ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು; ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನ ಗೆದ್ದವರು ಯಾರು?
Jul 19, 2024 08:49 PM IST
ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದರುವ ಪದಕಗಳೆಷ್ಟು; ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನ ಗೆದ್ದವರು ಯಾರು?
- India at Olympics Over The Years: 1900ರ ಪ್ಯಾರಿಸ್ ಒಲಿಂಪಿಕ್ಸ್ನಿಂದ 2020ರ ಟೊಕಿಯೊ ಒಲಿಂಪಿಕ್ಸ್ ತನಕ ಭಾರತ ಗೆದ್ದಿರುವ ಪದಕಗಳೆಷ್ಟು? ವೈಯಕ್ತಿಕ ವಿಭಾಗದಲ್ಲಿ ಮೊದಲ ಚಿನ್ನ ಗೆದ್ದವರು ಯಾರು? ಇಲ್ಲಿದೆ ನೋಡಿ ವಿವರ.
ಪ್ಯಾರಿಸ್ ಒಲಿಂಪಿಕ್ಸ್ ಜುಲೈ 26ರಿಂದ ಪ್ರಾರಂಭವಾಗಿ ಆಗಸ್ಟ್ 11ರ ತನಕ ನಡೆಯಲಿದೆ. ಪ್ರತಿ 4 ವರ್ಷಕ್ಕೊಮ್ಮೆ ಜರುಗುವ ಈ ಕ್ರೀಡಾಕೂಟದಲ್ಲಿ ಭಾರತ ಪದಕಗಳ ಸಾಧನೆ ಅತ್ಯಂತ ನೀರಸವಾಗಿದೆ. 1900ರ ಪ್ಯಾರಿಸ್ ಒಲಿಂಪಿಕ್ಸ್ನಿಂದ ಹಿಡಿದು 2020ರ ಟೊಕಿಯೊ ಒಲಿಂಪಿಕ್ಸ್ವರೆಗೂ ಅಂದರೆ 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತದ ಸಾಧನೆ ಹೇಗಿದೆ. ಇಲ್ಲಿದೆ ನೋಡಿ ವಿವರ.
ಭಾರತವು 10 ಒಲಿಂಪಿಕ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ. ಈ ಪೈಕಿ 8 ಪುರುಷರ ಹಾಕಿ ಗೆದ್ದಿದೆ. 1928-1956ರಲ್ಲಿ ಸತತ 6 ಚಿನ್ನದ ಪದಕಕ್ಕೆ ಕೊರೊಳೊಡ್ಡಿದೆ. ಶೂಟರ್ ಅಭಿನವ್ ಬಿಂದ್ರಾ 2008ರಲ್ಲಿ ಬೀಜಿಂಗ್‌ನಲ್ಲಿ ಭಾರತದ ಮೊದಲ ವೈಯಕ್ತಿಕ ಒಲಿಂಪಿಕ್ ಚಿನ್ನದ ಪದಕ ವಿಜೇತರಾದರು ಪುರುಷರ 10-ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಜಯಿಸಿದ್ದರು. ಟೋಕಿಯೊ ಒಲಿಂಪಿಕ್ಸ್‌ನ ಪುರುಷರ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದಿದ್ದಾರೆ. 121 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಭಾರತದ 3ನೇ ಹಾಗೂ ಏಕೈಕ ಅಥ್ಲೆಟಿಕ್ಸ್ ಚಿನ್ನದ ಪದಕವಾಗಿದೆ.
ಟೊಕಿಯೊ ಒಲಿಂಪಿಕ್ಸ್‌ನಲ್ಲಿ (2021ರಲ್ಲಿ ನಡೆದ) ಭಾರತವು 7 ಪದಕ ಗೆದ್ದು ಬೀಗಿತು. ಒಲಿಂಪಿಕ್ಸ್‌ನಲ್ಲಿ ಈವರೆಗಿನ ಭಾರತದ ಅತ್ಯುತ್ತಮ ಸಾಧನೆಯಾಗಿದೆ. ಮೀರಾಬಾಯಿ ಚಾನು (ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ), ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್‌ನಲ್ಲಿ ಕಂಚು), ಪಿವಿ ಸಿಂಧು (ಬ್ಯಾಡ್ಮಿಂಟನ್‌ನಲ್ಲಿ ಕಂಚು), ಭಾರತೀಯ ಪುರುಷರ ಹಾಕಿ ತಂಡ (ಕಂಚು), ರವಿ ದಹಿಯಾ (ಬೆಳ್ಳಿಯಲ್ಲಿ ಕುಸ್ತಿ), ಬಜರಂಗ್ ಪುನಿಯಾ (ಕುಸ್ತಿಯಲ್ಲಿ ಕಂಚು), ಮತ್ತು ನೀರಜ್ ಚೋಪ್ರಾ (ಜಾವೆಲಿನ್ ಎಸೆತದಲ್ಲಿ ಚಿನ್ನ)
ಕರ್ಣಂ ಮಲ್ಲೇಶ್ವರಿ ಅವರು 2000 ಸಿಡ್ನಿ ಗೇಮ್ಸ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಪದಕ (ಕಂಚಿನ) ಗೆದ್ದುಕೊಟ್ಟರು. ಎರಡು ದಶಕಗಳ ನಂತರ, ಮೀರಾಬಾಯಿ ಚಾನು 2020ರ ಟೊಕಿಯೋ ಗೇಮ್ಸ್‌ನಲ್ಲಿ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ 2ನೇ ಪದಕ (ಬೆಳ್ಳಿ) ಗೆದ್ದರು.
ಒಲಿಂಪಿಕ್ಸ್‌ನಲ್ಲಿ ಭಾರತದ ಪದಕಗಳ ಚಿತ್ರಣ
- ಪ್ಯಾರಿಸ್ ಒಲಿಂಪಿಕ್ಸ್ (1900) - 2 ಪದಕ (1 ಕ್ರೀಡಾಪಟು) - 17ನೇ ಸ್ಥಾನ
- ಆಂಟ್ವರ್ಟ್ ಒಲಿಂಪಿಕ್ಸ್ (ಬೆಲ್ಜಿಯಂ 1920) - 0 ಪದಕ (ಕ್ರೀಡಾಪಟುಗಳು) -
- ಪ್ಯಾರಿಸ್ ಒಲಿಂಪಿಕ್ಸ್ (1924) - 0 ಪದಕ (13 ಕ್ರೀಡಾಪಟುಗಳು) -
- ಆಮ್ಸ್ಟರ್ಡಂ ಒಲಿಂಪಿಕ್ಸ್ (1928) - 1 ಪದಕ (22 ಕ್ರೀಡಾಪಟುಗಳು) - 23ನೇ ಸ್ಥಾನ
- ಲಾಸ್ ಏಂಜಲಿಸ್ ಒಲಿಂಪಿಕ್ಸ್ (1932) - 1 ಪದಕ (18 ಕ್ರೀಡಾಪಟುಗಳು) - 19ನೇ ಸ್ಥಾನ
- ಬೆರ್ಲಿನ್ ಒಲಿಂಪಿಕ್ಸ್ (1936) - 1 ಪದಕ (27 ಕ್ರೀಡಾಪಟುಗಳು) - 20ನೇ ಸ್ಥಾನ
- ಲಂಡನ್ ಒಲಿಂಪಿಕ್ಸ್ (1948) - 1 ಪದಕ (86 ಕ್ರೀಡಾಪಟುಗಳು) - 22ನೇ ಸ್ಥಾನ
- ಹೆಲ್ಸಿಂಕಿ ಒಲಿಂಪಿಕ್ಸ್ (1952) - 2 ಪದಕ (64 ಕ್ರೀಡಾಪಟುಗಳು) - 26ನೇ ಸ್ಥಾನ
- ಮೆಲ್ಬೋರ್ನ್ ಒಲಿಂಪಿಕ್ಸ್ (1956) - 1 ಪದಕ (59 ಕ್ರೀಡಾಪಟುಗಳು) - 24ನೇ ಸ್ಥಾನ
- ರೋಮ್ ಒಲಿಂಪಿಕ್ಸ್ (1960) - 1 ಪದಕ (ಕ್ರೀಡಾಪಟುಗಳು) - 32ನೇ ಸ್ಥಾನ
- ಟೋಕಿಯೊ ಒಲಿಂಪಿಕ್ಸ್ (1964) - 1 ಪದಕ (53 ಕ್ರೀಡಾಪಟುಗಳು) - 24ನೇ ಸ್ಥಾನ
- ಮೆಕ್ಸಿಕೋ ಸಿಟಿ ಒಲಿಂಪಿಕ್ಸ್ (1968) - 1 ಪದಕ (25 ಕ್ರೀಡಾಪಟುಗಳು) - 42ನೇ ಸ್ಥಾನ
- ಮ್ಯೂನಿಚ್ ಒಲಿಂಪಿಕ್ಸ್ (1972) - 1 ಪದಕ (46 ಕ್ರೀಡಾಪಟುಗಳು) - 43ನೇ ಸ್ಥಾನ
- ಮಾಂಟ್ರಿಯಲ್ ಒಲಿಂಪಿಕ್ಸ್ (1976) - 0 ಪದಕ (26 ಕ್ರೀಡಾಪಟುಗಳು)
- ಮಾಸ್ಕೋ ಒಲಿಂಪಿಕ್ಸ್ (1980) - 1 ಪದಕ (52 ಕ್ರೀಡಾಪಟುಗಳು) - 23ನೇ ಸ್ಥಾನ
- ಲಾಸ್ ಏಂಜಲಿಸ್ ಒಲಿಂಪಿಕ್ಸ್ (1984) - 0 ಪದಕ (47 ಕ್ರೀಡಾಪಟುಗಳು) -
- ಸಿಯೋಲ್ ಒಲಿಂಪಿಕ್ಸ್ (1988) - 0 ಪದಕ (43 ಕ್ರೀಡಾಪಟುಗಳು) -
- ಬಾರ್ಸೋಲಿನಾ ಒಲಿಂಪಿಕ್ಸ್ (1992) - 0 ಪದಕ (46 ಕ್ರೀಡಾಪಟುಗಳು) -
- ಅಟ್ಲಾಂಟಾ ಒಲಿಂಪಿಕ್ಸ್ (1996) - 1 ಪದಕ (40 ಕ್ರೀಡಾಪಟುಗಳು) - 71ನೇ ಸ್ಥಾನ
- ಸಿಡ್ನಿ ಒಲಿಂಪಿಕ್ಸ್ (2000) - 1 ಪದಕ (44 ಕ್ರೀಡಾಪಟುಗಳು) - 71ನೇ ಸ್ಥಾನ
- ಅಥೆನ್ಸ್ ಒಲಿಂಪಿಕ್ಸ್ (2004) - 1 ಪದಕ (73 ಕ್ರೀಡಾಪಟುಗಳು) - 65ನೇ ಸ್ಥಾನ
- ಬೀಜಿಂಗ್ ಒಲಿಂಪಿಕ್ಸ್ (2008) - 3 ಪದಕ (73 ಕ್ರೀಡಾಪಟುಗಳು) - 50ನೇ ಸ್ಥಾನ
- ಲಂಡನ್ ಒಲಿಂಪಿಕ್ಸ್ (2012) - 6 ಪದಕ (83 ಕ್ರೀಡಾಪಟುಗಳು) - 55ನೇ ಸ್ಥಾನ
- ರಿಯೋ ಡಿ ಜನೈರೊ ಒಲಿಂಪಿಕ್ಸ್ (2016) - 2 ಪದಕ (117 ಕ್ರೀಡಾಪಟುಗಳು) - 67ನೇ ಸ್ಥಾನ
- ಟೋಕಿಯೊ ಒಲಿಂಪಿಕ್ಸ್ (2020) - 7 ಪದಕ (126 ಕ್ರೀಡಾಪಟುಗಳು) - 48ನೇ ಸ್ಥಾನ