logo
ಕನ್ನಡ ಸುದ್ದಿ  /  ಕ್ರಿಕೆಟ್  /  ಚೆನ್ನಾಗಿ ಆಡಿದ್ದೀಯಾ ಮಗನೆ, ಆದರೆ 23 ರನ್ನಿಂದ ಫೆರಾರಿ ಕಾರು ಕಳ್ಕೊಂಡೆ; ಪುತ್ರ ಆರ್ಯವೀರ್ 297 ರನ್ ಗಳಿಸಿದ ಬಳಿಕ ಸೆಹ್ವಾಗ್ ಹೇಳಿದ್ದಿಷ್ಟು

ಚೆನ್ನಾಗಿ ಆಡಿದ್ದೀಯಾ ಮಗನೆ, ಆದರೆ 23 ರನ್ನಿಂದ ಫೆರಾರಿ ಕಾರು ಕಳ್ಕೊಂಡೆ; ಪುತ್ರ ಆರ್ಯವೀರ್ 297 ರನ್ ಗಳಿಸಿದ ಬಳಿಕ ಸೆಹ್ವಾಗ್ ಹೇಳಿದ್ದಿಷ್ಟು

Prasanna Kumar P N HT Kannada

Nov 22, 2024 11:39 PM IST

google News

23 ರನ್ ಅಂತರದಿಂದ ಫೆರಾರಿ ಕಾರು ಕಳೆದುಕೊಂಡ; ಪುತ್ರ ಆರ್ಯವೀರ್ 297 ರನ್ ಗಳಿಸಿದ ಬಳಿಕ ಸೆಹ್ವಾಗ್ ಹೇಳಿದ್ದಿಷ್ಟು

    • Aaryavir Sehwag: ಕೂಚ್ ಬೆಹಾರ್ ಟ್ರೋಫಿಯಲ್ಲಿ ಮೇಘಾಲಯ ವಿರುದ್ಧ ಮಗ ಆರ್ಯವೀರ್ ಸೆಹ್ವಾಗ್ 297 ರನ್ ಗಳಿಸಿ ಔಟಾದ ಬಳಿಕ ಪ್ರತಿಕ್ರಿಯಿಸಿದ ವೀರೇಂದ್ರ ಸೆಹ್ವಾಗ್, 23 ರನ್​ಗಳಿಂದ ಫೆರಾರಿ ಕಾರು ಕಳೆದುಕೊಂಡ ಎಂದು ಹೇಳಿದ್ದಾರೆ.
23 ರನ್ ಅಂತರದಿಂದ ಫೆರಾರಿ ಕಾರು ಕಳೆದುಕೊಂಡ; ಪುತ್ರ ಆರ್ಯವೀರ್ 297 ರನ್ ಗಳಿಸಿದ ಬಳಿಕ ಸೆಹ್ವಾಗ್ ಹೇಳಿದ್ದಿಷ್ಟು
23 ರನ್ ಅಂತರದಿಂದ ಫೆರಾರಿ ಕಾರು ಕಳೆದುಕೊಂಡ; ಪುತ್ರ ಆರ್ಯವೀರ್ 297 ರನ್ ಗಳಿಸಿದ ಬಳಿಕ ಸೆಹ್ವಾಗ್ ಹೇಳಿದ್ದಿಷ್ಟು

ವೀರೇಂದ್ರ ಸೆಹ್ವಾಗ್.. ಈ ಹೆಸರು ವಿಶ್ವ ಕ್ರಿಕೆಟ್​ನಲ್ಲಿ ಗೊತ್ತಿಲ್ಲದವರೇ ಇಲ್ಲ. ತಂಡ ಯಾವುದೇ​ ಇರಲಿ ದಂಡಂ ದಶಗುಣಂ ಎನ್ನುತ್ತಿದ್ದ ಈ ಡ್ಯಾಶಿಂಗ್ ಓಪನರ್, ಎದುರಾಳಿ ಬೌಲರ್​ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಇದೀಗ ಸೆಹ್ವಾಗ್ ಅವರ ಪುತ್ರ ಜೂನಿಯರ್​ ಸೆಹ್ವಾಗ್ ಕೂಚ್ ಬೆಹಾರ್ ಟ್ರೋಫಿಯಲ್ಲಿ ಸಿಡಿಲಬ್ಬರದ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಅಪ್ಪನಂತೆಯೇ ಬೌಲರ್​ಗಳಿಗೆ ವಿರುದ್ಧ ಕರುಣೆ ತೋರದ ಆರ್ಯವೀರ್​ ಕೇವಲ ಮೂರೇ ರನ್​ಗಳಲ್ಲಿ ತ್ರಿಶತಕ ವಂಚಿತರಾಗಿದ್ದಾರೆ.

ಮೇಘಾಲಯ ವಿರುದ್ಧ ಅಬ್ಬರಿಸಿ ಬೊಬ್ಬರಿದ ಆರ್ಯವೀರ್​ಗೆ ತಂದೆ ವೀರೇಂದ್ರ ಸೆಹ್ವಾಗ್ ಸೇರಿದಂತೆ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆರ್ಯವೀರ್ 309 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 51 ಬೌಂಡರಿಗಳ ನೆರವಿನಿಂದ 297 ರನ್ ಗಳಿಸಿದ್ದಾರೆ. ಸೆಹ್ವಾಗ್ ಕ್ರಿಕೆಟ್​ ಇತಿಹಾಸದಲ್ಲಿ ಅತ್ಯಧಿಕ ಡಬಲ್ ಸೆಂಚುರಿ ಸಿಡಿಸಿದ್ದು ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದೀಗ ಅವರ ಹಾದಿಯಲ್ಲೇ ಮಗನೂ ಸಾಗುತ್ತಿದ್ದಾನೆ. ಡಬಲ್ ಸೆಂಚುರಿ ಬಾರಿಸುವ ಮೂಲಕ ಸಂಚಲನ ಮೂಡಿಸಿದ್ದಾನೆ. ಆರ್ಯವೀರ್ ಸಹ ಬೆಂಕಿ-ಬಿರುಗಾಳಿ ಆಟದ ಮೂಲಕ ತಾನು ಕೂಡ ಅಪ್ಪನಂತೆಯೇ ಎಂಬುದನ್ನು ಸಾಬೀತುಪಡಿಸಿದ್ದಾರೆ.

'ಫೆರಾರಿ ಕಾರು ಕಳೆದುಕೊಂಡ'

ಆರ್ಯವೀರ್ 297 ರನ್ ಗಳಿಸಿ ಔಟಾದ ಬಳಿಕ ಕೇವಲ 23 ರನ್​ಗಳ ಅಂತರದಿಂದ ಆರ್ಯವೀರ್​ ಫೆರಾರಿ ಕಾರು ಕಳೆದುಕೊಂಡ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. ನನ್ನ 319 ರನ್​ಗಳ ದಾಖಲೆ ಮುರಿದರೆ ನಿನಗೆ ಫೆರಾರಿ ಕಾರು ಕೊಡಿಸುವೆ ಎಂದು ಭರವಸೆ ನೀಡಿದ್ದೆ. ಆದರೆ ಇದು ಸಾಧ್ಯವಾಗಿಲ್ಲ ಎಂದು ವೀರು ಹೇಳಿದ್ದಾರೆ. ತಂದೆಯ ದಾಖಲೆ ಮುರಿಯುವ ಅವಕಾಶ ಮತ್ತು ಫೆರಾರಿ ಕಾರು ಪಡೆಯುವ ಎರಡೂ ಅವಕಾಶಗಳನ್ನೂ ಆರ್ಯವೀರ್, ಕಳೆದುಕೊಂಡಿದ್ದಾರೆ. ಅಲ್ಲದೆ, ಮಗನ ಆಟವನ್ನು ಸೆಹ್ವಾಗ್ ಶ್ಲಾಘಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​​ ಹಾಕಿದ್ದಾರೆ.

ಚೆನ್ನಾಗಿ ಆಡಿದ್ದೀಯಾ ಎಂದ ಸೆಹ್ವಾಗ್

ಆರ್ಯವೀರ್ ಸೆಹ್ವಾಗ್ ಚೆನ್ನಾಡಿ ಆಡಿದ್ದೀಯಾ. ಆದರೆ ನೀನು 23 ರನ್​ಗಳ ಅಂತರದಿಂದ ಫೆರಾರಿ ಕಾರು ತಪ್ಪಿಸಿಕೊಂಡೆ. ಅದ್ಭುತ ಆಟ ಆಡಿದ್ದೀರಿ. ಹಾಗಂತ ಭರವಸೆ ಕಳೆದುಕೊಳ್ಳಬೇಡ. ನಿನ್ನಲ್ಲಿರುವ ಬೆಂಕಿ ಆರದಿರಲಿ. ನೀನು ಶತಕಗಳು, ಡಬಲ್ಸ್ ಮತ್ತು ಟ್ರಿಪಲ್​ಗಳನ್ನು ಗಳಿಸಬೇಕು ಎಂದು ಸೆಹ್ವಾಗ್ ಬರೆದಿದ್ದಾರೆ. 2015ರಲ್ಲಿ ಸೆಹ್ವಾಗ್, ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷಾ ಭೋಗ್ಲೆ ಅವರೊಂದಿಗಿನ ಚಾಟ್‌ನಲ್ಲಿ ತಾನು ಸಿಡಿಸಿದ್ದ 319 ಸ್ಕೋರ್ ಅನ್ನು ಮುರಿದರೆ ತಮ್ಮ ಪುತ್ರರಿಗೆ ಫೆರಾರಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆರ್ಯವೀರ್ ಸನಿಹಕ್ಕೆ ಬಂದು ಅವಕಾಶ ಕಳೆದುಕೊಂಡರು.

ಟೆಸ್ಟ್ ಕ್ರಿಕೆಟ್‌ನಲ್ಲಿ ನಾನು ಕೆಲವು ದೊಡ್ಡ ಸ್ಕೋರ್‌ ಮಾಡಿದ್ದೇನೆ ಎಂದು ನನ್ನ ಮಕ್ಕಳಿಗೆ ತಿಳಿದಿದೆ. ಹಾಗಾಗಿ ನಾನು ಅವರಿಗೆ ಹೇಳಿದ್ದೇನೆ, ನೀವು ಶಾಲಾ ಕ್ರಿಕೆಟ್‌ನಲ್ಲೂ 319 ರನ್‌ಗಳ ಗಡಿಯನ್ನು ದಾಟಿದರೆ, ನಾನು ನಿಮಗೆ ಫೆರಾರಿಯನ್ನು ನೀಡುತ್ತೇನೆ ಎಂದು ಅವರು 2015 ರಲ್ಲಿ ಫಿರೋಜ್ ಷಾ ಕೋಟ್ಲಾದಲ್ಲಿ ಭಾರತ-ದಕ್ಷಿಣ ಆಫ್ರಿಕಾದ 4ನೇ ಟೆಸ್ಟ್‌ಗೆ ಮುಂಚಿತವಾಗಿ ಅವಕಾಶ ನೀಡಿದಾಗ ಭೋಗ್ಲೆಗೆ ಹೇಳಿದ್ದರು.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ