Virat Kohli: ಆಡಿದ 2 ಐಪಿಎಲ್ ಪಂದ್ಯಗಳಲ್ಲಿ 3 ಸಾರ್ವಕಾಲಿಕ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
- Virat Kohli: ವಿರಾಟ್ ಕೊಹ್ಲಿ ಎಂದರೆ ದಾಖಲೆಗಳಿಗೆ ಅನ್ವರ್ಥ. ಜಾಗತಿಕ ಕ್ರಿಕೆಟ್‌ನಲ್ಲಿ ಹಲವಾರು ರೆಕಾರ್ಡ್ ಮಾಡಿರುವ ಭಾರತದ ಮಾಜಿ ನಾಯಕ, ಐಪಿಎಲ್ ಪಂದ್ಯಾವಳಿಯಲ್ಲೂ ಅಗ್ರಸಾಧನೆ ಮಾಡಿದ್ದರೆ. ಇದೀಗ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡನೇ ಪಂದ್ಯದ ಬಳಿಕ ವಿರಾಟ್ ಬತ್ತಳಿಕೆಯಲ್ಲಿ ಮೂರು ಸಾರ್ವಕಾಲಿಕ ದಾಖಲೆಗಳು ಸೇರಿಕೊಂಡಿವೆ.
- Virat Kohli: ವಿರಾಟ್ ಕೊಹ್ಲಿ ಎಂದರೆ ದಾಖಲೆಗಳಿಗೆ ಅನ್ವರ್ಥ. ಜಾಗತಿಕ ಕ್ರಿಕೆಟ್‌ನಲ್ಲಿ ಹಲವಾರು ರೆಕಾರ್ಡ್ ಮಾಡಿರುವ ಭಾರತದ ಮಾಜಿ ನಾಯಕ, ಐಪಿಎಲ್ ಪಂದ್ಯಾವಳಿಯಲ್ಲೂ ಅಗ್ರಸಾಧನೆ ಮಾಡಿದ್ದರೆ. ಇದೀಗ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಎರಡನೇ ಪಂದ್ಯದ ಬಳಿಕ ವಿರಾಟ್ ಬತ್ತಳಿಕೆಯಲ್ಲಿ ಮೂರು ಸಾರ್ವಕಾಲಿಕ ದಾಖಲೆಗಳು ಸೇರಿಕೊಂಡಿವೆ.
(1 / 5)
ವಿರಾಟ್ ಕೊಹ್ಲಿ ಮೈದಾನಕ್ಕೆ ಕಾಲಿಟ್ಟರೆ, ಅಲ್ಲಿ ಒಂದಲ್ಲಾ ಒಂದು ದಾಖಲೆ ಸೃಷ್ಟಿಯಾಗುತ್ತದೆ. ದೇಶಕ್ಕಾಗಿಾಡುವಾಗ ಹಲವಾರು ದಾಖಲೆ ನಿರ್ಮಿಸಿರುವ ವಿರಾಟ್, ಐಪಿಎಲ್ ದಾಖಲೆಗಳನ್ನೂ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್, ಅತಿ ಹೆಚ್ಚು ಶತಕಗಳಂತಹ ದಾಖಲೆಗಳು ಕೊಹ್ಲಿ ಹೆಸರಲ್ಲಿದೆ. ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಆಡಿರುವ ಕಿಂಗ್, ಕನಿಷ್ಠ ಮೂರು ಸಾರ್ವಕಾಲಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಸಾಧನೆ ಮಾಡಿದ ಮೊದ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.(AFP)
(2 / 5)
ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ 20 ಎಸೆತಗಳಲ್ಲಿ 21 ರನ್ ಗಳಿಸಿದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟಾರೆಯಾಗಿ, ವಿರಾಟ್ ಈ ಮೈಲಿಗಲ್ಲನ್ನು ದಾಟಿದ ವಿಶ್ವದ ಆರನೇ ಕ್ರಿಕೆಟಿಗ. 14562 ರನ್ ಸಿಡಿಸಿರುವ ಕ್ರಿಸ್ ಗೇಲ್ ಅಗ್ರಸ್ಥಾನದಲ್ಲಿದ್ದಾರೆ.(AFP)
(3 / 5)
ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಕೊಹ್ಲಿ 49 ಎಸೆತಗಳಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್‌ಳೊಂದಿಗೆ ಸ್ಫೋಟಕ 77 ರನ್ ಗಳಿಸಿದರು. ಆ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ಅರ್ಧಶತಕಗಳ ಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ಒಟ್ಟು 92 ಅರ್ಧಶತಕ ಹಾಗೂ 8 ಶತಕಗಳನ್ನು ಗಳಿಸಿದ್ದಾರೆ. ಒಟ್ಟಾರೆಯಾಗಿ, ವಿರಾಟ್ ಟಿ20 ಕ್ರಿಕೆಟ್‌ನಲ್ಲಿ 100 ಬಾರಿ 50 ರನ್ ಗಡಿ ದಾಟಿದ ವಿಶ್ವದ ಮೂರನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕ್ರಿಸ್ ಗೇಲ್ (110 ಬಾರಿ) ಮತ್ತು ಡೇವಿಡ್ ವಾರ್ನರ್ (109 ಬಾರಿ) ಈ ಸಾಧನೆ ಮಾಡಿದ್ದಾರೆ.(PTI)
(4 / 5)
ಇದೇ ವೇಳೆ, ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಎರಡು ಕ್ಯಾಚ್ ಪಡೆದರು. ಆ ಮೂಲಕ ವಿರಾಟ್ ದೇಶೀಯ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಎನಿಸಿಕೊಂಡರು. ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಒಟ್ಟು 174 ಕ್ಯಾಚ್ ಪಡೆದಿದ್ದಾರೆ. ಆ ಮೂಲಕ ಸುರೇಶ್ ರೈನಾ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ. ರೈನಾ ಟಿ20 ಕ್ರಿಕೆಟ್‌ನಲ್ಲಿ 172 ಕ್ಯಾಚ್ ಪಡೆದಿದ್ದಾರೆ.
(5 / 5)
ವಿರಾಟ್ ಕೊಹ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 378 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 361 ಇನ್ನಿಂಗ್ಸ್‌ಗಳಲ್ಲಿ 41.26ರ ಸರಾಸರಿಯಲ್ಲಿ 12092 ರನ್ ಗಳಿಸಿದ್ದಾರೆ. ಅವರು 20 ಓವರ್ ಕ್ರಿಕೆಟ್‌ನಲ್ಲಿ 8 ಶತಕ ಮತ್ತು 92 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ 1085 ಬೌಂಡರಿ ಹಾಗೂ 374 ಸಿಕ್ಸರ್‌ಗಳಿವೆ. 174 ಕ್ಯಾಚ್ ಕೂಡಾ ಸೇರಿವೆ.(PTI)
ಇತರ ಗ್ಯಾಲರಿಗಳು