ಜಂಕ್ ಫುಡ್‍ಗಳಿಂದ ಮಕ್ಕಳನ್ನು ದೂರವಿರಿಸಿ: ಇಂತಹ ಆಹಾರಗಳನ್ನು ನೀಡಿದರೆ ದೃಷ್ಟಿ ದೋಷ ಎದುರಾಗಬಹುದು, ಇರಲಿ ಕಾಳಜಿ
ಕನ್ನಡ ಸುದ್ದಿ  /  ಜೀವನಶೈಲಿ  /  ಜಂಕ್ ಫುಡ್‍ಗಳಿಂದ ಮಕ್ಕಳನ್ನು ದೂರವಿರಿಸಿ: ಇಂತಹ ಆಹಾರಗಳನ್ನು ನೀಡಿದರೆ ದೃಷ್ಟಿ ದೋಷ ಎದುರಾಗಬಹುದು, ಇರಲಿ ಕಾಳಜಿ

ಜಂಕ್ ಫುಡ್‍ಗಳಿಂದ ಮಕ್ಕಳನ್ನು ದೂರವಿರಿಸಿ: ಇಂತಹ ಆಹಾರಗಳನ್ನು ನೀಡಿದರೆ ದೃಷ್ಟಿ ದೋಷ ಎದುರಾಗಬಹುದು, ಇರಲಿ ಕಾಳಜಿ

ಮಕ್ಕಳ ಆರೋಗ್ಯ ಕಾಪಾಡುವುದು ಪೋಷಕರ ಜವಾಬ್ದಾರಿ. ಹೀಗಾಗಿ ಪೌಷ್ಟಿಕಾಂಶಭರಿತ ಆಹಾರಗಳನ್ನೇ ಮಕ್ಕಳಿಗೆ ನೀಡಬೇಕು. ಆದಷ್ಟು ಜಂಕ್ ಫುಡ್‌ಗಳಿಂದ ಮಕ್ಕಳನ್ನು ದೂರವಿರಿಸುವುದು ಉತ್ತಮ. ಅವರು ತಿನ್ನುವ ಕೆಲವು ರೀತಿಯ ಜಂಕ್ ಫುಡ್‍ಗಳು ಅವರ ಕಣ್ಣಿನ ಕಾರ್ಯದ ಅಥವಾ ದೃಷ್ಟಿ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.

ಪೋಷಕರೇ, ಜಂಕ್ ಫುಡ್‍ಗಳಿಂದ ಮಕ್ಕಳನ್ನು ದೂರವಿರಿಸಿ
ಪೋಷಕರೇ, ಜಂಕ್ ಫುಡ್‍ಗಳಿಂದ ಮಕ್ಕಳನ್ನು ದೂರವಿರಿಸಿ (PC: Canva)

ಮಕ್ಕಳ ಆರೋಗ್ಯ ಕಾಪಾಡುವುದು ಪೋಷಕರ ಜವಾಬ್ದಾರಿ. ಅವರಿಗೆ ಯಾವ ಆಹಾರ ಒಳ್ಳೆಯದು ಮತ್ತು ಕೆಟ್ಟದು ಎಂಬುದು ತಿಳಿದಿರುವುದಿಲ್ಲ. ಹೀಗಾಗಿ ಪೋಷಕರು ಆಹಾರವನ್ನು ಬಹಳ ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಇಂದಿನ ಮಕ್ಕಳು ಜಂಕ್ ಫುಡ್‌ಗೆ ಹೆಚ್ಚು ಒಲವು ತೋರುತ್ತಿದ್ದಾರೆ. ಪಿಜ್ಜಾ, ಬರ್ಗರ್ ಮತ್ತು ನೂಡಲ್ಸ್ ಅನ್ನು ಇಷ್ಟಪಡುತ್ತಾರೆ. ಮಕ್ಕಳಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಊಟಕ್ಕೆ ನೂಡಲ್ಸ್, ಫ್ರೈಡ್ ರೈಸ್, ಪಿಜ್ಜಾ, ಬರ್ಗರ್ ಕೊಡಿಸುವವರು ಬಹಳ ಮಂದಿ ಇದ್ದಾರೆ. ಈ ರೀತಿ ಫಾಸ್ಟ್ ಫುಡ್ ನೀಡುವುದರಿಂದ ದೀರ್ಘಾವಧಿಯಲ್ಲಿ ಹೃದ್ರೋಗ, ಮಧುಮೇಹ, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಇತ್ತೀಚೆಗೆ, ಬ್ರಿಟನ್‌ನಲ್ಲಿ 17 ವರ್ಷದ ಯುವಕನೊಬ್ಬ ಹೆಚ್ಚು ಜಂಕ್ ಫುಡ್ ತಿಂದ ನಂತರ ಕುರುಡ ಮತ್ತು ಕಿವುಡನಾದ ಸುದ್ದಿ ಕೇಳಿಬಂದಿತ್ತು. ಜಂಕ್ ಫುಡ್ ಬಿಟ್ಟು ಬೇರೇನೂ ತಿನ್ನದೆ ಆತ ಅಪೌಷ್ಟಿಕತೆ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ. ಮಕ್ಕಳು ಜಂಕ್ ಫುಂಡ್ ಹೆಚ್ಚಾಗಿ ತಿಂದರೆ ದೃಷ್ಟಿ ದೋಷ ಎದುರಾಗಬಹುದು. ಪೋಷಕರೇ ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮಕ್ಕಳು ಹೆಚ್ಚು ಜಂಕ್ ಫುಡ್ ತಿಂದರೆ ಉಂಟಾಗುವ ಅಪಾಯಗಳು

ಹೆಚ್ಚು ಜಂಕ್ ಫುಡ್ ತಿನ್ನುವುದರಿಂದ ಮಕ್ಕಳಲ್ಲಿ ಸ್ಥೂಲಕಾಯತೆಯ ಅಪಾಯ ಹೆಚ್ಚಾಗುತ್ತದೆ. ಅಲ್ಲದೆ, ಅವರ ದೃಷ್ಟಿಯ ಮೇಲೂ ತೀವ್ರವಾಗಿ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ಅದಕ್ಕಾಗಿಯೇ ವೈದ್ಯರು, ಮಕ್ಕಳ ನರಗಳ ಬೆಳವಣಿಗೆಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಅಪೌಷ್ಟಿಕ ಮಕ್ಕಳು ಸಾಮಾನ್ಯವಾಗಿ ದೃಷ್ಟಿ ದೋಷ, ದುರ್ಬಲ ಸ್ನಾಯುಗಳು ಮತ್ತು ನರಗಳ ಅಸಮತೋಲನದಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಅಪೌಷ್ಟಿಕತೆ ಹೆಚ್ಚಾದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಇದೆ.

ಜನನದ ನಂತರ ಹಲವಾರು ತಿಂಗಳುಗಳವರೆಗೆ ಮಗುವಿನ ದೃಷ್ಟಿ ಬೆಳವಣಿಗೆಯಾಗುತ್ತಲೇ ಇರುತ್ತದೆ. ಹಾಗಾಗಿ ಅವರಿಗೆ ಪೌಷ್ಟಿಕಾಂಶ ನೀಡಬೇಕು. ಅನ್ನ ತಿನ್ನುವ ವಯಸ್ಸಿಗೆ ಬಂದ ನಂತರ ಜಂಕ್ ಫುಡ್ ಕೊಡುವ ಬದಲು ಹಣ್ಣು, ತರಕಾರಿ, ಪ್ರೊಟೀನ್‍ಯುಕ್ತ ಆಹಾರ, ಸೊಪ್ಪುಗಳನ್ನು ಹೆಚ್ಚು ನೀಡಬೇಕು.

ಜಂಕ್ ಫುಡ್‌ನಲ್ಲಿ ಹೆಚ್ಚಿನ ಸೋಡಿಯಂ ಅಂಶವು ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದು ಮಕ್ಕಳ ಕಣ್ಣುಗಳ ರಚನೆಯನ್ನು ಹಾನಿಗೊಳಿಸುತ್ತದೆ. ಇದು ದೃಷ್ಟಿ ಮಂದವಾಗುವುದು, ಕಣ್ಣಿನೊಳಗೆ ರಕ್ತಸ್ರಾವ ಅಥವಾ ಗ್ಲುಕೋಮಾಗೆ ಕಾರಣವಾಗಬಹುದು. ಇದು ಕೆಲವೊಮ್ಮೆ ದೃಷ್ಟಿ ನಷ್ಟ ಅಥವಾ ಕುರುಡುತನಕ್ಕೆ ಕಾರಣವಾಗುತ್ತದೆ.

ರೆಟಿನಾಗೆ ಹಾನಿ: ಸೆಂಟ್ರಲ್ ಸೆರೋಸ್ ಕೊರಿಯೊರೆಟಿನೋಪತಿ (ಸಿಎಸ್‌ಸಿ) ಎಂಬುದು ರೆಟಿನಾದ ಕೆಳಗೆ ದ್ರವವು ಸಂಗ್ರಹಗೊಳ್ಳುವ ಸ್ಥಿತಿಯಾಗಿದೆ. ಕೋರಾಯ್ಡ್ ರಕ್ತನಾಳಗಳ ಪದರವಾಗಿದ್ದು ಅದು ರೆಟಿನಾಕ್ಕೆ ಪೋಷಕಾಂಶಗಳನ್ನು ಪೂರೈಸುತ್ತದೆ. ಸಮಸ್ಯೆ ಸಾಮಾನ್ಯವಾಗಿ ಒಂದು ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಕೆಲವೊಮ್ಮೆ ಎರಡೂ ಕಣ್ಣುಗಳು ಪರಿಣಾಮ ಬೀರುತ್ತವೆ. ಮಸುಕಾದ ದೃಷ್ಟಿ ಅಥವಾ ಕಪ್ಪು ಕಲೆಗಳಂತಹ ದೃಷ್ಟಿ ದೋಷವನ್ನು ಉಂಟುಮಾಡುತ್ತದೆ.

ದುರ್ಬಲಗೊಂಡ ರಕ್ತನಾಳಗಳು: ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಜೀವಸತ್ವಗಳು ಮತ್ತು ಖನಿಜಗಳು ಮುಖ್ಯವಾಗಿವೆ. ಅಪೌಷ್ಟಿಕತೆ ಕಣ್ಣಿನ ಅಂಗಾಂಶಗಳ ದುರ್ಬಲತೆಗೆ ಕಾರಣವಾಗುತ್ತದೆ. ಇದು ಕಾರ್ನಿಯಲ್ ಕ್ಷೀಣತೆ ಅಥವಾ ದುರ್ಬಲಗೊಂಡ ರಕ್ತನಾಳಗಳಂತಹ ತೊಡಕುಗಳಿಗೆ ಕಾರಣವಾಗಬಹುದು.

ಇವುಗಳನ್ನು ಹಾಕಬೇಡಿ: ಮಕ್ಕಳಿಗೆ ಪ್ಯಾಕೇಜ್ ಮಾಡಿದ ಆಹಾರವನ್ನು ನೀಡಬೇಡಿ. ಮೇಯನೇಸ್, ಕೆಚಪ್, ಬಾರ್ಬೆಕ್ಯೂ ಸಾಸ್‌ನಂತಹ ಕೊಬ್ಬಿನಂಶವಿರುವ ಪದಾರ್ಥಗಳನ್ನು ನೀಡದಿರಿ. ಇವೆಲ್ಲವೂ ಸಕ್ಕರೆ ಮತ್ತು ಕೊಬ್ಬುಗಳಿಂದ ತುಂಬಿವೆ. ವಿಟಮಿನ್‍ಗಳಲ್ಲಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಮಗುವಿಗೆ ನೀಡಿ. ಇದು ಉತ್ತಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ, ಕಿವಿ, ಹಸಿರು ಕ್ಯಾರೆಟ್ ಮತ್ತು ಸೊಪ್ಪಿನ ಆಹಾರವನ್ನು ಮಕ್ಕಳ ಆಹಾರದಲ್ಲಿ ಸೇರಿಸಬಹುದು.

Whats_app_banner