logo
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ, ಪಾಕಿಸ್ತಾನ ಅಲ್ಲ; ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆದ್ದ ಏಷ್ಯಾದ ಏಕೈಕ ತಂಡವಿದು

ಭಾರತ, ಪಾಕಿಸ್ತಾನ ಅಲ್ಲ; ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆದ್ದ ಏಷ್ಯಾದ ಏಕೈಕ ತಂಡವಿದು

Jayaraj HT Kannada

Dec 25, 2023 11:52 AM IST

ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆದ್ದ ತಂಡ ಯಾವುದು?

    • ಭಾರತವು ಇದುವರೆಗೂ ಹರಿಣಗಳ ನಾಡಿನಲ್ಲಿ ಸರಣಿ ಗೆದ್ದಿಲ್ಲ. ಆದರೆ, ಏಷ್ಯಾದ ಒಂದು ತಂಡ ದಕ್ಷಿಣ ಆಫ್ರಿಕಾದಲ್ಲಿ ಸರಣಿ ಗೆದ್ದಿದೆ. ಟೆಸ್ಟ್ ಸರಣಿ ಗೆದ್ದ ಏಷ್ಯದ ಆ ತಂಡ ಯಾವುದು ಎಂಬುದನ್ನು ತಿಳಿಯೋಣ.
ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆದ್ದ ತಂಡ ಯಾವುದು?
ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆದ್ದ ತಂಡ ಯಾವುದು?

ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಕ್ರಿಕೆಟ್ ತಂಡವು (South Africa vs India) ಇದುವರೆಗೂ ಟೆಸ್ಟ್‌ ಸರಣಿ ಗೆದ್ದಿಲ್ಲ. ಸದ್ಯ ಡಿಸೆಂಬರ್ 26ರ ಮಂಗಳವಾರದಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗೆದ್ದು, ಚೊಚ್ಚಲ ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತವಿದೆ. ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ ಮೈದಾನವು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದ್ದು, ಇತಿಹಾಸ ಬರೆಯಲು ಟೀಮ್‌ ಇಂಡಿಯಾ ಹಾತೊರೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

RCB vs RR: ಒಂದೂ ಸೋಲದ ಮತ್ತು ಒಂದೂ ಗೆಲ್ಲದ ತಂಡಗಳ ನಡುವೆ ಎಲಿಮಿನೇಟರ್ ಫೈಟ್; ಯಾರ ಕೈ ಹಿಡಿಯುತ್ತೆ ಅದೃಷ್ಟ?

ಸಿಎಸ್​ಕೆ ನಿಮಗೊಂದು ಕಪ್ ಕೊಡುತ್ತೆ, ಮೆರವಣಿಗೆ ಮಾಡಿ; ಆರ್​ಸಿಬಿ ತಂಡವನ್ನು ಅಣಕಿಸಿದ ಅಂಬಾಟಿ ರಾಯುಡು

ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ

ಮಳೆಯಿಂದ ಪಂದ್ಯ ರದ್ದು; ಎಲಿಮಿನೇಟರ್​​ನಲ್ಲಿ ಆರ್​​ಸಿಬಿಗೆ ರಾಜಸ್ಥಾನ್ ರಾಯಲ್ಸ್ ಎದುರಾಳಿ, ಪ್ಲೇಆಫ್​ ವೇಳಾಪಟ್ಟಿ ಹೀಗಿದೆ

ಒಂದು ವೇಳೆ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ಭಾರತವು ಮೊದಲ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾದರೆ, ಟೀಮ್ ಇಂಡಿಯಾದ ವಿಶ್ವಕಪ್‌ ಸೋಲಿನ ನೋವು ಬಹುತೇಕ ಶಮನವಾಗಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಸತತ ಎರಡು ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸಿರುವ ವಿಶ್ವದ ನಂಬರ್ 1 ಟೆಸ್ಟ್ ತಂಡವಾಗಿರುವ ಭಾರತವು, ಸತತ ಮೂರನೇ ಬಾರಿ ಫೈನಲ್‌ ಪ್ರವೇಶಿಸುವ ಜೊತೆಗೆ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ | ವಿರಾಟ್ ಭಾರತಕ್ಕೆ ಬಂದೇ ಇಲ್ಲ, ಕೌಟುಂಬಿಕ ತುರ್ತು ಸ್ಥಿತಿ ಇರಲಿಲ್ಲ; ಮೊದಲ ಟೆಸ್ಟ್ ಆಡಲಿದ್ದಾರೆ ಕೊಹ್ಲಿ

ವಿಶ್ವದ ನಂಬರ್‌ ವನ್‌ ಟೆಸ್ಟ್‌‌ ತಂಡವಾದರೂ, ಭಾರತವು ಇದುವರೆಗೂ ಹರಿಣಗಳ ನಾಡಿನಲ್ಲಿ ಸರಣಿ ಗೆದ್ದಿಲ್ಲ. ಆದರೆ, ಏಷ್ಯಾದ ಒಂದು ತಂಡ ದಕ್ಷಿಣ ಆಫ್ರಿಕಾದಲ್ಲಿ ಸರಣಿ ವಶಪಡಿಸಿಕೊಂಡಿದೆ. ಹಾಗಿದ್ದರೆ, ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯದ ಮೊದಲ ತಂಡ ಯಾವುದು ಎಂಬುದನ್ನು ತಿಳಿಯೋಣ.

ಆ ತಂಡ ಪಾಕಿಸ್ತಾನ ಕೂಡಾ ಅಲ್ಲ. ಈ ಬಾರಿಯ ಏಷ್ಯಾಕಪ್‌ ರನ್ನರ್‌ ಅಪ್‌ ತಂಡ ಶ್ರೀಲಂಕಾ. 2019ರ ಫೆಬ್ರವರಿಯಲ್ಲಿ ಆಡಿದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಲಂಕಾ ತಂಡ ಈ ಐತಿಹಾಸಿಕ ಸಾಧನೆ ಮಾಡಿದೆ. ದಿಮುತ್ ಕರುಣಾರತ್ನೆ ನೇತೃತ್ವದ ಲಂಕಾ ತಂಡವು ಡರ್ಬನ್‌ನ ಕಿಂಗ್ಸ್‌ಮೀಡ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಒಂದು ವಿಕೆಟ್‌ ಅಂತರದಿಂದ ಸೋಲಿಸಿತು. ಆ ಬಳಿಕ ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಗೆದ್ದಿತು. ಅದು ಇತಿಹಾಸ ಪುಟದಲ್ಲಿ ದಾಖಲಾಯ್ತು. ಕುಸಾಲ್ ಪರೆರಾ 224 ರನ್ ಗಳಿಸುವುದರೊಂದಿಗೆ ಸರಣಿಯ ಶ್ರೀಲಂಕಾ ಪರ ಪ್ರಮುಖ ರನ್ ಗಳಿಸಿದ ಆಟಗಾರನಾದರು.

ಭಾರತವು ಈವರೆಗೆ ಒಟ್ಟು ಎಂಟು ಬಾರಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದೆ. ಇದರಲ್ಲಿ ಏಳು ಬಾರಿ ಸರಣಿ ಸೋಲು ಕಂಡಿದೆ. 2010–11ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮಾತ್ರ ಭಾರತ 1-1ರಲ್ಲಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಇದನ್ನೂ ಓದಿ | ದಕ್ಷಿಣ ಆಫ್ರಿಕಾ ಟೆಸ್ಟ್‌ಗೆ ಕನ್ನಡಿಗ ಕೆಎಲ್ ರಾಹುಲ್ ವಿಕೆಟ್ ಕೀಪರ್; ಕೋಚ್ ದ್ರಾವಿಡ್ ಸ್ಪಷ್ಟನೆ

ಅತ್ತ ಪಾಕಿಸ್ತಾನವು ದಕ್ಷಿಣ ಆಫ್ರಿಕಾದಲ್ಲಿ ಐದು ಟೆಸ್ಟ್ ಸರಣಿಗಳನ್ನು ಸೋತಿದೆ. 1998ರಲ್ಲಿ ನಡೆದ ಸರಣಿಯಲ್ಲಿ 1-1 ಅಂತರದಿಂದ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಸದ್ಯ ಭಾರತ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್‌ ಡಿಸೆಂಬರ್‌ 26ರಿಂದ ಆರಂಭವಾದರೆ, 2024ರ ಜನವರಿ 3ರಿಂದ ಕೇಪ್‌ಟೌನ್‌ನಲ್ಲಿ ಎರಡನೇ ಟೆಸ್ಟ್‌ ನಡೆಯಲಿದೆ. ರೆಡ್ ಬಾಲ್ ಸರಣಿಗೆ ಭಾರತವು ಸಂಪೂರ್ಣ ಸಾಮರ್ಥ್ಯದೊಂದಿಗೆ ಕಣಕ್ಕಿಳಿಯಲಿದೆ. ನಾಯಕ ವಿರಾಟ್‌ ಕೊಹ್ಲಿ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್ ತಂಡಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಭಿಮನ್ಯು ಈಶ್ವರನ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಕೆಎಸ್ ಭರತ್ (ವಿಕೆಟ್ ಕೀಪರ್).

For latest Cricket News, Live Score, IPL stay connected with HT Kannada

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ