Asian Games Cricket: ಏಷ್ಯನ್ ಗೇಮ್ಸ್‌ನಲ್ಲಿ ಬಾಂಗ್ಲಾದೇಶ ಮಣಿಸಿ ಫೈನಲ್ ಪ್ರವೇಶಿಸಿದ ಭಾರತದ ವನಿತೆಯರ ತಂಡ; ಪದಕ ಖಚಿತ
Sep 24, 2023 10:33 AM IST
ಏಷ್ಯನೇ ಗೇಮ್ಸ್ ಕ್ರಿಕೆಟ್ ಸೆಮಿ ಫೈನಲ್‌ನಲ್ಲಿ ಬಾಂಗ್ಲಾದೇಶ ವನಿತೆಯರನ್ನು ಮಣಿಸಿರುವ ಭಾರತದ ವನಿತೆಯರು ಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದ್ದಾರೆ.
ಏಷ್ಯನೇ ಗೇಮ್ಸ್ ಕ್ರಿಕೆಟ್ ಸೆಮಿ ಫೈನಲ್‌ನಲ್ಲಿ ಬಾಂಗ್ಲಾದೇಶ ವನಿತೆಯರನ್ನು ಮಣಿಸಿರುವ ಭಾರತದ ವನಿತೆಯರು ಫೈನಲ್ ಪ್ರವೇಶಿಸುವ ಮೂಲಕ ಪದಕ ಖಚಿತಪಡಿಸಿದ್ದಾರೆ.
ಹ್ಯಾಂಗ್‌ಝೌ (ಚೀನಾ): ಏಷ್ಯನ್ ಗೇಮ್ಸ್ 2023ರ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಭಾರತದ ವನಿತೆಯರ ತಂಡ ಪದಕ ಗೆಲ್ಲೋದು ಖಚಿತವಾಗಿದೆ. ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವನಿತೆಯರ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿ ಭಾರತ ಫೈನಲ್ ಪ್ರವೇಶಿಸಿದೆ. ಆ ಮೂಲಕ ಚಿನ್ನ ಅಥವಾ ಬೆಳ್ಳಿ ಪದಕ ಪಕ್ಕಾ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ತಂಡ ಬಲಿಷ್ಠ ಸ್ಮೃತಿ ಮಂಧಾನ ಪಡೆಯ ಬೌಲಿಂಗ್ ಎದುರು ತತ್ತರಿಸಿತು. 17.5 ಓವರ್‌ಗಳಿಗೆ 51 ರನ್ ಗಳಿಸಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು. 52 ರನ್‌ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಭಾರತ 8.2 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಅಲ್ಲದೆ, ಗ್ರ್ಯಾಂಡ್ ಆಗಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಬಾಂಗ್ಲಾ ನೀಡಿದ್ದ ಸಾಧಾರಣ ಗುರಿಯನ್ನು ಬೆಟ್ಟಿದ ಟೀಂ ಇಂಡಿಯಾ ಇನ್ನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ನಾಯಕ ಸ್ಮೃತಿ ಮಂದಾನ ವಿಕೆಟ್ ಕಳೆದುಕೊಂಡಿತು. ಕೇವಲ 7 ರನ್ ಗಳಿಸಿ ಮಂಧಾನ ಮಾರುಫಾ ಅಕ್ಟರ್ ಎಸೆತದಲ್ಲಿ ಶಮೀಮಾ ಸುಲ್ತಾನಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಶಫಾಲಿ ವರ್ಮಾ ಮತ್ತು ಜೆಮಿಯಾ ರಾಡ್ರಿಗಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಶಫಾಲಿ ವರ್ಮಾ 17 ರನ್ ಗಳಿಸಿ ಔಟಾದರೆ ಜೆಮಿಯಾ ರಾಡ್ರಿಗಸ್ ಔಟಾಗದೆ 20 ರನ್ ಗಳಿಸಿದರೆ, ಕನಿಕಾ ಅಹುಜಾ 1 ರನ್ ಗಳಿಸಿ ಔಟಾಗದೆ ಉಳಿದರು. ಬಾಂಗ್ಲಾ ಪರ ಮಾರುಫಾ ಅಕ್ಟರ್ ಮತ್ತು ಫಾಹಿಮಾ ಖಾತುನ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಆಟಗಾರ್ತಿಯರು ಟೀಂ ಇಂಡಿಯಾದ ಬೌಲರ್‌ಗಳ ಎದುರು ಪೆಲಿವಿಯನ್ ಪೆರೇಡ್ ನಡೆಸಿದರು. ನಾಯಕಿ ನಿಗರ್ ಸುಲ್ತಾನಾ ಅವರು 12 ರನ್ ಗಳಿಸಿದ್ದು ಹೊರತುಪಡಿಸಿದರೆ ಬೇರೆ ಯಾವೊಬ್ಬ ಆಟಗಾರ್ತಿಯೂ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಶಾತಿ ರಾಣಿ (0), ಶಮೀಮಾ ಸುಲ್ತಾನಾ (0), ಸೋಭಾನಾ ಮೊಸ್ತರಿ (8), ಶೋರ್ನಾ ಅಕ್ಟರ್ (0), ರಿತು ಮೋನಿ (8), ಫಾಹಿಮಾ ಖಾತುನ್ (0), ರಬೇಯಾ ಖಾನ್ (3), ಸುಲ್ತಾನ ಖಾತುನ್ (3), ಮಾರುಫಾ ಅಕ್ಟರ್ (0), ನಹಿದಾ ಅಕ್ಟರ್ ಔಟಾಗದರೆ 9 ರನ್ ಗಳಿಸಿದರು. ಟೀಂ ಇಂಡಿಯಾ ಪರ ಪೂಜಾ ವಸ್ತ್ರಾಕರ್ 4 ಓವರ್‌ಗಳಲ್ಲಿ 17 ರನ್ ನೀಡಿ 4 ವಿಕೆಟ್ ಪಡೆದರು. ಟೈಟಾಸ್ ಸಾಧು, ಅಮಂಜೋತ್ ಕೌರ್, ರಾಜೇಶ್ವರಿ ಗಾಯಕ್ವಾಡ್ ಹಾಗೂ ದೇವಿಕಾ ವೈದ್ಯ ತಲಾ 1 ವಿಕೆಟ್ ಪಡೆದರು.
ಭಾರತ ವನಿತೆಯ ತಂಡ
ಸ್ಮೃತಿ ಮಂಧಾನ (ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಕನಿಕಾ ಅಹುಜಾ, ರಿಚಾ ಘೋಷ್ (ವಿಕೆಟ್ ಕೀಪರ್) ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಅಮಂಜೋತ್ ಕೌರ್, ಪೂಜಾ ವಸ್ತ್ರಾಕರ್, ಟೈಟಾಸ್ ಸಾಧು, ರಾಜೇಶ್ವರಿ ಗಾಯಕ್ವಾಡ್,
ಬಾಂಗ್ಲಾದೇಶ ವನಿತೆಯ ತಂಡ
ಶಮೀಮಾ ಸುಲ್ತಾನಾ, ಶಾಥಿ ರಾಣಿ, ನಿಗರ್ ಸುಲ್ತಾನಾ (ನಾಯಕಿ, ವಿಕೆಟ್ ಕೀಪರ್) ಸೋಭಾನಾ ಮೊಸ್ತರಿ, ರಿತು ಮೋನಿ, ಮಾರುಫಾ ಅಕ್ಟರ್, ನಹಿದಾ ಅಕ್ಟರ್, ಶೋರ್ನಾ ಅಕ್ಟರ್, ಫಾಹಿಮಾ ಖಾತುನ್, ಸುಲ್ತಾನಾ ಖಾತುನ್, ರಬೇಯಾ ಖಾನ್