Millets Song: ಸಿರಿಧಾನ್ಯ ಪ್ರೋತ್ಸಾಹಕ್ಕೂ ಬಂತು ವಿಶೇಷ ಗೀತೆ: ವಾಸುಕಿ ವೈಭವ್ ಹಾಡಿರುವ ಈ ಗೀತೆ ಹೇಗಿದೆ video
Jan 06, 2024 07:30 AM IST
ಕರ್ನಾಟಕದಲ್ಲಿ ಸಿರಿಧಾನ್ಯ ರೈತರನ್ನು ಉತ್ತೇಜಿಸಲು ಸಿರಿಧಾನ್ಯ ಗೀತೆ ರೂಪಿಸಲಾಗಿದೆ.
- ಕರ್ನಾಟಕದಲ್ಲಿ ಸಿರಿಧಾನ್ಯ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೊದಲ ಬಾರಿಗೆ ಸಿರಿಧಾನ್ಯ ಗೀತೆಯನ್ನು ಕರ್ನಾಟಕ ಕೃಷಿ ಇಲಾಖೆ ರೂಪಿಸಿದ್ದು, ವಾಸುಕಿ ವೈಭವ್ ತಂಡ ಇದನ್ನು ಪ್ರಸ್ತುತಪಡಿಸಿದೆ.
ಬೆಂಗಳೂರು: ರಾಗಿ ನವಣೆ, ಸಜ್ಜೆ ಬಳಸಿ ಯಾಕೆ ಲಜ್ಜೆ.. ಬರಗಾಲದಲ್ಲೂ ಬಂಗಾರದಂತ ಬೆಳೆಯ ನೋಡಣ್ಣಾ... ಸಿರಿಧಾನ್ಯ ನಂಬಿ ತಿನ್ನೋರು ಹೆಚ್ಚು ಬಾಳೋದು. ಆರೋಗ್ಯ ಇದ್ದರೆ ತಾನೇ ನಾವು ದೇಶ ಕಟ್ಟೋದು...
ಕರ್ನಾಟಕ ಖ್ಯಾತ ಗಾಯಕ, ಸಂಗೀತ ಸಂಯೋಜಕ ವಾಸುಕಿ ವೈಭವ್ ಸಿರಿಧಾನ್ಯದ ಕುರಿತು ಹಾಡಿರುವ ಈ ಹಾಡನ್ನು ಕೇಳಿದರೆ ನಿಜಕ್ಕೂ ಖುಷಿ ನೀಡುತ್ತದೆ. ಕರ್ನಾಟಕದ ಕಲಾವಿದರ ತಂಡ ಸಿರಿಧಾನ್ಯದ ಮೂರು ನಿಮಿಷದ ಈ ಗೀತೆ ಸಿರಿಧಾನ್ಯದ ಮಹತ್ವವನ್ನು ಸಾರುತ್ತದೆ.
ಕರ್ನಾಟಕ ಕೃಷಿ ಇಲಾಖೆ (KSDA) ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವ್ಯಾಪಾರ ಮೇಳ 2024 ಕ್ಕಾಗಿ ರಚಿಸಿರುವ ರಾಗಿಗಳ ಕುರಿತು ವಿಶೇಷ ಹಾಡನ್ನು ಪ್ರಾಯೋಜಿಸಿದೆ. ಸಿರಿಧಾನ್ಯಗಳನ್ನು ಪ್ರದರ್ಶಿಸಲು ಮತ್ತು ಆಚರಿಸಲು. ರಾಜಸ್ಥಾನದ ನಂತರ ಮಳೆಯಾಶ್ರಿತ ಪ್ರದೇಶದಲ್ಲಿ ಎರಡನೇ ಅತಿ ದೊಡ್ಡ ರಾಜ್ಯವಾಗಿರುವ ಕರ್ನಾಟಕವು ಆಗಾಗ್ಗೆ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಇದನ್ನು ಹೋಗಲಾಡಿಸಲು, ಕೆಎಸ್‌ಡಿಎ ಸಾವಯವ ಕೃಷಿ ಪದ್ಧತಿಗಳೊಂದಿಗೆ ಹಾರ್ಡಿ, ಬರ-ನಿರೋಧಕ ರಾಗಿ ಬೆಳೆಗಳ ಕೃಷಿಯನ್ನು ಉತ್ತೇಜಿಸುತ್ತಿದೆ. ಮಂಡ್ಯದಲ್ಲಿ ನಡೆದ ಸಮಾರಂಭದಲ್ಲಿ ಈ ಗೀತೆಯನ್ನು ಬಿಡುಗಡೆ ಮಾಡಲಾಗಿದೆ.
ಕೃಷಿ ಇಲಾಖೆ ಖುಷಿ
ನಮ್ಮ ಹಾಡು ಈ ಪ್ರದೇಶದಲ್ಲಿ ತಲೆಮಾರುಗಳಿಂದ ಬೆಳೆದ ಪೌಷ್ಟಿಕಾಂಶದ ರಾಗಿಗಳ ವೈವಿಧ್ಯತೆಯನ್ನು ಗುರುತಿಸುತ್ತದೆ - ಈ ಹವಾಮಾನ-ನಿರೋಧಕ ಧಾನ್ಯಗಳನ್ನು ಬಿತ್ತಲು, ಬೆಳೆಯಲು, ಕೊಯ್ಲು ಮಾಡಲು ಮತ್ತು ಪ್ರಕ್ರಿಯೆಗೊಳಿಸಲು ಸ್ಥಳೀಯ ರೈತರು ಬಳಸುವ ಸಾಂಪ್ರದಾಯಿಕ ವಿಧಾನಗಳನ್ನು ನಾವು ಪ್ರದರ್ಶಿಸುತ್ತೇವೆ. ನೀರು ಮತ್ತು ಮಣ್ಣಿನ ಸಂಪನ್ಮೂಲಗಳನ್ನು ಸಂರಕ್ಷಿಸುವಾಗ ರಾಗಿ ಕುಟುಂಬಗಳಿಗೆ ಆಹಾರ ಭದ್ರತೆ ಮತ್ತು ಆರೋಗ್ಯದ ಆಧಾರವನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಸಾಹಿತ್ಯವು ಎತ್ತಿ ತೋರಿಸುತ್ತದೆ ಎನ್ನುವುದು ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ್ ಅವರ ಅಭಿಪ್ರಾಯ.
ಸಿರಿಧಾನ್ಯ, ಸಾವಯವ ವಿಧಾನಗಳು ಮತ್ತು ಸೂಕ್ತವಾದ ತಂತ್ರಜ್ಞಾನವನ್ನು ಉತ್ತೇಜಿಸುವ ಮೂಲಕ, ಭವಿಷ್ಯದ ಪೀಳಿಗೆಗೆ ನಮ್ಮ ಭೂಮಿಯನ್ನು ಸಂರಕ್ಷಿಸುವಾಗಲೂ ಸಣ್ಣ ಹಿಡುವಳಿದಾರರಿಗೆ ಸುಸ್ಥಿರ ಜೀವನೋಪಾಯವನ್ನು ನಿರ್ಮಿಸುವ ಗುರಿಯನ್ನು ನಾವು ಹೊಂದಿದ್ದೇವೆ.ಈ ವಿಶೇಷ ಸಂಯೋಜನೆಯು ಕೇಳುಗರನ್ನು ಸಿರಿಧಾನ್ಯ ಸಾಂಸ್ಕೃತಿಕ ಪರಂಪರೆಗೆ ಸಂಪರ್ಕಿಸುತ್ತದೆ ಎಂದು ನಾವು ಭಾವಿಸುತ್ತೇವೆ ಮತ್ತು ಪರಿಸರ ತತ್ವಗಳಿಗೆ ಕೃಷಿಯನ್ನು ಜೋಡಿಸುವ ಸ್ಮಾರ್ಟ್ ಆಹಾರದ ಆಯ್ಕೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುತ್ತದೆ ಎನ್ನುವುದು ಕೃಷಿ ಇಲಾಖೆಯ ವಿಶ್ವಾಸದ ನುಡಿ.
ಸಚಿವರು ಹೇಳೋದು ಏನು
ಸಿರಿಧಾನ್ಯ ಇತ್ತೀಚೆಗೆ ಸಾರ್ವಜನಿಕರಲ್ಲಿ ಉಂಟಾಗುವ ಖಾಯಿಲೆಗಳಿಗೆ ರಾಮಬಾಣ. ರೈತರಿಗೂ ಸಿರಿಧಾನ್ಯ ಬೆಳೆಯಲು ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದು, ಇದಕ್ಕೆ ಹೆಚ್ಚಿನ ಕೀಟನಾಶಕ, ರಾಸಾಯನಿಕ ಸಿಂಪರಣೆ ಮಾಡುವುದಿಲ್ಲ. ಆಗಾಗಿ ಸಿರಿಧಾನ್ಯ ರೈತ ಸ್ಬೇಹಿ ಬೆಳೆ. ಸಾರ್ವಜನಿಕರು ಹೆಚ್ಚು ಸಾವಯವ ಹಾಗೂ ಸಿರಿಧಾನ್ಯ ಆಹಾರ ಹೆಚ್ಚು ಬಳಸಬೇಕು ಎಂಬ ಉದ್ದೇಶದಿಂದ ಸಿರಿಧಾನ್ಯ ಬೆಳೆಯಲು ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ. ಸಾವಯವ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ ಹತ್ತು ಸಾವಿರ ಸಹಾಯಧನ ನೀಡಲಾಗುತ್ತಿದೆ. ಸಿರಿಧಾನ್ಯದ ಬೇಡಿಕೆ ಹೆಚ್ಚಿಸಲು ಹೊರದೇಶಕ್ಕೆ ರಫ್ತು ಮಾಡಲು ಚಿಂತಿಸಲಾಗುತ್ತಿದೆ ಎನ್ನುವುದು ಕೃಷಿ ಸಚಿವ ಚಲುವರಾಯಸ್ವಾಮಿ ಅವರ ನುಡಿ.
ಇದು ಸಿರಿಧಾನ್ಯ ಹಾಡಿನ ತಂಡ
ಸಂಗೀತ ಸಂಯೋಜಕ ಮತ್ತು ಗೀತರಚನೆಕಾರ ಹಾಗೂ ಗಾಯಕ ವಾಸುಕಿ ವೈಭವ್. ಗೀತೆಗೆ ಸಾಥ್ ನೀಡಿದವರು ಭರತ್ ನಾಯಕ್, ಕಲ್ಯಾಣ್ ಮಂಜುನಾಥ್, ಗೋಕುಲ್ ಅಭಿಷೇಕ್, ವಾಸುಕಿ ವೈಭವ್, ಶಿವ, ಅಜಯ್, ಪ್ರಣವ್ ಭಾರದ್ವಾಜ್ ಅವರು.
ಗಿಟಾರ್ ನಲ್ಲಿ ಕಲ್ಯಾಣ್ ಮಂಜುನಾಥ್ ಇದ್ದರೆ ಸಂಗೀತ ನಿರ್ಮಾಣ, ಮಿಶ್ರ ಮತ್ತು ಮಾಸ್ಟರಿಂಗ್ ಅನ್ನು ಗೋಕುಲ್ ಅಭಿಷೇಕ್ ಮಾಡಿದ್ದಾರೆ. ಕರ್ಮಯೋಗಿ ಸ್ಟುಡಿಯೋ ಮತ್ತು ಬುಡ್ಬುಡ್ಕೆ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ.
ಸೃಜನಾತ್ಮಕ ನಿರ್ದೇಶಕದ ಹೊಣೆಯನ್ನು ಪನ್ನಗ ಭರಣ ಹೊತ್ತಿದ್ದರೆ, ದೃಶ್ಯ ನಿರ್ದೇಶಕರಾಗಿ ಸಾಗರ್ ಎ ಬಿ, ಛಾಯಾಗ್ರಹಣದಲ್ಲಿ ಪ್ರಮೋದ ಜೋಯಿಸ್, ನಚಿಕೇತ್ ಬಾಳೆಕ್ಕಳ ಕೈ ಚಳಕ ತೋರಿದ್ದಾರೆ. ಇಡೀ ಗೀತೆಯನ್ನು ಸಂಪಾದಿಸಿದವರು ರವಿ ಅರಾಡಿಯಾ. ಗ್ರಾಫಿಕ್ಸ್ ಅನ್ನು ಪ್ರತಾಪ್ ಮಾಡಿದ್ದರೆ, ಸಹಾಯಕ ನಿರ್ದೇಶಕರಾಗಿ: ಪ್ರಮೋದ್ ಗೌಡ, ಶೈರಾ, ಭರತ್ ನಾಯ್ಕ್ ಕೆಲಸ ಮಾಡಿರುವುದು ಇಡೀ ಗೀತೆಯ ಮೇಕಿಂಗ್‌ನಲ್ಲಿ ಕಾಣುತ್ತದೆ.
ವಿಭಾಗ