logo
ಕನ್ನಡ ಸುದ್ದಿ  /  ಕ್ರಿಕೆಟ್  /  India Vs Australia: ಭಾರತ Vs ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್ 2023 ಫೈನಲ್ ಪಂದ್ಯದ ದಿನ ಗೂಗಲ್ ಡೂಡಲ್ ಸಂಭ್ರಮ ವಿಶೇಷ

India vs Australia: ಭಾರತ vs ಆಸ್ಟ್ರೇಲಿಯಾ ಐಸಿಸಿ ವಿಶ್ವಕಪ್ 2023 ಫೈನಲ್ ಪಂದ್ಯದ ದಿನ ಗೂಗಲ್ ಡೂಡಲ್ ಸಂಭ್ರಮ ವಿಶೇಷ

HT Kannada Desk HT Kannada

Nov 19, 2023 07:34 AM IST

ಗೂಗಲ್ ಡೂಡಲ್‌ನಲ್ಲಿ ಗೋಚರಿಸಿದ ಐಸಿಸಿ ವಿಶ್ವಕಪ್‌ 2023ರ ಸಂಭ್ರಮ (ಸ್ಕ್ರೀನ್ ಶಾಟ್‌ ಇಮೇಜ್‌)

  • ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯ ಇಂದು (ನ.19) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಈ ಐತಿಹಾಸಿಕ ಪಂದ್ಯವನ್ನು ಗೂಗಲ್‌ ಆಕರ್ಷಕ ಡೂಡಲ್‌ನೊಂದಿಗೆ ಆಚರಿಸುತ್ತಿದೆ.

ಗೂಗಲ್ ಡೂಡಲ್‌ನಲ್ಲಿ ಗೋಚರಿಸಿದ ಐಸಿಸಿ ವಿಶ್ವಕಪ್‌ 2023ರ ಸಂಭ್ರಮ (ಸ್ಕ್ರೀನ್ ಶಾಟ್‌ ಇಮೇಜ್‌)
ಗೂಗಲ್ ಡೂಡಲ್‌ನಲ್ಲಿ ಗೋಚರಿಸಿದ ಐಸಿಸಿ ವಿಶ್ವಕಪ್‌ 2023ರ ಸಂಭ್ರಮ (ಸ್ಕ್ರೀನ್ ಶಾಟ್‌ ಇಮೇಜ್‌) (Google)

ಐಸಿಸಿ ಪುರುಷರ ಕ್ರಿಕೆಟ್‌ನ ಏಕದಿನ ವಿಶ್ವಕಪ್ 2023ರ ಫೈನಲ್ ಪಂದ್ಯ ಇಂದು (ನ.19). ಭಾರತ ಅಜೇಯವಾಗಿ ಪೈನಲ್ ತಲುಪಿದರೆ, ಆಸ್ಟ್ರೇಲಿಯಾ ಕೊನೆಯ ಎಂಟು ಪಂದ್ಯ ಗೆದ್ದು ಫೈನಲ್‌ಗೆ ತಲುಪಿದೆ. ಇದು ಎರಡು ಬಲಿಷ್ಠ ತಂಡಗಳ ನಡುವಿನ ಪೈಪೋಟಿಯ ಹೈವೋಲ್ಟೇಜ್ ಪಂದ್ಯವಾಗಿದ್ದು ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ. ಇದರಿಂದ ಗೂಗಲ್‌ ಕೂಡ ಹೊರತಾಗಿಲ್ಲ. ಗೂಗಲ್ ಇಂದು ವಿಶೇಷ ಡೂಡಲ್ ಮೂಲಕ ತನ್ನ ಸಂಭ್ರಮವನ್ನು ವ್ಯಕ್ತಪಡಿಸಿದೆ.

ಟ್ರೆಂಡಿಂಗ್​ ಸುದ್ದಿ

ವಿಶ್ವ ಕ್ರಿಕೆಟ್‌ನ ಅತಿ ದೊಡ್ಡ ಸವಾಲು; ಭಾರತ ತಂಡದ ಮುಖ್ಯ ಕೋಚ್ ಹುದ್ದೆ ಕುರಿತು ಜಸ್ಟಿನ್ ಲ್ಯಾಂಗರ್ ಪ್ರತಿಕ್ರಿಯೆ

ಆರ್‌ಸಿಬಿ-ಸಿಎಸ್‌ಕೆ ಪಂದ್ಯ ನೋಡೋಕೆ ಬೈಕ್‌ನಲ್ಲಿ ಹೋಗ್ತಿದ್ದಾರಾ; ತಲೆಗೆ ಹೆಲ್ಮೆಟ್ ಮರೆಯಬೇಡಿ, ಬೆಂಗಳೂರು ಟ್ರಾಫಿಕ್ ಪೊಲೀಸರ ಸಂದೇಶ

ನಿರ್ಣಾಯಕ​ ಪಂದ್ಯದಲ್ಲಿ ಟಾಸ್ ಜಯಿಸಿದ ಸಿಎಸ್​ಕೆ ಬೌಲಿಂಗ್ ಆಯ್ಕೆ; ಆರ್​ಸಿಬಿ 18 ರನ್​ಗಳಿಂದ ಗೆದ್ದರಷ್ಟೆ ಪ್ಲೇಆಫ್​ ಟಿಕೆಟ್

RCB vs CSK: ಕೃಪೆ ತೋರು ವರುಣ, ಮ್ಯಾಚ್ ನಡೀಲಿ ಬಿಡು ಪ್ಲೀಸ್; ಮಳೆರಾಯನಿಗೆ ಫ್ಯಾನ್ಸ್ ಮೊರೆ, ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತ ಜನಸಾಗರ

ಐಸಿಸಿ ವರ್ಲ್ಡ್ ಕಪ್ 2023ರ ಪಂದ್ಯಾವಳಿಯಲ್ಲಿ ಆತಿಥೇಯ ಭಾರತವೂ ಸೇರಿ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನೆದರ್ಲ್ಯಾಂಡ್ಸ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಭಾಗವಹಿಸಿವೆ. ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ ಫೈನಲ್ ಪಂದ್ಯ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಗ್ರೂಪ್ ಹಂತದಲ್ಲಿ 45 ಪಂದ್ಯಗಳು ನಡೆದವು. ಇದರಲ್ಲಿ ಪ್ರತಿಯೊಂದು ತಂಡವು ಪ್ರತಿಯೊಂದು ತಂಡವನ್ನು ಎದುರಿಸಿವೆ. ನಾಕ್ಔಟ್ ಸುತ್ತಿನಲ್ಲಿಅಗ್ರ ನಾಲ್ಕು ತಂಡಗಳಿದ್ದವು. ಇಲ್ಲಿ ಆಸ್ಟ್ರೇಲಿಯಾ ದಕ್ಷಿಣಾ ಆಫ್ರಿಕಾವನ್ನೂ, ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನೂ ಸೋಲಿಸಿ ಅಂತಿಮ ಹಣಾಹಣಿಗೆ ಸಜ್ಜಾಗಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್‌ ನಡೆಯಲಿದ್ದು, ಪ್ರತಿಷ್ಠಿತ ಟ್ರೋಫಿಗಾಗಿ ಪೈಪೋಟಿ ನಡೆಸಲಿವೆ.

ಹೀಗಿದೆ ನೋಡಿ ಗೂಗಲ್‌ ಡೂಡಲ್

ಕ್ರಿಕೆಟ್ ದಿಗ್ಗಜ ಟೀಮ್‌ಗಳ ಸಂಘರ್ಷ ಎಂದು ಕರೆಯಲ್ಪಟ್ಟಿರುವ ಈ ಐತಿಹಾಸಿಕ ಪಂದ್ಯವನ್ನು ಗೂಗಲ್‌ ಆಕರ್ಷಕ ಡೂಡಲ್‌ನೊಂದಿಗೆ ಆಚರಿಸುತ್ತಿದೆ. ಇದು ಆಚರಣೆಗೆ ಜತೆಯಾಗಲು ಕ್ರಿಕೆಟ್ ಪ್ರೇಮಿಗಳಿಗೆ ವರ್ಚುವಲ್ ಆಹ್ವಾನವಾಗಿ ಕಾರ್ಯನಿರ್ವಹಿಸುತ್ತದೆ.

ಗೂಗಲ್ ತನ್ನ ಡೂಡಲ್ ಕುರಿತು ವಿವರಿಸುತ್ತ, “ಇಂದಿನ ಡೂಡಲ್ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023 ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಅನ್ನು ಆಚರಿಸುತ್ತಿದೆ ಎಂದು ಹೇಳಿಕೊಂಡಿದೆ.

ಐಕಾನಿಕ್ ಕ್ರಿಕೆಟ್ ಅಂಶಗಳ ನಡುವೆ ವಿಶ್ವಕಪ್‌ ಕಣ್ಣಗೆ ಕಟ್ಟುವಂತೆ ಗೂಗಲ್ ಡೂಡಲ್ ಗ್ರಾಂಡ್ ಫೈನಲ್ ಪಂದ್ಯದ ಸಾರವನ್ನು ಸೆರೆಹಿಡಿದಿದೆ.

ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್‌ಗೆ ಲಗ್ಗೆ ಇಟ್ಟದ್ದು ಹೀಗೆ

ಇಡೀ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತವು ಸತತ 10 ಪಂದ್ಯಗಳನ್ನು ಗೆದ್ದಿದೆ. ಒಂದೇ ಒಂದು ಪಂದ್ಯವನ್ನು ಸೋಲದೆ ಅಜೇಯವಾಗಿ ಫೈನಲ್‌ಗೆ ತಲುಪಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡವು ನ್ಯೂಜಿಲೆಂಡ್ ತಂಡವನ್ನು 70 ರನ್‌ಗಳಿಂದ ಸೋಲಿಸಿತು.

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನವೆಂಬರ್ 16 ರಂದು ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾವನ್ನು 3 ವಿಕೆಟ್‌ಗಳಿಂದ ಸೋಲಿಸಿತು. ಆಸ್ಟ್ರೇಲಿಯಾ ತನ್ನ ಆರಂಭಿಕ ಪಂದ್ಯದಲ್ಲಿ ಭಾರತ ಮತ್ತು ಲೀಗ್ ಹಂತದಲ್ಲಿ ತನ್ನ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿದೆ. ಆದರೆ ನಂತರ ನಡೆದ ಸತತ ಎಂಟು ಪಂದ್ಯಗಳನ್ನು ಗೆದ್ದುಕೊಂಡಿದೆ.

IPL, 2024

Live

RCB

41/0

5.4 Overs

VS

CSK

YTB

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ