RCB Full Squad: ಡಬ್ಲ್ಯುಪಿಎಲ್ ಮಿನಿ ಹರಾಜಿನ ಬಳಿಕ ಆರ್‌ಸಿಬಿ ತಂಡ ಮತ್ತಷ್ಟು ಬಲಿಷ್ಠ; ಸತತ 2ನೇ ಟ್ರೋಫಿ ಲೋಡಿಂಗ್
Dec 16, 2024 11:21 AM IST
ಡಬ್ಲ್ಯುಪಿಎಲ್ ಹರಾಜಿನ ಬಳಿ ಆರ್‌ಸಿಬಿ ತಂಡ ಮತ್ತಷ್ಟು ಬಲಿಷ್ಠ; ಸತತ 2ನೇ ಟ್ರೋಫಿ ಲೋಡಿಂಗ್
- ಡಬ್ಲ್ಯುಪಿಎಲ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, 2025ರ ವಿಮೆನ್ಸ್ ಪ್ರೀಮಿಯರ್ ಲೀಗ್‌ಗೆ ಬಲಿಷ್ಠ ತಂಡವನ್ನು ಕಟ್ಟಿದೆ. ಮಿನಿ ಹರಾಜಿನಲ್ಲಿ ಮತ್ತೆ ನಾಲ್ವರನ್ನು ಖರೀದಿಸಿದ್ದು, ತಂಡದ ಬಲ ಹೆಚ್ಚಿದೆ. ಈ ಬಾರಿ ಆರ್‌ಸಿಬಿ ವನಿತೆಯರ ತಂಡ ಸತತ ಎರಡನೇ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
ಬೆಂಗಳೂರಿನಲ್ಲಿ ಡಬ್ಲ್ಯುಪಿಎಲ್ ಮಿನಿ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಹರಾಜಿನ ಬಳಿಕ ತನ್ನ ತಂಡವನ್ನು ಮತ್ತಷ್ಟು ಬಲಿಷ್ಠವಾಗಿಸಿದೆ. ಹರಾಜಿನಲ್ಲಿ ನಾಲ್ವರು ಹೊಸ ಆಟಗಾರ್ತಿಯರನ್ನು ತಂಡ ಖರೀದಿ ಮಾಡಿದ್ದು, ಉತ್ತರಾಖಂಡದ ಲೆಗ್ ಸ್ಪಿನ್ನರ್ ಪ್ರೇಮಾ ರಾವತ್ ಮೇಲೆ ಫ್ರಾಂಚೈಸ್ ಬರೋಬ್ಬರಿ 1.20 ಕೋಟಿ ಸುರಿದಿದೆ. ಇದೇ ವೇಳೆ ಜೋಶಿತಾ ವಿಜೆ, ರಾಘ್ವಿ ಬಿಸ್ಟ್ ಮತ್ತು ಜಾಗರವಿ ಪವಾರ್ ಅವರನ್ನು ಆರ್‌ಸಿಬಿ ವನಿತೆಯರ ತಂಡ ಖರೀದಿ ಮಾಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡವು ಕೊನೆಯ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಗೊತ್ತೇ ಇದೆ. ಆ ಮೂಲಕ ಆರ್‌ಸಿಬಿ ಫ್ರಾಂಚೈಸಿಯು ಕೊನೆಗೂ ಪ್ರಶಸ್ತಿ ಬರವನ್ನು ನೀಗಿಸಿತು. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳ ಅಂತರದಿಂದ ಸೋಲಿಸಿದ ತಂಡ ಮೊದಲ ಬಾರಿಗೆ ಕಪ್ ಗೆದ್ದು ಸಂಭ್ರಮಿಸಿತು. 2025ರ ಆವೃತ್ತಿಗೆ ಹಾಲಿ ಚಾಂಪಿಯನ್‌ಗಳಾಗಿ ಪ್ರವೇಶಿಸುತ್ತಿರುವ ತಂಡವು ಮತ್ತಷ್ಟು ಬಲಿಷ್ಠವಾಗಿದೆ.
ಈಗಾಗಲೇ ತಂಡದಲ್ಲಿ ಸ್ಮೃತಿ ಮಂಧಾನ, ರಿಚಾ ಘೋಷ್, ಎಲಿಸ್ ಪೆರ್ರಿ ಮತ್ತು ಸೋಫಿ ಡಿವೈನ್ ಅವರಂಥ ಬಲಿಷ್ಠ ಆಟಗಾರ್ತಿಯರು ಇದ್ದಾರೆ. ಅಲ್ಲದೆ ಹರಾಜಿಗೂ ಮುನ್ನ ಒಂದು ತಂಡಕ್ಕೆ ಬೇಕಾದ ಎಲ್ಲಾ ಆಟಗಾರರನ್ನು ಉಳಿಸಿಕೊಂಡಿದೆ. ಅದರ ನಡುವೆ ಯುಪಿ ವಾರಿಯರ್ಸ್ ತಂಡದಿಂದ ಡ್ಯಾನಿ ವ್ಯಾಟ್ ಅವರನ್ನು ಟ್ರೇಡಿಂಗ್ ಮಾಡಿದೆ. ಒಟ್ಟು 14 ಆಟಗಾರರನ್ನು ಆರ್‌ಸಿಬಿ ಉಳಿಸಿಕೊಂಡಿದ್ದು, 6 ಆಟಗಾರ್ತಿಯರನ್ನು ಬಿಡುಗಡೆ ಮಾಡಿದೆ. ಕೇವಲ 3.5 ಕೋಟಿ ಪರ್ಸ್ ಹಣದೊಂದಿಗೆ ಪ್ರೇಮಾ ರಾವತ್ ಅವರನ್ನು 1.2 ಕೋಟಿಗೆ ತಂಡ ಖರೀದಿಸಿದೆ.
ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ಆಟಗಾರ್ತಿಯರ ಸಂಪೂರ್ಣ ಪಟ್ಟಿ
- ಪ್ರೇಮಾ ರಾವತ್ (ಭಾರತ) - 1.20 ಕೋಟಿ ರೂ.
- ಜೋಶಿತಾ ವಿಜೆ (ಭಾರತ) - 10 ಲಕ್ಷ ರೂ.
- ರಾಘ್ವಿ ಬಿಸ್ಟ್ (ಭಾರತ) - 10 ಲಕ್ಷ ರೂ.
- ಜಾಗರವಿ ಪವಾರ್ (ಭಾರತ) - 10 ಲಕ್ಷ ರೂ.
ಇದನ್ನೂ ಓದಿ | WPL 2025 Auction: 1.60 ಕೋಟಿಗೆ ಮುಂಬೈ ಇಂಡಿಯನ್ಸ್ ಪಾಲಾದ 16 ವರ್ಷದ ಜಿ ಕಮಲಿನಿ ಯಾರು? ಸಿಮ್ರಾನ್ ಶೇಖ್ ದುಬಾರಿ ಆಟಗಾರ್ತಿ
2025ರ ಡಬ್ಲ್ಯುಪಿಎಲ್‌ಗೆ ಆರ್‌ಸಿಬಿ ಸಂಪೂರ್ಣ ತಂಡ
ಸ್ಮೃತಿ ಮಂಧಾನ (ನಾಯಕಿ), ಸಬ್ಬಿನೇನಿ ಮೇಘನಾ, ರಿಚಾ ಘೋಷ್, ಎಲಿಸ್ ಪೆರ್ರಿ, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಆಶಾ ಸೋಭಾನ, ಸೋಫಿ ಡಿವೈನ್, ರೇಣುಕಾ ಸಿಂಗ್, ಸೋಫಿ ಮೊಲಿನ್ಯೂ, ಏಕ್ತಾ ಬಿಶ್ತ್, ಕೇಟ್ ಕ್ರಾಸ್, ಕನಿಕಾ ಅಹುಜಾ, ಡ್ಯಾನಿ ವ್ಯಾಟ್ (ಟ್ರೇಡಿಂಗ್ -1.20 ಕೋಟಿ ರೂ.), ಜೋಶಿತಾ ವಿಜೆ, ರಾಘ್ವಿ ಬಿಸ್ತ್, ಜಾಗರವಿ ಪವಾರ್.