logo
ಕನ್ನಡ ಸುದ್ದಿ  /  ಕ್ರಿಕೆಟ್  /  ಡಬ್ಲ್ಯುಪಿಎಲ್​ನಲ್ಲಿ ಟ್ರೋಫಿ ಗೆದ್ದ ನಂತರ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಭಾವುಕ, ಆಶಾ ಶೋಭನಾ ಕಣ್ಣೀರು

ಡಬ್ಲ್ಯುಪಿಎಲ್​ನಲ್ಲಿ ಟ್ರೋಫಿ ಗೆದ್ದ ನಂತರ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಭಾವುಕ, ಆಶಾ ಶೋಭನಾ ಕಣ್ಣೀರು

Prasanna Kumar P N HT Kannada

Mar 19, 2024 06:34 PM IST

ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮಣಿಸಿದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಭಾವುಕ

    • Smriti Mandhana : ವುಮೆನ್ಸ್ ಪ್ರೀಯರ್​​ ಲೀಗ್​​​ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ 8 ವಿಕೆಟ್​​ಗಳಿಂದ ಗೆದ್ದು ಬೀಗಿದೆ. 
ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮಣಿಸಿದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಭಾವುಕ
ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮಣಿಸಿದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಭಾವುಕ

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿ ಮಹಿಳಾ ಪ್ರೀಮಿಯರ್ ಲೀಗ್ 2024 ರ (WPL 2024) ಪ್ರಶಸ್ತಿಯನ್ನು ಎತ್ತಿಹಿಡಿದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂಧಾನ ಅವರು ಭಾವುಕರಾದರು. ಇದು ಡಬ್ಲ್ಯುಪಿಎಲ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಎರಡರಲ್ಲೂ ಆರ್​ಸಿಬಿಗೆ ಗೆದ್ದ ಪ್ರಶಸ್ತಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಹೊಸ ಅಧ್ಯಾಯ ಆರಂಭ, ರೋಚಕ ಹಣಾಹಣಿಯಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ಆರ್​ಸಿಬಿ; ಸೋತು ಹೊರಬಿದ್ದ ಸಿಎಸ್​ಕೆ

ಫಾಫ್ ಡು ಪ್ಲೆಸಿಸ್ ವಿವಾದಾತ್ಮಕ ರನೌಟ್, ವಿರಾಟ್ ಕೊಹ್ಲಿ ಅಚ್ಚರಿ; ಅಂಪೈರ್ಸ್ ವಿರುದ್ಧ ನೆಟ್ಟಿಗರ ಆಕ್ರೋಶ

IPL 2024: ನಿರ್ಣಾಯಕ ಪಂದ್ಯದಲ್ಲಿ ಕೊಹ್ಲಿ, ಫಾಫ್, ಪಾಟಿದಾರ್, ಗ್ರೀನ್ ಅಬ್ಬರ; ಸಿಎಸ್‌ಕೆಗೆ 219 ರನ್‌ಗಳ ಬೃಹತ್ ಗುರಿ ನೀಡಿದ ಆರ್‌ಸಿಬಿ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೂಪರ್‌ ಸಾಪರ್ಸ್‌ಗೆ ಕೆಲಸವಿಲ್ಲ; ಮಳೆ ಬಂದಾಗ ಪಿಚ್‌ಗೆ ಮಾತ್ರ ಟಾರ್ಪಲ್ ಹೊದಿಸುವ ಹಿಂದಿನ ಕಾರಣವಿದು

20ನೇ ಓವರ್​​ನ 3 ಎಸೆತದಲ್ಲಿ ರಿಚಾ ಘೋಷ್ ಸಿಕ್ಸರ್​ ಸಿಡಿಸಿದ ಬೆನ್ನಲ್ಲೇ ಡಗೌಟ್​ನಲ್ಲಿ ಆರ್​ಸಿಬಿ ಮಹಿಳಾ ಆಟಗಾರ್ತಿಯರು ಓಡಿ ಬಂದು ಎಲ್ಲಿಸ್ ಪೆರ್ರಿ ಮತ್ತು ರಿಚಾ ಘೋಷ್ ಅವರನ್ನು ತಬ್ಬಿಕೊಂಡು ಸಂಭ್ರಮಿಸಿದರು. ಆಶಾ ಶೋಭನಾ ಅವರ ಕಣ್ಣಿನಲ್ಲಿ ನೀರು ಬಂದಿತ್ತು. ಶ್ರೇಯಾಂಕಾ ಪಾಟೀಲ್ ಖುಷಿಯ ಅಲೆಯನ್ನು ಕಳೆದುಕೊಂಡಿದ್ದಾರೆ. ಗೆದ್ದ ಖುಷಿಯಲ್ಲಿ ಒಂದು ಭಾವುಕರಾಗಿದ್ದರು.

ರಿಚಾ ಘೋಷ್ ಗೆಲುವಿನ ಬೌಂಡರಿ ಬಾರಿಸಿದ ಬಳಿಕ ಫೈನಲ್‌ನಲ್ಲಿ 31 ರನ್ ಗಳಿಸಿದ ಮಂಧಾನ ಅವರ ಕಣ್ಣುಗಳಲ್ಲಿ ಹನಿಗಳು ತುಂಬಿದ್ದವು. ಆರ್‌ಸಿಬಿ ನಾಯಕಿಯ ಭಾವುಕರಾದ ಕ್ಲಿಪ್ ಸಾಮಾಜಿಕ ವಲಯದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ. ಸ್ಪಿನ್ನರ್‌ಗಳಾದ ಶ್ರೇಯಾಂಕಾ ಪಾಟೀಲ್, ಸೋಫಿ ಮೊಲಿನೆಕ್ಸ್ ಮತ್ತು ಆಶಾ ಶೋಭನಾ ಅವರು ಒಟ್ಟು ವಿಕೆಟ್‌ ಪಡೆದು ಡೆಲ್ಲಿ ಧೂಳೀಪಟಗೊಳಿಸಿದರು.

ಎಲ್ಲಿಸ್ ಪೆರ್ರಿ ಅಜೇಯ 35 ರನ್ ಕಲೆ ಹಾಕಿ, ಶಾಂತತೆಯನ್ನು ಪ್ರದರ್ಶಿಸಿದರು. ಆ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್ (WPL) 2024 ಪ್ರಶಸ್ತಿಯನ್ನು ಗೆಲ್ಲಲು ದೊಡ್ಡ ಮಟ್ಟದಲ್ಲಿ ನೆರವಾಗಿದ್ದಾರೆ. ಕೊನೆಯಲ್ಲಿ ರಿಚಾ ಘೋಷ್ ಆರ್​​ಸಿಬಿ ಗೆಲುವಿಗೆ ಪ್ರಮುಖವಾಗಿ ಸಾಥ್ ನೀಡಿದರು. ಅಜೇಯ 17 ರನ್ ಗಳಿಸಿ ತಂಡದ ಗೆಲುವಿಗೆ ಕಾರಣರಾದರು.

ಶ್ರೇಯಾಂಕಾ ಅವರು ತಮ್ಮ ಬೌಲಿಂಗ್​ನಲ್ಲಿ 12 ರನ್ ಬಿಟ್ಟು 4 ವಿಕೆಟ್ ಪಡೆದರು. ಅಲ್ಲದೆ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್​​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅವರು ಈ ಟೂರ್ನಿಯಲ್ಲಿ ಒಟ್ಟು 13 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಗೆದ್ದುಕೊಂಡರು. ಡೆಲ್ಲಿ 18.3 ಓವರ್‌ಗಳಲ್ಲಿ 113 ರನ್‌ಗಳಿಗೆ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ 19.3 ಓವರ್​​​ಗಳಲ್ಲಿ ಗೆಲುವಿನ ಗೆರೆ ದಾಟಿತು.

ವಿಶೇಷ ಸಂದೇಶ

ಪ್ರಶಸ್ತಿ ವಿತರಣಾ ಸಮಯದಲ್ಲಿ ಮಾತನಾಡಿದ ಮಂಧಾನ, ಅಭಿಮಾನಿಗಳಿಗೆ ಸಂದೇಶವನ್ನು ಹೊತ್ತು ತಂದಿದ್ದೇನೆ. ಆರ್​ಸಿಬಿ ಫ್ಯಾನ್ಸ್​ ಅತ್ಯಂತ ನಿಷ್ಠಾವಂತ ಅಭಿಮಾನಿ ಬಳಗ. ಅವರು ಬೆಂಬಲವಿಲ್ಲದೆ ಏನೂ ಆಗುತ್ತಿರಲಿಲ್ಲ. ಈ ಸಲ ಕಪ್ ನಮ್ದೇ ಎನ್ನುವ ಒಂದು ಹೇಳಿಕೆ ಯಾವಾಗಲೂ ಬರುತ್ತಿದೆ. ಈಗ ಈ ಸಲ ಕಪ್ ನಮ್ದು. ಕನ್ನಡ ನನ್ನ ಮೊದಲ ಭಾಷೆ ಅಲ್ಲ ಆದರೆ ಅಭಿಮಾನಿಗಳಿಗೆ ಹೇಳುವುದು ಮುಖ್ಯವಾಗಿತ್ತು ಎಂದು ಹೇಳುವ ಮಂಧಾನ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ