ಅಣ್ಣಯ್ಯ ಧಾರಾವಾಹಿ: ಆಪತ್ತಿನ ಕಾಲದಲ್ಲಿ ಪಾರು ಜೊತೆ ನಿಂತ ಶಿವು; ಪಾರ್ಟಿಯಲ್ಲಿ ಅವಮಾನ, ಏಟು ತಿಂದ ಅಣ್ಣಯ್ಯ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿ: ಆಪತ್ತಿನ ಕಾಲದಲ್ಲಿ ಪಾರು ಜೊತೆ ನಿಂತ ಶಿವು; ಪಾರ್ಟಿಯಲ್ಲಿ ಅವಮಾನ, ಏಟು ತಿಂದ ಅಣ್ಣಯ್ಯ

ಅಣ್ಣಯ್ಯ ಧಾರಾವಾಹಿ: ಆಪತ್ತಿನ ಕಾಲದಲ್ಲಿ ಪಾರು ಜೊತೆ ನಿಂತ ಶಿವು; ಪಾರ್ಟಿಯಲ್ಲಿ ಅವಮಾನ, ಏಟು ತಿಂದ ಅಣ್ಣಯ್ಯ

ಝೀ ಕನ್ನಡ ಧಾರಾವಾಹಿ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಸಿದ್ದಾರ್ಥ್‌ ಬರ್ತಡೆ ಪಾರ್ಟಿ ನಡೆಯುತ್ತಾ ಇದೆ. ಆದರೆ ಕುಡಿಯೋದಿಲ್ಲ ಎಂದು ಹೇಳಿದ ಶಿವುಗೆ ಮೋಸ ಮಾಡಿ ಕುಡಿಸಿದ್ದಾರೆ. ನಂತರ ಏನಾಯ್ತು ಅನ್ನೋದನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ

ಅಣ್ಣಯ್ಯ ಪಾರುವನ್ನು ಕರೆದುಕೊಂಡು ಮೈಸೂರಿಗೆ ಹೋಗಿದ್ದಾನೆ. ಅಲ್ಲಿ ಅವನಿಗೆ ಇಷ್ಟ ಇಲ್ಲದ ಎಷ್ಟೋ ಘಟನೆಗಳು ನಡೆದಿದೆ ಆದರೂ ಅದೆಲ್ಲವನ್ನೂ ಅವನು ಪಾರುಗಾಗಿ ಸಹಿಸಿಕೊಂಡಿದ್ದಾನೆ. ಇನ್ನು ಇತ್ತ ಮನೆಯಲ್ಲಿ ಅವನ ತಂಗಿಯರೆಲ್ಲ. ಶಿವು ಮತ್ತು ಪಾರು ಬಗ್ಗೆ ಮಾತಾಡ್ತಾ ಇದ್ದಾರೆ. ಅಣ್ಣ ಅತ್ಗೆನಾ ತುಂಬಾ ಪ್ರೀತಿ ಮಾಡ್ತಾನೆ. ಆದ್ರೆ ಅವನಿಗೆ ತನ್ನ ಪ್ರೀತಿನಾ ಹೇಳಿಕೊಳ್ಳೋಕೆ ಆಗ್ತಾನೇ ಇಲ್ಲ ಎಂದು ರಶ್ಮಿ ಆಲೋಚನೆ ಮಾಡುತ್ತಾ ಇರುತ್ತಾಳೆ. ಇದನ್ನು ತನ್ನ ಸಹೋದರಿಯರ ಹತ್ತಿರ ಹೇಳೀಕೊಳ್ಳುತ್ತಾಳೆ. ಆಗ ಎಲ್ಲರೂ ಅದನ್ನೇ ಯೋಚನೆ ಮಾಡುತ್ತಾ ಇರುತ್ತಾರೆ.

ತಂಗಿಯರ ಪ್ರೀತಿ

ರಮ್ಯ ಅಲ್ಲೇ ಕೂತು ಓದಿಕೊಳ್ಳುತ್ತಾ ಇರುತ್ತಾಳೆ. “ಹೌದು ಅಣ್ಣ ಅತ್ಗೆನಾ ಪ್ರೀತಿ ಮಾಡ್ತಾನೆ. ಆದ್ರೆ ಈಗ ನಾವೇನ್ ಮಾಡೋದು” ಎಂದು ಕೇಳುತ್ತಾಳೆ. ಆಗ ಇನ್ನಷ್ಟು ಜನ ಆ ಮಾತಿಗೆ ಇಳಿಯುತ್ತಾರೆ. "ನಾವೇ ಹೇಳಿಬಿಡೋಣ ಅತ್ಗೆ ಹತ್ರ. ಅಣ್ಣ ನಿಮ್ಮನ್ನ ಪ್ರೀತಿ ಮಾಡ್ತಾ ಇದಾನೆ ಅಂತ" ರಶ್ಮಿ ಹೇಳುತ್ತಾಳೆ. ಆದರೆ ರತ್ನ ಇದಕ್ಕೆ ಒಪ್ಪೋದಿಲ್ಲ. ಇಲ್ಲ ಈ ರೀತಿ ಮಾಡೋದು ಸರಿ ಅಲ್ಲ.

ಅತ್ಗೆ ಮದುವೆ ಮುರಿಯೋದು ಹೇಗೆ?

ಅದೂ ಅಲ್ದೆ ಅತ್ಗೆಗೆ ಮದುವೆ ನಿಕ್ಕಿಯಾಗಿದೆ. ಅವಳ ಮದುವೆನಾ ನಿಲ್ಸಿ ಅಣ್ಣ ಅವಳನ್ನು ಮದುವೆ ಆಗೋದು ಸುಲಭದ ಮಾತಲ್ಲ ಎಂದು ಅವಳು ಎಲ್ಲರಿಗೂ ಮನವರಿಕೆ ಮಾಡಿ ಕೊಡುತ್ತಾಳೆ. ಆದರೆ ಮುಂದೆ ಏನು ಮಾಡಬೇಕು ಅನ್ನೋದು ಮಾತ್ರ ಅಲ್ಲಿ ಯಾರಿಗೂ ತೋಚುತ್ತಾ ಇಲ್ಲ. ಇನ್ನು ಇತ್ತ ಪಾರ್ಟಿಯಲ್ಲಿ ಶಿವುಗೆ ತುಂಬಾ ಅವಮಾನ ಮಾಡುತ್ತಾರೆ. ಪಾರು ಹತ್ತಿರ ಜ್ಯೂಸ್‌ ಕೊಡಿಸುವ ನೆಪದಲ್ಲಿ ಅವನಿಗೆ ಕುಡಿಸುತ್ತಾರೆ.

ಅಮಲಿನಲ್ಲಿ ಕುಸ್ತಿ

ಅವನಿಗೆ ಅಮಲಿನಲ್ಲಿ ಏನೂ ತಿಳಿಯೋದಿಲ್ಲ. ಅದೇ ಸಂದರ್ಭದಲ್ಲಿ ರೌಡಿಗಳು ಅಲ್ಲಿಗೆ ಬಂದು ಗಲಾಟೆ ಮಾಡ್ತಾರೆ. ಅವರು ಗಲಾಟೆ ಮಾಡಿ ಪಾರುಗೆ ತೊಂದರೆ ನೀಡುತ್ತಾರೆ. ಆದರೆ ಅವನಿಗೆ ಅದು ಗೊತ್ತಾಗಿ ಕಾಪಾಡುತ್ತಾನೆ. ಅವನು ಅಮಲಿನಲ್ಲೂ ಅವಳ ಪರವಾಗಿ ನಿಂತು ಹೋರಾಡುತ್ತಾನೆ. ಇತ್ತ ಮನೆಯಲ್ಲಿ ಪಾರು ಬಂದಿಲ್ಲ ಎಂದು ಅವಳ ಅಮ್ಮಂದಿರು ಗಾಬರಿಯಾಗಿದ್ದಾರೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner