ಅಬ್ಬಬ್ಬಾ ಅಲ್ಲು ಅರ್ಜುನ್‌ಗೆ ಅದೇನ್ ದೌಲತ್ ಗುರೂ! ನಮ್ ರಾಕಿಂಗ್ ಸ್ಟಾರ್ ಯಶ್ ನೋಡಿ ಕಲೀರಿ ಎಂದ ನೆಟ್ಟಿಗ, ವಿಡಿಯೋ ವೈರಲ್
Dec 05, 2024 07:38 AM IST
ರಾಕಿಂಗ್ ಸ್ಟಾರ್ ಯಶ್ ಮತ್ತು ಅಲ್ಲು ಅರ್ಜುನ್
- ಅಲ್ಲು ಅರ್ಜುನ್ ಹಾಗೂ ಕನ್ನಡದ ನಟ ಯಶ್ ಅವರು ತಮ್ಮ ಅಭಿಮಾನಿಗಳಿಗೆ ಯಾವ ರೀತಿ ಸಹಕರಿಸುತ್ತಾರೆ. ಯಾರ ವರ್ತನೆ ಯಾವ ರೀತಿ ಇರುತ್ತದೆ ಎಂಬ ವಿಡಿಯೋ ಒಂದು ಸಾಕಷ್ಟು ವೈರಲ್ ಆಗಿದೆ.
ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ಸಿನಿಮಾ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿರುವ ಸಿನಿಮಾ ಬಿಡುಗಡೆ ಸಮಯದಲ್ಲೇ ಇನ್ನೊಂದು ವಿಡಿಯೋ ವೈರಲ್ ಆಗಿದೆ. ಅಲ್ಲು ಅರ್ಜುನ್ ಅಭಿಮಾನಿಗಳನ್ನು ಯಾವ ರೀತಿ ಟ್ರೀಟ್ ಮಾಡುತ್ತಾರೆ ಮತ್ತು ಕನ್ನಡದ ಸ್ಟಾರ್ ನಟ ಯಶ್ ತಮ್ಮ ಅಭಿಮಾನಿಗಳನ್ನು ಯಾವ ರೀತಿ ಟ್ರೀಟ್ ಮಾಡುತ್ತಾರೆ ಎಂಬ ವಿಡಿಯೋ ಒಂದು ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಭಿಮಾನಿಗಳು ತಮ್ಮ ಇಷ್ಟದ ನಟರ ಬಳಿ ಸೆಲ್ಫಿ ಕೇಳಲು ಬರುತ್ತಾರೆ. ಆಗ ಇವರಿಬ್ಬರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬ ಬಗ್ಗೆ ಈ ವಿಡಿಯೋ ಇದೆ.
ಈ ವಿಡಿಯೋದಲ್ಲಿ ಮೊದಲಿಗೆ ಅಲ್ಲು ಅರ್ಜುನ್ ಕಾರ್ಯಕ್ರಮವೊಂದರಲ್ಲಿ ಕುಳಿತುಕೊಂಡಿರುತ್ತಾರೆ.ಆಗ ಅಭಿಮಾನಿಯೊಬ್ಬರು ಬಂದು ಸೆಲ್ಫಿ ಕೇಳುತ್ತಾರೆ. ಆದರೆ ಅಲ್ಲು ಅರ್ಜುನ್ ತಾವು ಹೇಗೆ ಕುಳಿತುಕೊಂಡಿದ್ದರೋ ಅದೇ ರೀತಿ ಕುಳಿತಿರುತ್ತಾರೆ. ಕಾಲು ಮೇಲೆ ಕಾಲ್ ಹಾಕಿ ಕುಳಿತವರು ಹೆಚ್ಚಾಗಿ ಸಹಕರಿಸುವುದಿಲ್ಲ. ಆದರೆ ರಾಕಿಂಗ್ ಸ್ಟಾರ್ ಯಶ್ ಅವರ ಬಳಿ ಬಂದು ಕೆಳಗಡೆ ಕುಳಿತು ಯಾರೋ ಸೂಚನೆ ನೀಡುವ ಸಂದರ್ಭದಲ್ಲಿ ಯಶ್ ಅವರ ಕಾಲನ್ನು ತಿಳಿಯದೇ ಮುಟ್ಟುತ್ತಾರೆ. ಆಗ ತಕ್ಷಣ ಎಚ್ಚೆತ್ತ ಯಶ್ ಅವರು ಅವರ ಕೈ ಹಿಡಿದು ಅವರ ಮಾತನ್ನು ಕೇಳುತ್ತಾರೆ. ತಮ್ಮ ಕಾಲನ್ನು ತಕ್ಷಣ ಕೆಳಗಿಳಿಸುತ್ತಾರೆ. ಈ ಒಂದು ಸರಳತೆಯ ವಿಡಿಯೋ ವೈರಲ್ ಆಗಿದೆ.
ಇನ್ನು ಸಾಕಷ್ಟು ಸಂದರ್ಭದಲ್ಲಿ ತಮ್ಮೊಡನೆ ಫೋಟೋ ತೆಗೆದುಕೊಳ್ಳಲು ಬಂದ ಅಭಿಮಾನಿಗಳಿಗೆ ಯಶ್ ಅವರು ಸಹಕರಿಸುವುದನ್ನು ನಾವು ಈ ವಿಡಿಯೋದಲ್ಲಿ ಕಾಣಬಹುದು. ಅವರು ತಮ್ಮ ಅಭಿಮಾನಿಗಳನ್ನು ಎಷ್ಟು ಗೌರವಿಸುತ್ತಾರೆ ಎಂದು ಅವರ ಸರಳತೆಯಲ್ಲಿ ತಿಳಿದು ಬರುತ್ತದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ನಮ್ಮ ಯಶ್ ಅವರನ್ನು ನೋಡಿ ಅಲ್ಲು ಅರ್ಜುನ್ ಸರಳತೆ ಹಾಗೂ ಅಭಿಮಾನಿಗಳನ್ನು ಯಾವ ರೀತಿ ಟ್ರೀಟ್ ಮಾಡಬೇಕು ಎನ್ನುವುದನ್ನು ಕಲಿಯಬೇಕು ಎಂದಿದ್ದಾರೆ.
ಇನ್ನು ಯಾರೋ ಹೂವಿನ ಹಾರವನ್ನು ಯಶ್ ಅವರ ಕೊರಳಿಗೆ ಹಾಕಿರುತ್ತಾರೆ. ಆಗ ಅಭಿಮಾನಿಯೊಬ್ಬರು ತಾನೂ ಆ ಹಾರದ ಜೊತೆ ಯಶ್ ಅವರ ಬಳಿ ನಿಲ್ಲುವ ಪ್ರಯತ್ನ ಮಾಡುತ್ತಾರೆ. ಅಲ್ಲೇ ಅಕ್ಕಪಕ್ಕದಲ್ಲಿದ್ದವರು ಅದನ್ನು ನಿರಾಕರಿಸುತ್ತಾರೆ. ಆದರೆ ಯಶ್ ಅವರು ಸಹಕರಿಸುತ್ತಾರೆ. ಅವರನ್ನೂ ತಮ್ಮ ಹೂವಿನ ಹಾರದಲ್ಲಿ ಸೇರಿಸಿಕೊಂಡು ಫೋಟೋಗೆ ಪೋಸ್ ನೀಡುತ್ತಾರೆ. ಇನ್ನು ಅವರ ಜೊತೆ ಯಾರಾದರೂ ಫೋಟೋ ಕೇಳಿದಾಗ ತಾನು ಫೋಟೋ ಕೊಡುವುದಿಲ್ಲ ಎಂದು ಎಂದಿಗೂ ಅವರು ಹೇಳಿದ್ದಿಲ್ಲ. ತಮ್ಮ ಬಾಡಿಗಾರ್ಡ್ಸ್ ಫೋಟೋ ತೆಗೆದುಕೊಳ್ಳಲು ಬಂದ ಅಭಿಮಾನಿಗಳನ್ನು ದೂರ ತಳ್ಳಿದರೆ ತಾವೇ ಅವರಿಗೆ ಬೈದು ಫೋಟೋ ನೀಡಿರುವ ಸಾಕಷ್ಟು ಉದಾಹರಣೆಗಳನ್ನು ಈ ವಿಡಿಯೋದಲ್ಲಿ ಕಾಣಬಹುದು
ಇದನ್ನೂ ಓದಿ: Pushpa 2 Twitter Review: ಅಲ್ಲು ಅರ್ಜುನ್, ರಶ್ಮಿಕಾ ಅಭಿನಯ 'ಪುಷ್ಪ 2' ಹೇಗಿದೆ? ಇಲ್ಲಿದೆ ನೋಡಿ ಟ್ವಿಟರ್ ರಿವ್ಯೂ