Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು, ಮದುವೆ ಮನೆಯಿಂದ ಓಡಿ ಹೋದ್ಲು ಪಾರು; ವೀರಭದ್ರನ ಮನೆ ಮರ್ಯಾದೆ ಹರಾಜು
Oct 08, 2024 01:45 PM IST
ಶಿವು ಜೊತೆ ಸ್ಕೂಟರ್‌ನಲ್ಲಿ ಕೂತು ಮದುವೆ ಮನೆಯಿಂದ ಹೊರನಡೆದ ಪಾರು
- ಝೀ ಕನ್ನಡ: ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಪಾರು ಮದುವೆ ಮನೆಯಿಂದ ಓಡಿ ಹೋಗಿದ್ದಾಳೆ. ಮನೆಯಲ್ಲಿ ಎಲ್ಲರಿಗೂ ಗಾಬರಿ ಆಗಿದೆ. ಜೊತೆಗೆ ಶಿವು ಕೂಡ ಹೋಗಿದ್ದಾನೆ. ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು ಕಾಣಿಸಿದೆ. ಇನ್ನಷ್ಟು ಕುತೂಹಲಕಾರಿಯಾಗಿ ಧಾರಾವಾಹಿ ಸಾಗಿದೆ.
ಸೋಮೇಗೌಡನನ್ನು ಮದುವೆಯಾಗಲು ಇಷ್ಟ ಇಲ್ಲದ ಕಾರಣಕ್ಕಾಗಿ ಪಾರು ತನ್ನ ಮಾವನ ಜೊತೆ ಕೂಡಿಕೊಂಡು ಸಿದ್ಧಾರ್ಥ್‌ನ ಮದುವೆಯಾಗೋಕೆ ರೆಡಿಯಾಗಿದ್ದಾಳೆ. ಸಂಪೂರ್ಣ ರೆಡಿಯಾಗಿ ರಾತ್ರೋರಾತ್ರಿ ಮನೆಬಿಟ್ಟು ಓಡಿಹೋಗಲು ರೆಡಿಯಾಗಿದ್ದಾಳೆ. ಮಲಗಿಕೊಂಡಿದ್ದ ತನ್ನ ತಾಯಿಯರ ಕಾಲಿಗೆ ನಮಸ್ಕಾರ ಮಾಡುತ್ತಾಳೆ. “ನಾನು ಅಂದುಕೊಂಡ ರೀತಿ ಬದುಕಲು ರೆಡಿ ಆಗಿದ್ದೇನೆ ಅಮ್ಮ, ಸಾರಿ.. ನಾನು ಇಲ್ಲಿಂದ ಈಗ ಹೋಗ್ಲೇಬೇಕು” ಎಂದು ಮನಸಿನಲ್ಲೇ ಹೇಳಿಕೊಂಡು ಕಾಲು ಮುಟ್ಟಿ ನಮಸ್ಕರಿಸಿದ್ದಾಳೆ.
"ನನ್ನ ಗುರಿಯನ್ನು ನಾನು ಮುಟ್ಟಲೇಬೇಕಾಗಿದೆ. ನನ್ನನ್ನು ಕ್ಷಮಿಸಿಬಿಡಿ" ಎಂದು ಹೇಳಿ ಅವಳು ಮದುವೆ ಮನೆಯಿಂದ ಓಡಿ ಹೋಗುತ್ತಾಳೆ. ಅವಳು ಓಡಿ ಹೋಗಲು ಅಣ್ಣಯ್ಯ ಸಹಾಯ ಮಾಡುತ್ತಾನೆ. ರಾತ್ರೋರಾತ್ರಿ ಅವಳು ಓಡಿ ಹೋಗಿರುವುದು ಯಾರಿಗೂ ಗೊತ್ತಾಗೋದಿಲ್ಲ. ಅಣ್ಣಯ್ಯನ ಸಹಾಯದಿಂದ ಸ್ಕೂಟರ್‌ನಲ್ಲಿ ಅವಳು ಹೋಗಿರುತ್ತಾಳೆ. ಮರುದಿನ ಎಲ್ಲರೂ ಎದ್ದು ಹುಡುಕಲು ಆರಂಭಿಸಿದಾಗ ಅವಳು ಎಲ್ಲಿಯೂ ಕಾಣೋದಿಲ್ಲ. ಈ ವಿಷಯ ಮೊದಲು ಗೊತ್ತಾಗಿದ್ದು ಅವಳ ತಾಯಂದಿರಿಗೆ.
ಯಾಕೆಂದರೆ ಅವರು ಅವಳನ್ನು ಹುಡುಕಿಕೊಂಡು ಅವಳ ರೂಮ್‌ಗೆ ಹೋಗಿದ್ದಾರೆ. ಹೋಗಿ ನೋಡುವಷ್ಟರಲ್ಲಿ ಅಲ್ಲಿ ಯಾರೂ ಇರೋದಿಲ್ಲ. ಹಾಸಿಗೆಯ ಮೇಲೆ ಅವಳು ಮಲಗಿಕೊಂಡೇ ಇರುವ ರೀತಿ ಕಾಣೋಕೆ ಅವಳು ಎಲ್ಲ ತಲೆ ದಿಂಬುಗಳನ್ನು ಸಾಲಾಗಿ ಜೋಡಿಸಿ ಇಟ್ಟಿರುತ್ತಾಳೆ. ಇಷ್ಟು ಮಾಡಿ ಅವಳು ಅಲ್ಲಿಂದ ಓಡಿ ಹೋಗಿದ್ದಾಳೆ. ಇನ್ನು ವೀರಭದ್ರ ತನ್ನ ಜೊತೆಗಾರರೊಂದಿಗೆ ಮಗಳ ಮದುವೆ ಅನ್ನೋ ಖುಷಿ ಅದಕ್ಕಿಂತ ಹೆಚ್ಚಿನದಾಗಿ ತನ್ನ ವ್ಯವಹಾರ ಇನ್ನು ಸಲೀಸಾಗಿ ಆಗುತ್ತದೆ ಎನ್ನುವ ಆನಂದದಲ್ಲಿ ಇರುತ್ತಾನೆ.
ಆದರೆ ಸ್ವಲ್ಪ ಸಮಯದಲ್ಲೇ ಅವನ ಆಸೆ ನಿರಾಸೆ ಆಗುತ್ತದೆ. ಅವನು ಮಾತಾಡುತ್ತಾ ಇರುವ ಸಂದರ್ಭದಲ್ಲಿ ಅವನ ಹೆಂಡತಿಯರು ಬಂದು, ಪಾರು ಕಾಣೆ ಆಗಿರುವ ಸಂಗತಿ ತಿಳಿಸುತ್ತಾರೆ. ಅದನ್ನು ಕೇಳಿ ವೀರಭದ್ರನಿಗೆ ಶಾಕ್ ಆಗುತ್ತದೆ. ಮದುವೆ ಮನೆಯಿಂದ ಮದುವೆ ಹೆಣ್ಣು ಓಡಿ ಹೋಗಿದ್ದಾಳಂತೆ ಎಂದು ಅಜ್ಜಿ ದೊಡ್ಡದಾಗಿ ಹೇಳುತ್ತಾರೆ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.