Anushka Shetty: ಬಹಳ ದಿನಗಳ ನಂತರ ಕ್ಯಾಮರಾಗೆ ಸೆರೆ ಸಿಕ್ಕ ಅನುಷ್ಕಾ.. ಸ್ವೀಟಿ ಲುಕ್ ನೋಡಿ ಶಾಕ್ ಆದ ಅಭಿಮಾನಿಗಳು; ವಿಡಿಯೋ !
Feb 21, 2023 07:26 AM IST
ಅನುಷ್ಕಾ ಶೆಟ್ಟಿ ಲೇಟೆಸ್ಟ್ ಫೋಟೋ
- ಅನುಷ್ಕಾ ಶೆಟ್ಟಿ, ಶಿವರಾತ್ರಿ ಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಿದ್ದಾರೆ. ತಂದೆ-ತಾಯಿ ಹಾಗೂ ಇಬ್ಬರು ಅಣ್ಣಂದಿರ ಜೊತೆ ಬೆಂಗಳೂರಿನ ದೇವಸ್ಥಾನಕ್ಕೆ ತೆರಳಿದ್ದ ಅನುಷ್ಕಾ ಶೆಟ್ಟಿ ಕ್ಯಾಮರಾಗೆ ಸೆರೆ ಆಗಿದ್ಧಾರೆ. ವೈಟ್ ಅಂಡ್ ವೈಟ್ ಡ್ರೆಸ್‌ನಲ್ಲಿ ಸ್ವೀಟಿ ಬಹಳ ಮುದ್ಧಾಗಿ ಕಾಣುತ್ತಿದ್ದಾರೆ. ಆದರೆ ಆಕೆ ಮೊದಲಿಗಿಂತ ಮತ್ತಷ್ಟು ದಪ್ಪ ಆಗಿದ್ದಾರೆ.
ಟಾಲಿವುಡ್ ಸ್ವೀಟಿ, ಅಲಿಯಾಸ್ ಅನುಷ್ಕಾ ಶೆಟ್ಟಿ ತೆಲುಗು ಜನರಿಗೆ ಮಾತ್ರವಲ್ಲ, ಕನ್ನಡ, ತಮಿಳು, ಮಲಯಾಳಂ ಸಿನಿಪ್ರಿಯರಿಗೂ ಇಷ್ಟವಾದ ನಟಿ. ಅನುಷ್ಕಾ ಸಿನಿಮಾಗಳು ಎಂದರೆ ಅಭಿಮಾನಿಗಳು ಬಹಳ ಇಷ್ಟಪಟ್ಟು ನೋಡುತ್ತಾರೆ. ಆದರೆ ಸ್ವೀಟಿ ಮಾತ್ರ 2 ವರ್ಷಗಳ ಹಿಂದೆ ತೆರೆ ಕಂಡ 'ನಿಶ್ಯಬ್ಧಂ' ನಂತರ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ.
ಅನುಷ್ಕಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇದ್ದಾರೆ. ತಮ್ಮ ಹಾಗೂ ಫ್ಯಾಮಿಲಿ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಆದರೆ ಕೆಲವು ದಿನಗಳಿಂದ ಅವರು ಈಗಿನ ಫೋಟೋಗಳನ್ನು ಹಂಚಿಕೊಂಡಿರಲಿಲ್ಲ. ಹಳೆಯ ಫೋಟೋಗಳನ್ನು ಹೆಚ್ಚಾಗಿ ಶೇರ್ ಮಾಡುತ್ತಿದ್ದರು. ಜೊತೆಗೆ ಮಾಧ್ಯಮಗಳ ಮುಂದೆ ಕೂಡಾ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಬಹಳ ದಿನಗಳ ನಂತರ ಅನುಷ್ಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾ ಅವರನ್ನು ನೋಡಿ ಅಭಿಮಾನಿಗಳು ಕೂಡಾ ಶಾಕ್ ಆಗಿದ್ದಾರೆ. ಏಕೆಂದರೆ ಅನುಷ್ಕಾ ಬಹಳ ದಪ್ಪ ಆಗಿದ್ದಾರೆ.
ಅನುಷ್ಕಾ ಶೆಟ್ಟಿ, ಶಿವರಾತ್ರಿ ಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಿದ್ದಾರೆ. ತಂದೆ-ತಾಯಿ ಹಾಗೂ ಇಬ್ಬರು ಅಣ್ಣಂದಿರ ಜೊತೆ ಬೆಂಗಳೂರಿನ ದೇವಸ್ಥಾನಕ್ಕೆ ತೆರಳಿದ್ದ ಅನುಷ್ಕಾ ಶೆಟ್ಟಿ ಕ್ಯಾಮರಾಗೆ ಸೆರೆ ಆಗಿದ್ಧಾರೆ. ವೈಟ್ ಅಂಡ್ ವೈಟ್ ಡ್ರೆಸ್‌ನಲ್ಲಿ ಸ್ವೀಟಿ ಬಹಳ ಮುದ್ಧಾಗಿ ಕಾಣುತ್ತಿದ್ದಾರೆ. ಆದರೆ ಆಕೆ ಮೊದಲಿಗಿಂತ ಮತ್ತಷ್ಟು ದಪ್ಪ ಆಗಿದ್ದಾರೆ. ಲಾಕ್ ಡೌನ್ ವೇಳೆ ದಪ್ಪ ಆಗಿದ್ದ ಸ್ವೀಟಿ ನಂತರ ಸ್ವಲ್ಪ ಸಣ್ಣ ಆಗಿದ್ದರು. ಇದೀಗ ಮತ್ತೆ ದಪ್ಪ ಆಗಿದ್ದಾರೆ. ಅನುಷ್ಕಾ ಹೊಸ ವಿಡಿಯೋಗಳನ್ನು ನೋಡಿ ಕೆಲವರು ತುಂಬಾ ಮುದ್ದಾಗಿ ಕಾಣುತ್ತಿದ್ದೀರಿ ಎಂದರೆ ಕೆಲವರು ಬಾಡಿ ಶೇಮಿಂಗ್ ಮಾಡುತ್ತಿದ್ಧಾರೆ. ಒಟ್ಟಿನಲ್ಲಿ ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಅನುಷ್ಕಾ ಸಿನಿಮಾಗಳ ಬಗ್ಗೆ ಹೇಳೋದಾದ್ರೆ, 2020 ರಲ್ಲಿ ತೆರೆ ಕಂಡ 'ನಿಶ್ಯಬ್ಧಂ' ಚಿತ್ರದ ನಂತರ ಅವರು ಅಭಿನಯಿಸಿರುವ ಯಾವುದೇ ಹೊಸ ಸಿನಿಮಾ ತೆರೆ ಕಂಡಿಲ್ಲ. ಹಾಗೇ ಅವರು ಯಾವ ಹೊಸ ಸಿನಿಮಾವನ್ನು ಅನೌನ್ಸ್ ಕೂಡಾ ಮಾಡಿಲ್ಲ. ಕೆಲವು ವರ್ಷಗಳಿಂದ ಅನುಷ್ಕಾ ಮಾಧ್ಯಮಗಳ ಮುಂದೆ ಕೂಡಾ ಬಂದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅರ್ಧಂಬರ್ಧ ಮುಖ ಕಾಣುವಂತೆ ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ನಿಮ್ಮ ಹೊಸ ಸಿನಿಮಾದ ಬಗ್ಗೆ ನೀವೂ ಏನೂ ಹೇಳುತ್ತಿಲ್ಲ. ಇದು ನಮಗೆ ಬಹಳ ಬೇಸರವಾಗಿದೆ. ನಿಮ್ಮನ್ನು ಮತ್ತೆ ತೆರೆ ಮೇಲೆ ನೋಡಲು ಕಾಯುತ್ತಿದ್ದೇವೆ. ಬೇಗ ಹೊಸ ಸಿನಿಮಾ ಅನೌನ್ಸ್ ಮಾಡಿ ಎಂದು ಬೇಡಿಕೆಯಿಟ್ಟಿದ್ದಾರೆ.
ಈ ನಡುವೆ ಅವರು ನವೀನ್ ಪೊಲಿಶೆಟ್ಟಿ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ಈ ಸಿನಿಮಾ ಬಗ್ಗೆ ಹೊಸ ಅಪ್‌ಡೇಟ್ ತಿಳಿದುಬಂದಿಲ್ಲ.