logo
ಕನ್ನಡ ಸುದ್ದಿ  /  ಕ್ರಿಕೆಟ್  /  ಬಾಂಗ್ಲಾದೇಶ ಸೋಲಿಸಿ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಜಿಗಿದ ದಕ್ಷಿಣ ಆಫ್ರಿಕಾ; ಭಾರತ-ನ್ಯೂಜಿಲೆಂಡ್‌ ಎಲ್ಲಿದೆ?

ಬಾಂಗ್ಲಾದೇಶ ಸೋಲಿಸಿ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಜಿಗಿದ ದಕ್ಷಿಣ ಆಫ್ರಿಕಾ; ಭಾರತ-ನ್ಯೂಜಿಲೆಂಡ್‌ ಎಲ್ಲಿದೆ?

Jayaraj HT Kannada

Oct 24, 2024 03:40 PM IST

google News

ಬಾಂಗ್ಲಾದೇಶ ಸೋಲಿಸಿ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಜಿಗಿದ ದಕ್ಷಿಣ ಆಫ್ರಿಕಾ

    • South Africa vs Bangladesh: ಬಾಂಗ್ಲಾದೇಶ ವಿರುದ್ಧದ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಡಬ್ಲ್ಯುಟಿಸಿ ಶೇಕಡಾವಾರು ಅಂಕಗಳನ್ನು 47.62ಕ್ಕೆ ಹೆಚ್ಚಿಸಿಕೊಂಡಿದೆ. ಇದೇ ವೇಳೆ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಏರಿದೆ.
ಬಾಂಗ್ಲಾದೇಶ ಸೋಲಿಸಿ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಜಿಗಿದ ದಕ್ಷಿಣ ಆಫ್ರಿಕಾ
ಬಾಂಗ್ಲಾದೇಶ ಸೋಲಿಸಿ ಡಬ್ಲ್ಯುಟಿಸಿ ಶ್ರೇಯಾಂಕದಲ್ಲಿ 4ನೇ ಸ್ಥಾನಕ್ಕೆ ಜಿಗಿದ ದಕ್ಷಿಣ ಆಫ್ರಿಕಾ (AFP)

ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (Bangladesh vs South Africa 1st Test) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ಮುಕ್ತಾಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಕಾಣುವ ಮೂಲಕ, ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿಯೂ ಹರಿಣಗಳು ಬಡ್ತಿ ಪಡೆದಿದ್ದಾರೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡವು 2014ರ ನಂತರ ಏಷ್ಯಾದಲ್ಲಿ ಮೊದಲ ಟೆಸ್ಟ್ ಗೆಲುವು ಸಾಧಿಸಿದಂತಾಗಿದೆ.

ಭರ್ಜರಿ ಗೆಲವಿನ ಬಳಿಕ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-25ರ ಅಂಕಪಟ್ಟಿಯಲ್ಲಿ (WTC Standings) ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನಕ್ಕೆ ಏರಿದೆ. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತನ್ನ ಅಂಕಗಳ ಶೇಕಡಾವಾರು ಪ್ರಮಾಣವನ್ನು 47.62ಕ್ಕೆ ಸುಧಾರಿಸಿದೆ. ಇದರೊಂದಿಗೆ, ಭಾರತ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗೆದ್ದು ನಾಲ್ಕನೇ ಸ್ಥಾನಕ್ಕೇರಿದ್ದ ನ್ಯೂಜಿಲೆಂಡ್ ತಂಡವು ಐದನೇ ಸ್ಥಾನಕ್ಕೆ ಕುಸಿದಿದೆ. ಅತ್ತ ಇಂಗ್ಲೆಂಡ್ ತಂಡ ಕೂಡಾ ಆರನೇ ಸ್ಥಾನಕ್ಕಿಳಿದಿದೆ. ಎರಡು ತಂಡಗಳನ್ನು ಕೆಳಗಿಳಿಸಿ ದಕ್ಷಿಣ ಆಫ್ರಿಕಾ ನಾಲ್ಕನೇ ಸ್ಥಾನ ಪಡೆದಿದೆ.

ಹರಿಣಗಳ ವಿರುದ್ಧದ ಸೋಲಿನೊಂದಿಗೆ ಬಾಂಗ್ಲಾದೇಶದ ಸೋಲಿನ ಪ್ರಮಾಣ ಶೇಕಡಾವಾರು 30.56ಕ್ಕೆ ಕುಸಿದಿದೆ. ತಂಡವು ಏಳನೇ ಸ್ಥಾನದಲ್ಲಿ ಮುಂದುವರಿದಿದ್ದು, ಶೇಕಡಾವಾರು ಪ್ರಮಾಣ ಮತ್ತೂ ಕಡಿಮೆಯಾಗಿದೆ.

ಅಗ್ರಸ್ಥಾನದಲ್ಲಿ ಭಾರತ ತಂಡ

ಅತ್ತ ಕಿವೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋತಿದ್ದರೂ ಭಾರತ ತಂಡ ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಭಾರತದ ನಂತರ ಆಸ್ಟ್ರೇಲಿಯಾ ಇನ್ನೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಗಳಲ್ಲಿ ಉಳಿದಿವೆ. ಭಾರತದ ಶೇಕಡಾವಾರು ಅಂಕ 68.06 ಆಗಿದ್ದರೆ, ಆಸೀಸ್‌ ಶೇಕಡಾವಾರು ಅಂಕ 62.50 ಆಗಿದೆ.

ಮೊದಲ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಶಾಂಟೊ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ದಕ್ಷಿಣ ಆಫ್ರಿಕಾದ ವೇಗಿಗಳು ಮತ್ತು ಸ್ಪಿನ್ನರ್‌ಗಳ ಮಾರಕ ದಾಳಿಗೆ ನಲುಗಿದ ಬಾಂಗ್ಲಾದೇಶ ಕೇವಲ 106 ರನ್‌ಗಳಿಗೆ ಆಲೌಟ್ ಆಯ್ತು. ಕಗಿಸೊ ರಬಾಡ, ವಿಯಾನ್ ಮುಲ್ಡರ್ ಮತ್ತು ಕೇಶವ್ ಮಹಾರಾಜ್ ತಲಾ ಮೂರು ವಿಕೆಟ್ ಪಡೆದರು. ಬಾಂಗ್ಲಾದೇಶ ಪರ ಮಹಮುದುಲ್ ಹಸನ್ ಜಾಯ್ 97 ಎಸೆತಗಳಲ್ಲಿ 30 ರನ್ ಗಳಿಸಿದರು.

ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 308 ರನ್‌ಗಳಿಗೆ ಆಲೌಟ್ ಆಯಿತು. 202 ರನ್‌ಗಳ ಬೃಹತ್ ಮುನ್ನಡೆಯೊಂದಿಗೆ, ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ ಆರಂಭಿಸಿತು. ಬಾಂಗ್ಲಾದೇಶ 307 ರನ್‌ ಗಳಿಸಿದರೆ, ಇದಕ್ಕೆ ಪ್ರತಿಯಾಗಿ ಹರಿಣಗಳು ಕೇವಲ 3 ವಿಕೆಟ್‌ ಕಳೆದುಕೊಂಡು 106 ರನ್‌ ಗಳಿಸಿ ಗುರಿ ತಲುಪಿದರು.

ಗೆಲ್ಲಲು 106 ರನ್‌ಗಳ ಅಗತ್ಯವಿದ್ದ ದಕ್ಷಿಣ ಆಫ್ರಿಕಾ ಪರ, ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಟೋನಿ ಡಿ ಜೊರ್ಜಿ 52 ಎಸೆತಗಳಲ್ಲಿ 41 ರನ್ ಗಳಿಸಿದರು. ಟ್ರಿಸ್ಟಾನ್ ಸ್ಟಬ್ಸ್ 37 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ