logo
ಕನ್ನಡ ಸುದ್ದಿ  /  ಮನರಂಜನೆ  /  Sai Pallavi: ರಾಮಾಯಣ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಸ್ಯಹಾರಿಯಾದ್ರ ಸಾಯಿ ಪಲ್ಲವಿ? ಕಪೋಲಕಲ್ಪಿತ ಸುದ್ದಿ ಕೇಳಿ ಕೋಪಗೊಂಡ ಸಹಜ ಸುಂದರಿ

Sai Pallavi: ರಾಮಾಯಣ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಸ್ಯಹಾರಿಯಾದ್ರ ಸಾಯಿ ಪಲ್ಲವಿ? ಕಪೋಲಕಲ್ಪಿತ ಸುದ್ದಿ ಕೇಳಿ ಕೋಪಗೊಂಡ ಸಹಜ ಸುಂದರಿ

Praveen Chandra B HT Kannada

Dec 12, 2024 12:43 PM IST

google News

Sai Pallavi: ರಾಮಾಯಣ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಸ್ಯಹಾರಿಯಾದ್ರ ಸಾಯಿ ಪಲ್ಲವಿ?

    • Sai Pallavi Vegetarian: ನಿತೀಶ್‌ ತಿವಾರಿ ನಿರ್ದೇಶನದ ಮುಂಬರುವ ರಾಮಾಯಣ ಸಿನಿಮಾದಲ್ಲಿ ಸೀತಾಮಾತೆ ಪಾತ್ರದಲ್ಲಿ ನಟಿಸಲಿರುವ ಸಾಯಿ ಪಲ್ಲವಿ ಕುರಿತು ಹೊಸ ವದಂತಿ ಹರಡಿದೆ. ಈ ಕುರಿತು ಸ್ವತಃ ಸಾಯಿ ಪಲ್ಲವಿ ಕೋಪಗೊಂಡಿದ್ದಾರೆ. ರಾಮಾಯಣ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಾಯಿ ಪಲ್ಲವಿ ಸಸ್ಯಹಾರಿಯಾಗಿದ್ದಾರೆ ಎಂಬ ಸುದ್ದಿ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Sai Pallavi: ರಾಮಾಯಣ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಸ್ಯಹಾರಿಯಾದ್ರ ಸಾಯಿ ಪಲ್ಲವಿ?
Sai Pallavi: ರಾಮಾಯಣ ಸಿನಿಮಾದಲ್ಲಿ ನಟಿಸುವ ಸಲುವಾಗಿ ಸಸ್ಯಹಾರಿಯಾದ್ರ ಸಾಯಿ ಪಲ್ಲವಿ?

ಸಹಜ ಸುಂದರಿ, ನಗು ಮುಖದ ಸುಂದರಿ ಸಾಯಿ ಪಲ್ಲವಿ ಕೋಪಗೊಂಡಿದ್ದಾರೆ. ಅವರ ಕೋಪಕ್ಕೆ ಕಾರಣವಾಗಿರುವುದು ಸುಳ್ಳುಸುದ್ದಿ. ನಿತೀಶ್‌ ತಿವಾರಿ ನಿರ್ದೇಶನದ ರಣಬೀರ್ ಕಪೂರ್ ಸೇರಿದಂತೆ ಪ್ಯಾನ್‌ ಇಂಡಿಯಾದ ಪ್ರಮುಖ ಕಲಾವಿದರು ನಟಿಸಿರುವ ರಾಮಾಯಣ ಸಿನಿಮಾದಲ್ಲಿ ಸೀತಾಮಾತೆ ಪಾತ್ರಕ್ಕೆ ಸಾಯಿ ಪಲ್ಲವಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿದೆ. ಇದೇ ಸಮಯದಲ್ಲಿ ಸೀತಾಮಾತೆಯ ಪಾತ್ರ ಮಾಡುವ ಸಲುವಾಗಿ ಸಾಯಿ ಪಲ್ಲವಿ ನಾನ್‌ವೆಜ್‌ ತ್ಯಜಿಸಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬುತ್ತಿದೆ. ಈ ಸಿನಿಮಾಕ್ಕಾಗಿ ನಟಿ ಸಸ್ಯಹಾರಿಯಾಗುತ್ತಿದ್ದಾರೆ ಎಂಬ ವದಂತಿಗೆ ಸ್ವತಃ ಸಾಯಿ ಪಲ್ಲವಿ ಪ್ರತಿಕ್ರಿಯೆ ನಡಿದ್ದಾರೆ. ಸಸ್ಯಹಾರಿಯಾದ ಸುದ್ದಿಯನ್ನು ಸಾಯಿ ಪಲ್ಲವಿ ಅಲ್ಲಗೆಳೆದಿದ್ದು, ಇಂತಹ ಸುಳ್ಳು ಸುದ್ದಿ ಹಬ್ಬಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಸಸ್ಯಹಾರಿಯಾದ್ರ ಸಾಯಿ ಪಲ್ಲವಿ?

ಸಾಯಿ ಪಲ್ಲವಿ ನಿನ್ನೆ ಈ ಕುರಿತು ಸುದೀರ್ಘ ಬರಹವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಮಾಯಣ ಸಿನಿಮಾದಲ್ಲಿ ಸೀತೆಯಾಗಿ ನಟಿಸಿಲು ಸಸ್ಯಹಾರಿಯಾಗಿ ಬದಲಾಗಿದ್ದಾರೆ ಎಂಬ ಸುದ್ದಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬಹುತೇಕ ಸಮಯ, ಹೆಚ್ಚಾಗಿ ಪ್ರತಿಬಾರಿ ನನ್ನ ಬಗ್ಗೆ ಆಧಾರರಹಿತ ವದಂತಿಗಳು / ಕಪೋಲಕಲ್ಪಿತ ಕಥೆಗಳು, ಸುಳ್ಳುಗಳು / ತಪ್ಪು ಹೇಳಿಕೆಗಳನ್ನು ಯಾವುದಾದರೂ ಉದ್ದೇಶಗಳೊಂದಿಗೆ ಅಥವಾ ಯಾವುದೇ ಇಲ್ಲದೆ ಹರಡುವುದನ್ನು ನೋಡಿದಾಗ ನಾನು ಮೌನವಾಗಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಆದರೆ, ಇದು ನಿರಂತರವಾಗಿ ನಡೆಯುತ್ತಿರುವುದರಿಂದ ಸುಮ್ಮನಿರಲಾರೆ, ನಾನು ಪ್ರತಿಕ್ರಿಯಿಸಲು ಇದು ಉತ್ತಮ ಸಮಯವಾಗಿದೆ.ವಿಶೇಷವಾಗಿ ನನ್ನ ಚಲನಚಿತ್ರಗಳ ಬಿಡುಗಡೆಗಳು/ಪ್ರಕಟಣೆಗಳು/ ನನ್ನ ವೃತ್ತಿಜೀವನದ ಕುರಿತಾದ ಕ್ಷಣಗಳನ್ನು ಕೇಳಲು ಬಯಸುವೆ. ಆದರೆ, ಜನಪ್ರಿಯ ಪೇಜ್‌ಗಳು ಅಥವಾ ಮಾಧ್ಯಮ/ವ್ಯಕ್ತಿಯು ಸುದ್ಧಿ ಅಥವಾ ಗಾಸಿಪ್‌ಗಳ ಹೆಸರಿನಲ್ಲಿ ಕಪೋಲಕಲ್ಪಿತ ಕ್ರೂರ ಕಥೆ ಹೇಳಿದರೆ ನೀವು ನನ್ನಿಂದ ಕಾನೂನು ಕ್ರಮಕ್ಕೆ ಪಾತ್ರರಾಗುವಿರಿ" ಎಂದು ಸಾಯಿ ಪಲ್ಲವಿ ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್‌) ಬರೆದಿದ್ದಾರೆ.

ಸಾಯಿ ಪಲ್ಲವಿ ಮೊದಲಿನಿಂದಲೂ ಸಸ್ಯಹಾರಿ

ತಮಿಳು ಡೈಲಿಯು ಸಾಯಿ ಪಲ್ಲವಿ ಕುರಿತು "ರಾಮಾಯಣಕ್ಕಾಗಿ ಸಸ್ಯಹಾರಿಯಾಗಿದ್ದಾರೆ" ಎಂಬ ಸುದ್ದಿ ಪ್ರಕಟಿಸಿದೆ. ಆದರೆ, ಸಾಯಿ ಪಲ್ಲವಿ ಮೊದಲಿನಿಂದಲೂ ಸಸ್ಯಹಾರಿಯಾಗಿದ್ದಾರೆ. ಈ ಸಿನಿಮಾಕ್ಕಾಗಿ ಅವರು ಸಸ್ಯಹಾರಿಯಾಗಿಲ್ಲ. "ಸಾಯಿ ಪಲ್ಲವಿ ರಾಮಾಯಣ ಸಿನಿಮಾಕ್ಕೆ ನಟಿಸುತ್ತಿದ್ದಾರೆ. ಇದಕ್ಕಾಗಿ ಸಾಯಿ ಪಲ್ಲವಿ ಸಸ್ಯಹಾರಿಯಾಗಿದ್ದಾರೆ. ಸಸ್ಯಹಾರ ಅಡುಗೆ ಮಾಡಲು ತನ್ನ ಜತೆ ತನ್ನದೇ ಅಡುಗಯವರ ತಂಡವನ್ನು ಕರೆದೊಯ್ಯುತ್ತಾರೆ. ಆ ತಂಡ ಆಕೆಗೆ ಕೇವಲ ಸಸ್ಯಹಾರ ಮಾಡಿ ನೀಡುತ್ತಿದೆ" ಎಂದು ಸುಳ್ಳುಸುದ್ದಿಯಲ್ಲಿ ಹೇಳಲಾಗಿತ್ತು. ಈ ಸುದ್ದಿಗೆ ಸಾಯಿ ಪಲ್ಲವಿ ಪ್ರತಿಕ್ರಿಯೆ ನೀಡಿದ್ದಾರೆ.

ಸಾಯಿ ಪಲ್ಲವಿ ಹಲವು ವರ್ಷಗಳ ಹಿಂದೆಯೇ ತಾನು ಸಸ್ಯಹಾರಿ ಎಂದು ಹೇಳಿದ್ದರು. ಸಂದರ್ಶನವೊಂದರಲ್ಲಿ "ಆಹಾರದ ಆಯ್ಕೆ ಬಂದಾಗ ನಾನು ಎಂದಿಗೂ ಸಸ್ಯಹಾರಿಯಾಗಿದ್ದೇನೆ. ಒಂದು ಪ್ರಾಣ ಹೋಗುವುದನ್ನು ನನಗೆ ನೋಡಲಾಗದು. ನಾನು ಇನ್ನೊಬ್ಬರಿಗೆ ನೋವು ನೀಡಲಾರೆ" ಎಂದು ಹೇಳಿದ್ದರು.

ಸಾಯಿ ಪಲ್ಲವಿಯ ಇತ್ತೀಚಿನ ಮತ್ತು ಮುಂಬರುವ ಸಿನಿಮಾಗಳು

ಸಾಯಿ ಪಲ್ಲವಿ ನಟಿಸಿದ ಅಮರನ್‌ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿತ್ತು. ಮೇಜರ್‌ ಮುಕುಂದ್‌ ಅವರ ಬದುಕಿನ ಕಥೆಯನ್ನು ಈ ಸಿನಿಮಾ ಹೊಂದಿತ್ತು. ಅಮರನ್‌ಸಿನಿಮಾ ಈಗ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಸಾಯಿ ಪಲ್ಲವಿ ಅವರು ನಿತೀಶ್‌ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್‌ ಕಪೂರ್‌, ರವಿ ದುಬೆ, ಸನ್ನಿ ಡಿಯೋಲ್‌, ಕನ್ನಡ ಸೂಪರ್‌ ಸ್ಟಾರ್‌ ಯಶ್ ಮುಂತಾದವರು ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗ 2026ರಲ್ಲಿ ಬಿಡುಗಡೆಯಾಗಲಿದೆ. ಅಂದಹಾಗೆ, ಸಾಯಿ ಪಲ್ಲವಿ ಒಂದು ಬಾರಿ ಒಂದು ಸಿನಿಮಾದಲ್ಲಿ ಮಾತ್ರ ನಟಿಸುತ್ತಾರೆ. ಒಂದು ಸಿನಿಮಾ ಮುಗಿಯುವ ಮೊದಲು ಮತ್ತೊಂದು ಸಿನಿಮಾದಲ್ಲಿ ನಟಿಸದೆ ಇರುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ