ಬೇಲ್ಸ್ ಅದಲು-ಬದಲು ಮಾಡಿ ಮೈಂಡ್‌ಗೇಮ್ ಆಡಿದ ಮೊಹಮ್ಮದ್ ಸಿರಾಜ್‌ಗೆ ಲಬುಶೇನ್ ಕೌಂಟರ್; ಆ ಬಳಿಕ ಆಗಿದ್ದೇ ಬೇರೆ -Video
ಕನ್ನಡ ಸುದ್ದಿ  /  ಕ್ರಿಕೆಟ್  /  ಬೇಲ್ಸ್ ಅದಲು-ಬದಲು ಮಾಡಿ ಮೈಂಡ್‌ಗೇಮ್ ಆಡಿದ ಮೊಹಮ್ಮದ್ ಸಿರಾಜ್‌ಗೆ ಲಬುಶೇನ್ ಕೌಂಟರ್; ಆ ಬಳಿಕ ಆಗಿದ್ದೇ ಬೇರೆ -Video

ಬೇಲ್ಸ್ ಅದಲು-ಬದಲು ಮಾಡಿ ಮೈಂಡ್‌ಗೇಮ್ ಆಡಿದ ಮೊಹಮ್ಮದ್ ಸಿರಾಜ್‌ಗೆ ಲಬುಶೇನ್ ಕೌಂಟರ್; ಆ ಬಳಿಕ ಆಗಿದ್ದೇ ಬೇರೆ -Video

ಮೊಹಮ್ಮದ್ ಸಿರಾಜ್ ಮೈಂಡ್‌ ಗೇಮ್‌ ವರ್ಕೌಟ್‌ ಆಗಿದೆ. ಮಾರ್ನಸ್ ಲಬುಶೇನ್ ವಿಕೆಟ್‌ ಪಡೆಯಲು, ಭಿನ್ನ ಮಾರ್ಗ ಅನುಸರಿದರು. ಸ್ಟಂಪ್ಸ್‌ ಬೇಲ್ಸ್‌ ಅದಲು ಬದಲು ಮಾಡಿ, ಲಬುಶೇನ್‌ ಸ್ಲೆಡ್ಜ್‌ ಮಾಡುವ ಪ್ರಯತ್ನ ಮಾಡಿದರು. ಆ ನಂತರದ ಓವರ್‌ನಲ್ಲೇ ಆಸೀಸ್‌ ಬ್ಯಾಟರ್‌ ಔಟಾದರು.

ಬೇಲ್ಸ್ ಅದಲು-ಬದಲು ಮಾಡಿ ಮೈಂಡ್‌ಗೇಮ್ ಆಡಿದ ಮೊಹಮ್ಮದ್ ಸಿರಾಜ್‌ಗೆ ಲಬುಶೇನ್ ಕೌಂಟರ್
ಬೇಲ್ಸ್ ಅದಲು-ಬದಲು ಮಾಡಿ ಮೈಂಡ್‌ಗೇಮ್ ಆಡಿದ ಮೊಹಮ್ಮದ್ ಸಿರಾಜ್‌ಗೆ ಲಬುಶೇನ್ ಕೌಂಟರ್

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನವಾಟ ನಡೆಯುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯವೆಂದರೆ ಅಲ್ಲಿ ಮೈಂಡ್‌ಗೇಮ್‌, ಸ್ಲೆಡ್ಜಿಂಗ್‌ ಸಹಜ. ಈ ಪಂದ್ಯದಲ್ಲೂ ಉಭಯ ತಂಡಗಳ ಆಟಗಾರರ ನಡುವೆ ಮೈಂಡ್‌ಗೇಮ್‌ ನಡೆಯುತ್ತಿದೆ. ಈಗಾಗಲೇ ಪೂರ್ಣಗೊಂಡ ಎರಡು ಪಂದ್ಯಗಳಲ್ಲಿಯೂ ಮೈಂಡ್‌ ಗೇಮ್‌ ಎದ್ದುಕಾಣುತ್ತಿತ್ತು. ಗಬ್ಬಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಸೆಷನ್‌ನಲ್ಲಿ, ಆಸ್ಟ್ರೇಲಿಯಾದ ಬ್ಯಾಟರ್‌ ಮಾರ್ನಸ್ ಲಬುಶೇನ್ ಅವರ ಮುಂದೆ ಮೊಹಮ್ಮದ್‌ ಸಿರಾಜ್‌ ಮೈಂಡ್‌ ಗೇಮ್‌ ಶುರು ಮಾಡಿದರು. ವಿರಾಟ್ ಕೊಹ್ಲಿಯಂತೆ ಬೇಲ್ಸ್‌ ಅದಲು ಬದಲಾಯಿಸುವ ತಂತ್ರವನ್ನು ಪುನರಾವರ್ತಿಸಿದರು. ಆದರೆ, ಇದಕ್ಕೆ ಲಬುಶೇನ್‌ ಕೂಡಾ ಕೌಂಟರ್‌ ಕೊಟ್ಟರು.

ಪಂದ್ಯದ ಮೊದಲ ಇನ್ನಿಂಗ್ಸ್‌ನ 33ನೇ ಓವರ್‌ನಲ್ಲಿ ಸಿರಾಜ್ ಬ್ಯಾಟಿಂಗ್ ಸ್ಟ್ರೈಕ್‌ನಲ್ಲಿದ್ದರು. ಲಬುಶೇನ್‌ ವಿಕೆಟ್‌ ಪಡೆಯುವುದು ಭಾರತ ತಂಡಕ್ಕೆ ಮುಖ್ಯವಾಗಿತ್ತು. ಹೀಗಾಗಿ ಸಿರಾಜ್‌ ಮೈಂಡ್‌ ಗೇಮ್‌ ಶುರುವಿಟ್ಟರು. ಲಬುಶೇನ್ ಅವರೊಂದಿಗೆ ವಾಗ್ವಾದ ಆರಂಭಿಸಿದರು. ಅಲ್ಲದೆ ಸ್ಟಂಪ್‌ಗಳ ಬಳಿ ಬಂದು ಅದರ ಮೇಲಿದ್ದ ಬೇಲ್ಸ್‌ ಅನ್ನು ಅದಲು ಬದಲು ಮಾಡಿದರು. ಆಗ ಗಬ್ಬಾ ಪ್ರೇಕ್ಷಕರು ಭಾರತೀಯ ಆಟಗಾರನ ನಡೆ ನೋಡಿ ಬೊಬ್ಬೆ ಹಾಕಿದರು.

ಅಡಿಲೇಡ್ ಓವಲ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆಯೂ ಸಿರಾಜ್ ಇದೇ ರೀತಿ ವಾಗ್ಬಾದಗಳಲ್ಲಿ ಭಾಗಿಯಾದರು. ಇದು ಇಲ್ಲೂ ಮುಂದುವರೆಯಿತು. ಸಿರಾಜ್‌ ಬೇಲ್ಸ್‌ ಬದಲಾಯಿಸಿ ಹಿಂತಿರುಗುತ್ತಿದ್ದಂತೆಯೇ ಲಬುಶೇನ್‌ ಅದನ್ನು ಮೊದಲಿನಂತೆಯೇ ಇಟ್ಟು ಟಾಂಗ್‌ ಕೊಟ್ಟರು.

ಇಲ್ಲಿದೆ ವಿಡಿಯೋ

ಫಲಕೊಟ್ಟಿತು ಸಿರಾಜ್ ತಂತ್ರ

ಸಿರಾಜ್‌ ಎಸೆದ ಓವರ್‌ನಲ್ಲಿ ಲಬುಶೇನ್ ವಿಕೆಟ್‌ ಬರಲಿಲ್ಲ. ಆದರೆ ಮುಂದಿನ ಓವರ್‌ನಲ್ಲಿ ಆಸೀಸ್ ತಂಡದ ಪ್ರಮುಖ ಬ್ಯಾಟರ್‌ ಔಟಾದರು. ನಿತೀಶ್ ರೆಡ್ಡಿ ಎಸೆದ ಓವರ್‌ನಲ್ಲಿ ಕವರ್ ಡ್ರೈವ್ ಪ್ರಯತ್ನ ಮಾಡಿದ ಲಬುಶೇನ್, ಎರಡನೇ ಸ್ಲಿಪ್‌ನಲ್ಲಿ ನಿಂತಿದ್ದ ವಿರಾಟ್ ಕೊಹ್ಲಿಗೆ ಕ್ಯಾಚ್‌ ಕೊಟ್ಟು ಔಟಾದರು. ಅಲ್ಲಿಗೆ ಮೈಂಡ್ ಗೇಮ್ ಕೆಲಸ ಮಾಡಿತು.

ಎರಡನೇ ದಿನದಾಟದ ಮೊದಲ ಸೆಷನ್‌ನಲ್ಲಿ ಭಾರತ ಮೂರು ವಿಕೆಟ್ ಪಡೆಯಿತು. ಉಸ್ಮಾನ್ ಖವಾಜಾ ಮತ್ತು ನಾಥನ್ ಮೆಕ್ ಸ್ವೀನಿ ಅವರನ್ನು ಸತತ ಓವರ್‌ಗಳಲ್ಲಿ ಬುಮ್ರಾ ಔಟ್ ಮಾಡಿದರು. ನಿತೀಶ್‌ ಕುಮಾರ್‌ ಲಬುಶೇನ್‌ ವಿಕೆಟ್‌ ಪಡೆದರು.

ಶನಿವಾರ ಬ್ರಿಸ್ಬೇನ್‌ನಲ್ಲಿ ಭಾರಿ ಮಳೆ ಸುರಿದ ಕಾರಣದಿಂದಾಗಿ ಕೇವಲ 13.2 ಓವರ್‌ಗಳ ಪಂದ್ಯ ನಡೆಯಿತು. ದಿನದಾಟವನ್ನು ಬೇಗನೆ ನಿಲ್ಲಿಸಲಾಯ್ತು.

Whats_app_banner