logo
ಕನ್ನಡ ಸುದ್ದಿ  /  ಕ್ರಿಕೆಟ್  /  ಅತ್ಯುತ್ತಮ ನಿರ್ಧಾರ ಎಂದು ನನಗೆ ಗೊತ್ತಿತ್ತು; ಆರ್‌ಸಿಬಿ, ವಿರಾಟ್ ಕೊಹ್ಲಿ ಬಿಡ್ಡಿಂಗ್ ಕುರಿತು ವಿಜಯ್ ಮಲ್ಯ ಮಾತು

ಅತ್ಯುತ್ತಮ ನಿರ್ಧಾರ ಎಂದು ನನಗೆ ಗೊತ್ತಿತ್ತು; ಆರ್‌ಸಿಬಿ, ವಿರಾಟ್ ಕೊಹ್ಲಿ ಬಿಡ್ಡಿಂಗ್ ಕುರಿತು ವಿಜಯ್ ಮಲ್ಯ ಮಾತು

Jayaraj HT Kannada

May 22, 2024 06:38 PM IST

google News

ಆರ್‌ಸಿಬಿ, ವಿರಾಟ್ ಕೊಹ್ಲಿ ಬಿಡ್ಡಿಂಗ್ ಕುರಿತು ವಿಜಯ್ ಮಲ್ಯ ಮಾತು

    • Vijay Mallya: ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ತಮ್ಮ ಹಳೆಯ ತಂಡದ ಕುರಿತು ಮಾತನಾಡಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಮತ್ತು ಐಪಿಎಲ್ ತಂಡದ ಕುರಿತು ಅವರ ಪೋಸ್ಟ್‌ ವೈರಲ್‌ ಆಗಿದೆ.
ಆರ್‌ಸಿಬಿ, ವಿರಾಟ್ ಕೊಹ್ಲಿ ಬಿಡ್ಡಿಂಗ್ ಕುರಿತು ವಿಜಯ್ ಮಲ್ಯ ಮಾತು
ಆರ್‌ಸಿಬಿ, ವಿರಾಟ್ ಕೊಹ್ಲಿ ಬಿಡ್ಡಿಂಗ್ ಕುರಿತು ವಿಜಯ್ ಮಲ್ಯ ಮಾತು

ಆರ್‌ಸಿಬಿ ಎಂಬುದು ಒಂದು ತಂಡವಾಗಿ ಮಾತ್ರ ಉಳಿದಿಲ್ಲ. ಅದೊಂದು ಬ್ರಾಂಡ್ ಆಗಿ ಬೆಳೆದಿದೆ. ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದೆ. ಈ ಫ್ರಾಂಚೈಸ್‌ ಯಶಸ್ಸಿನ ಹಿಂದೆ ವಿಜಯ್‌ ಮಲ್ಯ ಅವರ ಪಾತ್ರ ದೊಡ್ಡದು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸ್‌ ಮಾಜಿ ಮಾಲೀಕ ವಿಜಯ್ ಮಲ್ಯ, ಆರಂಭದಲ್ಲಿ ಆರ್‌ಸಿಬಿ ಪಂದ್ಯದ ವೇಳೆ ತಂಡದ ಜೊತೆಗಿರುತ್ತಿದ್ದರು. ಅಲ್ಲದೆ ಹರಾಜು ಸಮಯದಲ್ಲಿ ಅವರ ಚಾಣಾಕ್ಷ ನಡೆ ಗಮನ ಸೆಳೆಯುತ್ತಿತ್ತು.ಇದೀಗ, ಪ್ರಸಕ್ತ ಆವೃತ್ತಿಯಲ್ಲಿ ಆರ್‌ಸಿಬಿ ತಂಡವು ಅಮೋಘ ಕಂಬ್ಯಾಕ್‌ ಮಾಡಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದೆ. ಈ ನಡುವೆ ಮಲ್ಯ ಅವರ ಸೋಷಿಯಲ್‌ ಮೀಡಿಯಾ ಪೋಸ್ಟ್‌ ಗಮನ ಸೆಳೆಯುತ್ತಿದೆ.

ಮಿಲಿಯನ್‌ ಡಾಲರ್‌ ಟೂರ್ನಿಯ ಆರಂಭಿಕ ದಿನಗಳಲ್ಲಿ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅವರನ್ನು ಏಕೆ ಬಿಡ್ ಮಾಡಿದರು ಎಂಬುದನ್ನು ವಿವರಿಸಿದ್ದಾರೆ. ಇದರೊಂದಿಗೆ ಈ ಬಾರಿ ಟ್ರೋಫಿ ಗೆಲ್ಲಲು ತಂಡಕ್ಕೆ ಉತ್ತಮ ಅವಕಾಶವಿದೆ ಎಂದು ಮಾಜಿ ಮಾಲೀಕ ಹೇಳಿದ್ದಾರೆ.

“ನಾನು ಆರ್‌ಸಿಬಿ ಫ್ರಾಂಚೈಸಿಗೆ ಬಿಡ್ ಮಾಡಿದಾಗ ಮತ್ತು ಹರಾಜಿನಲ್ಲಿ ವಿರಾಟ್‌ ಕೊಹ್ಲಿ ಅವರನ್ನು ಖರೀದಿ ಮಾಡುವಾಗ, ಅದಕ್ಕಿಂತ ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನನ್ನ ಆಂತರಿಕ ಮನಸ್ಸು ಹೇಳಿತು. ಐಪಿಎಲ್ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಆಂತರಿಕ ಪ್ರವೃತ್ತಿ ಹೇಳುತ್ತಿದೆ. ಶುಭವಾಗಲಿ” ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ.

2008ರಲ್ಲಿ ಆರ್‌ಸಿಬಿ ಫ್ರಾಂಚೈಸಿ ಖರೀದಿ

ಮಲ್ಯ ಅವರು 2008ರಲ್ಲಿ ಆರ್‌ಸಿಬಿ ಫ್ರಾಂಚೈಸಿಯನ್ನು ಖರೀದಿಸಿದರು. ವಿರಾಟ್‌ ಕೊಹ್ಲಿ ಕೂಡಾ ಆರಂಭದಿಂದಲೇ ಆರ್‌ಸಿಬಿ ತಂಡದಲ್ಲಿದ್ದಾರೆ. ತಮ್ಮ ಕೋಟ್ಯಂತರ ಸಾಲವನ್ನು ಮರುಪಾವತಿಸದೆ ಭಾರತ ಬಿಟ್ಟು ಪಲಾಯನ ಮಾಡಿದರು. ಇದೀಗ ಮಲ್ಯ ಭಾರತಕ್ಕೆ ಮರಳದೆ ವರ್ಷಗಳಾಗಿವೆ.

ಮಲ್ಯ ಅವರ ಅಪರೂಪದ ಪೋಸ್ಟ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ನೆಟ್ಟಿಗರಿಂದ ಬಗೆಬಗೆಯ ಕಾಮೆಂಟ್‌ಗಳು ಬಂದಿವೆ. ಮಿಲಿಯನ್‌ಗಟ್ಟಲೆ ಜನರು ಟ್ವೀಟ್‌ ವೀಕ್ಷಿಸಿದ್ದಾರೆ. “ನಿಮ್ಮ ಆಂತರಿಕ ಪ್ರವೃತ್ತಿಯು ಮತ್ತೆ ಭಾರತಕ್ಕೆ ಮರಳಿ ಕ್ರೀಡಾಂಗಣದಲ್ಲಿ ಕುಳಿತು ಪಂದ್ಯ ವೀಕ್ಷಿಸಲು ನಿಮಗೆ ಹೇಳುವುದಿಲ್ಲವೇ?” ಎಂದು ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. “ನೀವು ಮಾಡಿದ ಏಕೈಕ ಉತ್ತಮ ಕೆಲಸ” ಎಂದು ಮತ್ತೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ | ನಾಯಕನಾಗಿ ಧೋನಿ, ರೋಹಿತ್ ಶರ್ಮಾ ಮಾಡದ ವಿಶಿಷ್ಠ ದಾಖಲೆ ಮಾಡಿದ ಶ್ರೇಯಸ್ ಅಯ್ಯರ್

ಪ್ರಸಕ್ತ ಆವೃತ್ತಿಯಲ್ಲಿ ಆರ್‌ಸಿಬಿ ತಂಡವು ಸತತ ಆರು ಗೆಲುವುಗಳೊಂದಿಗೆ ಬೀಗುತ್ತಿದೆ. ಪ್ಲೇಆಫ್‌ಗೆ ಲಗ್ಗೆ ಹಾಕಿರುವ ತಂಡವು, ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಸೆಣಸುತ್ತಿದೆ. ಇಂದಿನ ಎಲಿಮನೇಟರ್‌ ಪಂದ್ಯ ಗೆದ್ದರೆ, ಮುಂದೆ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಎದುರಿಸಲಿದೆ.

ಇದನ್ನೂ ಒದಿ | RR vs RCB live score IPL 2024: ರಾಜಸ್ಥಾನ್ ರಾಯಲ್ಸ್ vs ಆರ್‌ಸಿಬಿ ಎಲಿಮಿನೇಟರ್‌ ಪಂದ್ಯದ ಲೈವ್‌ ಅಪ್ಡೇಟ್

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ