ಡಬ್ಲ್ಯುಪಿಎಲ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, 2025ರ ವಿಮೆನ್ಸ್ ಪ್ರೀಮಿಯರ್ ಲೀಗ್‌ಗೆ ಬಲಿಷ್ಠ ತಂಡವನ್ನು ಕಟ್ಟಿದೆ. ಮಿನಿ ಹರಾಜಿನಲ್ಲಿ ಮತ್ತೆ ನಾಲ್ವರನ್ನು ಖರೀದಿಸಿದ್ದು, ತಂಡದ ಬಲ ಹೆಚ್ಚಿದೆ. ಈ ಬಾರಿ ಆರ್‌ಸಿಬಿ ವನಿತೆಯರ ತಂಡ ಸತತ ಎರಡನೇ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.