ ಗುರಿ

89 ರನ್ ಗಳಿಸಿ ಆಸ್ಟ್ರೇಲಿಯಾ ಡಿಕ್ಲೇರ್; ಗಬ್ಬಾ ಟೆಸ್ಟ್ ಗೆಲುವಿಗೆ ಭಾರತಕ್ಕೆ 275 ರನ್ ಗುರಿ

Jayaraj HT Kannada

Dec 18, 2024 10:42 AM IST

google News

89 ರನ್ ಗಳಿಸಿ ಆಸ್ಟ್ರೇಲಿಯಾ ಡಿಕ್ಲೇರ್; ಗಬ್ಬಾ ಟೆಸ್ಟ್ ಗೆಲುವಿಗೆ ಭಾರತಕ್ಕೆ 275 ರನ್ ಗುರಿ

    • ಗಬ್ಬಾದಲ್ಲಿ 2021ರ ಐತಿಹಾಸಿಕ ಗೆಲುವು ಮರುಕಳಿಸುವ ನಿರೀಕ್ಷೆಯಲ್ಲಿ ಭಾರತ ತಂಡವಿದೆ. ಬಾರ್ಡರ್-ಗವಾಸ್ಕರ್‌ ಟ್ರೋಫಿಯ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 275 ರನ್ ಅಗತ್ಯವಿದೆ. ಆದರೆ, ಮಳೆ ಅಡ್ಡಿಯಾದರೆ ಇದು ಕಷ್ಟವಾಗಲಿದೆ.
89 ರನ್ ಗಳಿಸಿ ಆಸ್ಟ್ರೇಲಿಯಾ ಡಿಕ್ಲೇರ್; ಗಬ್ಬಾ ಟೆಸ್ಟ್ ಗೆಲುವಿಗೆ ಭಾರತಕ್ಕೆ 275 ರನ್ ಗುರಿ
89 ರನ್ ಗಳಿಸಿ ಆಸ್ಟ್ರೇಲಿಯಾ ಡಿಕ್ಲೇರ್; ಗಬ್ಬಾ ಟೆಸ್ಟ್ ಗೆಲುವಿಗೆ ಭಾರತಕ್ಕೆ 275 ರನ್ ಗುರಿ (AP)

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರನೇ ಟೆಸ್ಟ್‌ ಡ್ರಾ ಆಗುವ ಲಕ್ಷಣಗಳು ಕಾಣಿಸುತ್ತಿವೆ. ಐದನೇ ದಿನದಾಟದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ 7 ವಿಕೆಟ್‌ ಕಳೆದುಕೊಂಡು 89 ರನ್ ಗಳಿಸಿದ್ದಾಗ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಇದೀಗ ಬ್ರಿಸ್ಬೇನ್ ಟೆಸ್ಟ್ ಗೆಲ್ಲಲು ಭಾರತ ತಂಡಕ್ಕೆ 275 ರನ್ ಅಗತ್ಯವಿದೆ. ಕೊನೆಯ ದಿನವಾದ ಇಂದು ಮುಂದೆ ಕನಿಷ್ಠ 54 ಓವರ್‌ಗಳ ಆಟ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಭಾರತ ತಂಡ ಗೆಲ್ಲಬೇಕಾದರೆ, ವಿಕೆಟ್‌ ಉಳಿಸಿಕೊಂಡು ವೇಗದ ಆಟ ಆಡಬೇಕಿದೆ. ಇಲ್ಲವಾದಲ್ಲಿ, ವಿಕೆಟ್‌ ಕಳೆದುಕೊಳ್ಳದೆ ಪಂದ್ಯ ಡ್ರಾ ಮಾಡುವ ಪ್ರಯತ್ನ ಮಾಡಬೇಕಿದೆ.

ಐದನೇ ದಿನದಾಟದ ಆರಂಭದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ಅನ್ನು 260 ರನ್‌ಗಳಿಗೆ ಮುಗಿಸಿತು. ಇದರೊಂದಿಗೆ ಎರಡನೇ ಇನ್ನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾಗೆ ನಿರೀಕ್ಷೆಗೆ ತಕ್ಕಂತೆ ಅಬ್ಬರಿಸಲು ಭಾರತದ ವೇಗಿಗಳು ಅವಕಾಶ ನೀಡಲಿಲ್ಲ. ತ್ವರಿತ ವಿಕೆಟ್‌ಗಳನ್ನು ಕಳೆದುಕೊಂಡ ಕಾಂಗರೂಗಳ ವೇಗದಾಟಕ್ಕೆ ಬ್ರೇಕ್‌ ಬಿತ್ತು. ಈ ನಡುವೆ ಜಸ್ಪ್ರೀತ್‌ ಬುಮ್ರಾ ದಾಖಲೆ ನಿರ್ಮಿಸಿದರು. ಆಸೀಸ್‌ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ ಕಬಳಿಸಿದ ಭಾರತೀಯ ಆಟಗಾರನಾಗಿ ಹೊರಹೊಮ್ಮಿದರು.

ಮೆಕ್‌ಸ್ವೀನ್‌, ಖವಾಜಾ, ಲಬುಶೇನ್‌, ಮಿಚೆಲ್‌ ಮಾರ್ಷ್‌ ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಟ್ರಾವಿಟ್‌ ಹೆಡ್‌ 17 ರನ್‌ ಗಳಿಸಿದರು. ಕೊನೆಯಲ್ಲಿ ನಾಯಕ ಕಮಿನ್ಸ್‌ 22 ರನ್‌ ಸಿಡಿಸಿದರು. ಅವರು ಔಟಾಗುತ್ತಿದ್ದಂತೆಯೇ ಆಸೀಸ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಭಾರತ ತಂಡವು ಕೊನೆಯ ಇನ್ನಿಂಗ್ಸ್‌ ಆರಂಭಿಸಿದ್ದು 2.1 ಓವರ್‌ ಆಗುವಷ್ಟರಲ್ಲಿ ಮತ್ತೆ ಮಳೆ ಅಡ್ಡಿಯಾಯ್ತು. ಭಾರತದ ವಿಕೆಟ್‌ ಕಳೆದುಕೊಳ್ಳದೆ 8 ರನ್‌ ಗಳಿಸಿದ್ದು, ಇನ್ನೂ ಗುರಿ ದೂರವಿದೆ.

ರದ್ದು ಸಾಧ್ಯತೆ ಅಧಿಕ

ದಿನದಾಟದದ ಪ್ರಕಾರ ಇನ್ನೂ 52 ಓವರ್‌ಗಳ ಆಟ ಬಾಕಿ ಉಳಿದಿದೆ. ಆದರೆ ಮಳೆ ಅಡ್ಡಿಯಾಗುವ ಕಾರಣ ಓವರ್‌ನಲ್ಲಿ ಕಡಿತವಾಗುವ ಸಾಧ್ಯತೆ ಇದೆ. ಮಳೆ ವೇಗ ಪಡೆದರೆ ಬೇಗನೆ ಪಂದ್ಯವನ್ನು ರದ್ದು ಗೊಳಿಸಬಹುದು. ಭಾರತ ತಂಡಕ್ಕೆ ಇನ್ನೂ 267 ರನ್‌ಗಳ ಅಗತ್ಯವಿದ್ದು, ಗೆಲ್ಲಬೇಕಾದರೆ ಏಕದಿನ ಕ್ರಿಕೆಟ್‌ ವೇಗದಲ್ಲಿ ಬ್ಯಾಟಿಂಗ್‌ ನಡೆಸಬೇಕಿದೆ. ಭಾರತವು ಈ ಪಂದ್ಯ ಗೆದ್ದರೆ ಸರಣಿಯಲ್ಲಿ ಮಹತ್ವದ ಮುನ್ನಡೆ ಸಿಗಲಿದೆ. ಒಂದು ವೇಳೆ ಪಂದ್ಯ ಡ್ರಾಗೊಂಡರೂ ಸರಣಿ 1-1ರಲ್ಲಿ ಸಮಬಲವಾಗಲಿದೆ. ಮುಂದೆ ಬಾಕ್ಸಿಂಗ್ ಡೇ ಟೆಸ್ಟ್‌ ನಡೆಯಲಿದ್ದು, ಉಭಯ ತಂಡಗಳಿಗೂ ನಿರ್ಣಾಯಕವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ