ಅಣ್ಣಯ್ಯ ಧಾರಾವಾಹಿ: ಪಾರು ಮದುವೆ ಲಗ್ನ ಪತ್ರಿಕೆ ಪೂಜೆ ನಡೆದೋಯ್ತು, ಶಿವಣ್ಣನ ಆತಂಕ ಇನ್ನೂ ಹೆಚ್ಚಾಯ್ತು
ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ತಂದೆಯಿಂದ ಏಟು ತಿಂದು ಬೇಸರವಾಗಿದ್ದರೆ. ಶಿವು ಏನು ನಿರ್ಧಾರ ತೆಗೆದುಕೊಳ್ಳಲಾಗದೆ ಆತಂಕದಲ್ಲಿದ್ದಾನೆ. ಪಾರು ಅಥವಾ ಮಾವ ಈಗ ಯಾರ ಮಾತು ಕೇಳಬೇಕು ಅನ್ನೋದೇ ಗೊಂದಲ.
ಪಾರು ಹೇಳಿದ ಮಾತು ಕೇಳಿ ಶಿವು ಪಾರುವನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದಾನೆ. ಆದ್ರೆ ಬರುವಾಗ ತಡವಾಗಿದೆ. ಇದೇ ಕಾರಣಕ್ಕೆ ಮನೆಯಲ್ಲಿ ಪಾರು ಕೆನ್ನೆಗೆ ಏಟು ಕೊಡಲಾಗಿದೆ. ಇದರಿಂದ ಶಿವು ನೊಂದುಕೊಂಡಿದ್ದಾನೆ. ಇದರಲ್ಲಿ ತನ್ನ ತಪ್ಪೇ ಇದೆ. ನಾನು ಅವಳನ್ನು ಸರಿಯಾದ ಸಮಯಕ್ಕೆ ಕರೆದುಕೊಂಡು ಬರಬೇಕಿತ್ತು. ಆದರೆ ಗಾಡಿ ಹಾಳಾಯ್ತು ಸರಿ ಮಾಡಿಸಿಕೊಂಡು ಬರುವಷ್ಟರಲ್ಲಿ ಹೀಗಾಯ್ತು ಎಂದು ಅವನು ಹೇಳುತ್ತಾನೆ. ಆದರೆ ಪಾರುಗೆ ಮಾತ್ರ ಹೊಡೆಯುತ್ತಾರೆ. ಶಿವುಗೆ ಒಂದೂ ಮಾತಾಡೋದಿಲ್ಲ. ಅದು ಅವನಿಗೆ ಇನ್ನಷ್ಟು ಬೇಸರ ತರಿಸಿದೆ. ಇನ್ನು ಅವನು ಮನೆಗೆ ಬಂದು ಮುಟ್ಟುವಷ್ಟರಲ್ಲಿ ಮತ್ತೆ ಮಾವನ ಕಾಲ್ ಬರುತ್ತದೆ.
ಅವರ ಫೋನ್ ನೋಡುತ್ತಿದ್ದಂತೆ ಇವನು ಇನ್ನಷ್ಟು ಹೆದರುತ್ತಾನೆ. ಯಾಕೆಂದರೆ ಅವನಿಗೆ ಅನಿಸುತ್ತದೆ. ಮಾವಯ್ಯನಿಗೆ ಎಲ್ಲ ಸತ್ಯ ಗೊತ್ತಾಗಿದೆ ಹಾಗಾಗಿ ಅವರು ಕಾಲ್ ಮಾಡುತ್ತಾ ಇದ್ದಾರೆ ಎಂದು. ಆದರೆ ಸತ್ಯ ಅದಲ್ಲ. ನಾಳೆ ಪಾರು ಲಗ್ನ ಪತ್ರಿಕೆ ಪೂಜೆ ಇದೆ. ಅದನ್ನು ನಡೆಸಿಕೊಡಬೇಕು ಎಂದು ಮಾವಯ್ಯ ಕಾಲ್ ಮಾಡಿರುತ್ತಾರೆ. ಅವರು ಕಾಲ್ ಮಾಡಿದ ವಿಷಯ ಕೇಳಿ ಇವನಿಗೆ ಇನ್ನೂ ಶಾಕ್ ಆಗುತ್ತದೆ. ಇತ್ತ ನೋಡಿದರೆ ಪಾರು ಇವನನ್ನೆ ನಂಬಿಕೊಂಡು ಕುಳಿತಿದ್ದಾಳೆ.
ನಂತರ ಮಾರನೇ ದಿನ ಇವನು ಅವರ ಮನೆಗೆ ಹೋಗುತ್ತಾನೆ. ಜೊತೆಗೆ ತಂಗಿಯರನ್ನೂ ಕರೆದುಕೊಂಡು ಹೋಗುತ್ತಾನೆ. ಯಾಕೆಂದರೆ ಮಾವಯ್ಯ ತಂಗಿಯರನ್ನು ಕರೆದುಕೊಂಡು ಬಾ ಎಂದು ಹೇಳಿರುತ್ತಾರೆ. ಆ ಕಾರಣಕ್ಕೆ ಎಲ್ಲರೂ ಹೋಗಿರುತ್ತಾರೆ. ನಂತರ ಪೂಜೆ ನೆರವೇರುತ್ತದೆ. ಪೂಜೆ ನೆರವೇರಿ ಮಾವಯ್ಯ ತಂಗಿಯರ ಹತ್ತಿರ" ಈ ಎಲ್ಲ ಲಗ್ನ ಪತ್ರಿಕೆಗೂ ಅರಶಿನ ಕುಂಕುಮ ಹಚ್ಚಿ" ಎಂದು ಹೇಳುತ್ತಾರೆ. ಇವರಿಗೆ ತಮ್ಮಣ್ಣ ಮದುವೆ ಆಗುವ ಹುಡುಗಿಯನ್ನು ಇನ್ಯಾರೋ ಮದುವೆ ಆಗುತ್ತಾ ಇದ್ದಾರೆ ಎನ್ನುವ ಬೇರಸ ಬೇರೆ ಇರುತ್ತದೆ.
ಇದೇ ಕಾರಣಕ್ಕೆ ರಶ್ಮಿ ಒಂದು ಕಿತಾಪತಿ ಮಾಡುತ್ತಾಳೆ. ಅಲ್ಲೆ ಎಲ್ಲಿಂದಲೋ ಒಂದು ಪೆನ್ ತೆಗೆದುಕೊಂಡು ಬಂದು ಸೋಮೆಗೌಡ ಎಂದು ಬರೆದಿದ್ದಲ್ಲಿ ಶಿವಯ್ಯ ಎಂದು ಬರೆಯುತ್ತಾಳೆ. ಆದರೆ ಇದು ಯಾರಿಗೂ ಗೊತ್ತಾಗೋದಿಲ್ಲ. ನಂತರ ಅದನ್ನು ಪಾರು ಅಣ್ಣ ಬಂದು ತೆಗೆದುಕೊಂಡು ಹೋಗುತ್ತಾನೆ. ಅವಳಿಗೂ ಒಂದು ಚೂರು ಭಯ ಆಗುವುದಿಲ್ಲ. ಇತ್ತ ನೋಡಿದರೆ ಸೋಮೆಗೌಡ ಇದೀಗ ಆ ಲಗ್ನಪತ್ರಿಕೆಯನ್ನು ನೋಡಿರುತ್ತಾನೆ. ಅವನಿಗೆ ಈಗ ತುಂಬಾ ಕೋಪ ಬಂದಿದೆ.
ಇನ್ನು ಮಾವಯ್ಯ ಶಿವಯ್ಯನ ಮನೆಗೆ ಬಂದು “ನಾವು ನಿನ್ನ ಮದುವೆಗೆ ಕರೆಯೋದಕ್ಕೆ ಬಂದ್ವಿ. ನೀನೇ ಮುಂದೆ ನಿಂತು ಈ ಮದುವೆ ಮಾಡಿಸಬೇಕಪ್ಪ. ಎಲ್ಲ ಜವಾಬ್ಧಾರಿಯಿಂದ ಮಾಡಬೇಕು ನೀನು” ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿ ತಾನು ಯಾರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿ ಎಂದು ಅವನಿಗೆ ತಿಳಿಯುವುದಿಲ್ಲ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.