WTC Standings: ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ನಿಂದ ಹೊರಬಿದ್ದ ನ್ಯೂಜಿಲೆಂಡ್-ಇಂಗ್ಲೆಂಡ್; ಹೀಗಿದೆ ಅಪ್ಡೇಟೆಡ್ ಅಂಕಪಟ್ಟಿ
- ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಹ್ಯಾಮಿಲ್ಟನ್ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮತ್ತೆ ಬದಲಾವಣೆಗಾಳಾಗಿವೆ. ಕಿವೀಸ್ ಐತಿಹಾಸಿಕ ವಜಿದೊಂದಿಗೆ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಮೇಲೇರಿದೆ.
- ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಹ್ಯಾಮಿಲ್ಟನ್ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮತ್ತೆ ಬದಲಾವಣೆಗಾಳಾಗಿವೆ. ಕಿವೀಸ್ ಐತಿಹಾಸಿಕ ವಜಿದೊಂದಿಗೆ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಮೇಲೇರಿದೆ.
(1 / 7)
ಹ್ಯಾಮಿಲ್ಟನ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ನ್ಯೂಜಿಲೆಂಡ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಜಿಗಿತ ಕಂಡಿದೆ. ಮೊದಲು ಎರಡು ಪಂದ್ಯಗಳಲ್ಲಿ ಸೋತಿದ್ದ ಕಿವೀಸ್, ಮೂರನೇ ಟೆಸ್ಟ್‌ನಲ್ಲಿ ಗೆದ್ದು ಸರಣಿ ವೈಟ್‌ವಾಶ್ ತಪ್ಪಿಸಿಕೊಂಡಿದೆ. ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ನ್ಯೂಜಿಲೆಂಡ್‌ನ ಎಲ್ಲಾ ಪಂದ್ಯಗಳು ಮುಗಿದಿವೆ. ಹೀಗಾಗಿ ಕಿವೀಸ್ ತಂಡಕ್ಕೆ ಅಗ್ರ ಎರಡು ಸ್ಥಾನಗಳಿಗೆ ಲಗ್ಗೆ ಹಾಕಿ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡುವ ಅವಕಾಶವಿಲ್ಲ.(AFP)
(2 / 7)
ನ್ಯೂಜಿಲೆಂಡ್ ತಂಡ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದೆ. ಕಿವೀಶ್ 14 ಪಂದ್ಯಗಳಲ್ಲಿ 48.21ರ ಸರಾಸರಿಯಲ್ಲಿ 81 ಅಂಕಗಳನ್ನು ಗಳಿಸಿದೆ. ಈಗ ಶ್ರೀಲಂಕಾ ಐದನೆ ಸ್ಥಾನಕ್ಕೆ ಇಳಿದಿದೆ.(AP)
(3 / 7)
ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ಇಂಗ್ಲೆಂಡ್ ತಂದ ಕೊನೆಯ ಪಂದ್ಯ ಆಡಿತು. ಕಿವೀಸ್ ವಿರುದ್ಧ ಸೋತ ನಂತರ, ಇಂಗ್ಲೆಂಡ್ 22 ಪಂದ್ಯಗಳಿಂದ 43.18 ಶೇಕಡಾ ದರದಲ್ಲಿ 114 ಅಂಕಗಳನ್ನು ಗಳಿಸಿದೆ. ಆ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನ ಪಡೆದುಕೊಂಡಿದೆ. ತಂಡದ ಬಳಿ ಹೆಚ್ಚು ಅಂಕಗಳಿದ್ದರೂ, ಫೈನಲ್ ರೇಸ್‌ನಿಂದ ತಂಡ ಹೊರಬಿದ್ದಿದೆ. ಏಕೆಂದರೆ ಟೆಸ್ಟ್ ಚಾಂಪಿಯನ್‌ಶಿಪ್ ಶ್ರೇಯಾಂಕಗಳನ್ನು ತಂಡಗಳ ಅಂಕಗಳ ಶೇಕಡಾವಾರು ಪ್ರಮಾಣದಿಂದ ನಿರ್ಧರಿಸಲಾಗುತ್ತದೆ.(AFP)
(4 / 7)
ಸದ್ಯ ದಕ್ಷಿಣ ಆಫ್ರಿಕಾ ತಂಡ ಆಡಿದ 10 ಪಂದ್ಯಗಳಲ್ಲಿ 63.33ರ ಸರಾಸರಿಯಲ್ಲಿ 76 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡುವ ಎಲ್ಲಾ ಸಾಧ್ಯತೆಗಳಿವೆ. ತವರಿನಲ್ಲಿ ಪಾಕಿಸ್ತಾನ ವಿರುದ್ಧದ ಎರಡು ಟೆಸ್ಟ್ ಸರಣಿಯಲ್ಲಿ ಒಂದು ಪಂದ್ಯವನ್ನು ಗೆದ್ದರೆ ದಕ್ಷಿಣ ಆಫ್ರಿಕಾ ಫೈನಲ್ ಟಿಕೆಟ್ ಪಡೆಯುತ್ತದೆ.(HT_PRINT)
(5 / 7)
ಪ್ರಸ್ತುತ, ಆಸೀಸ್ 14 ಪಂದ್ಯಗಳಲ್ಲಿ 60.71 ರ ದರದಲ್ಲಿ 102 ಅಂಕಗಳನ್ನು ಹೊಂದಿದೆ. ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಥಾನ ಇನ್ನೂ ಖಚಿತವಾಗಿಲ್ಲ. ಏಕೆಂದರೆ ಭಾರತ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮುಂದಿನ ಪಂದ್ಯಗಳನ್ನು ಸೋತರೆ, ಆಸೀಸ್ ಕೂಡಾ ಹೊರಬೀಳಬಹುದು. ಆದರೆ, ಸರಣಿಯಲ್ಲಿ ಆಸ್ಟ್ರೇಲಿಯಾವು ಕನಿಷ್ಠ ಒಂದು ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳನ್ನು ಗೆದ್ದರೆ, ಫೈನಲ್ ಟಿಕೆಟ್ ಖಚಿತವಾಗುತ್ತದೆ. ಪ್ರಸ್ತುತ ಸರಣಿಯ ಉಳಿದ ಮೂರು ಟೆಸ್ಟ್‌ಗಳಲ್ಲಿ ಭಾರತವು ಕನಿಷ್ಠ ಎರಡನ್ನು ಸೋತರೂ ಕಮಿನ್ಸ್ ಪಡೆಗೆ ಲಾಭವಾಗಲಿದೆ.(AP)
(6 / 7)
ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಭಾರತ 16 ಪಂದ್ಯಗಳಲ್ಲಿ 57.29 ಶೇ. ದರದಲ್ಲಿ 110 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ಫೈನಲ್‌ಗೆ ಹೋಗಲು ರೋಹಿತ್ ಬಳಗವು ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಮೂರು ಟೆಸ್ಟ್‌ಗಳನ್ನು ಗೆಲ್ಲಬೇಕಾಗಿದೆ. ಇಲ್ಲವಾದಲ್ಲಿ ತಂಡವು ಪಾಕಿಸ್ತಾನವನ್ನು ಅವಲಂಬಿಸಬೇಖಾಗುತ್ತದೆ. ಅತ್ತ ಪಾಕ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಹರಿಣಗಳನ್ನು ಸೋಲಿಸಿದರೆ, ಭಾರತದ ಫೈನಲ್ ಹಾದಿ ಸುಗಮವಾಗುತ್ತದೆ.(AFP)
(7 / 7)
ಸದ್ಯ ಶ್ರೀಲಂಕಾ ಆಡಿರುವ 11 ಪಂದ್ಯಗಳಲ್ಲಿ 45.45ರ ಸರಾಸರಿಯಲ್ಲಿ 60 ಅಂಕಗಳನ್ನು ಗಳಿಸಿದೆ. ನ್ಯೂಜಿಲೆಂಡ್ ತಂಡದಿಂದಾಗಿ ಶ್ರೀಲಂಕಾ ಲೀಗ್ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲದಿದ್ದರೆ, ಸಿಂಹಳೀಯರು ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಉಳಿಯುವುದು ಅಸಾಧ್ಯ. ಹೀಗಾಗಿ ಈ ಬಾರಿಯೂ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಲಂಕಾ ಪ್ರವೇಶ ಬಹುತೇಕ ಅಸಾಧ್ಯ.(AP)
ಇತರ ಗ್ಯಾಲರಿಗಳು