ಟೀಮ್ ಇಂಡಿಯಾ 2025ರ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ; ಮೇಲಿಂದ ಮೇಲೆ ಪಂದ್ಯಗಳು, ಅಭಿಮಾನಿಗಳಿಗೆ ನಿರಂತರ ಮನರಂಜನೆ
Dec 15, 2024 03:31 PM IST
ಟೀಮ್ ಇಂಡಿಯಾ 2025ರ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ; ಅಭಿಮಾನಿಗಳಿಗೆ ನಿರಂತರ ಮನರಂಜನೆ
- ಮುಂಬರುವ ಕ್ಯಾಲೆಂಡರ್ ವರ್ಷ 2025ರಲ್ಲಿ ಭಾರತ ಕ್ರಿಕೆಟ್ ತಂಡವು ವಿವಿಧ ಸರಣಿ ಹಾಗೂ ಐಸಿಸಿ ಟೂರ್ನಿಗಳಲ್ಲಿ ಆಡಲಿದೆ. ಟೀಮ್ ಇಂಡಿಯಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
2024ರ ಕ್ಯಾಲೆಂಡರ್ ವರ್ಷದ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಬೇಕಿದೆ. ಕ್ರಿಕೆಟ್ ಅಭಿಮಾನಿಗಳು ಈಗ ಬಾರ್ಡರ್-ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಂಭ್ರಮದಲ್ಲಿದ್ದಾರೆ. ಜನವರಿ 7ರವರೆಗೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ನಡೆಯಲಿದ್ದು, ಆ ನಂತರವೂ ಟೀಮ್ ಇಂಡಿಯಾ ಆಟಗಾರರು ಒಂದರ ನಂತರ ಮತ್ತೊಂದರಂತೆ ವಿವಿಧ ಟೂರ್ನಿಗಳಲ್ಲಿ ಆಡಲಿವೆ. 2025ರ ವರ್ಷ ಕೂಡಾ ಕ್ರಿಕೆಟ್ ಅಭಿಮಾನಿಗಳಿಗೆ ನಿರಂತರ ಮನರಂಜನೆ ನೀಡಲಿದೆ. ದ್ವಿಪಕ್ಷೀಯ ಸರಣಿಗಳು ಸೇರಿದಂತೆ ಐಸಿಸಿ ಈವೆಂಟ್‌ಗಳು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ನಡೆಯಲಿದೆ.
2025ರ ಕ್ಯಾಲೆಂಡರ್ ವರ್ಷದಲ್ಲಿ ಭಾರತ ತಂಡ ಆಡುತ್ತಿರುವ ವಿವಿಧ ಸರಣಿಗಳು ಸೇರಿದಂತೆ ಸಂಪೂರ್ಣ ವೇಳಾಪಟ್ಟಿಯನ್ನು ನೋಡೋಣ.
1. ಭಾರತ vs ಇಂಗ್ಲೆಂಡ್ (ತವರಿನ ಸರಣಿ): ಜನವರಿ-ಫೆಬ್ರವರಿ 2025
ಭಾರತವು ಐದು ಪಂದ್ಯಗಳ ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗೆ ಇಂಗ್ಲೆಂಡ್ ತಂಡಕ್ಕೆ ಆತಿಥ್ಯ ವಹಿಲಿದೆ. ಜನವರಿ 7ರಂದು ಬಾರ್ಡರ್-ಗವಾಸ್ಕರ್ ಟ್ರೋಫಿ ಮುಕ್ತಾಯವಾದ ನಂತರ ಇಂಗ್ಲೆಂಡ್ ವಿರುದ್ಧದ ತವರಿನ ಸರಣಿಯು ಜನವರಿ 22ರಂದು ಆರಂಭವಾಗಲಿದೆ.
- ಸ್ವರೂಪ: 5 ಟಿ20 ಹಾಗೂ 3 ಏಕದಿನ
- ದಿನಾಂಕ: ಜನವರಿ 22 ರಿಂದ ಫೆಬ್ರವರಿ 12
2. ಚಾಂಪಿಯನ್ಸ್ ಟ್ರೋಫಿ 2025 (ಹೊರಗಡೆ) - ಫೆಬ್ರವರಿ-ಮಾರ್ಚ್ 2025
2025ರ ಬಹು ನಿರೀಕ್ಷಿತ ಟೂರ್ನಿಗಳಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯೂ ಒಂದು. ಪಾಕಿಸ್ತಾನದಲ್ಲಿ ಟೂರ್ನಿ ನಡೆಯಲಿದೆ. ಆದರೆ, ಭಾರತದ ಪಂದ್ಯಗಳು ಬಹುತೇಕ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ.
- ಸ್ವರೂಪ: ಏಕದಿನ
- ದಿನಾಂಕಗಳು: ಫೆಬ್ರವರಿ- ಮಾರ್ಚ್ 2025
- ಸ್ಥಳ: ಪಾಕಿಸ್ತಾನ (ಭಾರತದ ಪಂದ್ಯಗಳು ಯುಎಇಯಲ್ಲಿ ನಡೆಯುವುದು ಬಹುತೇಕ ಖಚಿತ)
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವು ಜೂನ್ 11ರಂದು ಲಾರ್ಡ್ಸ್‌ನಲ್ಲಿ ನಡೆಯಲಿದೆ. ಫೈನಲ್‌ನಲ್ಲಿ ಆಡುವ ಎರಡು ತಂಡಗಳು ಯಾವುವು ಎಂಬುದು ಇನ್ನಷ್ಟೇ ಅಂತಿಮವಾಗಬೇಕಿದೆ.
3. ಇಂಗ್ಲೆಂಡ್ vs ಭಾರತ (ವಿದೇಶಿ ಸರಣಿ) - ಜೂನ್-ಆಗಸ್ಟ್ 2025
ಚಾಂಪಿಯನ್ಸ್ ಟ್ರೋಫಿಯ ನಂತರ, ಭಾರತವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಅದಕ್ಕೂ ಮುನ್ನ 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಜೂನ್ 11ರಂದು ನಡೆಯುತ್ತದೆ. ಅದಕ್ಕೆ ಅರ್ಹತೆ ಪಡೆದರೆ ಆ ಪಂದ್ಯ ಆಡಲಿದೆ. ಅದರ ಬಳಿಕ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಆಂಗ್ಲರ ನಾಡಿಗೆ ಪ್ರಯಾಣಿಸಲಿದೆ.
- ಸ್ವರೂಪ: 5 ಟೆಸ್ಟ್ ಪಂದ್ಯ
- ದಿನಾಂಕ: ಜೂನ್ 20ರಿಂದ ಆಗಸ್ಟ್ 4
- ಸ್ಥಳ: ಇಂಗ್ಲೆಂಡ್
4. ಬಾಂಗ್ಲಾದೇಶ vs ಭಾರತ (ವಿದೇಶ) - ಆಗಸ್ಟ್ 2025
ಏಕದಿನ ಹಾಗೂ ಟಿ20 ಎರಡೂ ಸ್ವರೂಪದ ಪಂದ್ಯಗಳಲ್ಲಿ ಆಡಲು ಭಾರತವು ಬಾಂಗ್ಲಾದೇಶಕ್ಕೆ ಪ್ರಯಾಣಿಸಲಿದೆ.
- ಸ್ವರೂಪ: 3 ಏಕದಿನ ಮತ್ತು 3 ಟಿ20
- ದಿನಾಂಕ: ಆಗಸ್ಟ್ 2025
- ಸ್ಥಳ: ಬಾಂಗ್ಲಾದೇಶ
5. ಭಾರತ vs ವೆಸ್ಟ್ ಇಂಡೀಸ್ (ತವರಿನ ಸರಣಿ) - ಅಕ್ಟೋಬರ್ 2025
2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಭಾರತವು ಮೊದಲ ಸ್ವದೇಶಿ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಸರಣಿಯಲ್ಲಿ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ.
- ಸ್ವರೂಪ: 2 ಟೆಸ್ಟ್
- ದಿನಾಂಕ: ಅಕ್ಟೋಬರ್ 2025
- ಸ್ಥಳ: ಭಾರತ
6. ಆಸ್ಟ್ರೇಲಿಯಾ vs ಭಾರತ (ವಿದೇಶ) - ಅಕ್ಟೋಬರ್-ನವೆಂಬರ್
ಸುಮಾರು ಒಂದು ವರ್ಷದ ನಂತರ ಸೀಮಿತ ಓವರ್‌ಗಳ ಸರಣಿಗಾಗಿ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಇದರಲ್ಲಿ ಮೂರು ಏಕದಿನ ಹಾಗೂ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
- ಸ್ವರೂಪ: 3 ಏಕದಿನ, 5 ಟಿ20
- ದಿನಾಂಕ: ಅಕ್ಟೋಬರ್-ನವೆಂಬರ್ 2025
- ಸ್ಥಳ: ಆಸ್ಟ್ರೇಲಿಯಾ
7. ದಕ್ಷಿಣ ಆಫ್ರಿಕಾ vs ಭಾರತ (ವಿದೇಶ) - ನವೆಂಬರ್-ಡಿಸೆಂಬರ್ 2025
ಭಾರತವು 2025ರ ಕ್ಯಾಲೆಂಡರ್ ವರ್ಷವನ್ನು ದಕ್ಷಿಣ ಆಫ್ರಿಕಾ ಪ್ರವಾಸದೊಂದಿಗೆ ಮುಗಿಸಲಿದೆ. ಈ ಸರಣಿಯಲ್ಲಿ ಎರಡು ಟೆಸ್ಟ್, ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಒಳಗೊಂಡಿರುತ್ತದೆ.
- ಸ್ವರೂಪ: 2 ಟೆಸ್ಟ್, 3 ಏಕದಿನ ಹಾಗೂ 5 ಟ20
- ದಿನಾಂಕ: ನವೆಂಬರ್-ಡಿಸೆಂಬರ್ 2025
- ಸ್ಥಳ: ದಕ್ಷಿಣ ಆಫ್ರಿಕಾ
ಇದನ್ನೂ ಓದಿ | ಬೇಲ್ಸ್ ಅದಲು-ಬದಲು ಮಾಡಿ ಮೈಂಡ್‌ಗೇಮ್ ಆಡಿದ ಮೊಹಮ್ಮದ್ ಸಿರಾಜ್‌ಗೆ ಲಬುಶೇನ್ ಕೌಂಟರ್; ಆ ಬಳಿಕ ಆಗಿದ್ದೇ ಬೇರೆ -Video