logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿ ವೇಳಾಪಟ್ಟಿ ಪ್ರಕಟ; ಮೊದಲ ಟೆಸ್ಟ್‌ಗೆ ಪರ್ತ್‌‌ ಆತಿಥ್ಯ

ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿ ವೇಳಾಪಟ್ಟಿ ಪ್ರಕಟ; ಮೊದಲ ಟೆಸ್ಟ್‌ಗೆ ಪರ್ತ್‌‌ ಆತಿಥ್ಯ

Jayaraj HT Kannada

Mar 26, 2024 05:26 PM IST

ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿ

    • Border-Gavaskar Trophy: 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯು ನವೆಂಬರ್ 22ರಂದು ಪರ್ತ್‌ನಲ್ಲಿ ಆರಂಭವಾಗಲಿದೆ. ಭಾರತ ಕ್ರಿಕೆಟ್‌ ತಂಡದ ಆಸ್ಟ್ರೇಲಿಯಾ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿ
ಭಾರತ-ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿ (ANI)

ಟೆಸ್ಟ್‌ ಕ್ರಿಕೆಟ್‌ನಲ್ಲಿ ಮಹತ್ವದ ಸರಣಿ ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border-Gavaskar Trophy 2024-25). ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯುವ ಪ್ರತಿಷ್ಠಿತ ಸರಣಿಯು ಈ ಬಾರಿ ಆಸೀಸ್‌ ನೆಲದಲ್ಲಿ ವರ್ಷಾಂತ್ಯದಲ್ಲಿ ಆರಂಭವಾಗಲಿದೆ. 2024-25ರಲ್ಲಿ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸವು ನವೆಂಬರ್ 22ರಂದು ಪರ್ತ್‌ ಟೆಸ್ಟ್‌ ಮೂಲಕ ಆರಂಭವಾಗಲಿದೆ. ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಮಾರ್ಚ್‌ 26ರ ಮಂಗಳವಾರ ತಿಳಿಸಿದೆ. ಈ ಹಿಂದೆಯೇ ಸರಣಿಯ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ, ಇದೀಗ ಆರಂಭಿಕ ಪಂದ್ಯದ ಆತಿಥ್ಯ ಸ್ಥಳ ಬದಲಾವಣೆ ಮಾಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಐಪಿಎಲ್​ನಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ‘ವೇಗ’ದೂತ ಜೇಕ್​ ಫ್ರೇಸರ್ ಮೆಕ್​ಗುರ್ಕ್; ಈ ಸಾಧನೆಗೈದ ಮೊದಲ ಆಟಗಾರ

ವಿವಾದಾತ್ಮಕ ಕ್ಯಾಚ್​ಗೆ ಸಂಜು ಸ್ಯಾಮ್ಸನ್ ಔಟ್; ಅಂಪೈರ್​ಗಳ ನಿರ್ಧಾರಕ್ಕೆ ಮೈದಾನದಲ್ಲೇ ಸಿಟ್ಟಾದ ಆರ್​ಆರ್ ನಾಯಕ, ವಿಡಿಯೋ

ಬಲಿಷ್ಠ ರಾಜಸ್ಥಾನವನ್ನು 20 ರನ್‌ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್; ಪಂತ್‌ ಪಡೆಯ ಪ್ಲೇಆಫ್‌ ಕನಸು ಜೀವಂತ

ಬಾಬರ್ ಅಜಮ್-ಇಮಾದ್ ವಾಸಿಮ್ ನಡುವೆ ವಾಗ್ವಾದ; ಟಿ20 ವಿಶ್ವಕಪ್‌ಗೂ ಮುನ್ನ ಪಾಕಿಸ್ತಾನ ಶಿಬಿರದಲ್ಲಿ ಬಿರುಕಿನ ಸುಳಿವು

ಆಸ್ಟ್ರೇಲಿಯಾ ಕ್ರಿಕೆಟ್‌ ತಂಡವನ್ನು ಅವರದ್ದೇ ನೆಲದಲ್ಲಿ ಸತತ ಎರಡು ಟೆಸ್ಟ್ ಸರಣಿಗಳಲ್ಲಿ ಸೋಲಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆ ಭಾರತದ್ದು. ಸತತ ನಾಲ್ಕು ಸರಣಿಗಳಲ್ಲಿ ಗೆದ್ದಿರುವ ಭಾರತವು, ಈ ಬಾರಿ ಮತ್ತೆ ಕಾಂಗರೂಗಳನ್ನು ಅವರದ್ದೇ ನೆಲದಲ್ಲಿ ಮಣಿಸುವವ ವಿಶ್ವಾಸದಲ್ಲಿದೆ. ಈ ವರ್ಷ ಭಾರತವು ಮೊದಲ ಬಾರಿಗೆ ಪರ್ತ್‌ನಲ್ಲಿ ಮೊದಲ ಟೆಸ್ಟ್‌ ಆಡುವ ಮೂಲಕ ಆಸೀಸ್‌ ಪ್ರವಾಸವನ್ನು ಆರಂಭಿಸಲಿದೆ. ಈ ಹಿಂದೆ ಆಸೀಸ್‌ನಲ್ಲಿ ಸರಣಿ ನಡೆದ ಕೊನೆಯ ಎರಡು ಬಾರಿ, ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಅಡಿಲೇಡ್ ಓವಲ್‌ನಲ್ಲಿ ಆರಂಭವಾಗಿತ್ತು.

ಈ ಬಾರಿ ಮೊದಲ ಟೆಸ್ಟ್‌ ಪಂದ್ಯವು ಪರ್ತ್‌ನಲ್ಲಿ ನಡೆದರೆ, ಅಡಿಲೇಡ್ ಮೈದಾನವು ಎರಡನೇ ಟೆಸ್ಟ್ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಡಿಸೆಂಬರ್ 6ರಿಂದ 10ರವರೆಗೆ ಹಗಲು-ರಾತ್ರಿ ಪಂದ್ಯ ನಡೆಯಲಿದೆ. ಮೂರನೇ ಟೆಸ್ಟ್ ಪಂದ್ಯವು ಡಿಸೆಂಬರ್ 14ರಂದು ಬ್ರಿಸ್ಬೇನ್‌ನ ಗಬ್ಬಾದಲ್ಲಿ ಪ್ರಾರಂಭವಾಗಲಿದೆ. ಆ ಬಳಿಕ ಬಾಕ್ಸಿಂಗ್ ಡೇ ಟೆಸ್ಟ್ ಮತ್ತು ಹೊಸ ವರ್ಷದ ಟೆಸ್ಟ್ ಪಂದ್ಯಗಳ ಸ್ಥಳಗಳಲ್ಲಿ ಬದಲಾವಣೆ ಮಾಡಿಲ್ಲ. ಮೆಲ್ಬೋರ್ನ್‌ನ ಐತಿಹಾಸಿಕ ಎಂಸಿಜಿ ಮತ್ತು ಸಿಡ್ನಿಯಲ್ಲಿ ಎಸ್‌ಸಿಜಿ ಮೈದಾನದಲ್ಲಿ ಕೊನೆಯ ಎರಡು ಪಂದ್ಯಗಳು ನಡೆಯಲಿವೆ.

ಹೀಗಿದೆ ಸರಣಿಯ ವೇಳಾಪಟ್ಟಿ

ಪಂದ್ಯಸ್ಥಳದಿನಾಂಕ
1 ನೇ ಟೆಸ್ಟ್ಪರ್ತ್ನವೆಂಬರ್ 22-26
2ನೇ ಟೆಸ್ಟ್ (ಹಗಲು/ರಾತ್ರಿ)
ಅಡಿಲೇಡ್ ಓವಲ್ಡಿಸೆಂಬರ್ 6-10
3 ನೇ ಟೆಸ್ಟ್ಬ್ರಿಸ್ಬೇನ್ಡಿಸೆಂಬರ್ 14-18
4 ನೇ ಟೆಸ್ಟ್ಮೆಲ್ಬೋರ್ನ್ಡಿಸೆಂಬರ್ 26-30
5 ನೇ ಟೆಸ್ಟ್ಸಿಡ್ನಿಜನವರಿ 3-7

ಅಡಿಲೇಡ್ ಟೆಸ್ಟ್ ಪಂದ್ಯಕೂ ಮುನ್ನ ಆಟಗಾರರನ್ನು ಪಿಂಕ್‌ ಚೆಂಡಿನೊಂದಿಗೆ ಅಭ್ಯಾಸ ಪಂದ್ಯವನ್ನಾಡಲು ಬಿಸಿಸಿಐ ಬಯಸಿದೆ ಎಂದು ವರದಿಯಾಗಿದೆ. ಹೀಗಾಗಿ ಮೊದಲ ಮತ್ತು ಎರಡನೇ ಟೆಸ್ಟ್ ಪಂದ್ಯಗಳ ನಡುವೆ ಅಂತರ ಕಾಯ್ದುಕೊಳ್ಳಲಾಗಿದೆ. ಅಡಿಲೇಡ್‌ನಲ್ಲಿ ನಡೆದ ಕೊನೆಯ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡವು ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು.

ಮೊದಲ ಟೆಸ್ಟ್‌ ಪಂದ್ಯ ಪರ್ತ್‌ನಲ್ಲಿ ಯಾಕೆ?

ಹೊಸ ಪರ್ತ್ ಕ್ರೀಡಾಂಗಣದಲ್ಲಿ ಆಸೀಸ್‌ ತಂಡದ ಗೆಲುವಿನ ಪ್ರಮಾಣ ನೂರಕ್ಕೆ ನೂರರಷ್ಟಿದೆ. ಇಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲೂ ಕಾಂಗರೂಗಳು ಗೆದ್ದಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2018ರ ಡಿಸೆಂಬರ್‌ನಲ್ಲಿ ಈ ಮೈದಾನದಲ್ಲಿ ಮೊದಲ ಪಂದ್ಯದಲ್ಲಿ ಕಾಣಿಸಿಕೊಂಡಿದ್ದವು. ಅದರಲ್ಲಿ ಆಸೀಸ್‌ ಗೆದ್ದಿತ್ತು. ಆ ವರ್ಷ ಅಡಿಲೇಡ್ ಮತ್ತು ಮೆಲ್ಬೋರ್ನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಿ, ಅವರದ್ದೇ ನೆಲದಲ್ಲಿ ಚೊಚ್ಚಿಲ ಟೆಸ್ಟ್ ಸರಣಿ ವಶಪಡಿಸಿಕೊಂಡಿತ್ತು. ಭಾರತವು ಕೊನೆಯ ಬಾರಿ ಕೈಗೊಂಡ ಆಸೀಸ್‌ ಪ್ರವಾಸದಲ್ಲಿಯೂ 2-1 ಅಂತರದಿಂದ ಸರಣಿ ಗೆದ್ದಿತು. ಆಗ ಪರ್ತ್ ಮೈದಾನದಲ್ಲಿ ಯಾವುದೇ ಪಂದ್ಯ ನಡೆದಿರಲಿಲ್ಲ.

ಇದನ್ನೂ ಓದಿ | Virat Kohli: ಆಡಿದ 2 ಐಪಿಎಲ್ ಪಂದ್ಯಗಳಲ್ಲಿ 3 ಸಾರ್ವಕಾಲಿಕ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ

ಪರ್ತ್ ಮತ್ತು ಬ್ರಿಸ್ಬೇನ್ ಮೈದಾನವು ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚು ಆರಾಮದಾಯಕವಾಗಿರುವ ಎರಡು ಸ್ಥಳಗಳು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾದ ವೇಳಾಪಟ್ಟಿ ಮುಖ್ಯಸ್ಥ ಪೀಟರ್ ರೋಚ್ ಹೇಳಿದ್ದಾರೆ. ಈ ಎರಡು ಸ್ಥಳಗಳಲ್ಲಿನ ಬೌನ್ಸಿ ಪಿಚ್‌ಗಳು ಪ್ರವಾಸಿ ತಂಡಗಳಿಗೆ ಕಷ್ಟಕರವಾಗುತ್ತದೆ. ಆದರೆ, ಭಾರತವು ತನ್ನ ಕೊನೆಯ ಪ್ರವಾಸದಲ್ಲಿ ಗಬ್ಬಾದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು