logo
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿ: ಶಿವು ಮಾತಿಗೆ ಪಾರು ವಿರೋಧ, ಇಬ್ಬರ ಮನಸ್ಥಿತಿ ಸೂಟ್ ಆಗೋದೆ ಇಲ್ವ?

ಅಣ್ಣಯ್ಯ ಧಾರಾವಾಹಿ: ಶಿವು ಮಾತಿಗೆ ಪಾರು ವಿರೋಧ, ಇಬ್ಬರ ಮನಸ್ಥಿತಿ ಸೂಟ್ ಆಗೋದೆ ಇಲ್ವ?

Suma Gaonkar HT Kannada

Sep 23, 2024 10:54 AM IST

google News

ಶಿವು ಮತ್ತು ಪಾರು

  • ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮತ್ತು ಶಿವು ಹಾಗೂ ಅವನ ತಂಗಿಯರೆಲ್ಲ ಸೇರಿಕೊಂಡು ರವಿಕೆ ಹೊಲಿಸಲು ಹೋಗುತ್ತಾರೆ. ಆದರೆ ಅಲ್ಲಿ ನಡೆದ ಒಂದು ಘಟನೆಯಲ್ಲಿ ಎಲ್ಲರಿಗೂ ಅಸಮಾಧಾನ ಆಗುತ್ತದೆ. ಅಂತಹದ್ದು ಏನಾಯ್ತು ನೋಡಿ. 

ಶಿವು ಮತ್ತು ಪಾರು
ಶಿವು ಮತ್ತು ಪಾರು (ಝೀ ಕನ್ನಡ)

ಶಿವು ಸದಾ ಗೊಂದಲದಲ್ಲೇ ಇದ್ದಾನೆ. ಹೇಗೆ ಮಾಡಿ ಮದುವೆ ನಿಲ್ಲಿಸೋದು ಅಥವಾ ಹೇಗೆ ಮಾವನ ಮಾತು ಉಳಿಸಿಕೊಳ್ಳೋದು ಎನ್ನುವ ಅನುಮಾನ ಅವನಿಗೆ ನಿದ್ದೆ ಮಾಡೋಕೂ ಬಿಡ್ತಾ ಇಲ್ಲ. ಇನ್ನು ಪಾರು ಮಾತ್ರ ದಿನವೂ ಹಠ ಮಾಡುತ್ತಾ ಇದ್ದಾಳೆ. “ನಾನು ಮದುವೆ ಆಗೋದಾದ್ರೆ ಅದು ಸಿದ್ದಾರ್ಥ್‌ನ ಮಾತ್ರ” ಎಂದು ಸದಾ ಹೇಳುತ್ತಾಳೆ. “ಮಾವ ಇದಕ್ಕೆಲ್ಲ ನಿನ್ನ ಸಹಾಯ ತುಂಬಾ ಅಗತ್ಯ” ಎಂದು ಮಾತು ಮಾತಿಗೆ ಹೇಳುತ್ತಾಳೆ. ಹೀಗಿರುವಾಗ ಇದೇ ಗೊಂದಲದಲ್ಲಿ ಅವನು ದೇವಸ್ಥಾನಕ್ಕೆ ಹೋಗುತ್ತಾನೆ. “ದೇವರೆ ಈಗ ನೀನೇ ಗತಿ, ನಿನಗೆ ನನ್ನ ಎಲ್ಲಾ ಪರಿಸ್ಥಿತಿನೂ ಗೊತ್ತಿದೆ. ನೀನೇ ಒಂದು ದಾರಿ ತೋರಿಸಬೇಕು” ಎಂದು ಹೇಳುತ್ತಾನೆ.

ಅಷ್ಟರಲ್ಲಿ ಅಲ್ಲಿಗೆ ಒಂದು ಅಜ್ಜಿ ಬರುತ್ತಾಳೆ. ಬಂದು ಹೇಳುತ್ತಾಳೆ. ನೀನೇ ದೇವರು ನಿನ್ನನ್ನೇ ಆ ದೇವರು ಆಯ್ಕೆ ಮಾಡಿಕೊಂಡಿದ್ದಾನೆ. ದೇವರು ನಿನ್ನ ಮೇಲೆ ಬರ್ತಾನೆ. ಅಂತದ್ರಲ್ಲಿ ನೀನು ಅಂದುಕೊಂಡದ್ದು ಆಗದೆ ಇರೋದಿಲ್ಲ ಬಿಡು ಎಂದು ಹೇಳುತ್ತಾಳೆ. ಆಗ ಅವನಿಗೆ ಏನೇನೋ ನೆನಪಾದ ಹಾಗೆ ಆಗುತ್ತದೆ. ಆದರೆ ಯಾವುದೂ ಸ್ಪಷ್ಟ ಇರೋದಿಲ್ಲ.

ಇನ್ನು ಪಾರುವನ್ನು ಕೂಡಿ ಹಾಕಿದ್ದಾರೆ. ನೀನು ಇನ್ನು ಮುಂದೆ ಎಲ್ಲೂ ಹೋಗಬಾರದು ಎಂದು ಹೇಳಿದ್ದಾರೆ. ಆ ಮಾತನ್ನು ಕೇಳಿ ಅವಳಿಗೆ ದಾರಿ ತೋಚದಾಗಿದೆ. ಇನ್ನು ಅವಳು ರವಿಕೆ ಹೊಲಿಸುವ ನೆಪ ಹೇಳಿಕೊಂಡು ಮನೆಯಿಂದ ಹೊರಬಿದ್ದಿದ್ದಾಳೆ. ಆಗ ಅವಳು ಶಿವುನಾ ಭೇಟಿ ಆಗಿದ್ದಾಳೆ. ಅವಳನ್ನು ಕರೆದುಕೊಂಡು ಅವಳ ತಾಯಿ ಬಂದಿದ್ದಾಳೆ.

ಅದಾದ ನಂತರದಲ್ಲಿ ಅವಳ ತಾಯಿ ಶಿವು ಮನೆಗೆ ಬಂದಿದ್ದಾಳೆ. ತನ್ನ ಮಗಳ ಮದುವೆಗೆ ತಾನೇ ತನ್ನ ಗಂಡನ ಜೊತೆ ಬಂದು ಕರೆದು ಹೋಗಬೇಕು ಎನ್ನುವ ಆಸೆ ಅವಳಿಗೆ ಇರುತ್ತದೆ. ಆದರೆ ಅವಳ ಗಂಡ ಅವಳನ್ನು ಕರೆದುಕೊಂಡು ಬರುವುದಿಲ್ಲ. ಹಾಗಾಗಿ ಅವಳು ಬಂದು ಹೇಳುತ್ತಾಳೆ. ನಾನು ಕರೆದು ಹೋಗೋಣ ಅಂತ ಬಂದೆ ಎಂದು. ಅವಳು ಹಾಗಂದ ತಕ್ಷಣ ಈಗಷ್ಟೆ ಮಾವ ಕರೆದು ಹೋದ್ರು ಎಂದು ಹೇಳುತ್ತಾನೆ. “ಆದರೆ ನಾನು ಕರೆದ ಹಾಗೆ ಆಗೋದಿಲ್ಲ ಅಲ್ವ?” ಅಂತ ಕೇಳುತ್ತಾಳೆ.

ಇನ್ನು ತನ್ನ ಅಣ್ಣ ಎಲ್ಲಿದ್ದಾನೆ ಎಂದು ಅವಳು ಕೇಳುತ್ತಾಳೆ. ಆಗ ಅವನು ಹೇಳುತ್ತಾನೆ.."ಅಪ್ಪ ರೂಮಲ್ಲಿ ಇದಾರೆ" ಅಂತ. ಆಗ ಅವಳು ರೂಮಿಗೆ ಹೋಗಿ ತನ್ನ ಅಣ್ಣನಿಗೆ ಲಗ್ನ ಪತ್ರಿಕೆ ಕೊಟ್ಟು ಬರಬೇಕು ಎಂದು ಹೇಳುತ್ತಾಳೆ. ಆಗ ಅವನು ಆಯ್ತು ಎಂದು ಹೇಳುತ್ತಾ ಭಾವುಕನಾಗುತ್ತಾನೆ.

ಪಾರು ಹಾಗೂ ಶಿವುನ ಎಲ್ಲಾ ತಂಗಿಯರು ಕೂಡ ರವಿಕೆ ಹೊಲಿಸಿಕೊಳ್ಳಲು ಹೊಲಿಗೆ ಅಂಗಡಿಗೆ ಬಂದಿದ್ದಾರೆ. ಅಲ್ಲಿ ನಿಮ್ಮ ಹತ್ತಿರ ಇರುವ ಬ್ಲೌಸ್ ಡಿಸೈನ್ ಬುಕ್ ಕೊಡಿ ಎಂದು ಪಾರು ಹೇಳುತ್ತಾಳೆ. ಅವಳು ಹೇಳಿದಂತೆ ಟೇಲರ್ ಅವಳಿಗೆ ಡಿಸೈನ್ ಕೊಡುತ್ತಾನೆ. ನಂತರ ಅವಳು ಒಂದು ಡಿಸೈನ್ ಚೂಸ್ ಮಾಡಿ ನನಗೆ ಇದೇ ರೀತಿ ಬ್ಲೌಸ್ ಹೊಲಿದು ಕೊಡಿ ಎಂದು ಹೇಳುತ್ತಾಳೆ. ನಂತರ ನೀವು ಅಳತೆಯನ್ನು ಈಗಲೇ ತೆಗೆದುಕೊಳ್ಳಿ ಆದಷ್ಟು ಬೇಗ ಹೊದ್ದು ಕೊಡಿ ಎಂದು ಹೇಳುತ್ತಾಳೆ.

ಇಷ್ಟಾದ ನಂತರ ಹೋಲಿಗೆ ಅವನು ಅಳತೆ ತೆಗೆದುಕೊಳ್ಳಲು ಬಂದಾಗ ಶಿವು ತಡೆಯುತ್ತಾನೆ. “ಇಲ್ಲ ನನ್ನ ತಂಗಿನೇ ಅಳ್ತೆ ತಗೋತಾಳೆ. ನನ್ನ ತಂಗಿಯರನ್ನು ಯಾರು ಮುಟ್ಟೋಹಾಗಿಲ್ಲ” ಎಂದು ಅವನು ಹೇಳುತ್ತಾನೆ. ಆ ಮಾತನ್ನು ಕೇಳಿ ಪಾರು ಶಿವುಗೆ ಇನ್ನೊಂದು ಮಾತು ಹೇಳುತ್ತಾಳೆ. “ಮಾವ ನಿಮಗೂ ಇಷ್ಟು ಸಣ್ಣ ಬುದ್ಧಿ ಇದೆಯಾ? ಈ ರೀತಿ ಮಾಡೋದ್ರಿಂದ ಹುಡುಗಿರನ್ನು ಬೇರೆ ತರ ನೋಡ್ತಾ ಇರೋದು ಸ್ವಾತಂತ್ರ್ಯನೇ ಇಲ್ಲದ ತರ ಆಗ್ತಾ ಇರೋದು” ಎಂದು ಹೇಳುತ್ತಾಳೆ. ಆಗ ಶಿವುಗೆ ಬೇಸರ ಆಗುತ್ತದೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ