Kranti in OTT: ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ 'ಕ್ರಾಂತಿ'... ಮತ್ತೊಮ್ಮೆ ಸಿನಿಮಾ ನೋಡಲು ಸಜ್ಜಾದ ಸಿನಿಪ್ರಿಯರು!
ಕನ್ನಡ ಸುದ್ದಿ  /  ಮನರಂಜನೆ  /  Kranti In Ott: ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ 'ಕ್ರಾಂತಿ'... ಮತ್ತೊಮ್ಮೆ ಸಿನಿಮಾ ನೋಡಲು ಸಜ್ಜಾದ ಸಿನಿಪ್ರಿಯರು!

Kranti in OTT: ಒಟಿಟಿಯಲ್ಲಿ ಸ್ಟ್ರೀಮ್‌ ಆಗಲಿದೆ 'ಕ್ರಾಂತಿ'... ಮತ್ತೊಮ್ಮೆ ಸಿನಿಮಾ ನೋಡಲು ಸಜ್ಜಾದ ಸಿನಿಪ್ರಿಯರು!

ಶಾಲೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಕ್ರಾಂತಿ ರಾಯಣ್ಣ ಹೋರಾಡುವ ಕಥೆಯೇ 'ಕ್ರಾಂತಿ' ಫೆಬ್ರವರಿ 23 ರಂದು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 240 ಕ್ಕೂ ಹೆಚ್ಚು ದೇಶಗಳಲ್ಲಿ 'ಕ್ರಾಂತಿ' ಸಿನಿಮಾ ಸ್ಟ್ರೀಮ್‌ ಆಗಲಿದೆ.

ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗಲಿರುವ 'ಕ್ರಾಂತಿ'
ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮ್‌ ಆಗಲಿರುವ 'ಕ್ರಾಂತಿ' (PC: prime video IN)

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ಕಳೆದ ತಿಂಗಳು ಗಣರಾಜ್ಯೋತ್ಸವದಂದು ತೆರೆ ಕಂಡಿತ್ತು. ದರ್ಶನ್‌ ಹಾಗೂ ರಚಿತಾ ರಾಮ್‌ ಜೋಡಿ ಮತ್ತೊಮ್ಮೆ ಮೋಡಿ ಮಾಡಿದೆ. ಬಾಕ್ಸ್‌ ಆಫೀಸಿನಲ್ಲಿ ಕಮಾಲ್‌ ಮಾಡಿದ್ದ ಈ ಸಿನಿಮಾ ಇದೀಗ ಒಟಿಟಿಗೆ ಕೂಡಾ ಹೆಜ್ಜೆ ಇಡುತ್ತಿದೆ. ಖ್ಯಾತ ಒಟಿಟಿ ಪ್ಲಾಟ್‌ಫಾರ್ಮ್‌ ಅಮೆಜಾನ್‌ ಪ್ರೈಂ, 'ಕ್ರಾಂತಿ' ಚಿತ್ರವನ್ನು ಸ್ಟ್ರೀಮಿಂಗ್‌ ಮಾಡುತ್ತಿದೆ.

ಶ್ರೀಮಂತ ಎನ್‌ಆರ್‌ಐ ಉದ್ಯಮಿ ಕ್ರಾಂತಿ ರಾಯಣ್ಣ (ದರ್ಶನ್) ಭಾರತಕ್ಕೆ ಬಂದು, ತಾನು ಓದಿದ ಶಾಲೆಯ ಶತಮಾನೋತ್ಸವದಲ್ಲಿ ಭಾಗವಹಿಸುತ್ತಾರೆ. ಆದರೆ, ಕಾರ್ಯಕ್ರಮದಲ್ಲಿ ಸಂಭವಿಸುವ ದುರ್ಘನೆಯಲ್ಲಿ ಹಲವರು ಸಾವನ್ನಪ್ಪುತ್ತಾರೆ, ಕೆಲವರು ಗಾಯಗೊಳ್ಳುತ್ತಾರೆ. ಸಲತ್ರಿ (ತರುಣ್ ಅರೋರಾ) ಶಾಲೆಗಳನ್ನು ಖಾಸಗೀಕರಣಗೊಳಿಸುವ ಸಂಚಿಗಾಗಿ ಇಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದಾನೆ ಎಂಬ ವಿಚಾರ ಕ್ರಾಂತಿಗೆ ತಿಳಿಯುತ್ತದೆ. ಅಲ್ಲಿಂದ, ಶಾಲೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಕ್ರಾಂತಿ ರಾಯಣ್ಣ ಹೋರಾಡುವ ಕಥೆಯೇ 'ಕ್ರಾಂತಿ' ಫೆಬ್ರವರಿ 23 ರಂದು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ 240 ಕ್ಕೂ ಹೆಚ್ಚು ದೇಶಗಳಲ್ಲಿ 'ಕ್ರಾಂತಿ' ಸಿನಿಮಾ ಸ್ಟ್ರೀಮ್‌ ಆಗಲಿದೆ.

'ಯಜಮಾನ' ಚಿತ್ರ ನಿರ್ಮಿಸಿದ್ದ ತಂಡವೇ 'ಕ್ರಾಂತಿ' ಸಿನಿಮಾವನ್ನು ನಿರ್ಮಿಸಿದೆ. 'ಯಜಮಾನ' ಚಿತ್ರ 2019 ರಲ್ಲಿ ಬಿಡುಗಡೆ ಆಗಿತ್ತು. 4 ವರ್ಷಗಳ ನಂತರ ಈ ತಂಡ ಮತ್ತೆ 'ಕ್ರಾಂತಿ' ಸಿನಿಮಾ ಮೂಲಕ ಒಂದಾಗಿದೆ. 'ಕ್ರಾಂತಿ' ಚಿತ್ರವನ್ನು ಮೀಡಿಯಾ ಹೌಸ್‌ ಸ್ಟುಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಶೈಲಜಾ ನಾಗ್‌ ಹಾಗೂ ಬಿ. ಸುರೇಶ್‌ ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿ. ಹರಿಕೃಷ್ಣ, ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹಾಡುಗಳಿಗೆ ಹರಿಕೃಷ್ಣ ಅವರೇ ಸಂಗೀತ ನೀಡಿದ್ದಾರೆ. ದರ್ಶನ್‌, ರಚಿತಾ ರಾಮ್‌, ರವಿಚಂದ್ರನ್‌, ಸುಮಲತಾ ಅಂಬರೀಶ್‌ ಹಾಗೂ ಇನ್ನಿತರು ಸಿನಿಮಾದಲ್ಲಿ ನಟಿಸಿದ್ದಾರೆ.

ಸಿನಿಪ್ರಿಯರನ್ನು ಮೋಡಿ ಮಾಡಿರುವ 'ಕ್ರಾಂತಿ' ಹಾಡುಗಳು

ಶೇಕ್‌ ಇಟ್‌ ಪುಷ್ಪವತಿ.., ಬೊಂಬೆ ಬೊಂಬೆ..ಹಾಡುಗಳಂತೂ ಅಭಿಮಾನಿಗಳನ್ನು ಸಖತ್‌ ಮೋಡಿ ಮಾಡಿದೆ. ಶಾಲೆ. ಕಾಲೇಜು ಕಾರ್ಯಕ್ರಮಗಳಲ್ಲಿ ಶೇಕ್‌ ಇಟ್‌ ಪುಷ್ಪವತಿ...ಹಾಡಿಗೆ ವಿದ್ಯಾರ್ಥಿಗಳು ಡ್ಯಾನ್ಸ್‌ ಮಾಡಿದರೆ ಸೆಲೆಬ್ರಿಟಿಗಳು ಈ ಎರಡೂ ಹಾಡಿಗೆ ರೀಲ್ಸ್‌ ಮಾಡಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬೊಂಬೆ ಬೊಂಬೆ... ಹಾಡಿಗೆ ತಮಿಳು ನಟಿ ಸ್ನೇಹ ಕೂಡಾ ಹೆಜ್ಜೆ ಹಾಕಿದ್ದಾರೆ. ಟಾಲಿವುಡ್‌ ಖ್ಯಾತ ಡ್ಯಾನ್ಸರ್‌ ಆಟಾ ಸಂದೀಪ್‌, ಸ್ನೇಹ ಜೊತೆ ಸೇರಿ ರೀಲ್ಸ್‌ ಮಾಡಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಸಂದೀಪ್‌, ''ಸ್ನೇಹ ಅವರೊಂದಿಗೆ ಡ್ಯಾನ್ಸ್‌ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಬಹಳ ಖುಷಿ ಆಯ್ತು'' ಎಂದು ಬರೆದುಕೊಂಡಿದ್ದರು.

ದರ್ಶನ್‌ ಹೊಸ ಸಿನಿಮಾ ಅನೌನ್ಸ್‌

ರಾಬರ್ಟ್‌ ಬಳಿಕ ತರುಣ್‌ ಸುಧೀರ್‌ ಮತ್ತು ದರ್ಶನ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ D56 ಚಿತ್ರಕ್ಕೆ ಶೀರ್ಷಿಕೆ ಘೋಷಣೆ ಆಗಿದೆ. ಚಿತ್ರಕ್ಕೆ ಈ ಹಿಂದೆಯೇ ಸುದ್ದಿಯಾದಂತೆ 'ಕಾಟೇರ' ಎಂಬ ಟೈಟಲ್‌ ಅಧಿಕೃತವಾಗಿದ್ದು ದರ್ಶನ್‌ ಹುಟ್ಟುಹಬ್ಬದಂದು ಅನೌನ್ಸ್‌ ಆಗಿತ್ತು. ಶೀರ್ಷಿಕೆ ಮಾತ್ರವಲ್ಲದೆ, ಕಿರು ಟೀಸರ್‌ ಕೂಡಾ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಖಡಕ್‌ ಅವತಾರದಲ್ಲಿ ದರ್ಶನ್‌ ಎದುರಾಗಿದ್ದಾರೆ. ರಾಕ್‌ಲೈನ್‌ ವೆಂಕಟೇಶ್‌ ಅವರ ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಕಾಟೇರ' ಸಿನಿಮಾದಲ್ಲಿ ಹಳ್ಳಿಗಾಡಿನ ಕಥೆಯೊಂದನ್ನು ಹಿಡಿದು ತಂದಿದ್ದಾರೆ. 1974ರಲ್ಲಿ ನಡೆದ ನೈಜ ಘಟನೆಯನ್ನೇ ಕಥಾವಸ್ತುವನ್ನಾಗಿಸಿಕೊಂಡ ನಿರ್ದೇಶಕ ತರುಣ್‌ ಸುಧೀರ್‌, ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಪೋಸ್ಟರ್‌ನಲ್ಲಿ ಪಾರ್ಲಿಮೆಂಟ್‌ ಚಿತ್ರವೂ ಇದೆ. ದಂಗೆ ಎದ್ದ ರೈತರ ಸಮೂಹ ಕೂಡಾ ಕಾಣಿಸುತ್ತಿದೆ.

ತಮ್ಮ ಹಿಂದಿನ ಸಿನಿಮಾಗಳಲ್ಲಿನ ಖದರ್‌ ಅನ್ನು ಇಲ್ಲಿಯೂ ಮುಂದುವರಿಸಿರುವ ದರ್ಶನ್‌, ಮತ್ತೆ ಮತ್ತೆ ಲಾಂಗ್‌ ಹಿಡಿದು ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಪಂಚೆಯಲ್ಲಿ ಗ್ರಾಮೀಣ ಭಾಗ್‌ ವ್ಯಕ್ತಿ ಆಗಿ ಕಾಣಿಸಿಕೊಂಡಿದ್ದಾರೆ. 'ಪ್ರತಿ ಮಚ್ಚು ಎರಡು ಸಲ ಕೆಂಪಾಗ್ತದೆ, ಬೆಂಕಿಯಲ್ಲಿ ಬೆಂದಾಗ, ರಕ್ತದಲ್ಲಿ ನೆನೆದಾಗ' ಎಂಬ ಖಡಕ್‌ ಡೈಲಾಗನ್ನು ಕೂಡಾ ಹೇಳಿದ್ದಾರೆ. ಅಂದಹಾಗೆ 'ಕಾಟೇರ' ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದರೆ, ಸುಧಾಕರ್‌ ಎಸ್‌. ರಾಜ್‌ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್‌ ಅವರ ಸಂಕಲನ ಇದೆ. ಚಿತ್ರಕಥೆಯ ಜವಾಬ್ದಾರಿ ತರುಣ್‌ ಸುಧೀರ್‌ ಮತ್ತು ಜಡೇಶ್‌ ಕುಮಾರ್‌ ಹಂಪಿ ಅವರದ್ದು. ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ. ನಾಯಕಿಯಾಗಿ ಕನಸಿನ ರಾಣಿ ಮಾಲಾಶ್ರೀ ಪುತ್ರಿ ರಾಧನಾ ರಾಮ್‌ ನಟಿಸುತ್ತಿದ್ದಾರೆ.

Whats_app_banner